logo
ಕನ್ನಡ ಸುದ್ದಿ  /  ಮನರಂಜನೆ  /  ಎ. ಆರ್‌ ರೆಹಮಾನ್‌ ಜತೆಗೆ ಸಂಬಂಧ, ಮದುವೆ ಇತ್ಯಾದಿ! ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಮೋಹಿನಿ ಡೇ

ಎ. ಆರ್‌ ರೆಹಮಾನ್‌ ಜತೆಗೆ ಸಂಬಂಧ, ಮದುವೆ ಇತ್ಯಾದಿ! ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಮೋಹಿನಿ ಡೇ

Nov 26, 2024 02:53 PM IST

google News

ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಮೋಹಿನಿ ಡೇ

    • Mohini Dey On AR Rehman: ಖ್ಯಾತ ಸಂಗೀತ ಸಂಯೋಜಕ ಎ. ಆರ್‌ ರೆಹಮಾನ್‌ ಡಿವೋರ್ಸ್‌ ಬೆನ್ನಲ್ಲೇ ಮೋಹಿನಿ ಡೇ ಮುನ್ನೆಲೆಗೆ ಬಂದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಇಬ್ಬರ ಬಗ್ಗೆ ಬಗೆ ಬಗೆ ಪುಕಾರು ಹಬ್ಬಿಸಲಾಗುತ್ತಿದೆ. ಈಗ ಅದೆಲ್ಲದಕ್ಕೂ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ ಮೋಹಿನಿ.
ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಮೋಹಿನಿ ಡೇ
ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಮೋಹಿನಿ ಡೇ

Mohini Dey On AR Rehman: ಖ್ಯಾತ ಸಂಗೀತ ನಿರ್ದೇಶಕ, ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಮತ್ತು ಸೈರಾ ಬಾನು ವಿಚ್ಛೇದನದ ಸುದ್ದಿ ಚಿತ್ರೋದ್ಯಮದಲ್ಲಿ ದೊಡ್ಡ ಕೋಲಾಹಲಕ್ಕೆ ಸೃಷ್ಟಿಯಾಗಿದೆ. ತರಹೇವಾರಿ ಗಾಸಿಪ್‌ಗಳು ಈ ಜೋಡಿಯ ನಡುವೆ ತಳುಕು ಹಾಕಿಕೊಂಡಿವೆ. ಇದೆಲ್ಲದರ ನಡುವೆ ಎ ಆರ್‌ ರೆಹಮಾನ್‌ ಅವರ ಬ್ಯಾಂಡ್‌ನಲ್ಲಿ ಗುರುತಿಸಿಕೊಂಡಿದ್ದ ಮೋಹಿನಿ ಡೇ ಅವರ ಹೆಸರೂ ಸತಿ ಪತಿಯ ಡಿವೋರ್ಸ್‌ನ ನಡುವೆಯೇ ಮುನ್ನೆಲೆಗೆ ಬಂದಿತ್ತು.

ಎ ಆರ್‌ ರೆಹಮಾನ್‌ ಸೈರಾ ಬಾನು ಅವರಿಗೆ ಡಿವೋರ್ಸ್‌ ನೀಡುತ್ತಿದ್ದಂತೆ, ಇತ್ತ ಇನ್ನೊಂದು ಬದಿಯಲ್ಲಿ ಅವರ ಬ್ಯಾಂಡ್‌ನಲ್ಲಿ ಗುರುತಿಸಿಕೊಂಡಿದ್ದ ಮೋಹಿನಿ ಡೇ ಸಹ, ಮರು ದಿನವೇ ತಮ್ಮ ಪತಿಗೆ ಡಿವೋರ್ಸ್‌ ನೀಡಿದ್ದರು. ಈ ಬೆಳವಣಿಗೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದ ಗಾಸಿಪ್‌ ಸೃಷ್ಟಿಗೆ ಕಾರಣವಾಗಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಪತಿ ಮತ್ತು ಪತ್ನಿಯಿಂದ ವಿಚ್ಛೇದನ ಪಡೆದ ಈ ಇಬ್ಬರೂ ಈಗ ಮದುವೆಯಾಗಲಿದ್ದಾರೆ ಎಂದೇ ಪುಕಾರು ಹಬ್ಬಿತ್ತು.

