ಅನುಷ್ಕಾ ಶೆಟ್ಟಿ ಹುಟ್ಟುಹಬ್ಬಕ್ಕೆ ಘಾಟಿ ಘಾಟು; ರಕ್ತಸಿಕ್ತ, ಸ್ಮೋಕಿಂಗ್ ಲುಕ್‌ನಲ್ಲಿ ನಟಿಯನ್ನು ನೋಡಿ ಲೇಡಿ ಸೂಪರ್‌ಸ್ಟಾರ್ ಅಂದ್ರು ಫ್ಯಾನ್
Nov 07, 2024 01:30 PM IST
ಅನುಷ್ಕಾ ಶೆಟ್ಟಿ ಘಾಟಿ ಸಿನಿಮಾದ ಫಸ್ಟ್ ಲುಕ್
- Ghaati Movie: ನಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಮಯದಲ್ಲಿ ಘಾಟಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಕ್ರಿಶ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯ ರಕ್ತಸಿಕ್ತ, ಸ್ಮೋಕಿಂಗ್ ಲುಕ್ ನೋಡಿ ಅಭಿಮಾನಿಗಳು "ಕ್ವೀನ್" "ಲೇಡಿ ರೆಬಲ್‌ಸ್ಟಾರ್" ಎಂದು ಉದ್ಘರಿಸಿದ್ದಾರೆ.
Ghaati Movie: ನವೆಂಬರ್ 7ರಂದು ನಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ. ಇದೇ ಸಮಯದಲ್ಲಿ ಅನುಷ್ಕಾ ನಾಯಕಿಯಾಗಿ ನಟಿಸಿರುವ ಘಾಟಿ ಸಿನಿಮಾದ ಅಪ್‌ಡೇಟ್ ದೊರಕಿದೆ. ನಿರ್ದೇಶಕ ಕೃಶ್ ಜಗರಲಮುಡಿ ಜತೆಗೆ ಅನುಷ್ಕಾ ಅವರ ಎರಡನೇ ಸಿನಿಮಾ ಇದಾಗಿದೆ. ಇದಕ್ಕೂ ಮೊದಲು 2010ರಲ್ಲಿ ವೇದಂ ಸಿನಿಮಾದಲ್ಲಿ ನಟಿಸಿದ್ದರು. ಈ ಸಮಯದಲ್ಲಿ ಘಾಟಿ ಸಿನಿಮಾದಲ್ಲಿ ನಾಯಕಿಯ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಇಂದು ಘಾಟಿ ಸಿನಿಮಾದ ವಿಡಿಯೋ ಝಲಕ್ ಅನ್ನೂ ಯುವಿ ಕ್ರಿಯೇಷನ್ಸ್ ಬಿಡುಗಡೆ ಮಾಡಲಿದೆ.
ಘಾಟಿ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಭಯಾನಕ ಲುಕ್
ಯುವಿ ಕ್ರಿಯೇಷನ್ಸ್ ಇಂದು ಅನುಷ್ಕಾ ಶೆಟ್ಟಿಯ ರೌದ್ರ ಮುಖದ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಘಾಟಿ ಸಿನಿಮಾದಲ್ಲಿ ನಟಿಯು ಈ ರೂಪದಲ್ಲಿ ಅಬ್ಬರಿಸುವ ಸೂಚನೆಯಿದೆ. ಈ ಫೋಟೋಗೆ "ವಿಕ್ಟಿಮ್, ಕ್ರಿಮಿನಲ್, ಲೆಜೆಂಡ್" ಎಂದು ಕ್ಯಾಪ್ಷನ್ ನೀಡಿದೆ. ಈ ಮೂಲಕ ನಾಯಕಿಯು ಸಂಚಿಗೆ ಬಲಿಯಾದವಳು, ಅಪರಾಧಿಯಾಗುವವಳು, ಅನ್ಯಾಯದ ವಿರುದ್ಧ ಹೋರಾಡಿ ಲೆಜೆಂಟ್ ಆಗಿ ಕಾಣಿಸುವ ಸೂಚನೆ ದೊರಕಿದೆ. ಇದೇ ಸಮಯದಲ್ಲಿ "ದಿ ಕ್ವೀನ್" ಅನುಷ್ಕಾ ಶೆಟ್ಟಿಗೆ ಹ್ಯಾಪಿ ಬರ್ತ್‌ಡೇ ಎಂದು ಚಿತ್ರತಂದ ಶುಭಕೋರಿದೆ.
