logo
ಕನ್ನಡ ಸುದ್ದಿ  /  ಮನರಂಜನೆ  /  Rakshita Prem Birthday: ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ.. ಬೆಸ್ಟ್‌ ಫ್ರೆಂಡ್‌ ರಕ್ಷಿತಾಗೆ ಹಾರೈಸಿದ ಚಾಲೆಂಜಿಂಗ್‌ ಸ್ಟಾರ್‌

Rakshita Prem Birthday: ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ.. ಬೆಸ್ಟ್‌ ಫ್ರೆಂಡ್‌ ರಕ್ಷಿತಾಗೆ ಹಾರೈಸಿದ ಚಾಲೆಂಜಿಂಗ್‌ ಸ್ಟಾರ್‌

HT Kannada Desk HT Kannada

Mar 31, 2023 05:18 PM IST

google News

ರಕ್ಷಿತಾ ಹುಟ್ಟುಹಬ್ಬಕ್ಕೆ ಹಾರೈಸಿದ ದರ್ಶನ್

    • ಇಬ್ಬರೂ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಶುಭ ಕೋರಿದ್ದಾರೆ. ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ , ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ, ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ ಎಂದು ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬದ ಶುಭ ಕೋರಿದ್ಧಾರೆ.
ರಕ್ಷಿತಾ ಹುಟ್ಟುಹಬ್ಬಕ್ಕೆ ಹಾರೈಸಿದ ದರ್ಶನ್
ರಕ್ಷಿತಾ ಹುಟ್ಟುಹಬ್ಬಕ್ಕೆ ಹಾರೈಸಿದ ದರ್ಶನ್

ಸ್ಯಾಂಡಲ್‌ವುಡ್‌ ನಟಿ ರಕ್ಷಿತಾ ಇಂದು ( ಮಾರ್ಚ್‌ 31) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ಸಂಭ್ರಮದಲ್ಲಿರುವ ಕ್ರೇಜಿಕ್ವೀನ್‌ಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಕೂಡಾ ಶುಭಾಶಯ ಕೋರುತ್ತಿದ್ಧಾರೆ. ನಿನ್ನೆ ರಾತ್ರಿಯಿಂದಲೇ ರಕ್ಷಿತಾ ಮನೆಯಲ್ಲಿ ಬರ್ತ್‌ಡೇ ಸೆಲಬ್ರೇಷನ್‌ ಆರಂಭವಾಗಿದ್ದು ರಕ್ಷಿತಾ ತಮ್ಮ ಕುಟುಂಬದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡಾ ರಕ್ಷಿತಾಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶುಭ ಕೋರಿದ್ದಾರೆ. ದರ್ಶನ್‌ ಹಾಗೂ ರಕ್ಷಿತಾ ಕಲಾಸಿಪಾಳ್ಯ, ಅಯ್ಯ, ಸುಂಟರಗಾಳಿ ಹಾಗೂ ಮಂಡ್ಯ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇಬ್ಬರದ್ದೂ ಕನ್ನಡ ಚಿತ್ರರಂಗದಲ್ಲಿ ಬೆಸ್ಟ್‌ ಜೋಡಿ ಎಂದೇ ಹೆಸರಾಗಿದೆ. ದರ್ಶನ್‌ ಹಾಗೂ ನಿರ್ಮಾಪಕ ಉಮಾಪತಿ ನಡುವೆ ಮನಸ್ತಾಪ ಉಂಟಾಗಿದ್ದ ಸಮಯದಲ್ಲಿ ಒಮ್ಮೆ ದರ್ಶನ್‌ ಪ್ರೇಮ್‌ ವಿಚಾರವಾಗಿ ಆಡಿದ್ದ ಮಾತುಗಳು ರಕ್ಷಿತಾಗೆ ಬೇಸರ ತರಿಸಿತ್ತಾದರೂ ಇವರಿಬ್ಬರ ಸ್ನೇಹದಲ್ಲಿ ಏನೂ ಬದಲಾವಣೆ ಆಗಿಲ್ಲ. ಪರಿಚಯ ಆದಾಗಿನಿಂದ ಇದುವರೆಗೂ ಇಬ್ಬರೂ ಅದೇ ಸ್ನೇಹದಿಂದ ಇದ್ದಾರೆ.

ಇಂದು ರಕ್ಷಿತಾ ಹುಟ್ಟುಹಬ್ಬದಂದು ದರ್ಶನ್‌, ಇಬ್ಬರೂ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ಶುಭ ಕೋರಿದ್ದಾರೆ. ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ , ನಿನ್ನ ಹೃದಯ ಬಯಸಿದ್ದು ನಿನಗೆ ಫಲಿಸಲಿ ಎಂದು ಆಶಿಸುತ್ತಾ, ನೂರಾರು ವರುಷ ನೀನು ನಗು ನಗುತಾಯಿರು ಎಂದು ಹಾರೈಸುವೆ ಎಂದು ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬದ ಶುಭ ಕೋರಿದ್ಧಾರೆ. ಫೆಬ್ರವರಿ 16 ರಂದು ರಕ್ಷಿತ್‌ ಕೂಡಾ ಇದೇ ಫೋಟೋ ಹಂಚಿಕೊಂಡು ದರ್ಶನ್‌ಗೆ ಶುಭ ಹಾರೈಸಿದ್ದರು.‌

