Bookmyshow top 10: ಅತಿಹೆಚ್ಚು ಜನರು ವೀಕ್ಷಿಸಿದ ಭಾರತದ 10 ಸಿನಿಮಾಗಳು, ಬುಕ್‌ಮೈಶೋ ವರ್ಷದ ಹಿನ್ನೋಟದಲ್ಲಿ ಬಹಿರಂಗ
Dec 23, 2024 05:30 PM IST
Bookmyshow top 10: ಅತಿಹೆಚ್ಚು ಜನರು ವೀಕ್ಷಿಸಿದ ಭಾರತದ 10 ಸಿನಿಮಾಗಳು
- Bookmyshow top 10 Movies 2024: ಭಾರತದಲ್ಲಿ ಈ ವರ್ಷ ಅತ್ಯಧಿಕ ಜನರು ವೀಕ್ಷಿಸಿದ ಹತ್ತು ಸಿನಿಮಾಗಳ ಪಟ್ಟಿಯನ್ನೂ ಬುಕ್ ಮೈ ಶೋ ಪ್ರಕಟಿಸಿದೆ. ಕಲ್ಕಿ 2898 ಎಡಿ, ಸ್ತ್ರೀ 2, ಪುಷ್ಪ 2, ಹನುಮಾನ್, ಅಮರನ್, ಭೂಲ್ ಭುಲ್ಲಯ್ಯಾ 3, ಗೋಟ್, ಮಂಜುಮ್ಮೆಲ್ ಬಾಯ್ಸ್, ಸಿಂಗಮ್ ಎಗೇನ್ ಸಿನಿಮಾಗಳು ಈ ಟಾಪ್10 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಬೆಂಗಳೂರು: ಬುಕ್‌ಮೈಶೋ ವರ್ಷದ ಹಿನ್ನೋಟ 2024ರ ಪ್ರಕಾರ ಭಾರತದ 10 ಸಿನಿಮಾಗಳು ಅತಿಹೆಚ್ಚು ಟಿಕೆಟ್ ಬುಕ್ಕಿಂಗ್ ಆಗಿವೆ. ಪುಷ್ಪ 2: ದಿ ರೂಲ್ ಸಿನಿಮಾವು ಈ ವರ್ಷ ಅತಿಹೆಚ್ಚು ಜನರು ವೀಕ್ಷಿಸಿದ ಸಿನಿಮಾವಾಗಿದೆ. 10.8 ಲಕ್ಷ ಜನರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಬುಕ್‌ಮೈ ಶೋಗೆ ನವೆಂಬರ್ 1 ಬ್ಲಾಕ್‌ಬಸ್ಟರ್ ದಿನವಾಗಿತ್ತು. 24 ಗಂಟೆಗಳಲ್ಲಿ 2.3 ಮಿಲಿಯನ್ ಪುಷ್ಪ 2 ಟಿಕೆಟ್‌ಗಳು ಮಾರಾಟವಾಗುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆಯಂತೆ. ಕಲ್ ಹೋ ನಾ ಹೋ, ರಾಕ್‌ಸ್ಟಾರ್ ಮತ್ತು ಲೈಲಾ ಮಜ್ನುನಂತಹ ಹಲವು ಸಿನಿಮಾಗಳು ಈ ವರ್ಷದ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಡೆಡ್‌ಪೂಲ್ ಮತ್ತು ವೊಲ್ವೆರಿನ್ ಮತ್ತು ಗಾಡ್ಜಿಲ್ಲಾ x ಕಾಂಗ್: ದಿ ನ್ಯೂ ಎಂಪೈರ್‌ನಂತಹ ವಿದೇಶಿ ಸಿನಿಮಾಗಳ ಟಿಕೆಟ್ ಬುಕ್ಕಿಂಗ್ ಕೂಡ ಗಮನಾರ್ಹವಾಗಿ ಹೆಚ್ಚಾಗಿತ್ತು. ಒಬ್ಬ ವ್ಯಕ್ತಿ ಒಂದು ವರ್ಷ 221 ಚಲನಚಿತ್ರ ವೀಕ್ಷಿಸಿದ ದಾಖಲೆಯೂ ಈ ವರ್ಷ ಆಗಿದೆ ಎಂದು ಬುಕ್ ಮೈ ಶೋ ತಿಳಿಸಿದೆ.
