ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ, ಭೈರತಿ ರಣಗಲ್‌ ಸಿನಿಮಾದ ಅಚ್ಚ ಕನ್ನಡದ ಹಾಡಿಗೆ ವಾಹ್‌ ಎಂದ ಅಭಿಮಾನಿಗಳು, ಇಲ್ಲಿದೆ ಲಿರಿಕ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ, ಭೈರತಿ ರಣಗಲ್‌ ಸಿನಿಮಾದ ಅಚ್ಚ ಕನ್ನಡದ ಹಾಡಿಗೆ ವಾಹ್‌ ಎಂದ ಅಭಿಮಾನಿಗಳು, ಇಲ್ಲಿದೆ ಲಿರಿಕ್ಸ್‌

ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ, ಭೈರತಿ ರಣಗಲ್‌ ಸಿನಿಮಾದ ಅಚ್ಚ ಕನ್ನಡದ ಹಾಡಿಗೆ ವಾಹ್‌ ಎಂದ ಅಭಿಮಾನಿಗಳು, ಇಲ್ಲಿದೆ ಲಿರಿಕ್ಸ್‌

Bhairathi Ranagal Song Lyrics: ನವೆಂಬರ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಭೈರತಿ ರಣಗಲ್‌ ಸಿನಿಮಾದ ಮೂರನೇ ಹಾಡು "ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ" ಬಿಡುಗಡೆಯಾಗಿದೆ. ಶಿವರಾಜ್‌ ಕುಮಾರ್‌ ನಟನೆಯ ಈ ಸಿನಿಮಾದ ಹಾಡಿನ ಲಿರಿಕ್ಸ್‌ ಇಲ್ಲಿದೆ. ಈ ಭೈರತಿ ರಣಗಲ್‌ ಸಿನಿಮಾದ ಹಾಡಿನಲ್ಲೇ ಕಥೆಯ ಕುರಿತು ಮಹಾ ಸುಳಿವು ಕೂಡ ಇದೆ.

ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ, ಭೈರತಿ ರಣಗಲ್‌ ಸಿನಿಮಾದ ಅಚ್ಚ ಕನ್ನಡದ ಹಾಡು
ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ, ಭೈರತಿ ರಣಗಲ್‌ ಸಿನಿಮಾದ ಅಚ್ಚ ಕನ್ನಡದ ಹಾಡು

Bhairathi Ranagal Song Lyrics: ನವೆಂಬರ್‌ ತಿಂಗಳ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್‌. ಶಿವಣ್ಣ ನಟನೆಯ ಈ ಸಿನಿಮಾ ಹಲವು ಕಾರಣಗಳಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ನವೆಂಬರ್‌ 15ರಂದು ಬಿಡುಗಡೆಯಾಗುವ ಈ ಸಿನಿಮಾದ ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ ಹಾಡು ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಈ ಲಿರಿಕಲ್‌ ವಿಡಿಯೋದಲ್ಲಿ ಲಾಯರ್‌ ಪಾತ್ರದ ಸುಳಿವು ನೀಡಲಾಗಿದೆ. ಜತೆಗೆ, ಈ ಹಾಡಿನ ಸಾಹಿತ್ಯದಲ್ಲಿ ಶಿವಣ್ಣನ ಗುಣಗಾನವೂ ಇದೆ. ನವೆಂಬರ್‌ 18ಕ್ಕೆ ಕನಕದಾಸ ಜಯಂತಿ ಇರುವುದರಿಂದ ಭೈರತಿ ರಣಗಲ್‌ ಚಿತ್ರಕ್ಕೆ ದೀರ್ಘ ವಾರಾಂತ್ಯದ ಪ್ರಯೋಜನ ದೊರಕಲಿದೆ. ಶಿವರಾಜ್‌ ಕುಮಾರ್‌ ಅಭಿಮಾನಿಗಳು ಸಾಕಷ್ಟು ಸಮಯದಲ್ಲಿ ಭೈರತಿ ರಣಗಲ್‌ಗೆ ಎದಿರು ನೋಡುತ್ತಿದ್ದಾರೆ. ಮಫ್ತಿ ಸಿನಿಮಾದ ತುಣಕೊಂದರಿಂದ ಹೊಸ ಸಿನಿಮಾ, ಹೊಸ ಅಧ್ಯಾಯವಾಗಿ ಭೈರತಿ ರಣಗಲ್‌ ಮೂಡಿಬಂದಿದೆ. ಬನ್ನಿ ಈ ಸಿನಿಮಾದ ಅಜ್ಞಾತವಾಸ ಹಾಡಿನ ಸಾಹಿತ್ಯ ಓದುತ್ತ, ಹಾಡನ್ನು ಕೇಳೋಣ.

