logo
ಕನ್ನಡ ಸುದ್ದಿ  /  ಮನರಂಜನೆ  /  ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್‌ ಇಂದಿರಾ ಬದಲು ಬೇರೊಬ್ಬರು ನಟಿಸಬೇಕಿತ್ತಂತೆ! ಲವ್‌ ಯು ಮನು ಅಂತ ಅಬ್ಬರಿಸಬೇಕಿದ್ದ ನಟ ಯಾರು?

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್‌ ಇಂದಿರಾ ಬದಲು ಬೇರೊಬ್ಬರು ನಟಿಸಬೇಕಿತ್ತಂತೆ! ಲವ್‌ ಯು ಮನು ಅಂತ ಅಬ್ಬರಿಸಬೇಕಿದ್ದ ನಟ ಯಾರು?

Praveen Chandra B HT Kannada

Nov 14, 2024 11:43 AM IST

google News

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್‌ ಇಂದಿರಾ ಬದಲು ಬೇರೊಬ್ಬರು ನಟಿಸಬೇಕಿತ್ತು

    • ಭೈರತಿ ರಣಗಲ್‌ ಸಿನಿಮಾ ನವೆಂಬರ್‌ 15ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ನಟಿಸಿರುವ ಪ್ರಮುಖ ನಟರೊಬ್ಬರು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಸೋಮನಾಗಿ ನಟಿಸಬೇಕಿತ್ತು. ಆದರೆ, ಬಳಿಕ ಆ ಪಾತ್ರಕ್ಕೆ ರಮೇಶ್‌ ಇಂದಿರಾ ಅವರನ್ನು ಆಯ್ಕೆ ಮಾಡಲಾಗಿತ್ತು ಎಂದು ನಿರ್ದೇಶಕ ಹೇಮಂತ್‌ ಎಂ ರಾವ್‌ ಹೇಳಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್‌ ಇಂದಿರಾ ಬದಲು ಬೇರೊಬ್ಬರು ನಟಿಸಬೇಕಿತ್ತು
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್‌ ಇಂದಿರಾ ಬದಲು ಬೇರೊಬ್ಬರು ನಟಿಸಬೇಕಿತ್ತು

ಬೆಂಗಳೂರು: ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್‌ ಇಂದಿರಾ ನಟನೆ ಶ್ಲಾಘನೆಗೆ ಪಾತ್ರವಾಗಿತ್ತು. ಮನುವಿನ ಎದುರಾಳಿಯಾಗಿ ಸೋಮನ ಪಾತ್ರದಲ್ಲಿ "ಲವ್‌ ಯು ಮನು" ಎನ್ನುತ್ತ ತನ್ನದೇ ಶೈಲಿಯಲ್ಲಿ ಇವರು ಅಬ್ಬರಿಸಿದ್ದರು. ಅಸಲಿಗೆ, ಈ ಸಿನಿಮಾದಲ್ಲಿ ರಮೇಶ್‌ ಇಂದಿರಾ ಬದಲು ಬೇರೊಬ್ಬರು ಈ ಪಾತ್ರ ಮಾಡಬೇಕಿತ್ತು. ಭೈರತಿ ರಣಗಲ್‌ ಸಿನಿಮಾ ಬಿಡುಗಡೆ ಪೂರ್ವದಲ್ಲಿ ಸೋಷಿಯಲ್‌ಮೀಡಿಯಾದಲ್ಲಿ ಹೇಮಂತ್‌ ಎಂ ರಾವ್‌ ಕೆಲವು ಆಸಕ್ತಿದಾಯಕ ಅಂಶಗಳನ್ನು ಹೇಳಿದ್ದಾರೆ.

