logo
ಕನ್ನಡ ಸುದ್ದಿ  /  ಮನರಂಜನೆ  /  Kanguva Ott: ಅಧಿಕೃತವಾಗಿ ಕಂಗುವ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಯಾವ ವೇದಿಕೆ, ಯಾವಾಗಿನಿಂದ ಸೂರ್ಯ ಸಿನಿಮಾ ವೀಕ್ಷಣೆ?

Kanguva OTT: ಅಧಿಕೃತವಾಗಿ ಕಂಗುವ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಯಾವ ವೇದಿಕೆ, ಯಾವಾಗಿನಿಂದ ಸೂರ್ಯ ಸಿನಿಮಾ ವೀಕ್ಷಣೆ?

Dec 07, 2024 08:27 AM IST

google News

ಕಂಗುವ ಒಟಿಟಿ

  • Kanguva OTT Release Date: ಸೂರ್ಯ ಅಭಿನಯದ ಕಂಗುವ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದೆ. ಹೀಗಿರುವಾಗಲೇ ಇದೇ ಸಿನಿಮಾ ಒಂದು ತಿಂಗಳೊಳಗೆ ಒಟಿಟಿಗೂ ಆಗಮಿಸುತ್ತಿದೆ. ಅಧಿಕೃತ ದಿನಾಂಕವೂ ಘೋಷಣೆಯಾಗಿದೆ. ಹಾಗಾದರೆ, ಈ ಸಿನಿಮಾದ ವೀಕ್ಷಣೆ ಎಲ್ಲಿ, ಯಾವಾಗಿನಿಂದ? ಇಲ್ಲಿದೆ ಮಾಹಿತಿ. 

ಕಂಗುವ ಒಟಿಟಿ
ಕಂಗುವ ಒಟಿಟಿ

Kanguva OTT Release Date: ತಮಿಳು ನಟ ಸೂರ್ಯ ಮತ್ತು ಬಾಲಿವುಡ್ ನಟ ಬಾಬಿ ಡಿಯೋಲ್ ನಟನೆಯ ಫ್ಯಾಂಟಸಿ ಪೀರಿಯಡ್ ಡ್ರಾಮಾ 'ಕಂಗುವಾ' ಕೊನೆಗೂ ಒಟಿಟಿ ಬಿಡುಗಡೆಯ ದಿನಾಂಕದ ಬಗ್ಗೆ ಶುಕ್ರವಾರ ಅಧಿಕೃತ ಘೋಷಣೆ ಮಾಡಿದೆ. ಭಾರಿ ನಿರೀಕ್ಷೆಗಳ ನಡುವೆ ಕಳೆದ ತಿಂಗಳು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಕಂಡಿತು. ಇದೀಗ ಕೇವಲ ಒಂದೇ ತಿಂಗಳೊಳಗೆ ಒಟಿಟಿಗೆ ಆಗಮಿಸುತ್ತಿದೆ.

350 ಕೋಟಿ ಬಜೆಟ್‌, ಬಂದದ್ದೆಷ್ಟು?

ನವೆಂಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕಂಗುವಾ ಸಿನಿಮಾ, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಫ್ಯಾಂಟಸಿ ಪೀರಿಯಡ್ ಡ್ರಾಮಾದಲ್ಲಿ ಸೂರ್ಯ ಅಭಿನಯವನ್ನು ಅನೇಕರು ಮೆಚ್ಚಿಕೊಂಡರು. ಆದರೆ, ಚಿತ್ರದ ಬಗ್ಗೆ ನೆಗೆಟಿವ್‌ ಕಾಮೆಂಟ್‌ಗಳೇ ಹೆಚ್ಚು ಕೇಳಿಬಂದವು. ಆ ನೆಗೆಟಿವ್‌ ಟಾಕ್‌ಗಳೇ ಕಲೆಕ್ಷನ್‌ ಮೇಲೆ ದೊಡ್ಡ ಪರಿಣಾಮ ಬೀರಿತು. 350 ಕೋಟಿ ರೂ.ಗಳ ಬಜೆಟ್ ನಲ್ಲಿ ನಿರ್ಮಿಸಲಾದ ಕಂಗುವ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ವಿಶ್ವಾದ್ಯಂತ ಕೇವಲ 106 ಕೋಟಿ ಗಳಿಸಲಷ್ಟೇ ಶಕ್ತವಾಯ್ತು.

