logo
ಕನ್ನಡ ಸುದ್ದಿ  /  ಮನರಂಜನೆ  /  Ambajipeta Marriage Band: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್; 3 ದಿನದ ಕಲೆಕ್ಷನ್ ಹೀಗಿದೆ

Ambajipeta Marriage Band: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್; 3 ದಿನದ ಕಲೆಕ್ಷನ್ ಹೀಗಿದೆ

Raghavendra M Y HT Kannada

Feb 05, 2024 12:33 PM IST

google News

ತೆಲುಗಿನ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮೂವಿಯ 3 ದಿನಗಳ ಕಲೆಕ್ಷನ್ ಇಲ್ಲಿದೆ.

  • Ambajipeta Marriage Band: ತೆಲುಗಿನ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮೂರನೇ ದಿನದಲ್ಲಿ ಈ ಮೂವಿ ಎಷ್ಟು ಕಲೆಕ್ಷನ್ ಮಾಡಿದೆ ಅನ್ನೋದರ ವಿವರ ಇಲ್ಲಿದೆ.

ತೆಲುಗಿನ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮೂವಿಯ 3 ದಿನಗಳ ಕಲೆಕ್ಷನ್ ಇಲ್ಲಿದೆ.
ತೆಲುಗಿನ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಮೂವಿಯ 3 ದಿನಗಳ ಕಲೆಕ್ಷನ್ ಇಲ್ಲಿದೆ.

Ambajipeta Marriage Band Box Office Collection: ಯುವ ನಟ ಸುಹಾಸ್ ನಟಿಸಿರುವ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಕಳೆದ ಶುಕ್ರವಾರ (ಫೆಬ್ರವರಿ 2) ಬಿಡುಗಡೆಯಾಗಿರುವ ಮೂವಿ ಮೊದಲ 3 ದಿನಗಳಲ್ಲಿ 4.31 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕಳೆದ ವಾರ ರಿಲೀಸ್ ಆದ ಸಿನಿಮಾಗಳ ಪೈಕಿ ಈ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಮಾತ್ರ ಪ್ರೇಕ್ಷಕರ ಮನಗೆದ್ದಿದೆ. ಇನ್ನುಳಿದ ಸಿನಿಮಾಗಳು ಥಿಯೇಟರ್‌ಗಳಲ್ಲಿ ಹೇಳಿಕೊಳ್ಳುವಷ್ಟು ಪ್ರದರ್ಶನ ಕಾಣುತ್ತಿಲ್ಲ.

ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಈ ವರ್ಷದ ಮೊದಲ ಟಾಲಿವುಡ್‌ನ ಅತ್ಯಂತ ಜನಪ್ರಿಯಾದ ಸಿನಿಮಾಗಳಲ್ಲಿ ಒಂದಾಗಿದೆ. ನಿರೀಕ್ಷೆಯಂತೆ ಸುಹಾಸ್ ನಟನೆಯ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಭಾರತದಲ್ಲಿ ಮೊದಲ ದಿನದ ಕಲೆಕ್ಷನ್ 1.2 ಕೋಟಿ ರೂಪಾಯಿ. ಎರಡನೇ ದಿನ 1.5 ಕೋಟಿ ರೂಪಾಯಿ ಸಂಗ್ರಹಿಸಿದರೆ, ಮೂರನೇ ದಿನ ಅಂದರೆ ಭಾನುವಾರ (ಫೆಬ್ರವರಿ 4) 1.6 ಕೋಟಿ ರೂಪಾಯಿ ಗಳಿಕೆ ಕಾಣುವ ಮೂಲಕ ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿದೆ. ಮೊದಲ ಮೂರು ದಿನಗಳಲ್ಲಿ ಒಟ್ಟು 4.3 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಗಮನ ಸೆಳೆದಿದೆ. ಸೋಮವಾರ (ಫೆಬ್ರವರಿ 5) ಈ ಚಿತ್ರಕ್ಕೆ ನಿಜವಾದ ಪರೀಕ್ಷೆ ಎದುರಾಗಲಿದೆ. ಇವತ್ತು ಎಷ್ಟು ಗಳಿಸಲಿದೆ ಅನ್ನೋದರ ಮೇಲೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯನ್ನು ಮುಂದುರಿಸುತ್ತದೆಯೇ ಅನ್ನೋದು ಗೊತ್ತಾಗಲಿದೆ.

