ಹೇಳಿ ಗೌತಮ್‌, ಮಾನ್ಯ ಯಾರು? ಭೂಮಿಕಾ ಕೇಳಿದ ಪ್ರಶ್ನೆಗೆ ಕಂಗಲಾದ್ರು ಡುಮ್ಮಸರ್‌; ಅಮೃತಧಾರೆ ಧಾರಾವಾಹಿಯ ಮಹಾರಹಸ್ಯ ಬಹಿರಂಗ
ಕನ್ನಡ ಸುದ್ದಿ  /  ಮನರಂಜನೆ  /  ಹೇಳಿ ಗೌತಮ್‌, ಮಾನ್ಯ ಯಾರು? ಭೂಮಿಕಾ ಕೇಳಿದ ಪ್ರಶ್ನೆಗೆ ಕಂಗಲಾದ್ರು ಡುಮ್ಮಸರ್‌; ಅಮೃತಧಾರೆ ಧಾರಾವಾಹಿಯ ಮಹಾರಹಸ್ಯ ಬಹಿರಂಗ

ಹೇಳಿ ಗೌತಮ್‌, ಮಾನ್ಯ ಯಾರು? ಭೂಮಿಕಾ ಕೇಳಿದ ಪ್ರಶ್ನೆಗೆ ಕಂಗಲಾದ್ರು ಡುಮ್ಮಸರ್‌; ಅಮೃತಧಾರೆ ಧಾರಾವಾಹಿಯ ಮಹಾರಹಸ್ಯ ಬಹಿರಂಗ

ಅಮೃತಧಾರೆ ಧಾರಾವಾಹಿಯ ಅಕ್ಟೋಬರ್‌ 29ರ ಸಂಚಿಕೆಯಲ್ಲಿ ಮಹಾರಹಸ್ಯವೊಂದು ಬಹಿರಂಗವಾಗುವ ಸೂಚನೆ ದೊರಕಿದೆ. ಶಕುಂತಲಾ ಗ್ಯಾಂಗ್‌ನಿಂದ ತಪ್ಪಿಸಿಕೊಂಡ ಧನ್ಯ ಭೂಮಿಕಾಳಿಗೆ ಕಾಲ್‌ ಮಾಡಿ ಮಾನ್ಯಳ ಬಗ್ಗೆ ತುಸು ಮಾಹಿತಿ ನೀಡುತ್ತಾಳೆ. ಹೇಳಿ ಗೌತಮ್‌, ಮಾನ್ಯ ಯಾರು? ಎಂದು ಭೂಮಿಕಾ ಕೇಳಿದಾಗ ಸತ್ಯ ಹೇಳುವ ಇಕ್ಕಟ್ಟಿಗೆ ಡುಮ್ಮಸರ್‌ ಸಿಲುಕಿದ್ದಾರೆ.

ಅಮೃತಧಾರೆ ಧಾರಾವಾಹಿಯ ಮಹಾರಹಸ್ಯ ಬಹಿರಂಗ ಸನಿಹ
ಅಮೃತಧಾರೆ ಧಾರಾವಾಹಿಯ ಮಹಾರಹಸ್ಯ ಬಹಿರಂಗ ಸನಿಹ

ಅಮೃತಧಾರೆ ಧಾರಾವಾಹಿಯ ಅಕ್ಟೋಬರ್‌ 29ರ ಸಂಚಿಕೆಯಲ್ಲಿ ಅನೇಕ ಮಹತ್ವದ ಘಟನೆಗಳು ನಡೆದಿವೆ. ಆನಂದ್‌ ಮನೆಯಲ್ಲಿ ಕೆಲಸ ಮುಗಿಸಿ ಸುಧಾ ಮನೆಗೆ ಬಂದಿದ್ದಾಳೆ. ಪುಟ್ಟ ಮಗಳು "ಯಾಕಮ್ಮ ಲೇಟ್‌" ಎಂದು ಕೇಳುತ್ತಾಳೆ. ಇದಾದ ಬಳಿಕ ಅಮ್ಮನ ಉಪಚಾರ ಮಾಡುತ್ತಾಳೆ. ಅಮ್ಮನಿಗೆ ಲೋಕದ ಪರಿವೆ ಇಲ್ಲ. ಅನಾರೋಗ್ಯದಿಂದ ಮಲಗಿಕೊಂಡಿದ್ದಾಳೆ. ಇವಳೇ ಕೈ ತುತ್ತು ತಿನ್ನಿಸುತ್ತಾಳೆ. ಇನ್ನೊಂದೆಡೆ ಧನ್ಯ ಓಡುತ್ತಿದ್ದಾಳೆ. ರೌಡಿಗಳು ಬೆನ್ನಟ್ಟುತ್ತ ಬರುತ್ತಾರೆ. ಅಲ್ಲೊಂದು ಗೋಡೆಯ ಮೇಲಿದ್ದ ಏಣಿ ಹತ್ತಿ ಹೊರಗೆ ಬರುತ್ತಾಳೆ. ರೌಡಿಗಳಿಂದ ಪಾರಾಗುವಲ್ಲಿ ಯಶಸ್ವಿಯಾಗುತ್ತಾಳೆ. ಮತ್ತೊಂದೆಡೆ ಮಲ್ಲಿಗೆ ಜೈದೇವ್‌ ಚಿನ್ನದ ಬಳೆಗಳನ್ನು ನೀಡುತ್ತಾನೆ. ಮಲ್ಲಿ ಶಾನೇ ಖುಷಿಯಾಗಿದ್ದಾಳೆ. ಒಂದಿಷ್ಟು ಪ್ರೀತಿಯ ಮಾತುಗಳು ನಡೆಯುತ್ತವೆ. ಈ ಮೂಲಕ ಮನೆಯವರ ಮುಂದೆ ಒಳ್ಳೆಯವನಾಗುವ ಜೈದೇವ್‌ ನಾಟಕ ಮುಂದುವರೆದಿದೆ.

