‍Sandalwood News: ಮೊನ್ನೆ ರಶ್ಮಿಕಾ, ಇಂದು ಧ್ರುವಾ ಸರ್ಜಾ; ಮಾರ್ಟಿನ್‌ ತಂಡ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ, ಅಪಾಯದಿಂದ ಪಾರು
ಕನ್ನಡ ಸುದ್ದಿ  /  ಮನರಂಜನೆ  /  ‍Sandalwood News: ಮೊನ್ನೆ ರಶ್ಮಿಕಾ, ಇಂದು ಧ್ರುವಾ ಸರ್ಜಾ; ಮಾರ್ಟಿನ್‌ ತಂಡ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ, ಅಪಾಯದಿಂದ ಪಾರು

‍Sandalwood News: ಮೊನ್ನೆ ರಶ್ಮಿಕಾ, ಇಂದು ಧ್ರುವಾ ಸರ್ಜಾ; ಮಾರ್ಟಿನ್‌ ತಂಡ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ, ಅಪಾಯದಿಂದ ಪಾರು

‍Sandalwood News: ಶ್ರೀನಗರದಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದ, ಮಾರ್ಟಿನ್‌ ಸಿನಿಮಾ ತಂಡ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹಾಗೂ ತಂಡ ಅಪಾಯದಿಂದ ಪಾರಾಗಿದ್ದಾರೆ.

ಮಾರ್ಟಿನ್‌ ತಂಡ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ, ಅಪಾಯದಿಂದ ಪಾರು
ಮಾರ್ಟಿನ್‌ ತಂಡ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ, ಅಪಾಯದಿಂದ ಪಾರು

ಸ್ಯಾಂಡಲ್‌ವುಡ್‌ ನ್ಯೂಸ್‌: ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ತುರ್ತು ಭೂಸ್ಪರ್ಶವಾಗಿತ್ತು. ಕೂದಲೆಳೆ ಅಂತರದಲ್ಲಿ ಪಾರಾದೆ ಎಂದ್ ರಶ್ಮಿಕಾ ಹೇಳಿಕೊಂಡಿದ್ದರು. ಇದೀಗ ಧ್ರುವ ಸರ್ಜಾ ಪ್ರಯಾಣಿಸುತ್ತಿದ್ದ ವಿಮಾನ ಕೂಡಾ ತುರ್ತು ಭೂಸ್ಪರ್ಶವಾಗಿದ್ದು ಪೈಲೆಟ್‌ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಮಾರ್ಟಿನ್‌ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಚಿತ್ರತಂಡ ಸೋಮವಾರ ರಾತ್ರಿ, ಜಮ್ಮು ಕಾಶ್ಮೀರದ ಶ್ರೀನಗರದಿಂದ ಬೆಂಗಳೂರಿಗೆ ವಾಪಸಾಗುವಾಗ ಈ ಘಟನೆ ನಡೆದಿದೆ. ಧ್ರುವ ಸರ್ಜಾ ಹಾಗೂ ಟೀಮ್‌ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ಪೈಲೆಟ್‌ ಕೂಡಲೇ ಜಾಗೃತರಾಗಿದ್ದಾರೆ. ತುರ್ತು ಭೂಸ್ಪರ್ಶ ಮಾಡಿದ್ದಾರೆ. ಇದರಿಂದ ಮುಂದಾಗಬಹುದಾದ ಭಾರೀ ಅನಾಹುತ ತಪ್ಪಿದೆ. ಈ ವಿಚಾರವನ್ನು ಸ್ವತ: ಮಾರ್ಟಿನ್‌ ತಂಡ ವಿಡಿಯೋ ಮೂಲಕ ಹೇಳಿಕೊಂಡಿದೆ.

ಈ ವಿಡಿಯೋದಲ್ಲಿ ಧ್ರುವ ಸರ್ಜಾ, ನಿರ್ದೇಶಕ ಎಪಿ ಅರ್ಜುನ್‌ ಹಾಗೂ ಇನ್ನಿತರರು ಇದ್ದಾರೆ. ಈ ರೀತಿಯ ಕೆಟ್ಟ ಅನುಭವ ನಮಗೆ ಎಂದಿಗೂ ಆಗಿರಲಿಲ್ಲ. ಜೀವನದಲ್ಲಿ ಹೀಗೆ ಆಗಿದ್ದು ಇದೇ ಮೊದಲು. ದೇವರಿಗೆ ಧನ್ಯವಾದ ಹೇಳಬೇಕು ಜೈ ಆಂಜನೇಯ ಎಂದು ಧ್ರುವಾ ಸರ್ಜಾ ಹೇಳಿದ್ದಾರೆ. ತಂಡದ ಇತರರೂ ಕೂಡಾ ಜೈ ಶ್ರೀರಾಮ್‌, ಪೈಲೆಟ್‌ಗೆ ಬಹಳ ಧನ್ಯವಾದಗಳು ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು ಧ್ರುವ ಸರ್ಜಾ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಸ್ವಲ್ಪದರಲ್ಲೇ ಸಾವಿನ ಅಂಚಿನಿಂದ ಬದುಕಿ ಬಂದೆವು ಎಂದು ರಶ್ಮಿಕಾ ಹೇಳಿಕೊಂಡಿದ್ದರು. ಇದೇ ವಿಮಾನದಲ್ಲಿ ನಟಿ ಶ್ರದ್ಧಾ ದಾಸ್‌ ಕೂಡಾ ಪ್ರಯಾಣಿಸುತ್ತಿದ್ದರು. ರಶ್ಮಿಕಾ, ಮುಂಬೈನಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಇನ್ನು ಮಾರ್ಟಿನ್‌ ಸಿನಿಮಾ ಬಗ್ಗೆ ಹೇಳುವುದಾದರೆ ಈಗಾಗಲೇ ಚಿತ್ರದ ಒಂದು ಟೀಸರ್‌ ರಿಲೀಸ್‌ ಆಗಿದ್ದು ಸಾಕಷ್ಟು ಭರವಸೆ ಮೂಡಿಸಿದೆ. ಸಿನಿಮಾಗೆ ಉದಯ್‌ ಮೆಹ್ತಾ ಬಂಡವಾಳ ಹೂಡಿದ್ದು ಎಪಿ ಅರ್ಜುನ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ರವಿವರ್ಮಾ, ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್‌, ಚಿಕ್ಕಣ್ಣ, ಮಾಳವಿಕಾ ಅವಿನಾಶ್‌, ಅಚ್ಯುತ್‌ ಕುಮಾರ್‌, ನವಾಬ್‌ ಷಾ ಹಾಗೂ ಇನ್ನಿತರರು ನಟಿಸಿದ್ದಾರೆ.

Whats_app_banner