ಕನ್ನಡ ಸೀರಿಯಲ್ ನಟಿ ಶಾಂಭವಿ ವೆಂಕಟೇಶ್ ಮಗನಿಗೆ ಬ್ಲಡ್ ಕ್ಯಾನ್ಸರ್; ಅಮೃತಧಾರೆಯ ಮಾನ್ಯಳ ಕಥೆ ಮುಗಿಸಿದ್ದು ಇದೇ ಕಾರಣಕ್ಕಾ?
Nov 08, 2024 10:59 PM IST
ಕನ್ನಡ ಸೀರಿಯಲ್ ನಟಿ ಶಾಂಭವಿ ವೆಂಕಟೇಶ್ ಮಗನಿಗೆ ಬ್ಲಡ್ ಕ್ಯಾನ್ಸರ್
- ಕೆಲವು ವಾರಗಳ ಹಿಂದೆ ಅಮೃತಧಾರೆ ಸೀರಿಯಲ್‌ನಲ್ಲಿ ಮಾನ್ಯಾಳ ಕೊಲೆಯಾಗಿದೆ. ಏನೋ ರಹಸ್ಯ ಬಹಿರಂಗ ಮಾಡಲೆಂದು ಬಂದ ಮಾನ್ಯ ಪಾತ್ರ ದಿಢೀರ್ ಅಂತ್ಯವಾಗಲು ಏನೆಂದು ಕಾರಣ ಈಗ ಬಹಿರಂಗಗೊಂಡಿದೆ.
ಕೆಲವು ವಾರಗಳ ಹಿಂದೆ ಅಮೃತಧಾರೆ ಸೀರಿಯಲ್‌ನಲ್ಲಿ ಮಾನ್ಯಾಳ ಕೊಲೆಯಾಗಿದೆ. ಏನೋ ರಹಸ್ಯ ಬಹಿರಂಗ ಮಾಡಲೆಂದು ಬಂದ ಮಾನ್ಯ ಪಾತ್ರ ದಿಢೀರ್ ಅಂತ್ಯವಾಗಲು ಏನೆಂದು ಕಾರಣ ಈಗ ಬಹಿರಂಗಗೊಂಡಿದೆ. ಮಾನ್ಯಾ ಪಾತ್ರದಾರಿ ಶಾಂಭವಿ ವೆಂಕಟೇಶ್ ಬದುಕಿನಲ್ಲಿ ನಡೆದ ಒಂದು ದುಃಖಕರ, ಸವಾಲಿನ ಘಟನೆಯೇ ಮಾನ್ಯಳ ಪಾತ್ರಕ್ಕೆ ಕೊನೆಹಾಡಲು ಕಾರಣವಾದಂತೆ ಇದೆ. ಅವರ ಜೀವನದಲ್ಲಿ ನಡೆಯಬಾರದ ಘಟನೆಯೊಂದು ನಡೆದಿದೆ.
ಆದರೆ ಅವರ ಜೀವನದಲ್ಲಿ ಕನಸು ಮನಸಿನಲ್ಲೂ ನೆನೆಸದ ವಿಷಯ ನಡೆದುಹೋಗಿದೆ. ಸೆಪ್ಟೆಂಬರ್ 23ರಂದು 3 ವರುಷದ ಪುಟಾಣಿ ಕಂದ ದುಷ್ಯುಗೆ "3rd stage ಬ್ಲಡ್ ಕ್ಯಾನ್ಸರ್" ಇರೋದು ಪತ್ತೆ ಆಯ್ತು. 5-6 ದಿನಗಳಲ್ಲಿ ನಡೆದ ಟೆಸ್ಟ್ ರಿಸಲ್ಟ್ಸ್ ಬರೋ ವರೆಗೆ ಪ್ರತಿ ಕ್ಷಣವೂ "ಇದು ಕ್ಯಾನ್ಸರ್ ಆಗಿರದೆ ಇರಲಿ" ಅಂತಾ ಪ್ರಾರ್ಥಿಸ್ತಾ ಇದ್ವಿ. ಹಣೆಯಲಿ ಬರೆದಿರೋದನ್ನ ಬಲಿಸೋಕೆ ಆಗದಿದ್ದಾಗ ಈ ಪೂಜೆ, ಪ್ರಾರ್ಥನೆ, ಹರೆಗಳೆಲ್ಲ ಯಾಕೆ ಅನ್ಸತ್ತೆ!!! ಎನಗತ್ತೋ ಆಗ್ಲಿ ಅಂತ ರೆಡಿ ಆಗಿ ನಿಂತಿದೀವಿ ಇವಾಗ. ಬೇರೆ ಆಪ್ಷನ್ ಆದ್ರೂ ಏನಿದೆ?? ಇದು 95% curable ಅಂತಾ doctors ಭರವಸೆ ಕೊಟ್ಟಿದ್ದಾರೆ. ಆದ್ರೆ ಪಾಪಾ ದುಷ್ಯೂಗೆ ತನ್ನ ಜೊತೆ ಏನಾಗ್ತಾ ಇದೆ? ಯಾಕ್ ಆಗ್ತಾ ಇದೆ ಅನ್ನೋ ಅರಿವೇ ಇಲ್ಲ. ಎಷ್ಟೆಲ್ಲ ನೋವು ಅನುಭವಿಸಬೇಕಲ್ಲ ಈ ಕಂದ ಅನ್ನೋದೇ ಸಂಕಟ. "ನಿನಗ ಹುಷಾರಿಲ್ಲ ಮಗನೇ, ತುಂಬಾ ದೊಡ್ಡ ಟ್ರೀಟ್ಮೆಂಟ್ ತಗೋಬೇಕಿದೆ" ಅಂತಾ ಅರ್ಥ ಮಾಡಿಸೋಕೆ ಪ್ರಯತ್ನ ಪಡ್ತಾ ಇರ್ತೀನಿ ಎಂದು ಬರೆದುಕೊಂಡಿದ್ದಾರೆ.
Chemotherapyಯ ಮೊದಲ ಹಂತ ಮುಗಿದು ಎರಡನೇ ಹಂತ ಶುರುವಾಗಿದೆ. ಸುಮಾರು 40 ದಿನಗಳ ಹಿಂದೆ therapy ಯ ಮೊದಲ ದಿನದಂದು ಕ್ಲಿಕ್ಕಿಸಿದ shots ಇದು ಎಂದು ಮಗನ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಇನ್ಸ್‌ಟಾಗ್ರಾಂನಲ್ಲಿ ಅವರು ಈ ರೀತಿ ಬರೆದುಕೊಂಡಿದ್ದಾರೆ.
ಇವರಿಗೆ ಅವಳಿ ಮಕ್ಕಳು ಜನಿಸಿದ್ದರು ಆದರೆ ಅವರ ಮಗ ಈಗ ಅನಾರೋಗ್ಯದಲ್ಲಿದ್ದಾರೆ.