ಯೋನಿ ಬಿಗಿತ ಮಾತ್ರೆಗೆ ವಿಡಿಯೋ ಪ್ರಚಾರ ಕೊಟ್ಟ ನಟಿ; ಹಣಕ್ಕಾಗಿ ಇಂತಹ ಲೂಸ್ ಜಾಹೀರಾತಲ್ಲಿ ನಟಿಸಬಾರದಿತ್ತು! 'ಅಸಹ್ಯಕರʼ ಎಂದ ನೆಟ್ಟಿಗರು
Oct 31, 2024 05:19 PM IST
ಯೋನಿ ಬಿಗಿತ ಮಾತ್ರೆಗೆ ವಿಡಿಯೋ ಪ್ರಚಾರ ಕೊಟ್ಟ ನಟಿ
- Nia Sharma: ನಟಿ ನಿಯಾ ಶರ್ಮಾ ಇತ್ತೀಚೆಗೆ ಯೋನಿ ಬಿಗಿತ ಮಾತ್ರೆಗೆ ಪ್ರಚಾರ ನೀಡಿರುವುದು ನೆಟ್ಟಿಗರನ್ನು ಕೆರಳಿಸಿದೆ. ಹಣಕ್ಕಾಗಿ ಇಂತಹ ಲೂಸ್ ಜಾಹೀರಾತಲ್ಲಿ ನಟಿಸಬಾರದಿತ್ತು! ನೀನಿಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು ಎಂದೆಲ್ಲ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
Nia Sharma: ನಟಿ ನಿಯಾ ಶರ್ಮಾ ಅವರು ಇತ್ತೀಚೆಗೆ ಮಹಿಳೆಯರ ಆರೋಗ್ಯ ಸಪ್ಲಿಮೆಂಟ್ ಕುರಿತಾದ ಜಾಹೀರಾತು ವಿಡಿಯೋ ಹಂಚಿಕೊಂಡಿದ್ದಾರೆ. "ಯೋನಿ ಬಿಗಿತ" ಮಾಡುವಂತಹ ಮಾತ್ರೆಯ ಪ್ರಚಾರದ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಹಂಚಿಕೊಂಡ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ನಟಿಯು ಜನರಿಗೆ ತಪ್ಪು ಮಾಹಿತಿ ಹರಡುತ್ತಾರೆ, ಹಾನಿಕಾರಕ ಅಂಶಗಳಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಾ ಹಂಚಿಕೊಂಡ ಸೋಷಿಯಲ್ ಮೀಡಿಯಾ ಪೋಸ್ಟ್
ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ನಟಿ ನಿಯಾ ಶರ್ಮಾ ಅವರು ಕಮರ್ಷಿಯಲ್ ವಿಡಿಯೋ ಹಂಚಿಕೊಂಡಿದ್ದರು. "ಕೆಲವೊಮ್ಮೆ ಜೀವನ ಎನ್ನುವುದು ಪರಿಪೂರ್ಣ ಅಂಶದ ಹುಡುಕಾಟವಾಗಿರುತ್ತದೆ. ಇದು ನಿಮ್ಮ ಅಚ್ಚುಮೆಚ್ಚಿನ ಉಡುಗೆಯಾಗಿರಬಹುದು ಅಥವಾ ಇಂಟಿಮೇಟ್‌ವಿಷಯ ಆಗಿರಬಹುದು. ಪರ್ಫೆಕ್ಟ್ ಟೈಟ್ ಅನುಭವಿಸಿ" ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.
ಈ ವಿಡಿಯೋದಲ್ಲಿ ಸಡಿಲ ಉಡುಗೆ ಧರಿಸುವ ಮೂಲಕ "ಲೂಸ್" ಎಂದು ಸಾಂಕೇತಿಕವಾಗಿ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಬಾಟಲ್ ಕ್ಯಾಪ್‌ನಲ್ಲಿ ನೀರು ಸೋರಿಕೆಯಾಗುವುದು, ಶೂ ಲೇಸ್ ಜಾರುವುದು ಇತ್ಯಾದಿಗಳ ಮೂಲಕ ಸಡಿಲ ಮತ್ತು ಬಿಗಿತದ ವಿವರಣೆ ನೀಡಿದ್ದಾರೆ. ಇವೆಲ್ಲವೂ ಟೈಟ್ ಆಗಿರಬೇಕು ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.
ಅಭಿಮಾನಿಗಳ ಆಕ್ರೋಶ
ಸೋಷಿಯಲ್ ಮೀಡಿಯಾದಲ್ಲಿ ಈಕೆಯನ್ನು ಅನುಸರಿಸುವ ಅನೇಕ ಅಭಿಮಾನಿಗಳು ಈ ವಿಡಿಯೋದ ಕುರಿತು ತಮ್ಮ ತಗಾದೆ, ಆಕ್ರೋಶ, ಕೋಪ ಹಂಚಿಕೊಂಡಿದ್ದಾರೆ. "ಈ ಪೋಸ್ಟ್ ಅಸಹ್ಯಕರ, ತಿಳಿವಳಿಕೆಯಿಲ್ಲದ" ಎಂದು ಜರೆದಿದ್ದಾರೆ.
