Varun Tej: ಲಾವಣ್ಯಳ ಜತೆ ಇಟಲಿಯಲ್ಲಿ ಮದುವೆಯಾಗಿರೋದ್ಯಾಕೆ? ಕೊನೆಗೂ ಸತ್ಯ ಹೇಳಿದ್ರು ನಟ ವರುಣ್ ತೇಜ್
Varun Tej: ಆಪರೇಷನ್ ವ್ಯಾಲೆಂಟಿನ್ ಸಿನಿಮಾದ ಪ್ರಮೋಷನ್ನಲ್ಲಿ ನಿರತರಾಗಿರುವ ನಟ ವರುನ್ ತೇಜ್ ಅವರು ಸಂದರ್ಶನವೊಂದರಲ್ಲಿ ತನ್ನ ವಿವಾಹದ ಕುರಿತು ಮಾತನಾಡಿದ್ದಾರೆ. ತನ್ನ ಮದುವೆ ಇಟಲಿಯಲ್ಲಿ ಏಕೆ ನಡೆಯಿತು ಎನ್ನುವುದಕ್ಕೆ ಕಾರಣಗಳೂ ನೀಡಿದ್ದಾರೆ.
ಬೆಂಗಳೂರು: ನಟ ಅರುಣ್ ತೇಜ್ಗೂ ಲಾವಣ್ಯ ತ್ರಿಪಾಠಿಗೂ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ವಿವಾಹವಾಗಿತ್ತು. ಮಿಸ್ಟರ್ ಸಿನಿಮಾ ಸೆಟ್ನಲ್ಲಿ 2017ರಲ್ಲಿ ಭೇಟಿಯಾದ ಇವರಿಬ್ಬರು 2023ರಲ್ಲಿ ಇಟಲಿಯಲ್ಲಿ ವಿವಾಹವಾಗಿದ್ದರು. ಇದೀಗ ಅರುಣ್ ತೇಜ್ ತನ್ನ ಮುಂಬರುವ ಸಿನಿಮಾ ಆಪರೇಷನ್ ವ್ಯಾಲೆಂಟಿನ್ ಪ್ರಮೋಷನ್ನಲ್ಲಿ ಬಿಝಿಯಾಗಿದ್ದಾರೆ. ಇತ್ತೀಚೆಗೆ ಝೂಮ್ಗೆ ನೀಡಿದ ಸಂದರ್ಶನದಲ್ಲಿ "ನಾನು ಲಾವಣ್ಯಳನ್ನು ಭಾರತ ಬಿಟ್ಟು ವಿದೇಶದಲ್ಲಿ ಏಕೆ ಮದುವೆಯಾದೆ?" ಎಂಬ ವಿವರ ನೀಡಿದ್ದಾರೆ.
ಹೆತ್ತವರ ಖುಷಿಗಾಗಿ ಈ ರೀತಿ ಮಾಡಿದೆ
ನನ್ನ ಕಸಿನ್ಗಳ ವಿವಾಹ ನೋಡಿದ್ದೆ. ಸಾವಿರಾರು ಜನರು ಆಗಮಿಸುತ್ತಾರೆ. ಆದರೆ, ಹೆತ್ತವರಿಗೆ ರಿಲಾಕ್ಸ್ ಆಗಲು ಸಮಯ ಇರುವುದಿಲ್ಲ. ಯಾವುದೇ ಫನ್ ದೊರಕುವುದಿಲ್ಲ ಎಂದು ವರುಣ್ ಹೇಳಿದ್ದಾರೆ. "ನನ್ನ ಮದುವೆಯಲ್ಲಿ ನನ್ನ ಕಸಿನ್ಗಳು ನನಗಿಂತ ಹೆಚ್ಚು ಫನ್ ಅನುಭವಿಸುತ್ತಾರೆ. ನನ್ನ ಮದುವೆಯಲ್ಲಿ ಕುಟುಂಬದವರಿಗೆ ಫನ್ ಮತ್ತು ಸಂತೋಷ ಹೆಚ್ಚಿಸುವ ಉದ್ದೇಶದದಿಂದ ವಿದೇಶದಲ್ಲಿ ಮದುವೆಯಾದೆ" ಎಂದು ಅವರು ವಿವರಿಸಿದ್ದಾರೆ. "ಆಕೆಯನ್ನು ಭೇಟಿಯಾದ ಬಳಿಕ ಮದುವೆಯಾಗಲು ನನಗೆ ಏಳು ವರ್ಷ ಬೇಕಾಯಿತು. ಸಾಮಾನ್ಯವಾಗಿ ನಮ್ಮ ಕುಟುಂಬದಲ್ಲಿ ಮದುವೆಯೊಂದಕ್ಕೆ 4 ಸಾವಿರದಿಂದ 10 ಸಾವಿರದಷ್ಟು ಜನರನ್ನು ಆಮಂತ್ರಿಸಲಾಗುತ್ತದೆ. ಆದರೆ, ನನ್ನ ಮದುವೆಗೆ ಕೇವಲ 100 ಜನರಿಗೆ ಆಮಂತ್ರಣ ನೀಡಲಾಯಿತು. ನನ್ನ ಕುಟುಂಬಕ್ಕೆ ಖುಷಿ ನೀಡುವುದು ನನಗೆ ಮುಖ್ಯವಾಗಿತ್ತು, ಅದಕ್ಕೆ ಇಟಲಿಯನ್ನು ಆಯ್ಕೆ ಮಾಡಿಕೊಂಡೆ" ಎಂದು ವರುಣ್ ತೇಜ್ ಹೇಳಿದ್ದಾರೆ.
