logo
ಕನ್ನಡ ಸುದ್ದಿ  /  ಮನರಂಜನೆ  /  ಸುದೀಪ್‌ ಕಾರಿನಲ್ಲಿ ದೇವರ ಫೋಟೋ ಇಲ್ಲ, ಅಮ್ಮ ಅಪ್ಪನ ಫೋಟೋ ಇಟ್ಟಿದ್ದಾರೆ; ಕಿಚ್ಚನ ತಾಯಿ ಸರೋಜಾ ಸಂಜೀವ್‌ ನಿಧನಕ್ಕೆ ಗಣ್ಯರ ಸಂತಾಪ

ಸುದೀಪ್‌ ಕಾರಿನಲ್ಲಿ ದೇವರ ಫೋಟೋ ಇಲ್ಲ, ಅಮ್ಮ ಅಪ್ಪನ ಫೋಟೋ ಇಟ್ಟಿದ್ದಾರೆ; ಕಿಚ್ಚನ ತಾಯಿ ಸರೋಜಾ ಸಂಜೀವ್‌ ನಿಧನಕ್ಕೆ ಗಣ್ಯರ ಸಂತಾಪ

Praveen Chandra B HT Kannada

Oct 20, 2024 11:15 AM IST

google News

ಕಿಚ್ಚ ಸುದೀಪ್‌ ತಾಯಿ ಸರೋಜಾ ನಿಧನಕ್ಕೆ ಗಣ್ಯರ ಸಂತಾಪ

    • Sudeep Mother Saroja Death Condolence: ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್‌ ತಾಯಿ ಸರೋಜಾ ಸಂಜೀವ್‌ ನಿಧನದ ಸುದ್ದಿಗೆ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಿಚ್ಚನ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಿಚ್ಚ ಸುದೀಪ್‌ ತಾಯಿ ಸರೋಜಾ ನಿಧನಕ್ಕೆ ಗಣ್ಯರ  ಸಂತಾಪ
ಕಿಚ್ಚ ಸುದೀಪ್‌ ತಾಯಿ ಸರೋಜಾ ನಿಧನಕ್ಕೆ ಗಣ್ಯರ ಸಂತಾಪ (ಸೋಷಿಯಲ್‌ ಮೀಡಿಯಾ ಚಿತ್ರ)

ಅಮ್ಮ ಸರೋಜ ಸಂಜೀವ್‌ ಮೃತಪಟ್ಟ ಸುದ್ದಿ ಕೇಳಿ ಕಿಚ್ಚನ ಅಭಿಮಾನಿಗಳ ಮನದಲ್ಲಿಯೂ ಬೇಸರ ಮೂಡಿದೆ. ಇದೇ ಸಮಯದಲ್ಲಿ ಸಾಕಷ್ಟು ಜನರು ಸುದೀಪ್‌ಗೆ ಅಮ್ಮನ ಬಗ್ಗೆ ಇದ್ದ ಪ್ರೀತಿಯನ್ನು ನೆನಪಿಸಿಕೊಂಡಿದ್ದಾರೆ.

"ಆ ತಾಯಿಗೆ, ಈ ಮಗನೇ ಜೀವ.. ಈ ಮಗನಿಗೆ ಆ ತಾಯಿಯೇ ಪ್ರಾಣ.. ನಾ ಕಂಡಂತೆ ಸುದೀಪ್ ಸರ್ ಅವರ ಕಾರಿನ ಒಳಗಡೆ ದೇವರ ಫೋಟೋ ಇಟ್ಟಿರಲಿಲ್ಲ.. ಅವರ ಅಪ್ಪ ಅಮ್ಮನ ಫೋಟೋ ಇಟ್ಟುಕೊಂಡಿದ್ದರು.. . ಶ್ರೀ ಸಂಜೀವಪ್ಪನವರಿಗೆ, ನಮ್ಮ ಕಿಚ್ಚ ಸುದೀಪ್ ಅವರಿಗೆ ಈ ದುಃಖವನ್ನು ತಡೆಯುವ ಶಕ್ತಿ ದೇವರು ಕೊಡಲಿ" ಎಂದು ರಘುರಾಮ್‌ ಎಂಬವರು ಟ್ವೀಟ್‌ ಮಾಡಿದ್ದಾರೆ.

ನಟ ಶ್ರೀ ಕಿಚ್ಚ ಸುದೀಪ್ ಅವರ ತಾಯಿ ಶ್ರೀಮತಿ ಸರೋಜಾ ಅವರು ದೈವಾಧೀನರಾದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಸುದೀಪ್ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಟ್ವೀಟ್‌ ಮಾಡಿದ್ದಾರೆ.

 

ಖ್ಯಾತ ಚಲನಚಿತ್ರ ನಟ ಹಾಗೂ ಆತ್ಮೀಯರಾದ @KicchaSudeep ಅವರ ತಾಯಿ ಶ್ರೀಮತಿ ಸರೋಜಾ ಅವರು ನಿಧನರಾಗಿರುವ ಸುದ್ದಿ ತಿಳಿದು ತೀವ್ರ ದುಃಖಿತನಾಗಿದ್ದೇನೆ. ನಟ ಸುದೀಪ್ ಹಾಗೂ ಅವರ ಕುಟುಂಬ ವರ್ಗದವರಿಗೆ ಅವರ ತಾಯಿಯ ನಿಧನದ ದುಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿಃ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

 

ಸುದೀಪ್ ಸರ್ ಅವರ ಅಮ್ಮ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ‌... ಭಗವಂತ ಅವರಿಗೆ ಚಿರಶಾಂತಿ ಕೊಡಲಿ... ಸುದೀಪ್ ಸರ್ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಕೊಡಲಿ... ಸದ್ಗತಿ ಎಂದು ನಟ ರೂಪೇಶ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