ಭೈರತಿ ರಣಗಲ್‌ ಸಿನಿಮಾ ನವೆಂಬರ್‌ 15ರಂದು ಬಿಡುಗಡೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮನು ಮತ್ತು ಪ್ರಿಯಾ ಪಾತ್ರದಲ್ಲಿ ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ನಟಿಸಿದ್ದರು. ಸಪ್ತ ಸಾಗರದಾಎ ಎಲ್ಲೋ ಸಿನಿಮಾದಲ್ಲಿ ಇವರಿಬ್ಬರು ಪ್ರಮುಖ ಆಕರ್ಷಣೆ ಅನ್ನೋದು ಸುಳ್ಳಲ್ಲ. ಇದರ ಜತೆಗೆ ರಮೇಶ್‌ ಇಂದಿರಾ ನಟಿಸಿದ್ದ ಸೋಮಾ ಪಾತ್ರವೂ ಪವರ್‌ಫುಲ್‌ ಆಗಿತ್ತು. ನಟ, ನಿರ್ದೇಶಕ ರಮೇಶ್‌ ಇಂದಿರಾ ಈ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದರು. ಆದರೆ, ಆರಂಭದಲ್ಲಿ ಈ ಪಾತ್ರಕ್ಕ ರಮೇಶ್‌ ಇಂದಿರಾ ಅವರನ್ನು ಆಯ್ಕೆ ಮಾಡಲಾಗಿರಲಿಲ್ಲ ಎಂಬ ಆಸಕ್ತಿದಾಯಕ ಅಂಶವನ್ನು ನಿರ್ದೇಶಕ ಹೇಮಂತ್‌ರಾವ್‌ ಹೇಳಿದ್ದಾರೆ. ನವೆಂಬರ್‌ 15ರಂದು ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್‌ ನಾಯಕಿಯಾಗಿದ್ದಾರೆ. ಶಿವಣ್ಣನ ಜತೆ ಭೈರವನ ಕೊನೆ ಪಾಠ ಎಂಬ ಸಿನಿಮಾವನ್ನು ಹೇಮಂತ್‌ ರಾವ್‌ ಮಾಡುತ್ತಿದ್ದಾರೆ. ಹೀಗಾಗಿ, ಸೋಷಿಯಲ್ ಮೀಡಿಯಾ ಸಂವಾದದಲ್ಲಿ ಹೇಮಂತ್‌ ಕೂಡ ಭಾಗವಹಿಸಿದ್ದರು.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಮೇಶ್‌ ಇಂದಿರಾ ಬದಲು ಈ ನಟ ನಟಿಸಬೇಕಿತ್ತು

ಭೈರತಿ ರಣಗಲ್‌ ಸಂವಾದದಲ್ಲಿ ಭೈರತಿ ರಣಗಲ್‌ ಸಿನಿಮಾದಲ್ಲಿ ನಟಿಸಿದ ಮಧು ಗುರುಸ್ವಾಮಿ ಕೂಡ ಭಾಗವಹಿಸಿದ್ದರು. ಅವರು ಮಫ್ತಿ ಸಿನಿಮಾದಲ್ಲಿ ಸಿಂಗನಾಗಿ ನಟಿಸಿದ್ದರು. ಇವರು ಭೈರತಿ ರಣಗಲ್‌ನಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. "ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ಮಧು ಗುರುಸ್ವಾಮಿ ಜತೆ ಸಹಯೋಗ ಮಾಡಲು ಉದ್ದೇಶಿಸಿದ್ದೇವು. ರಮೇಶ್‌ ಇಂದಿರಾ ನಟಿಸಿರುವ ಪಾತ್ರದಲ್ಲಿ ಮಧು ನಟಿಸಬೇಕಿತ್ತು. ಸೋಮನ ಪಾತ್ರಕ್ಕಾಗಿ ಇವರನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು" ಎಂದು ಹೇಮಂತ್‌ ಎಂ ರಾವ್‌ ಹೇಳಿದ್ದಾರೆ.