ಆಕೆಗೆ ಏನು ಉಡುಗೊರೆ ನೀಡಲಿಲ್ಲ
ಮದುವೆಯಾದ ಬಳಿಕ ಈ ವರ್ಷ ವರುಣ್ ಮತ್ತು ಲಾವಣ್ಯಳಿಗೆ ಮೊದಲ ವ್ಯಾಲೆಂಟಿನ್ ದಿನವಾಗಿತ್ತು. "ನಾವಿಬ್ಬರು ಪ್ರೇಮಿಗಳ ದಿನದಂದು ಯಾವುದೇ ಉಡುಗೊರೆ ವಿನಿಮಯ ಮಾಡಿಕೊಳ್ಳಲಿಲ್ಲ" ಎಂದು ವರುಣ್ ಹೇಳಿದ್ದಾರೆ. "ನಾನು ಲಾವಣ್ಯಳಿಗೆ ಏನು ಉಡುಗೊರೆ ನೀಡಲಿಲ್ಲ. ಆಕೆಯೂ ನೀಡಲಿಲ್ಲ. ಕಾಲೇಜಿನಲ್ಲಿದ್ದಾಗ ನನಗೆ ಸಾಕಷ್ಟು ಜನರಿಂದ ಸಾಕಷ್ಟು ಗಿಫ್ಟ್ ದೊರಕುತ್ತಿತ್ತು. ಆದರೆ, ಈಗ ಬೇರೆ ರೀತಿ. ಕಾಶ್ಮೀರಕ್ಕೆ ಸಣ್ಣ ಟ್ರಿಪ್ ಹೋಗಿಬಂದೆವು" ಎಂದು ಅವರು ಹೇಳಿದ್ದಾರೆ
ವರುಣ್ ತೇಜ್ ಮೆಹಂದಿ -ಅರಿಶಿನ ಶಾಸ್ತ್ರ ಕಾರ್ಯಕ್ರಮದಲ್ಲಿ ತೆಲುಗಿನ ಪ್ರಮುಖ ನಟನಟಿಯರು ಪಾಲ್ಗೊಂಡಿದ್ದರು. ಚಿರಂಜೀವಿ, ಅಲ್ಲು ಅರ್ಜುನ್, ರಾಮಚರಣ್ ಸೇರಿದಂತೆ ಸಿನಿ ರಂಗದ ಪ್ರಮುಖರು ಹಾಜರಾಗಿದ್ದಾರೆ. ಆದರೆ, ಇಟಲಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಸೀಮಿತ ಜನರಿಗೆ ಮಾತ್ರ ಆಹ್ವಾನವಿತ್ತು.
ವರುಣ್ ತೇಜ್ ಮುಂಬರುವ ಚಿತ್ರಗಳು
ಆಪರೇಷನ್ ವ್ಯಾಲೆಂಟಿನ್ ಸಿನಿಮಾದಲ್ಲಿ ವರುಣ್ ತೇಜ್ ಅವರು ಐಎಎಫ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮಾನುಷಿ ಚಿಲ್ಲರ್ ಅವರು ರೇಡರ್ ಆಫೀಸರ್ ಆಗಿ ನಟಿಸಿದ್ದಾರೆ.