ಶಿವ ನಿರ್ದೇಶನದ ಕಂಗುವಾ ಚಿತ್ರದಲ್ಲಿ ಸೂರ್ಯ ಫ್ರಾನ್ಸಿಸ್ ಮತ್ತು ಕಂಗುವಾ ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡರೆ, ಬಾಬಿ ಡಿಯೋಲ್ ಖಳನಾಯಕನಾಗಿ ನಟಿಸಿದ್ದಾರೆ. ಬಾಲಿವುಡ್ ನಟಿಯರಾದ ದಿಶಾ ಪಟಾನಿ, ನಟರಾಜನ್ ಸುಬ್ರಮಣಿಯಂ, ಕೆ.ಎಸ್.ರವಿಕುಮಾರ್, ಯೋಗಿ ಬಾಬು, ರೆಡಿನ್ ಕಿಂಗ್ಸ್ಲೆ, ಕೋವೈ ಸರಳಾ, ರವಿ ರಾಘವೇಂದ್ರ, ಕರುಣಾಸ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕಂಗುವಾ ಒಟಿಟಿಗೆ ಯಾವಾಗ ಪ್ರವೇಶಿಸುತ್ತದೆ?

ತಮಿಳಿನ ದುಬಾರಿ ಸಿನಿಮಾಗಳಲ್ಲಿ ಒಂದಾಗಿರುವ ಕಂಗುವ ಸಿನಿಮಾವನ್ನು ಒಟ್ಟು ಏಳು ದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ವಿಶ್ವದಾದ್ಯಂತ 35 ಭಾಷೆಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಯ್ತು. ಆದರೆ ತಮಿಳುನಾಡಿನಲ್ಲಿಯೇ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿ ಮಕಾಡೆ ಮಲಗಿತು. ಈ ಮೂಲಕ ಸೂರ್ಯ ಅವರ ಕಂಗುವ ಚಿತ್ರವು ಬಜೆಟ್‌ನ ಅರ್ಧದಷ್ಟು ಸಹ ಕಲೆಕ್ಷನ್‌ ಮಾಡಲಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ನೆಗೆಟಿವ್‌ ವಿಮರ್ಶೆಗಳೇ ಹೆಚ್ಚು ಕೇಳಿಬಂದವು.

ಒಟಿಟಿ ಬಿಡುಗಡೆ ಯಾವಾಗ?

ಕಂಗುವಾ ಬಿಡುಗಡೆಗೂ ಮೊದಲೇ ದೊಡ್ಡ ಮಟ್ಟದ ಹೈಪ್‌ ಸೃಷ್ಟಿಯಾಗಿತ್ತು. ಆ ಕ್ರೇಜ್‌ನಿಂದಾಗಿ, ಚಿತ್ರದ ಡಿಜಿಟಲ್‌ ಹಕ್ಕುಗಳನ್ನು ಪ್ರೈಮ್ ವಿಡಿಯೋ ದೊಡ್ಡ ಮೊತ್ತಕ್ಕೆ ಖರೀದಿ ಮಾಡಿತ್ತು. ಈಗ ಇದೇ ಸಿನಿಮಾ ಡಿಜಿಟಲ್‌ ಸ್ಟ್ರೀಮಿಂಗ್‌ಗೆ ಅಣಿಯಾಗಿದೆ. ಕನ್ನಡ, ತಮಿಳು, ತೆಲುಗು , ಮಲಯಾಳಂ, ಹಿಂದಿ, ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಈ ಸಿನಿಮಾ ಡಿಸೆಂಬರ್‌ 8ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