ಸ್ಯಾಂಡಲ್‌ವುಡ್‌ ನಿರ್ದೇಶಕ ಗೌರಿಶಂಕರ್‌ ಹಾಗೂ ಮಮತಾ ರಾವ್‌ ಪುತ್ರಿ ಶ್ವೇತಾ, ರಕ್ಷಿತಾ ಹೆಸರಿನಲ್ಲಿ ಅಪ್ಪು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಚಿತ್ರದಲ್ಲಿ ರಕ್ಷಿತಾ, ಪುನೀತ್‌ ರಾಜ್‌ಕುಮಾರ್‌ ಜೋಡಿಯಾಗಿ ನಟಿಸಿದ್ದರು. 2002ರಲ್ಲಿ ತೆರೆ ಕಂಡ ಈ ಸಿನಿಮಾ ಪುನೀತ್‌ ಅವರಿಗೆ ಕೂಡಾ ಕಮ್‌ ಬ್ಯಾಕ್‌ ಸಿನಿಮಾವಾಗಿತ್ತು. ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲಿ ಕೂಡಾ ಗುರುತಿಸಿಕೊಂಡಿದ್ದ ರಕ್ಷಿತಾ, ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ನಿರ್ದೇಶಕ ಪ್ರೇಮ್‌ ಅವರನ್ನು ಪ್ರೀತಿಸಿ ಮದುವೆ ಆದರು. ಈ ದಂಪತಿಗೆ ಸೂರ್ಯ ಎಂಬ ಪುತ್ರ ಇದ್ಧಾರೆ. ಸದ್ಯಕ್ಕೆ ನಟನೆಯಿಂದ ದೂರ ಉಳಿದಿರುವ ರಕ್ಷಿತಾ ಈಗ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ಧಾರೆ. ಕಿರುತೆರೆ ರಿಯಾಲಿಟಿ ಶೋ ಜಡ್ಜ್‌ ಆಗಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಕನ್ನಡ ಚಿತ್ರರಂಗದಲ್ಲೂ ಚುನಾವಣೆ ರಂಗು.. ಅಖಾಡಕ್ಕೆ ಇಳಿಯಲಿದ್ದಾರಂತೆ ಪ್ರವೀಣರೊಂದಿಗೆ ನವೀನರು!

ಈ ಬಾರಿ ಸ್ಯಾಂಡಲ್‌ವುಡ್‌ನಿಂದ ಕೂಡಾ ಬಹುತೇಕರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಸುಮಲತಾ ಅಂಬರೀಶ್‌, ತಾರಾ ಅನುರಾಧ, ಮುಖ್ಯಮಂತ್ರಿ ಚಂದ್ರು, ಮಾಳವಿಕಾ ಅವಿನಾಶ್‌, ಜಯಮಾಲಾ, ಜಗ್ಗೇಶ್‌, ಪೂಜಾಗಾಂಧಿ, ನಿಖಿಲ್‌ ಕುಮಾರಸ್ವಾಮಿ ಹಾಗೂ ಇನ್ನಿತರರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

ಧನಂಜಯ್-ಅಮೃತಾ ನಿಜಕ್ಕೂ ಲವ್‌ ಮಾಡ್ತಿದ್ಧಾರಾ... ಅನುಮಾನ ಮೂಡಿಸಿದ ರಮ್ಯಾ ಮಾತುಗಳು!

ಇತ್ತೀಚೆಗೆ ಸುದೀಪ್‌ ಕೂಡಾ 'ಗುರುದೇವ್‌ ಹೊಯ್ಸಳ' ಸಿನಿಮಾ ಕಾರ್ಯಕ್ರಮದಲ್ಲಿ ಅಮೃತಾ ವಿಚಾರದಲ್ಲಿ ಡಾಲಿ ಕಾಲೆಳೆದಿದ್ದರು. ಇದೀಗ ರಮ್ಯಾ ಆಡಿರುವ ಮಾತುಗಳು ಕೂಡಾ ಇಬ್ಬರ ಲವ್‌ ಸೀಕ್ರೇಟ್‌ ಬಿಚ್ಚಿಟ್ಟ ಹಾಗೇ ಇದೆ. 'ಗುರುದೇವ್‌ ಹೊಯ್ಸಳ' ಚಿತ್ರದಲ್ಲಿ ಅಮೃತಾ ಹಾಗೂ ಧನಂಜಯ್‌ ಗಂಡ - ಹೆಂಡತಿ ಆಗಿ ನಟಿಸಿದ್ಧಾರೆ. ಇದೇ ಪ್ರಶ್ನೆ ರಮ್ಯಾಗೆ ಮಾಧ್ಯಮದವರಿಂದ ಎದುರಾಯ್ತು. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