ಭೈರತಿ ರಣಗಲ್‌ ಸಿನಿಮಾದ ಹಾಡಿನ ಲಿರಿಕ್ಸ್‌

ಸಿನಿಮಾದ ಹೆಸರು: ಭೈರತಿ ರಣಗಲ್‌

ಭಾಷೆ: ಕನ್ನಡ

ಹಾಡಿನ ಹೆಸರು: ಅಜ್ಞಾತವಾಸ

ಸಾಹಿತ್ಯ: ಡಾ. ವಿ. ನಾಗೇಂದ್ರ ಪ್ರಸಾದ್‌

ಗಾಯಕರು: ಶಂಕರ್‌ ಮಹಾದೇವನ್‌

ಅಜ್ಞಾತವಾಸ ಹಾಡಿನ ಸಾಹಿತ್ಯ (Bhairathi Ranagal Song Lyrics)

|| ಪಲ್ಲವಿ ||

ಅಜ್ಞಾತವಾಸ ಮುಗಿಸಿ ಎದ್ದು ಬಂದ ನೋಡೊ ಸರ್ವೇಶ !

ಧರ್ಮಾನುಸಾರ ಸಹನೆ ಗಳಿಸಿ ಗೆದ್ದು ಬಂದ ಆವೇಶ !

ದನಿ ಇರದಿರೋ ದಮನಿತರಿಗೆ ದನಿಯಾಗಲು ಬಂದವ !

ಜಡ ಬದುಕಿನ ಬಡ ಜನಗಳಾ ಪಡಿ ಪಾಟಲು ನೀಗುವ !

ಇವನೇ..... !

ಈ ಪಲ್ಲವಿಯಲ್ಲಿ ಭೈರತಿ ರಣಗಲ್‌ ನಾಯಕನ ಕುರಿತು ಸಾಕಷ್ಟು ಮಾಹಿತಿ ನೀಡಲಾಗಿದೆ. ಒಂದಿಷ್ಟು ಸಮಯ ಅಜ್ಞಾತವಾಸ ಮುಗಿಸಿಕೊಂಡು ಬಂದು ಬಡ ಜನರಿಗೆ ಧ್ವನಿಯಾಗಲು ಬರುತ್ತಿದ್ದಾರೆ. ಲಾಯರ್‌ ರೂಪದಲ್ಲಿ ನ್ಯಾಯ ದೊರಕಿಸಿಕೊಡಲು ನಾಯಕ ಬರುವ ಸಮಯದಲ್ಲಿ ಈ ಹಾಡು ಮೂಡಿ ಬಂದಿರುವ ಸಾಧ್ಯತೆಯಿದೆ.

|| ಚರಣ -01 ||

ಕೈ ಮುಗಿದರೇ ಕಷ್ಟವಾ ಕಳೆಯುವಾ ದೊರೆ ಇವ !

ನೀ ನೆನೆದರೇ ಕರೆದರೇ ಕ್ಷಣದಲೇ ದೊರೆಕುವ !

ನ್ಯಾಯದ ಜಗಲಿಯ ಜನಗಳ ನಡುವೆಯೆ ತೆರೆದವ !

ಇವ ಕಾಯದೆ ಕಾಯಿದೇ ತಕ್ಷಣಾ ತಿಳಿಸುವಾ !

ದಿನ ನೊಂದವಾ ದಿನ ಬೆಂದವಾ ಖುಷಿಯಾಗಲು ಈ ಕೃಷಿ !

ಮನೆ ಮನೆಗಳೂ ಮನ ಮನಗಳೂ ಮನ ಸೋತಿರೋ ಮಹಾಋಷಿ !

ಇವನೇ...... !