"ನಿಯಾ ಶರ್ಮಾ ಹಂಚಿಕೊಂಡ ಯೋನಿ ಬಿಗಿಗೊಳಿಸುವ ಉತ್ಪನ್ನಗಳ ಪ್ರಚಾರವು ಗಂಭೀರ ನೈತಿಕ ಕಾಳಜಿಯ ಅಂಶವನ್ನು ಹೊಂದಿದೆ. ಸಾರ್ವಜನಿಕ ವ್ಯಕ್ತಿಯಾಗಿ ಈಕೆಗೆ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಅನೇಕರು ಈಕೆಯನ್ನು ಮಾರ್ಗದರ್ಶಕಿ ಎಂದುಕೊಂಡಿರಬಹುದು. ಇಂತಹ ಜಾಹೀರಾತುಗಳಿಗೆ ಪ್ರಚಾರ ನೀಡುವ ಮೂಲಕ, ಅನುಮೋದಿಸುವ ಮೂಲಕ ಅವಾಸ್ತವಿಕ ಸೌಂದರ್ಯದ ಮಾನದಂಡಗಳನ್ನು ತಿಳಿಸುತ್ತಿದ್ದಾರೆ. ಈ ರೀತಿಯ ಮಾರ್ಕೆಟಿಂಗ್ ತಂತ್ರಗಳು ದೇಹದ ಕುರಿತು ಸಕಾರಾತ್ಮಕ ನೈಜ ಸಮಸ್ಯೆಗಳನ್ನು ಪರಿಹರಿಸದೆ, ಅನಗತ್ಯ ಚಿಕಿತ್ಸೆಗಳ ಕಡೆಗೆ ಜನರು ಹೋಗುವಂತೆ ಮಾಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರು ತಮ್ಮ ಅಭಿಮಾನಿಗಳ ಯೋಗಕ್ಷೇಮಕ್ಕಿಂತ ಲಾಭಕ್ಕೆ ಆದ್ಯತೆ ನೀಡುತ್ತಿರುವುದನ್ನು ನೋಡುವುದು ನಿರಾಶದಾಯಕವಾಗಿದೆ" ಎಂದು ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
“ನೀವು ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ದೊಡ್ಡ ಕಲಾವಿದರಾಗಿರುವುದರಿಂದ ದಯವಿಟ್ಟು ಇದನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ ... ಸಾಕಷ್ಟು ವೈದ್ಯರು ಟ್ಯಾಬ್ಲೆಟ್‌ಗಳಿಂದ ಯೋನಿ ಬಿಗಿಗೊಳಿಸಲಾಗದು ಎಂದಿದ್ದಾರೆ" ಎಂದು ಒಬ್ಬರು ಕಾಮೆಂಟ್ ಮಾಡಿದದಾರೆ. "ಭಯಾನಕ, ಈ 2024ರಲ್ಲೂ ಇಂತಹ ಅವೈಜ್ಞಾನಿಕ ವಿಷಯಗಳನ್ನು ಪ್ರಚಾರ ಮಾಡಲಾಗುತ್ತಿದೆ. ಮೊದಲು ಯೋನಿ ವೈಟ್ನಿಂಗ್ ಕ್ಲಿಮ್ ಬಗ್ಗೆ ಹೇಳಲಾಗಿತ್ತು. ಈಗ ಇದು. ಅಬ್ಬಾ" ಎಂದು ಇನ್ನೊಬ್ಬರು ಪೋಸ್ಟ್ ಮಾಡಿದ್ದಾರೆ.
ಸಾರ್ವಜನಿಕ ವ್ಯಕ್ತಿಯಾಗಿ ಈಕೆಯ ಜವಾಬ್ದಾರಿ ಏನೆಂದು ಕೆಲವರು ನೆನಪಿಸಿದ್ದಾರೆ. "ನಾನು ನಿಮ್ಮನ್ನು ಫಾಲೋ ಮಾಡುತ್ತಿದ್ದೆ. ಆದರೆ, ಈಗ ನೀವು ಹೋಗುತ್ತಿರುವ ದಾರಿ ನೋಡಿದರೆ, ನನಗೆ ಫಾಲೋ ಮಾಡುವುದು ಕಷ್ಟವಾಗುತ್ತದೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿರಿ" "ಇಂತಹ ಸಂದೇಶಗಳ ಮೂಲಕ ಜನಸಾಮಾನ್ಯ ಹೆಣ್ಣುಮಕ್ಕಳಿಗೆ ಏನು ನೀಡುತ್ತಿದ್ದೀರಿ. ಈಗಾಗಲೇ ಮಹಿಳೆಯರು ಸಮಾಜದ ಅತ್ಯಾಚಾರಗಳಿಂದ ತೊಂದರೆಗೀಡಾಗಿದ್ದಾರೆ. ನೀವು ಈ ರೀತಿ ಕೆಟ್ಟ ಸಂದೇಶಗಳನ್ನು ನೀಡುತ್ತಿದ್ದೀರಿ. ಅನ್‌ಫಾಲೋ ಮಾಡುವೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ನೀವು ಇನ್ನಷ್ಟು ಕೆಳಮಟ್ಟಕ್ಕೆ ಇಳಿದಿದ್ದೀರಿ. ನೀವು ಮಹಿಳೆಯರ ದೇಹವನ್ನು ವಸ್ತುಗಳ ಜತೆ ಹೋಲಿಸುತ್ತಿದ್ದೀರಿ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಯಾವುದೇ ಕಾಮೆಂಟ್‌ಗೂ ನಿಯಾ ಪ್ರತಿಕ್ರಿಯೆ ನೀಡಿಲ್ಲ.