Bhagyalakshmi Serial: ಒಬ್ಬರಿಗೆ ಪಲಾವ್, ಮತ್ತೊಬ್ಬರಿಗೆ ಟೊಮೆಟೊ ಬಾತ್, ಹೋಟೆಲ್ ಸಪ್ಲೈಯರ್‌ನಂತಾದ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Feb 20, 2024 10:32 AM IST
ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 19ರ ಸಂಚಿಕೆ ಹೀಗಿದೆ. ತಾಂಡವ್, ಮನೆಯವರಿಗೆ ತಿಂಡಿ ತಯಾರಿಸುವ ತರಾತುರಿಯಲ್ಲಿದ್ದಾನೆ. ಆತ ಚಾಲೆಂಜ್‌ನಲ್ಲಿ ಗೆಲ್ಲಬೇಕೆಂದು ಶ್ರೇಷ್ಠಾ, ಮನೆ ಕೆಲಸದವಳನ್ನು ಕಳಿಸಿಕೊಡುತ್ತಾಳೆ.
Bhagyalakshmi Kannada Serial: ಭಾಗ್ಯಾ ತವರು ಮನೆಯಲ್ಲಿ ಉಳಿದುಕೊಂಡಿದ್ದಾಳೆ. ಹೇಗಾದರೂ ಮಾಡಿ ಈ ಚಾಲೆಂಜ್‌ನಲ್ಲಿ ತಾಂಡವ್ ಸೋತರೆ ನನ್ನ ಬದುಕು ಮತ್ತೆ ಚೆನ್ನಾಗಿರುತ್ತದೆ ಎಂದು ಭಾಗ್ಯಾ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಳೆ. ಇತ್ತ ತಾಂಡವ್, ಚಾಲೆಂಜ್‌ನಲ್ಲಿ ನಾನು ಗೆದ್ದು ಭಾಗ್ಯಾಗೆ ಡಿವೋರ್ಸ್ ಕೊಡಲು ಕಾಯತ್ತಿದ್ದಾನೆ.
ಪ್ರತಿ ಬಾರಿ ಭಾಗ್ಯಾಳನ್ನು ನೆನೆಯುವ ತಾಂಡವ್
ಒಪ್ಪಿಕೊಂಡಂತೆ, ತಾಂಡವ್ ಮನೆಯ ಎಲ್ಲಾ ಕೆಲಸಗಳನ್ನು ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಮನೆಯ ಪ್ರತಿ ಕೆಲಸವೂ ಎಷ್ಟು ಕಷ್ಟ ಎಂದು ತಾಂಡವ್‌ಗೆ ಗೊತ್ತಾಗುತ್ತಿದೆ. ಪ್ರತಿ ಬಾರಿಯೂ ತಾಂಡವ್ ಭಾಗ್ಯಾಳನ್ನು ನೆನಪಿಸಿಕೊಳ್ಳುತ್ತಿದ್ದಾನೆ. ಅಮ್ಮ ಬಂದು ಬೆಳಗ್ಗೆ 4 ಗಂಟೆಗೆ ಎಬ್ಬಿಸಿ ಬಿಸಿ ನೀರು ಕೇಳಿದಾಗ ತಾಂಡವ್‌ಗೆ ಹಿಂಸೆ ಎನಿಸುತ್ತದೆ. ಸ್ನಾನ ಮಾಡಿಕೊಂಡೇ ಅಡುಗೆ ಮನೆಗೆ ಹೋಗಬೇಕು. ಲಕ್ಷಣವಾಗಿ ಬಾಗಿಲಿಗೆ ನೀರು ಹಾಕಿ ರಂಗೊಲಿ ಬಿಡಬೇಕು ಎಂದಾಗ ತಾಂಡವ್ ಗಾಬರಿ ಆಗುತ್ತಾನೆ. ಎಂದಿಗೂ ಬೆಳಗ್ಗೆ ಬೇಗ ಏಳದ ತಾಂಡವ್, ಪ್ರತಿದಿನ ಬೇಗ ಎದ್ದು ಕೆಲಸ ಮಾಡುತ್ತಿದ್ದ ಭಾಗ್ಯಾಳನ್ನು ನೆನಪಿಸಿಕೊಳ್ಳುತ್ತಾನೆ. ಮನೆ ಕೆಲಸ ಮಾಡುವುದು ಇಷ್ಟು ಕಷ್ಟನಾ ಎಂದುಕೊಳ್ಳುತ್ತಾನೆ.
