logo
ಕನ್ನಡ ಸುದ್ದಿ  /  ಮನರಂಜನೆ  /  ಮೈಸೂರಿನಲ್ಲಿದೆ ಚಂದನ್‌ ಶೆಟ್ಟಿ ಕನಸಿನ ಮನೆ; ಬಿಗ್​ ಬಾಸ್ ಸೆಟ್ ನೆನಪಿಸುವ ಐಷಾರಾಮಿ ಬಂಗಲೆಯ ಝಲಕ್ ನೋಡಿ

ಮೈಸೂರಿನಲ್ಲಿದೆ ಚಂದನ್‌ ಶೆಟ್ಟಿ ಕನಸಿನ ಮನೆ; ಬಿಗ್​ ಬಾಸ್ ಸೆಟ್ ನೆನಪಿಸುವ ಐಷಾರಾಮಿ ಬಂಗಲೆಯ ಝಲಕ್ ನೋಡಿ

Suma Gaonkar HT Kannada

Oct 08, 2024 08:06 PM IST

google News

ಚಂದನ್‌ ಶೆಟ್ಟಿ ಅವರ ಕನಸಿನ ಮನೆಯ ಹೊರ ನೋಟ ಹೀಗಿದೆ

    • ಬಿಗ್‌ ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಿ, ಅದೇ ರೀತಿ ಮುಂಭಾಗದಲ್ಲಿ ಸ್ವಿಮ್ಮಿಂಗ್‌ ಪೂಲ್ ಮಾಡಿಸಿ ಎಷ್ಟು ಸುಂದರವಾದ ಮನೆ ನಿರ್ಮಾಣ ಮಾಡಿದ್ದಾರೆ ನೋಡಿ. ಚಂದನ್ ಅವರ ಅಭಿರುಚಿ ಹೇಗಿದೆ ಎಂದು ಈ ಮನೆ ನೋಡಿದರೆ ತಿಳಿಯುತ್ತದೆ. 
ಚಂದನ್‌ ಶೆಟ್ಟಿ ಅವರ ಕನಸಿನ ಮನೆಯ ಹೊರ ನೋಟ ಹೀಗಿದೆ
ಚಂದನ್‌ ಶೆಟ್ಟಿ ಅವರ ಕನಸಿನ ಮನೆಯ ಹೊರ ನೋಟ ಹೀಗಿದೆ (Mr. Nirik - YouTube)

ಚಂದನ್‌ ಶೆಟ್ಟಿ ಅವರು ತಮ್ಮ ಕನಸಿನ ಮನೆಯನ್ನು ಈಗಾಗಲೇ ನಿರ್ಮಾಣ ಮಾಡಿದ್ದಾರೆ. ತುಂಬಾ ಸುಂದರವಾದ ಮನೆಯನ್ನು ಬೆಂಗಳೂರು ಹೊರ ವಲಯದಲ್ಲಿ ನಿರ್ಮಾಣ ಮಾಡಿದ್ದಾರೆ. ವೈಟ್‌ ಮತ್ತು ಗ್ರೇ ಕಲರ್ ಬಳಕೆ ಮಾಡಿ, ಇಡೀ ಮನೆಯ ಪೇಟಿಂಗ್ ಮಾಡಿದ್ದು ಇದು ಒಂದು ರೀತಿ ಹೊಸ ಲುಕ್ ನೀಡಿದೆ. ಸಕಲ ಸೌಕರ್ಯಗಳನ್ನೂ ಹೊಂದಿರುವ ಒಂದು ಸುಂದರ ಮನೆಯನ್ನು ತಮಗೆ ಬೇಕಾದಂತೆ ತಾವೇ ಸ್ವತಃ ರೂಪಿಸಿಕೊಂಡಿದ್ದಾರೆ. ಚಂದನ್ ಅವರಿಗೆ ಹಾಡು ಹೇಳುವುದು ಮಾತ್ರವಲ್ಲ. ಜೊತೆಗೆ ಮನೆ ವಿನ್ಯಾಸ ಮಾಡುವುದರಲ್ಲೂ ಹೆಚ್ಚಿನ ಆಸಕ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

ಈ ಮನೆಯನ್ನು ನಿರ್ಮಾಣ ಮಾಡುವಾಗ, ತಮಗೆ ಯಾವ ರೀತಿ ವಸ್ತುಗಳು ಬೇಕು ಎಂಬುದನ್ನು ತಾವೇ ನಿರ್ಧಾರ ಮಾಡಿದ್ದು ಮಾತ್ರವಲ್ಲದೇ, ಸ್ವತಃ ಮಾರುಕಟ್ಟೆಯಿಂದ ಖರೀದಿಸಿ ತಂದಿದ್ದಾರಂತೆ. ತುಂಬಾ ವಿಶಾಲವಾದ ಜಾಗ ಇರುವ ಮನೆಯನ್ನು ನಿರ್ಮಾಣ ಮಾಡಿದ್ದಾರೆ. ಕಿಚನ್ ಸ್ವಲ್ಪ ಚಿಕ್ಕದಾಗಿದ್ದು, ಅಡುಗೆ ಮಾಡುವ ಸ್ಥಳ ಹೆಚ್ಚಾಗಿ ಕಾಣಬಾರದು ಎಂಬ ಉದ್ದೇಶ ಇಟ್ಟುಕೊಂಡು ಹಾಲ್‌ನಲ್ಲಿ ಪಾರ್ಟೀಷನ್ ಮಾಡಿದ್ದಾರೆ.

