ವೈರಲ್ ಸುದ್ದಿ: ಪ್ರಿಯಕರನ ಟ್ರಂಕ್‌ನೊಳಗಿಟ್ಟು ಬೀಗ ಹಾಕಿದ ಯುವತಿ, ಮನೆಯವರಿಗೆ ತಿಳಿಯಬಾರದೆಂದು ಅವಿತಿಟ್ಟು ಮಾಡಿದ್ಲು ಎಡವಟ್ಟು
ವೈರಲ್ ಸುದ್ದಿ: ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಕಬ್ಬಿಣದ ಟ್ರಂಕ್‌ನೊಳಗೆ ಅಡಗಿಸಿಟ್ಟು ಬೀಗ ಹಾಕಿದ್ದಾಳೆ. ಆ ಟ್ರಂಕ್ ದೊಡ್ಡದ್ದೇನಲ್ಲ. ಕಷ್ಟಪಟ್ಟ ಆ ಸಣಕಲು ಯುವಕ ಆ ಟ್ರಂಕ್‌ನೊಳಗೆ ಅವಿತಿದ್ದಾನೆ. ಈಕೆ ಬಾಗಿಲು ಹಾಕಿ ಬೀಗ ಹಾಕಿದ್ದಾಳೆ. ಮುಂದೆ ಏನಾಯ್ತು ಅಂತೀರಾ?
ವೈರಲ್ ಸುದ್ದಿ: ಯುವ ಪ್ರೇಮಿಗಳು ಮನೆಯವರಿಗೆ ತಮ್ಮ ಪ್ರೇಮ ಸಂಬಂಧ ತಿಳಿಯಬಾರದೆಂದು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಕದ್ದು ಮುಚ್ಚಿ ಪ್ರೀತಿಸುವ ಪ್ರೇಮಿಗಳು ಕೊನೆಗೆ ಒಬ್ಬರನೊಬ್ಬರನ್ನು ಬಿಟ್ಟಿರಲಾಗದಷ್ಟು ಗಾಢವಾಗಿ ಹತ್ತಿರವಾಗುತ್ತಾರೆ. ಕೆಲವೊಮ್ಮೆ ಪ್ರೇಮಿಗಳು ಪಾರ್ಕ್, ಸಿನಿಮಾ ಎಂದ ಸುತ್ತುತ್ತಾರೆ. ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ ಮನೆಗೂ ಕರೆಸಿಕೊಳ್ಳಲು ಹಿಂಜರಿಯುವುದಿಲ್ಲ. ಆದರೆ, ಮನೆಯೊಳಗೆ ಪ್ರೀತಿಯಲ್ಲಿ ಮುಳುಗಿರುವಾಗ ಮನೆಯವರು ವಾಪಸ್ ಬಂದರೆ, ಮನೆಯೊಳಗೆ ಇರುವ ಪ್ರಿಯಕರನನ್ನು ಹೊರಗೆ ಕಳುಹಿಸಲು ಸಾಧ್ಯವಾಗದೆ ಇದ್ದರೆ ಏನು ಮಾಡಬಹುದು?
ಇತ್ತೀಚೆಗೆ ಒಡಿಶಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಕಬ್ಬಿಣದ ಟ್ರಂಕ್‌ನೊಳಗೆ ಅಡಗಿಸಿಟ್ಟು ಬೀಗ ಹಾಕಿದ್ದಾಳೆ. ಆ ಟ್ರಂಕ್ ದೊಡ್ಡದ್ದೇನಲ್ಲ. ಕಷ್ಟಪಟ್ಟ ಆ ಸಣಕಲು ಯುವಕ ಆ ಟ್ರಂಕ್‌ನೊಳಗೆ ಅವಿತಿದ್ದಾನೆ. ಈಕೆ ಬಾಗಿಲು ಹಾಕಿ ಬೀಗ ಹಾಕಿದ್ದಾಳೆ.