ಹೇಗಾದರೂ ಮಾಡಿ ತಾಂಡವ್ ಈ ಚಾಲೆಂಜ್‌ನಲ್ಲಿ ಸೋಲಬೇಕು ಆದ್ದರಿಂದ ಅವನಿಗೆ ಎಲ್ಲಾ ಕೆಲಸ ಮಾಡಲು ಹೇಳುತ್ತಿದ್ದೇನೆ. ಮಗ ಸೊಸೆಯ ಸಂಸಾರ ಸರಿ ಆದರೆ ಸಾಕು ಎಂದು ಕುಸುಮಾ, ಪೂಜಾ ಬಳಿ ಹೇಳುವುದನ್ನು ತಾಂಡವ್ ಕೇಳಿಸಿಕೊಳ್ಳುತ್ತಾನೆ. ನನ್ನ ಅಮ್ಮನೇ ನನ್ನ ವಿರುದ್ಧ ನಿಂತಿದ್ದಾರೆ ಎಂದು ತಾಂಡವ್ ಬೇಸರಗೊಳ್ಳುತ್ತಾನೆ. ಅಷ್ಟರಲ್ಲಿ ಶ್ರೇಷ್ಠಾ, ತಾಂಡವ್‌ಗೆ ಕರೆ ಮಾಡುತ್ತಾಳೆ. ತಾಂಡವ್ ಕಷ್ಟಪಡುವುದನ್ನು ನೋಡಿ, ಒಬ್ಬ ಮನೆ ಕೆಲಸವಳನ್ನು ನೇಮಿಸಿಕೋ ಎಲ್ಲಾ ಕೆಲಸ ಸುಲಭವಾಗಿ ಆಗುತ್ತದೆ, ನಾನೇ ಯಾರನ್ನಾದರೂ ಕಳಿಸಿಕೊಡುತ್ತೇನೆ ಎನ್ನುತ್ತಾಳೆ.
ಯಾರಿಗೆ ಯಾವ ತಿಂಡಿ ಬೇಕು?
ಬೆಳಗ್ಗೆ ಬೇರೆ ಕೆಲಸಗಳನ್ನು ಮುಗಿಸಿ ತಾಂಡವ್ ಎಲ್ಲರಿಗೂ ಕಾಫಿ ಮಾಡಿಕೊಡುತ್ತಾನೆ. ಆದರೆ ತಾಂಡವ್ ಕಾಫಿಗೆ ಎಲ್ಲರಿಂದ ನೆಗೆಟಿವ್ ಕಾಮೆಂಟ್ ವ್ಯಕ್ತವಾಗುತ್ತದೆ. ಕಾಫಿ ಒಗರು ಎಂದು ಒಬ್ಬರು ಹೇಳಿದರೆ, ಸಕ್ಕರೆ ಜಾಸ್ತಿ ಆಯ್ತು ಎಂದು ತನ್ಮಯ್ ಹೇಳುತ್ತಾನೆ. ಆಯ್ತು ನಾಳೆಯಿಂದ ಸರಿಯಾಗಿ ಮಾಡುತ್ತೇನೆ ಎಂದು ತಾಂಡವ್ ಹೇಳುತ್ತಾನೆ. ಏನು ತಿಂಡಿ ಮಾಡುವುದು? ಯಾರಿಗೆ ಏನು ಬೇಕು ಅದನ್ನೇ ಮಾಡ್ತೀನಿ ಎಂದು ತಾಂಡವ್ ಕೇಳುತ್ತಾನೆ.
ತನ್ವಿ ಪಲಾವ್, ತನ್ಮಯ್ ದೋಸೆ, ಪೂಜಾ ಟೊಮೆಟೊ ಬಾತ್ ಹೇಳಿದರೆ ಕುಸುಮಾ, ತನಗೂ ಧರ್ಮರಾಜ್‌ಗೂ ಬನ್ಸಿ ರವೆ ಉಪ್ಪಿಟ್ಟು ಮಾಡಲು ಹೇಳುತ್ತಾಳೆ. ಮರೆತು ಹೋಗುತ್ತದೆ ಎಂದು ಎಲ್ಲರೂ ಹೇಳಿದ್ದನ್ನು ತಾಂಡವ್ ಬರೆದುಕೊಳ್ಳುತ್ತಾನೆ. ಅಷ್ಟರಲ್ಲಿ ಕಾಲಿಂಗ್ ಬೆಲ್ ರಿಂಗ್ ಆಗುತ್ತದೆ. ಮನೆ ಕೆಲಸದವಳು ಬಂದಿರಬಹುದು ಎಂದು ತಾಂಡವ್ ಖುಷಿಯಿಂದ ಬಾಗಿಲು ತೆಗೆಯುತ್ತಾನೆ. ಆದರೆ ಶ್ರೇಷ್ಠಾ ಕಳಿಸಿದ ಮನೆ ಕೆಲಸದವಳು ನೋಡಲು ಬಹಳ ಪಾಶ್ ಇರುತ್ತಾಳೆ.
ಆ ಹುಡುಗಿಯನ್ನು ಮನೆ ಕೆಲಸಕ್ಕೆ ತೆಗೆದುಕೊಳ್ಳಲು ಕುಸುಮಾ ಒಪ್ಪಿಕೊಳ್ಳುತ್ತಾಳಾ? ತಾಂಡವ್ ಎಲ್ಲಾ ಕೆಲಸ ನಿಭಾಯಿಸಿ ಚಾಲೆಂಜ್ ಗೆಲ್ಲಲಿದ್ದಾನಾ ಕಾದು ನೋಡಬೇಕು.