ಸುಧಾಳ ಮನೆಗೆ ಡಾಕ್ಟರ್‌ ಬಂದಿದ್ದಾರೆ. ಸುಧಾಳ ಅಮ್ಮನ ಆರೋಗ್ಯ ಪರೀಕ್ಷಿಸುತ್ತಾರೆ. "ಅಮ್ಮನಿಗೆ ಆರೋಗ್ಯ ತುಂಬಾ ಕೆಟ್ಟಿದೆ. ರಿಪೋರ್ಟ್‌ ಪ್ರಕಾರ ಆದಷ್ಟು ಬೇಗ ಆಪರೇಷನ್‌ ಮಾಡಬೇಕಮ್ಮ. ನಾನು ನನ್ನ ಮೂಲಕ ಖರ್ಚುವೆಚ್ಚ ಕಡಿಮೆ ಮಾಡಲು ಪ್ರಯತ್ನ ಮಾಡುವೆ. ಮೂರು ತಿಂಗಳಲ್ಲಿ ಆಪರೇಷನ್‌ ನಡೆಯಬೇಕು. ದುಡ್ಡಿನ ವ್ಯವಸ್ಥೆ ಆಗಲೇಬೇಕು" ಎಂದು ಡಾಕ್ಟರ್‌ ಹೇಳುತ್ತಾರೆ. ಸುಧಾಳಿಗೆ ಚಿಂತೆಯಾಗುತ್ತದೆ. ದುಡ್ಡು ಹೊಂದಿಸುವ ಅನಿವಾರ್ಯತೆಯಲ್ಲಿದ್ದಾಳೆ.

ಶಕುಂತಲಾದೇವಿ ಮತ್ತು ಮಾವ ಟೆನ್ಷನ್‌ನಲ್ಲಿದ್ದಾರೆ. ರೌಡಿಗಳು ಕರೆ ಮಾಡಿ ಧನ್ಯ ತಪ್ಪಿಸಿಕೊಂಡಿರುವ ವಿಷಯ ತಿಳಿಸುತ್ತಾರೆ. "ಅವಳ ಫೋನ್‌ ಟ್ರ್ಯಾಕ್‌ ಮಾಡು" ಎಂದು ಶಕುಂತಲಾದೇವಿ ಹೇಳುತ್ತಾರೆ. "ಇವತ್ತು ಅವಳ ಕಥೆ ಮುಗಿಸ್ತಿನಿ" ಎಂದು ರಮಾಕಾಂತ್‌ ಹೇಳುತ್ತಾರೆ. "ಅವಳು ಎಲ್ಲಾದರೂ ಗೌತಮ್‌ ಮುಂದೆ ಎಲ್ಲಾ ವಿಷಯವನ್ನು ಹೇಳಿಬಿಟ್ಟರೆ, ನಮ್ಮ ಹಡಗು ಮುಳುಗುತ್ತದೆ. ಅವಳು ನಮ್ಮವರನ್ನು ಭೇಟಿಯಾಗಬಾರದು" ಎಂದು ಶಕುಂತಲಾದೇವಿ ಹೇಳುತ್ತಾರೆ.