ಹೀಗಿದೆ ಮನೆಯ ಒಳಾಂಗಣ ವಿನ್ಯಾಸ

ಇನ್ನು ಮನೆಯ ಎಲ್ಲಾ ಸೋಫಾ ಹಾಗೂ ಇಂಟೀರಿಯರ್ಸ್‌, ಕರ್ಟನ್‌ ಎಲ್ಲವೂ ಸಾಮಾನ್ಯವಾಗಿ ಬೂದು ಬಣ್ಣದಲ್ಲೇ ಇದೆ. ಪ್ರತಿ ಗೋಡೆಗಳೂ ಸಹ ಬಿಳಿ ಬಣ್ಣದಲ್ಲಿವೆ. ಇನ್ನು ಮೆಟ್ಟಿಲು ಹತ್ತಿ ಹೋದಂತೆ ಮತ್ತಷ್ಟು ರೂಮ್‌ಗಳು ಸಿಗುತ್ತವೆ. ಈ ಮನೆಯ ಜಾಗವನ್ನು ಆಯ್ಕೆ ಮಾಡುವಾಗ ನಿವೇದಿತಾ ಗೌಡ ಅವರ ಮನೆಯವರು ಚಂದನ್‌ ಶೆಟ್ಟಿಯವರಿಗೆ ಸಹಾಯ ಮಾಡಿದ್ದರಂತೆ.

ಮಿಸ್ಟರ್‌ ನಿರಿಕ್ ಯುಟ್ಯೂಬ್‌ ಚಾನೆಲ್‌ನಲ್ಲಿ ನಿರಂಜನ್ ದೇಶಪಾಂಡೆ ಹಾಗೂ ಕಿರಿಕ್ ಕೀರ್ತಿ ಈ ಕುರಿತು ವಿಡಿಯೋ ಮಾಡಿದ್ದಾರೆ.

ಕಾರ್ ಪಾರ್ಕಿಂಗ್‌, ಸ್ವಿಮ್ಮಿಂಗ್‌ ಪೂಲ್‌ ಸಹ ಈ ಮನೆಯಲ್ಲಿದೆ. ಇದು ಮನೆಗೆ ಹೆಚ್ಚಿನ ಆಕರ್ಷಣೆ ನೀಡುತ್ತದೆ. ಅಷ್ಟೇ ಅಲ್ಲ ಎಲ್ಲರೂ ಇಷ್ಟಪಡುವ ಒಂದು ಸ್ಥಳ ಇದಾಗಿದೆ. ಅಲ್ಲಲ್ಲಿ ಚಿಕ್ಕದಾದ ಫೋಟೋ ಫ್ರೇಮ್‌ಗಳನ್ನು ಹಾಕಿದ್ದಾರೆ. ಬಿಗ್‌ ಬಾಸ್‌ ಮನೆಯ ನೆನಪಿಗೆಂದು ಕೆಲವು ಸಾಮಗ್ರಿಗಳನ್ನು ಅಲ್ಲಿರುವಂತೆಯೇ ಜೋಡಿಸಿಕೊಂಡಿದ್ದಾರೆ.

ಅದರಲ್ಲೂ ಮುಖ್ಯವಾಗಿ ಒಂದು ಉಯ್ಯಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದನ್ನು ಅವರು ತುಂಬಾ ಇಷ್ಟಪಟ್ಟು ಖರೀದಿ ಮಾಡಿರುವುದಾಗಿ ಹೇಳಿದ್ಧಾರೆ. ಅವರ ಜೀವನದಲ್ಲಿ ಏನೇ ಕಹಿ ಘಟನೆ ನಡೆದರೂ ಅವರು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಒಂದಲ್ಲ ಒಂದು ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.

ಕಾಂಪೌಂಡ್ ವಿಶೇಷವಾಗಿದೆ

ಇನ್ನು ಮನೆಯ ಮುಂಭಾಗದಲ್ಲಿ ಇರುವ ಕಾಂಪೌಂಡ್ ತುಂಬಾ ಎತ್ತರವಾಗಿದೆ. ಮನೆಯ ಒಳ ಭಾಗದಲ್ಲಿ ಅಂದರೆ ಅಂಗಳದಲ್ಲಿ ಏನಾಗುತ್ತಿದೆ ಎಂಬುದು ಹೊರ ಜಗತ್ತಿಗೆ ತಿಳಿಯದ ರೀತಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲ ಇದು ಅವರಿಗೆ ಬಿಗ್‌ ಬಾಸ್‌ ಮನೆಯನ್ನು ನೆನಪು ಮಾಡುತ್ತದೆಯಂತೆ. ಅದಕ್ಕೆ ಆ ರೀತಿ ಕಟ್ಟಿಸಿದ್ದೀನಿ ಎಂದು ಹೇಳಿದ್ದಾರೆ. ಎಲ್ಲಿ ನೋಡಿದರೂ ಒಂದೇ ಬಣ್ಣ ಮತ್ತು ಸುಂದರವಾದ ವಿನ್ಯಾಸವನ್ನು ಈ ಮನೆ ಹೊಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