ಅನುಷ್ಕಾ ಶೆಟ್ಟಿಯ ಈ ಫಸ್ಟ್‌ಲುಕ್ ನೋಡಿ ಅಭಿಮಾನಿಗಳು ವಾಹ್ ಎಂದಿದ್ದಾರೆ. ಈ ಚಿತ್ರದಲ್ಲಿ ರಕ್ತಸಿಕ್ತ ಮುಖದಲ್ಲಿ ಅನುಷ್ಕಾ ಕಾಣಿಸಿದ್ದಾರೆ. ಕೈಯಲ್ಲಿ ಮಾರಿಜುನಾ ಸೇದಿಕೊಂಡು ಕಣ್ಣಲ್ಲಿ ಬೆಂಕಿ ಸುರಿಸಿಕೊಂಡು, ಹಣೆಯಲ್ಲಿ ರಕ್ತ ಸುರಿಸಿಕೊಂಡು ಭಯಾನಕ ನೋಟ ಬೀರಿದ್ದಾರೆ. ಮೂಗಿಗೆ ಎರಡು ರಿಂಗ್‌ಗಳಿವೆ. ಕೈಯಲ್ಲಿ ಗಾಜು, ಹಣೆಯಲ್ಲಿ ಬಿಂದಿ ಇದೆ. ಇದಕ್ಕಿಂತ ಹೆಚ್ಚಿನ ಸುಳಿವನ್ನು ನೀಡಲಾಗಿಲ್ಲ.
ಅಭಿಮಾನಿಗಳ ಪ್ರತಿಕ್ರಿಯೆ
ಅನುಷ್ಕಾ ಶೆಟ್ಟಿಯ ಫಸ್ಟ್ ಲುಕ್ ನೋಡಿ "ಮಾಸ್ ಓವರ್‌ಲೋಡೆಡ್" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು "ಸ್ವೀಟಿಯ ಮಾಸ್ ಅವತಾರ" ಎಂದು ಕರೆದಿದ್ದಾರೆ. "ಆಸಕ್ತಿದಾಯಕ" "ರಕ್ತಸಿಕ್ತ" "ಲೇಡಿ ರೆಬಲ್‌ಸ್ಟಾರ್" "ದಿ ಕ್ವೀನ್" "ಕ್ವೀನ್ ವಾಪಸ್ ಬಂದ್ಲು" "ದೇವಸೇನಾ ಈಸ್ ಬ್ಯಾಕ್" ಎಂದೆಲ್ಲ ಕರೆದಿದ್ದಾರೆ. ಇನ್ನು ಕೆಲವರು "ನಿಮ್ಮನ್ನು ಈ ಅವತಾರದಲ್ಲಿ ನಾವು ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ.
ಘಾಟಿ ಸಿನಿಮಾದ ಕುರಿತು
ರಾಜೀವ್ ರೆಡ್ಡಿ ಮತ್ತು ಸಾಯಿ ಬಾಬು ಜಗರ್ಲಮುಡಿ ಘಾಟಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಯುವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅನುಷ್ಕಾ ನಟಿಸುತ್ತಿರುವ ನಾಲ್ಕನೇ ಚಿತ್ರವಾಗಿದೆ. ಚಲನಚಿತ್ರ ನಿರ್ಮಾಪಕರು ಇದನ್ನು 'ಹೈ-ಆಕ್ಟೇನ್, ಆಕ್ಷನ್-ಪ್ಯಾಕ್ಡ್' ಚಿತ್ರ ಎಂದು ಕರೆದಿದ್ದಾರೆ.. ನಾಗವೆಲ್ಲಿ ವಿದ್ಯಾ ಸಾಗರ್ ಅವರ ಸಂಗೀತ ಸಂಯೋಜನೆ, ಮನೋಜ್ ರೆಡ್ಡಿ ಕಾಟಸಾನಿ ಛಾಯಾಗ್ರಹಣ ಮತ್ತು ತೋಟ ಥರಾಣಿ ಕಲಾ ನಿರ್ದೇಶನವಿದೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ.ಈ ಸಿನಿಮಾದ ಬಿಡುಗಡೆ ದಿನಾಂಕ ಯಾವಾಗ ಎಂದು ಘೋಷಣೆಯಾಗಿಲ್ಲ. ಕ್ರಿಶ್ ನಿರ್ದೇಶನವು ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಮತ್ತು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.