Ramachari Serial: ಸ್ತ್ರೀ ವೇಷದಲ್ಲಿ ಬಂದ ರಾಮಾಚಾರಿ, ಮುರಾರಿ; ಜಾನಕಮ್ಮನಿಗೀಗ ಮೂವರು ಹೆಣ್ಣು ಮಕ್ಕಳು
ಕನ್ನಡ ಸುದ್ದಿ  /  ಮನರಂಜನೆ  /  Ramachari Serial: ಸ್ತ್ರೀ ವೇಷದಲ್ಲಿ ಬಂದ ರಾಮಾಚಾರಿ, ಮುರಾರಿ; ಜಾನಕಮ್ಮನಿಗೀಗ ಮೂವರು ಹೆಣ್ಣು ಮಕ್ಕಳು

Ramachari Serial: ಸ್ತ್ರೀ ವೇಷದಲ್ಲಿ ಬಂದ ರಾಮಾಚಾರಿ, ಮುರಾರಿ; ಜಾನಕಮ್ಮನಿಗೀಗ ಮೂವರು ಹೆಣ್ಣು ಮಕ್ಕಳು

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ಮುರಾರಿ ಇಬ್ಬರೂ ಈಗ ಸ್ತ್ರೀ ವೇಷದಲ್ಲಿ ಅಣ್ಣಾಜಿ ಮನೆಗೆ ಬಂದಿದ್ದಾರೆ. ಜಾನಕಮ್ಮನ ಇಬ್ಬರು ಗಂಡುಮಕ್ಕಳನ್ನು ಈ ರೀತಿ ನೋಡಿದ ಜನ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಸ್ತ್ರೀ ವೇಷದಲ್ಲಿ ರಾಮಾಚಾರಿ, ಮುರಾರಿ
ಸ್ತ್ರೀ ವೇಷದಲ್ಲಿ ರಾಮಾಚಾರಿ, ಮುರಾರಿ (ಕಲರ್ಸ್ ಕನ್ನಡ)

ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಮ್ಮ ತನ್ನ ಮಕ್ಕಳನ್ನು ಕರೆದುಕೊಂಡು ಚಾರು ಹಾಗೂ ರುಕ್ಕುವನ್ನು ಬಚಾವ್ ಮಾಡಲು ಮುಂದಾಗಿದ್ದಾಳೆ. ಅಣ್ಣಾಜಿ ಮನೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ತನ್ನ ಸೊಸೆಯಂದಿರನ್ನು ಕರೆದುಕೊಂಡು ಬರಲು ಈ ರೀತಿ ಉಪಾಯ ಮಾಡಿದ್ದಾರೆ. ಹೇಗಾದರೂ ಮಾಡಿ ಅಣ್ಣಾಜಿ ಮನೆಗೆ ಹೋಗಿ ಅಲ್ಲಿನ ಒಳ ಗುಟ್ಟುಗಳನ್ನು ತಿಳಿದುಕೊಂಡು ಹೇಗಾದರೂ ಮಾಡಿ ಅವರಿಬ್ಬರನ್ನೂ ಅಲ್ಲಿಂದ ಬಚಾವ್ ಮಾಡುವುದು ಅವರ ಉದ್ದೇಶ ಆಗಿರುತ್ತದೆ. ಹೀಗಿರುವಾಗ ಅಡುಗೆ ಕೆಲಸ ಮಾಡುವ ಆಳುಗಳಂತೆ ಅವರು ವೇಷ ಧರಿಸಿ ಬಂದಿರುತ್ತಾರೆ.

ಮುರಾರಿ ಕೂಡ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಂಡಿದ್ದಾನೆ. ರಾಮಾಚಾರಿ ಕೂಡ ಅಮ್ಮನೊಟ್ಟಿಗೆ ತಾನೂ ಸೀರೆಯುಟ್ಟು ಬಂದಿದ್ದಾನೆ. ಇನ್ನು ಮನೆಯ ಹೊರಗಡೆ ಕಾವಲು ಕಾಯಲು ನಿಂತವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಲೇ ಇದ್ದಾರೆ. ಅರೆ ಇವರ್ಯಾರು? ಇಷ್ಟು ಚೆನ್ನಾಗಿದ್ದಾರಲ್ಲ ಎಂದು ಆಲೋಚನೆ ಮಾಡುತ್ತಾ ಕಳೆದು ಹೋಗಿದ್ದರು. ನಾವೇನಾದ್ರೂ ಸ್ವರ್ಗದಲ್ಲಿದ್ದೀವಾ? ಅಥವಾ ಸ್ವರ್ಗದ ಅಪ್ಸರೆಯರೇ ನಾವಿದ್ದಲ್ಲಿಗೆ ಬಂದಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಚಾರು ಈಗ ಎಲ್ಲ ಸತ್ಯವನ್ನು ಅರ್ಥ ಮಾಡಿಕೊಂಡು ಒಳಗಡೆಯಿಂದ ರುಕ್ಕುವನ್ನು ಹೊರತರಲು ಪ್ರಯತ್ನ ಮಾಡುತ್ತಿದ್ದರೆ. ಇವರೆಲ್ಲ ಸೇರಿಕೊಂಡು ಚಾರುವನ್ನು ಮನೆಯಿಂದ ಹೇಗೆ ಹೊರಗಡೆ ತರೋದು ಎಂದು ಐಡಿಯಾ ಮಾಡುತ್ತಿದ್ಧಾರೆ. ಒಟ್ಟಿನಲ್ಲಿ ಕೃಷ್ಣ ಹಾಗೂ ರುಕ್ಕುವನ್ನು ಒಂದು ಮಾಡಲು ಎಲ್ಲರೂ ಪ್ರಯತ್ನ ಮಾಡುತ್ತಿದ್ದಾರೆ.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.

ರಾಮಾಚಾರಿ ಧಾರಾವಾಹಿ ಪಾತ್ರವರ್ಗ

ಮೌನ ಗುಡ್ಡೆ ಮನೆ - ಚಾರು

ರಿತ್ವಿಕ್ ಕ್ರಪಾಕರ್ - ರಾಮಾಚಾರಿ

ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)

ಚಿ ಗುರುದತ್ - ಜಯಶಂಕರ್

ಶಂಕರ್ ಅಶ್ವಥ್‌ - ನಾರಾಯಣಾಚಾರಿ

ಐಶ್ವರ್ಯ ವಿನಯ್‌ - ವೈಶಾಖ

ಅಂಜಲಿ ಸುಧಾಕರ್ - ಜಾನಕಿ

ರಾಮಾಚಾರಿ ಅಲ್ಲ ರಮ್ಯಾಚಾರಿ ಎಂದು ಜನರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಹಲವರು ಇವನನ್ನು ನೋಡಿದಾಗ ರಾಮಾಚಾರಿ ಎಂದು ಗೊತ್ತೇ ಆಗಿಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ಹೊಸ ಬದಲಾವಣೆ ಒಂದಷ್ಟು ಕುತೂಹಲ ಹಾಗೂ ನಗುವನ್ನು ಜನರಲ್ಲಿ ತಂದಿದೆ.

Whats_app_banner