ಅಮೃತಧಾರೆ ಧಾರಾವಾಹಿಯ ಮಹಾರಹಸ್ಯ

ಧನ್ಯ ಯೋಚನೆ ಮಾಡುತ್ತಿದ್ದಾಳೆ. ಈ ಸತ್ಯವನ್ನು ಯಾರಿಗೆ ಹೇಳಲೇಬೇಕು. ಗೌತಮ್‌ಗೆ ಹೇಳೋಣ ಅಂದರೆ ಅವರು ನನ್ನ ಫೋನ್‌ ತೆಗೆಯುತ್ತಿಲ್ಲ. ಗೌತಮ್‌ ಹೆಂಡತಿ ಭೂಮಿಕಾಗೆ ಹೇಳಬಹುದಲ್ವ ಎಂದುಕೊಳ್ಳುತ್ತಾಳೆ. ಆಕೆಯ ನಂಬರ್‌ ಹುಡುಕುತ್ತಾಳೆ. ಅಕ್ಕ ಪ್ರತಿಯೊಂದನ್ನೂ ನೋಟ್‌ ಮಾಡಿಟ್ಟುಕೊಂಡಿರುತ್ತಾಳೆ ಎಂದು ಹುಡುಕುತ್ತಾಳೆ. ಭೂಮಿಕಾಳ ನಂಬರ್‌ ಹುಡುಕಿ ಕಾಲ್‌ ಮಾಡುತ್ತಾಳೆ. ಭೂಮಿಕಾಗೆ ಎಲ್ಲಾ ವಿಷಯ ಹೇಳುತ್ತಾಳೆ. "ಮಾನ್ಯ ತುಂಬಾ ವರ್ಷದ ಹಿಂದೆ ಗೌತಮ್‌ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ನಮ್ಮ ಅಕ್ಕನ ಬಗ್ಗೆ ಗೌತಮ್‌ಗೆ ಎಲ್ಲಾ ಗೊತ್ತು. ಈ ವಿಚಾರ ಗೊತ್ತು ಅಂದರೆ ಅದಕ್ಕೆ ದೊಡ್ಡ ಕಾರಣನೇ ಇರಬೇಕು ಅಲ್ವ. ಮಾನ್ಯ ಅಂದರೆ ಚಿಕ್ಕ ವಿಷಯ ಅಲ್ಲ. ಮಾನ್ಯಳ ಹೆಸರು ಎತ್ತಿದರೆ ಸಾಕು, ಆ ಮನೆಯ ಹಿರಿತಲೆಗಳೆಲ್ಲ ತಲೆಕೆಡಿಸಿಕೊಳ್ಳುತ್ತವೆ" ಎಂದು ಹೇಳುತ್ತಾಳೆ. ಆ ಸಮಯದಲ್ಲಿ ಫೋನ್‌ ಸ್ವಿಚ್‌ ಆಫ್‌ ಆಗುತ್ತದೆ.

"ಏನೋ ರಹಸ್ಯ ಇದೆ ಅಂದ್ರು. ಗೌತಮ್‌ನಲ್ಲಿ ವಿಷಯ ಕೇಳಬೇಕ" ಎಂದು ಭೂಮಿಕಾ ಯೋಚಿಸುತ್ತಾರೆ. ಗೌತಮ್‌ ಬಂದಾಗ "ನಿಮಗೆ ಮಾನ್ಯರವರು ಗೊತ್ತ?" ಎಂದು ಕೇಳುತ್ತಾಳೆ. ಗೌತಮ್‌ಗೆ ಅಚ್ಚರಿಯಾಗುತ್ತದೆ. "ನೀವು ನನ್ನಲ್ಲಿ ಏನೂ ಮುಚ್ಚಿಟ್ಟಿಲ್ಲ. ಈ ವಿಚಾರ ಮುಚ್ಚಿಡಲು ಏನು ಕಾರಣ. ನಮ್ಮ ನಡುವೆ ಯಾವುದೇ ರಹಸ್ಯ ಇರಬಾರದು. ಯಾಕೆ ಹೇಳುತ್ತಿಲ್ಲ" ಎಂದು ಭೂಮಿಕಾ ಕೇಳುತ್ತಾಳೆ. "ಎಷ್ಟು ಕೇಳಿದರೂ ಹೇಳ್ತಾ ಇಲ್ಲ ಅಂದರೆ ನಿಮ್ಮ ಮನಸ್ಸಿಗೆ ನೋವು ಕೊಡುವ ವಿಚಾರ ಆಗಿರುತ್ತದೆ. ನಿಮ್ಮಲ್ಲಿ ಕೇಳಿ ನೋವು ನೀಡಲು ಇಷ್ಟವಾಗುವುದಿಲ್ಲ. ಏನಿದ್ರೂ ಅತ್ತೆಯ ಬಳಿ ಕೇಳುತ್ತೇನೆ" ಎಂದಾಗ "ಇರಿ ಭೂಮಿಕಾ, ಹೇಳುತ್ತೇನೆ" ಎನ್ನುತ್ತಾರೆ ಡುಮ್ಮಸರ್‌. ಸೀರಿಯಲ್‌ ಮುಂದುವರೆಯುತ್ತದೆ.

Whats_app_banner