ನಿರೀಕ್ಷೆಯಂತೆ ಮೊದಲ ದಿನ ಪ್ರದರ್ಶನದಿಂದಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಮೂರು ದಿನಗಳಿಂದ ಗಳಿಕೆ ಹೆಚ್ಚುತ್ತಲೇ ಹೋಗುತ್ತಿದೆ. ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾ ಜೊತೆಗೆ ತೆರೆಕಂಡ ಬೂಟುಕಾಟು ಬಾಲರಾಜರು, ಗೇಮ್ ಆನ್, ಹ್ಯಾಪಿ ಎಂಡಿಂಗ್, ಕಿಸ್ಮತ್ ಚಿತ್ರಗಳು ಅಡ್ರೆಸ್ ಇಲ್ಲದೆ ಹೋಗಿವೆ. ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾಗೆ ಪ್ರೇಕ್ಷಕರ ಮನ್ನಣೆ ಸಿಕ್ಕಿದೆ. ಉಳಿದ ಸಿನಿಮಾಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಬಹುತೇಕ ಸಿಂಗಲ್ ಸ್ಕ್ರೀನ್‌ಗಳಲ್ಲಿ ಉಳಿದ ನಾಲ್ಕು ಚಿತ್ರಗಳ ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಸಹ ಕಾಣ್ತಿಲ್ಲ. ಹಲವೆಡೆ ಪ್ರತಿ ಪ್ರದರ್ಶನಕ್ಕೆ 5 ಟಿಕೆಟ್‌ಗಳಿಂತ ಹೆಚ್ಚು ಮಾರಾಟವಾಗಿಲ್ಲ. ಇದರಿಂದ ಈ ಸಿನಿಮಾಗಳನ್ನು ಖಾಲಿ ಮಾಡಿಸಿ ಮತ್ತೆ ಸಂಕ್ರಾಂತಿಗೆ ಬಿಡುಗಡೆಯಾಗಿದ್ದ ಸಿನಿಮಾಗಳನ್ನು ಹಾಕಿಕೊಂಡಿವೆ.

ಯುವ ನಟ ಸಹಾಸ್ ವೃತ್ತಿಜೀವನದಲ್ಲಿ ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ದೊಡ್ಡ ಹಿಟ್ ಆಗುವ ಸಾಧ್ಯತೆಯಿದೆ. ಈ ಹಿಂದೆ ಕಲರ್ ಫೋಟೊ, ರೈಟರ್ ಪದ್ಮಭೂಷಣ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಸುಹಾಸ್ ಕ್ರಮೇಣ ತಮ್ಮ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಅಂಬಾಪೇಟ ಮ್ಯಾರೇಜ್ ಬ್ಯಾಂಡ್ ಸಿನಿಮಾದ ಕಲೆಕ್ಷನ್‌ಗಳೇ ಸಾಕ್ಷಿ. ಪ್ರೇಕರು ಕೂಡ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

ಅಂಬಾಜಿಪೇಟ ಮ್ಯಾರೇಜ್ ಬ್ಯಾಂಡ್ ಒಂದು ಸುಂದರ ಸಂದೇಶ ಆಧಾರಿತ ಪ್ರೇಮಕಥೆ. ಜಾತಿ ತಾರತಮ್ಯದ ಹಿನ್ನೆಲೆಯಲ್ಲಿ ತೆಲುಗಿನ ನಿರ್ದೇಶಕರೂ ತಮಿಳು ನಿರ್ದೇಶಕರಿಗೆ ಪೈಪೋಟಿ ನೀಡಿ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸುವ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಪ್ರತಿಯೊಬ್ಬರು ಸ್ಪರ್ಧಾತ್ಮಕ ಪಾತ್ರವನ್ನು ನಿರ್ವಹಿಸಿದ್ದಾರೆ. ಮಲ್ಲಿ ಪಾತ್ರದಲ್ಲಿ ಸುಹಾಸ್ ಮನಗೆದ್ದಿದ್ದಾರೆ. ಈ ಪಾತ್ರಕ್ಕೆ ಅವರು ಪರ್ಫೆಕ್ಟ್ ಆಗಿದ್ದಾರೆ ಎನಿಸಿದೆ. ನಟಿಯಾಗಿ ಶರಣ್ಯಾ ಅವರರ ಹೊಸ ಮುಖವನ್ನು ಈ ಸಿನಿಮಾ ತೋರಿಸಿಕೊಟ್ಟಿದೆ. ಸೀರಿಯಸ್ ಪಾತ್ರಗಳು ಸಿಕ್ಕರೆ ಎಷ್ಚು ಮಿಂಚಬಹದು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿಕೊಟ್ಟಿದ್ದಾರೆ.

ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕನಂತೆಯೇ ಫೈಟ್‌ಗಳನ್ನು ಮಾಡುವ ಜೊತೆಗೆ ನಾಯಕ ಪಡುವ ಸಂಘರ್ಷವನ್ನು ಅತ್ಯುತ್ತಮವಾಗಿ ತೋರಿಸಲಾಗಿದೆ. ಶರಣ್ಯಾ ಪೊಲೀಸ್ ಠಾಣೆಯ ಸೀನ್ ಸಿನಿಮಾದಲ್ಲಿನ ಹೈಲೈಟ್ ಅಂತಲೇ ಹೇಳಬಹುದು. ಲಕ್ಷ್ಮಿ ಮತ್ತು ಮಲ್ಲಿ ಪ್ರೇಮಕಥೆಗೆ ವಿಭಿನ್ನವಾದ ಅಂತ್ಯವನ್ನು ನೀಡಿದ್ದಾರೆ ನಿರ್ದೇಶಕರು. ಮುಂದಿನ ದಿನಗಳಲ್ಲಿ ಈ ಸಿನಿಮಾ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (This copy first appeared in Hindustan Times Kannada website. To read more like this please logon to kannada.hindustantime.com).

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