ಇದು ಕೋರ್ಟ್‌ ಸನ್ನಿವೇಶಕ್ಕೆ ತಕ್ಕಂತಹ ಹಾಡಾಗಿದೆ. ನ್ಯಾಯದ ಜಗಲಿಯ ಜನಗಳ ನಡುವೆಯೇ ತೆರೆದವ ಈ ಭೈರತಿ ರಣಗಲ್‌ ನಾಯಕ ಎಂಬ ಸುಳಿವನ್ನು ಈ ಹಾಡಿನಲ್ಲಿ ನೀಡಿದ್ದಾರೆ.

|| ಚರಣ -02 ||

ಸೈ ಅನುವನೂ ತುಳಿಯುವಾ ಕೆಡುಕರಾ ತುಳಿಯಲೂ !

ನಾನಿರುವೆನೂ ಅನುವನೂ ತುಳಿತವಾ ಬಿಡಿಸಲೂ !

ನ್ಯಾಯದ ಸಂಹಿತೇ ವಿಧಿಗಳಾ ಪರಿವಿಡಿ ಕಲಿತವ !

ಇವ ನ್ಯಾಯವ ಗೆಲಿಸಲೂ ನೆರವಿಗೇ ಬಂದವಾ !

ಭರವಸೆಗಳಾ ಭವಿತವ್ಯದಾ ಬೆಳಕಾದ ಈ ನೇಸರಾ !

ಮುಖವಾಡದಾ ಮುಖ ಕಳಚುವಾ ಮುಂದಾಳು ಈ ಭವಹರಾ !

ಇವನೇ...... !

ಒಟ್ಟಾರೆ ಈ ಹಾಡಿನ ಮೂಲಕ ಅಭಿಮಾನಿಗಳಲ್ಲಿ ಭೈರತಿ ರಣಗಲ್‌ ಸಿನಿಮಾದ ಕುರಿತು ಚಿತ್ರತಂಡ ಕುತೂಹಲ ಹೆಚ್ಚಿಸಲಾಗಿದೆ. ಈ ಹಾಡಿಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್‌ ಮಾಡಿದ್ದು, ಶಿವಣ್ಣನ ಸಿನಿಮಾಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ. "ಜನುಮದ ಜೋಡಿ ಸಿನಿಮಾದಲ್ಲಿ ಮತ್ತು ಜೋಗಿಯಲ್ಲಿ ಎಲ್ಲಾ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿತ್ತು ಅದೇ ತರಹ ರಣಗಲ್ ನಲ್ಲೂ ಕೂಡ ಎಲ್ಲಾ ಹಾಡುಗಳು ವಿಭಿನ್ನವಾಗಿ ತುಂಬಾ ಅದ್ಬುತವಾಗಿ ಇದೆ, ರಣಗಲ್ ಈ ವರ್ಷದ ಒಂದು ಒಳ್ಳೆ ಸಿನಿಮಾ ಆಗೋದರಲ್ಲಿ ಯಾವುದೇ ಅನುಮಾನ ಇಲ್ಲ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಇತ್ತೀಚಿಗೆ ಶುದ್ಧವಾದ ಕನ್ನಡ ಸಾಹಿತ್ಯ ಮರೆಯಾಗಿ ಹೋಗಿದೆ ಚಿತ್ರಗಳಲ್ಲಿ ಆದರೆ, ನಮ್ಮ ಭೈರತಿ ರಣಗಲ್ ನ ಎಲ್ಲ ಹಾಡುಗಳು ಅಚ್ಚ ಕನ್ನಡದಲ್ಲಿಯೇ ಮೂಡಿ ಬಂದಿವೆ" ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. "ರಣಗಲ್ ಸಿನಿಮಾದ ಎಲ್ಲಾ ಹಾಡುಗಳು ತುಂಬಾ ಅರ್ಥಗರ್ಭಿತವಾಗಿವೆ. ಸಿನಿಮಾ ಹಿಟ್ ಆಗುವುದರಲ್ಲಿ ಸಂದೇಹವೇ ಇಲ್ಲ. ಜೈ ಶಿವಣ್ಣ" ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಹೀಗೆ ನೂರಾರು ಕಾಮೆಂಟ್‌ಗಳ ಮೂಲಕ ಈ ಹಾಡಿನ ಕುರಿತು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

Whats_app_banner