"ಆದರೆ, ಆ ಸಮಯದಲ್ಲಿ ಮಧು ತುಂಬಾ ಬಿಝಿಯಾಗಿದ್ದರು. ಹೀಗಾಗಿ, ಸಪ್ತ ಸಾಗರದಾಚೆ ತಂಡ ಸೇರಲಾಗಿರಲಿಲ್ಲ. ಈ ಪಾತ್ರಕ್ಕೆ ಸೂಕ್ತ ವ್ಯಕ್ತಿ ಯಾರೆಂದು ಸಾಕಷ್ಟು ಹುಡುಕಾಟದ ನಡೆಸಿದ ಬಳಿಕ ರಮೇಶ್‌ ಇಂದಿರಾ ದೊರಕಿದ್ದರು. ಅವರು ಆ ಪಾತ್ರಕ್ಕೆ ಸರಿಯಾದ ನ್ಯಾಯ ನೀಡಿದ್ದಾರೆ" ಎಂದು ಹೇಮಂತ್‌ ಹೇಳಿದ್ದಾರೆ.

ಭೈರವನ ಕೊನೆ ಪಾಠ ಮುಂದೂಡಿಕೆ

ಹೇಮಂತ್‌ ಎಂ ರಾವ್‌ ಅವರು ಶಿವರಾಜ್‌ ಕುಮಾರ್‌ ನಾಯಕ ನಟನಾಗಿರುವ ಭೈರವನ ಕೊನೆ ಪಾಠ ಎಂಬ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಆದರೆ, ಸದ್ಯ ಈ ಸಿನಿಮಾ ಮುಂದೂಡಲಾಗಿದೆ ಅಥವಾ ಸ್ಥಗಿತಗೊಂಡಿದೆ. ಏಕೆಂದರೆ, ಶಿವರಾಜ್‌ ಕುಮಾರ್‌ ಅನಾರೋಗ್ಯದ ಕಾರಣ ಅಮೆರಿಕಕ್ಕೆ ಹೋಗಬೇಕಿದೆ. ಅಮೆರಿಕದಿಂದ ವಾಪಸ್‌ ಬಂದು ಸುಧಾರಿಸಿಕೊಂಡ ಬಳಿಕ ಈ ಚಿತ್ರದ ಕಾರ್ಯಗಳು ಆರಂಭವಾಗುವ ಸೂಚನೆಯಿದೆ. ಈ ವಿಷಯದ ಕುರಿತು ಹೇಮಂತ್‌ ಮಾತನಾಡಿಲ್ಲ. ಆದರೆ, ಭೈರವನ ಕೊನೆ ಪಾಠ ಸಿನಿಮಾವು ಷೇಕ್ಸ್‌ಪಿಯರ್‌ನ ಸಾಹಸ ನಾಟಕವೊಂದರ ಎಳೆಯನ್ನು ಒಳಗೊಂಡಿದೆ ಎಂಬ ಸುಳಿವು ನೀಡಿದ್ದಾರೆ.

2017ರಲ್ಲಿ ತೆರೆ ಕಂಡಿದ್ದ ಮಫ್ತಿ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಭೈರತಿ ರಣಗಲ್‌ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಹಾಗೂ ಪಾತ್ರಕ್ಕೆ ದೊರೆತ ಜನಪ್ರಿಯತೆಯಿಂದಾ ನಿರ್ದೇಶಕ ನರ್ತನ್‌ ಇದೇ ಹೆಸರಿನ ಸಿನಿಮಾ ನಿರ್ಮಿಸಿದ್ದಾರೆ. ಮಫ್ತಿ ಚಿತ್ರದಲ್ಲಿ ಶಿವಣ್ಣ ಧರಿಸಿದ್ದ ಕಾಸ್ಟ್ಯೂಮ್‌ ಇಲ್ಲೂ ಮುಂದುವರೆದಿದೆ. ಭೈರತಿ ರಣಗಲ್‌ನಲ್ಲಿ ಶಿವಣ್ಣ ಕೋರ್ಟ್‌ನಲ್ಲಿ ವಕೀಲರಾಗಿಯೂ ವಾದಿಸಲಿದ್ದಾರೆ. ಈ ಸಿನಿಮಾ ನವೆಂಬರ್‌ 15ರಂದು ಬಿಡುಗಡೆಯಾಗುತ್ತಿದ್ದು, ಶಿವಣ್ಣನ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