ಬುಕ್ ಮೈ ಶೋ ಟಾಪ್ 10 ಸಿನಿಮಾಗಳು
ಭಾರತದಲ್ಲಿ ಈ ವರ್ಷ ಅತ್ಯಧಿಕ ಜನರು ವೀಕ್ಷಿಸಿದ ಹತ್ತು ಸಿನಿಮಾಗಳ ಪಟ್ಟಿಯನ್ನೂ ಬುಕ್ ಮೈ ಶೋ ಪ್ರಕಟಿಸಿದೆ. ಕಲ್ಕಿ 2898 ಎಡಿ, ಸ್ತ್ರೀ 2, ಪುಷ್ಪ 2, ಹನುಮಾನ್, ಅಮರನ್, ಭೂಲ್ ಭುಲ್ಲಯ್ಯಾ 3, ದೇವರ, ಗೋಟ್, ಮಂಜುಮ್ಮೆಲ್ ಬಾಯ್ಸ್, ಸಿಂಗಮ್ ಎಗೇನ್ ಸಿನಿಮಾಗಳು ಈ ಟಾಪ್10 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಪುಷ್ಪ 2 ಸಿನಿಮಾ
ಪುಷ್ಪ 2 ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುವ ಕುರಿತು ಸಾಕಷ್ಟು ವದಂತಿಗಳು ಹರಿದಾಡಿತ್ತು. ಬುಕ್ ಮೈ ಶೋನಲ್ಲಿ ದಾಖಲೆ ನಿರ್ಮಿಸಿದ ಈ ಸಿನಿಮಾ ಈಗಲೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪುಷ್ಪ 2 ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಪುಷ್ಪ 2 ಚಿತ್ರ ನಿರ್ಮಾಣ ಮಾಡಿದ ಮೈತ್ರಿ ಮೂವಿ ಮೇಕರ್ಸ್ ಸ್ಪಷ್ಟನೆ ನೀಡಿದೆ. ಪುಷ್ಪ 2 ಚಿತ್ರ ಬಿಡುಗಡೆಯಾದ ದಿನದಿಂದ 56 ದಿನಗಳ ಒಳಗೆ ಒಟಿಟಿಯಲ್ಲಿ ಬಿಡುಗಡೆಯಾಗುವುದಿಲ್ಲ. ಅಲ್ಲಿಯವರೆಗೆ ಪುಷ್ಪ 2 ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಬೇಕು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಹೀಗಾಗಿ, ಸದ್ಯದಲ್ಲಿ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗದು. ಪುಷ್ಪ 2 ನ ಒಟಿಟಿ ಹಕ್ಕುಗಳನ್ನು ನೆಟ್‌ಪ್ಲಿಕ್ಸ್ ಸಂಸ್ಥೆ ಭಾರಿ ಬೆಲೆಗೆ ಖರೀದಿಸಿತ್ತು.
ಕಲ್ಕಿ 2898 ಎಡಿ
ಬುಕ್‌ಮೈಶೋನಲ್ಲಿ ಹೆಚ್ಚು ಜನರು ಟಿಕೆಟ್ ಖರೀದಿಸಿರುವ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿನಿಮಾ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.ಕಲ್ಕಿ 2898 ಎಡಿ ಸಿನಿಮಾ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಕಲ್ಕಿ ಸಿನಿಮಾ ಬಿಡುಗಡೆಯಾಗಿದೆ. ಕಲ್ಕಿ ಸಿನಿಮಾವನ್ನು ವೈಜಯಂತಿ ಮೂವಿಸ್‌ನಡಿ ನಿರ್ಮಾಣ ಮಾಡಲಾಗಿದೆ. ಕಲ್ಕಿ ಸಿನಿಮಾದಲ್ಲಿ ಹಾಲಿವುಡ್‌ನ ಹಲವು ಸಿನಿಮಾಗಳ ಪ್ರಭಾವ, ಸ್ಪೂರ್ತಿ ಕಾಣಿಸಿತ್ತು.
ಸ್ತ್ರೀ 2
ಸ್ತ್ರೀ 2 ಬಾಲಿವುಡ್‌ನ ಬ್ಲಾಕ್‌ಬಸ್ಟರ್ ಸಿನಿಮಾವಾಗಿದೆ. ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸ್ತ್ರೀ 2 ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ವಿ ಪರರ್ಶನ ದಾಖಲಿಸಿತ್ತು.
ಟಾಪ್ 10 ಸಿನಿಮಾ
ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಸೂಪರ್‌ಹೀರೋ ಹನುಮಾನ್ ಸಿನಿಮಾವು ಬುಕ್ ಮೈ ಶೋ ಟಾಪ್ 10 ಲಿಸ್ಟ್‌ನಲ್ಲಿದೆ. ಇದೇ ರೀತಿ ಇತ್ತೀಚೆಗೆ ಬಿಡುಗಡೆಯಾದ ಅಮರನ್ ಸಿನಿಮಾವೂ ಈ ಪಟ್ಟಿಯಲ್ಲಿದೆ. ಭೂಲ್ ಭುಲ್ಲಯ್ಯಾ 3, ದೇವರ, ಗೋಟ್, ಮಂಜುಮ್ಮೆಲ್ ಬಾಯ್ಸ್, ಸಿಂಗಮ್ ಎಗೇನ್ ಮುಂತಾದ ಸಿನಿಮಾಗಳು ಈ ವರ್ಷ ಅತಿಹೆಚ್ಚು ಜನರು ವೀಕ್ಷಿಸಿದ ಟಾಪ್ 10 ಸಿನಿಮಾ ಎಂದು ಬುಕ್‌ಮೈ ಶೋ ತಿಳಿಸಿದೆ.