ಇಬ್ಬರೂ ಸಂಬಂಧದಲ್ಲಿದ್ದಾರೆ, ಶೀಘ್ರದಲ್ಲಿ ಮದುವೆ ಆಗಲಿದ್ದಾರೆ ಎಂದೇಲ್ಲ ಹೇಳಲಾಗಿತ್ತು. ಆದರೆ, ಈ ಬಗ್ಗೆ ಎ. ಆರ್‌ ರೆಹಮಾನ್‌ ಆಗಲಿ ಮೋಹಿನಿ ಡೇ ಆಗಲಿ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಇದ್ಯಾಕೋ ಅತಿಯಾದಂತೆ, ಮೋಹಿನಿ ಡೇ ಕೊನೆಗೂ ಮೌನ ಮುರಿದಿದ್ದಾರೆ. ತಮ್ಮ ಮತ್ತು ಎ. ಆರ್‌ ರೆಹಮಾನ್‌ ಅವರ ಸಂಬಂಧ ಎಂಥದ್ದು ಎಂಬುದನ್ನು ಬಹಿರಂಗವಾಗಿ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ.

ಎ. ಆರ್‌ ರೆಹಮಾನ್‌ ನನಗೆ...

ಮೋಹಿನಿ ಮತ್ತು ಎಆರ್ ರೆಹಮಾನ್ ಅವರ ಲಿಂಕ್‌ಅಪ್ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ಇದು ಹಾದಿತಪ್ಪಿಸುವಂಥ ಸುದ್ದಿ. ನಂಬಿಕೆಗೆ ಅರ್ಹವಲ್ಲದ ಸುದ್ದಿ. ಕಳೆದ ಎಂಟೂವರೆ ವರ್ಷಗಳ ಕಾಲ ನಾನು ಅವರ ಜತೆಗೆ ಕೆಲಸ ಮಾಡಿದ್ದೇನೆ. ಭಾವನಾತ್ಮಕ ಸಂಬಂಧದ ವಿಚಾರವನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಎ. ಆರ್‌ ರೆಹಮಾನ್‌ ಅವರೊಬ್ಬರು ಲೆಜೆಂಡ್.‌ ನಾನು ನನ್ನ ಪಾಲಿಗೆ ತಂದೆ ಸರಿಸಮನಾದವರು.

ಅವರು ನನ್ನ ರೋಲ್‌ ಮಾಡೆಲ್‌

ನನ್ನ ಜೀವನದಲ್ಲಿ ಅನೇಕ ರೋಲ್ ಮಾಡೆಲ್‌ಗಳು ಮತ್ತು ತಂದೆಯ ಸಮಾನ ವ್ಯಕ್ತಿಗಳು ನನ್ನ ವೃತ್ತಿ ಮತ್ತು ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನನಗೆ ಸಂಗೀತದ ಎಲ್ಲವನ್ನೂ ಕಲಿಸಿದ ನನ್ನ ತಂದೆ ಕಳೆದ ವರ್ಷ ನಿಧನರಾದರು. ಈಗ ನನ್ನನ್ನು ರೂಪಿಸಿದ, ಉದ್ಯಮವನ್ನು ಪರಿಚಯಿಸಿದ ರಂಜಿತ್ ಬರೋಟ್ ಮತ್ತು ಶೋನಲ್ಲಿ ಮಿಂಚಲು ನನಗೆ ಸ್ವಾತಂತ್ರ್ಯ ನೀಡಿದ ಎಆರ್ ರೆಹಮಾನ್ ಸಹ ನನ್ನ ರೋಲ್‌ ಮಾಡೆಲ್‌ ಎಂದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