ತನ್ನ ಕುಟುಂಬದವರಿಗೆ ಸಿಕ್ಕಿ ಬೀಳುತ್ತೇನೆಂಬ ಭಯದಲ್ಲಿ ಈ ಯುವತಿ ಹೀಗೆ ಮಾಡಿದ್ದಾಳೆ. ಕುಟುಂಬದವರು ಈಕೆಯನ್ನು ಸಾಕಷ್ಟು ವಿಚಾರಣೆ ಮಾಡುವ ದೃಶ್ಯ ವಿಡಿಯೋದಲ್ಲಿದೆ. ಮನೆಯನ್ನು ಹುಡುಕಿದ ಬಳಿಕ ಆ ಟ್ರಂಕ್ ತೆರೆಯುವಂತೆ ಒತ್ತಾಯಿಸುತ್ತಾರೆ. ಆಕೆ ತೆರೆಯುವುದಿಲ್ಲ. ಕೊನೆಗೆ ಬೆದರಿಸಿ ಬೀಗ ತೆಗೆಸಿದಾಗ ಆ ಟ್ರಂಕ್‌ನೊಳಗೆ ಯುವಕನೊಬ್ಬ ಭಯದಿಂದ ಗಡಗಡ ನಡುಗುತ್ತಿದ್ದ. ಗಾಳಿ ಬೆಳಕು ಇಲ್ಲದ ಪೆಟ್ಟಿಗೆಯೊಳಗೆ ಇದ್ದರಿಂದ ಬೆವರಿ ನೀರಾಗಿದ್ದ. ಈ ಮೂಲಕ ಮನೆಯವರಿಂದ ಅಡಗಿಸಿಡುವ ಆಕೆಯ ಪ್ರಯತ್ನ ವಿಫಲವಾಗಿದೆ.
ಆದರೆ, ಈಕೆ ಮಾಡಿದ ಈ ಪ್ರಯತ್ನ ಮೂರ್ಖತನದ್ದು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಚರ್ಚಿಸುತ್ತಿದ್ದಾರೆ. ಬೀಗ ಹಾಕಿರುವ ಕಾರಣ ಆತನಿಗೆ ಅಲ್ಲಿಂದ ಪಾರಾಗಲು ಸಾಧ್ಯವಿಲ್ಲ. ಎಲ್ಲಾದರೂ ಮನೆಯವರನ್ನು ಆಕೆಯನ್ನು ಅಲ್ಲಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದರೆ, ಆ ಕೋಣೆಗೆ ಬಾಗಿಲು ಹಾಕಿ ಹೋಗಿದ್ದರೆ ಆ ಯುವಕ ಪೆಟ್ಟಿಗೆಯೊಳಗೆ ಸಾಯುತ್ತಿದ್ದ ಎಂದೆಲ್ಲ ಚರ್ಚಿಸಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಸಮಯದಲ್ಲಿ ಪ್ರೇಮಿಗಳಿಗೆ ಈ ಸಮಾಜ ಎಷ್ಟೆಲ್ಲ ಸವಾಲು ನೀಡುತ್ತದೆ ಎಂದೆಲ್ಲ ವಾದಿಸಿದ್ದಾರೆ. ಈ ರೀತಿ ಪೆಟ್ಟಿಗೆಯೊಳಗೆ ಲಾಕ್ ಮಾಡುವುದು ತಪ್ಪು. ಪೆಟ್ಟಿಗೆ, ತಿಜೋರಿ, ಗೋಡ್ರೆಜ್ ಮುಂತಾದ ಕಡೆ ಅಡಗಿ ಮೃತಪಟ್ಟ ಉದಾಹರಣೆಗಳನ್ನ ಸಾಕಷ್ಟು ಇವೆ ಎಂದು ನೆಟ್ಟಿಗರು ಹೇಳಿದ್ದಾರೆ. "ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಯುವತಿಯೊಬ್ಬಳು ಮನೆಯವರಿಗೆ ಹೆದರಿ ಯುವಕನನ್ನು ದೊಡ್ಡ ಸೂಟ್‌ಕೇಸ್‌ನಲ್ಲಿ ಅಡಗಿಸಿಟ್ಟು ಲಾಕ್ ಮಾಡಿದ್ದಳು. ಆ ಯುವಕ ಮೃತಪಟ್ಟಿದ್ದ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಭಾಗ