logo
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಅಪ್ಪನನ್ನು ಹುಡುಕಿ ಆಫೀಸಿಗೆ ಹೊರಟ ತನ್ವಿ; ಶ್ರೇಷ್ಠಾ ಬುದ್ಧಿ ಈಗಲಾದ್ರೂ ತಾಂಡವ್‌ಗೆ ಗೊತ್ತಾಗುತ್ತಾ?

Bhagyalakshmi Serial: ಅಪ್ಪನನ್ನು ಹುಡುಕಿ ಆಫೀಸಿಗೆ ಹೊರಟ ತನ್ವಿ; ಶ್ರೇಷ್ಠಾ ಬುದ್ಧಿ ಈಗಲಾದ್ರೂ ತಾಂಡವ್‌ಗೆ ಗೊತ್ತಾಗುತ್ತಾ?

HT Kannada Desk HT Kannada

Jan 05, 2024 09:23 AM IST

google News

Bhagyalakshmi Serial 4th January Episode

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಜನವರಿ 4ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

Bhagyalakshmi Serial 4th January Episode
Bhagyalakshmi Serial 4th January Episode (PC: Colors Kannada)

Bhagyalakshmi Kannada Serial: ಭಾಗ್ಯಾಳಿಂದ ದೂರ ಆಗಬೇಕೆಂದು ನಿರ್ಧರಿಸುವ ತಾಂಡವ್‌ ಶ್ರೇಷ್ಠಾ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಳ್ಳಲು ಒಪ್ಪುತ್ತಾನೆ. ಹೂವು ಮುಡಿಸುವ ಶಾಸ್ತ್ರಕ್ಕೆ ಹೋಗಲು ಸಿದ್ಧನಾಗಿ ಶಾಪಿಂಗ್‌ ಮಾಡುತ್ತಾನೆ. ಶ್ರೇಷ್ಠಾ ಹಾಗೂ ತಾಂಡವ್‌ ಶಾಪಿಂಗ್‌ ಮಾಡುವಾಗ ಮಹೇಶ ಹಾಗೂ ಸುಂದರಿ ಅಲ್ಲಿಗೆ ಬರುತ್ತಾರೆ.

ಹೂ ಮುಡಿಸುವ ಶಾಸ್ತ್ರಕ್ಕೆ ಮಹೇಶ ಸುಂದರಿ ರೆಡಿ

ಇಷ್ಟವಿಲ್ಲದಿದ್ದರೂ ಸುಂದರಿ ಹಾಗೂ ಮಹೇಶನಿಗೆ ತಾಂಡವ್‌ ಬಟ್ಟೆಗಳನ್ನು ಕೊಡಿಸುತ್ತಾನೆ. ನೀವಿಬ್ಬರೂ ಹೂವು ಮುಡಿಸುವ ಶಾಸ್ತ್ರಕ್ಕೆ ಬರಬೇಡಿ, ನಿಮ್ಮನ್ನು ಯಾರೂ ಕರೆದಿಲ್ಲ ಎಂದು ಶ್ರೇಷ್ಠಾ ಹೇಳಿದಾಗ ಮಹೇಶ್‌ ನೇರ ಆಕೆಯ ಅಪ್ಪನಿಗೆ ಕರೆ ಮಾಡುತ್ತಾನೆ. ನಿಮ್ಮ ಮಗಳು ನಮ್ಮ ಮೇಲೆ ಮುನಿಸಿಕೊಂಡಿದ್ದಾಳೆ. ಶಾಸ್ತ್ರಕ್ಕೆ ಬರಬೇಡಿ ಎಂದು ಹೇಳುತ್ತಿದ್ದಾಳೆ ಎಂದು ದೂರು ಹೇಳುತ್ತಾನೆ. ಯಶೋಧಾ ಹಾಗೂ ಶ್ರೀವರ ಇಬ್ಬರೂ ಮಾತನಾಡಿ ನೀವಿಬ್ಬರೂ ಬರಲೇಬೇಕು. ತರುಣ್‌ ಪಕ್ಕದಲ್ಲಿ ನೀವು ಇರಬೇಕು. ನೀವು ಬರದೆ ಹೂವು ಮುಡಿಸುವ ಶಾಸ್ತ್ರ ನಡೆಯುವುದಿಲ್ಲ ಎನ್ನುತ್ತಾಳೆ. ವಿಧಿ ಇಲ್ಲದೆ ಶ್ರೇಷ್ಠಾ ಹಾಗೂ ತಾಂಡವ್‌ ಸುಮ್ಮನಾಗುತ್ತಾರೆ.

ತಾಂಡವ್‌ ಆಫೀಸಿಗೆ ಹೊರಟ ತನ್ವಿ

ಇತ್ತ, ಸ್ಕೂಲ್‌ ಟ್ರಿಪ್‌ಗೆ 10 ಸಾವಿರ ಕೊಡಲು ಕುಸುಮಾ ಹಾಗೂ ಭಾಗ್ಯಾ ನಿರಾಕರಿಸಿದಾಗ ತನ್ವಿ ಕೋಪಗೊಳ್ಳುತ್ತಾಳೆ. ಅಪ್ಪನ ಬಳಿ ದುಡ್ಡು ಕೇಳುವಂತೆ ತನ್ಮಯ್‌ ಚಾಲೆಂಜ್‌ ಮಾಡುತ್ತಾನೆ. ಹಾಗೇ ಅಪ್ಪ ಖಂಡಿತ ಕೊಡುವುದಿಲ್ಲ ನಮ್ಮ ಮೇಲೆ ಅವರಿಗೆ ಪ್ರೀತಿಯೇ ಇಲ್ಲ, ಖಂಡಿತ ನಿನಗೆ ದುಡ್ಡು ಸಿಗುವುದಿಲ್ಲ ಎಂದು ವ್ಯಂಗ್ಯ ಮಾಡುತ್ತಾನೆ. ಭಾಗ್ಯಾ ಜೊತೆ ಸ್ಕೂಲ್‌ಗೆ ಹೋಗುವಾಗ ತನ್ವಿ, ಸ್ನೇಹಿತೆಯ ಮನೆಗೆ ಹೋಗಿ ಬರುತ್ತೇನೆ ಎಂದು ಸುಳ್ಳು ಹೇಳಿ ತಾಂಡವ್‌ ಆಫೀಸಿಗೆ ಬರುತ್ತಾಳೆ. ತನ್ವಿಯನ್ನು ನೋಡುತ್ತಿದ್ದಂತೆ ತಾಂಡವ್‌ಗೆ ಶಾಕ್‌ ಆಗುತ್ತದೆ. ಹಾಗೇ ಮಗಳನ್ನು ಖುಷಿಯಿಂದ ಸ್ವಾಗತಿಸಿ ಆಫೀಸ್‌ ಬಾಯ್‌ಗೆ ಹೇಳಿ ಕ್ಯಾಪಚಿನೋ ಆರ್ಡರ್‌ ಮಾಡುತ್ತಾನೆ.

ಅಪ್ಪನ ಮೆಸೇಜ್‌ ನೋಡಿ ಕೋಪಗೊಂಡಿರುವ ತನ್ವಿ, ನೀನು ನನ್ನ‌ ಅಪ್ಪನೇ ಅಲ್ಲ, ನಿನಗೆ ನಮ್ಮ ಮೇಲೆ ಪ್ರೀತಿಯೇ ಇಲ್ಲ. ನೀನು ನಾಟಕ ಮಾಡುತ್ತಿ ಎಂದಾಗ ತಾಂಡವ್‌ ಮಗಳ ಮಾತು ಕೇಳಿ ಒಂದು ಕ್ಷಣ ಗಾಬರಿ ಆಗುತ್ತಾನೆ. ಕೋಪಗೊಂಡ ತನ್ವಿ ಆಫೀಸ್‌ ಬಾಯ್‌ ತಂದ ಕ್ಯಾಪಚಿನೋ ಕೆಳಗೆ ಬಿಸಾಡುತ್ತಾಳೆ. ತನ್ವಿ ವರ್ತನೆಯಿಂದ ತಾಂಡವ್‌ ಕೋಪಗೊಳ್ಳುತ್ತಾನೆ.

ಮತ್ತೊಂದೆಡೆ ಭಾಗ್ಯಾ ಸ್ಕೂಲ್‌ ಮುಗಿಸಿ ಮನೆಗೆ ಹೋಗುವಾಗ ಗುಂಡಣ್ಣ ಸ್ನೇಹಿತನ ತಾಯಿ ಭಾಗ್ಯಾಗೆ ಎದುರಾಗಿ ಈ ಬಾರಿ ತಾಂಡವ್‌ ಸ್ಪೋರ್ಟ್‌ ಕಾಂಪಿಟೇಶನ್‌ಗೆ ಏಕೆ ಹೆಸರು ಕೊಟ್ಟಿಲ್ಲ ಎಂದು ಕೇಳುತ್ತಾರೆ. ಪ್ರತಿ ಬಾರಿ ಸ್ಪೋರ್ಟ್‌ನಲ್ಲಿ ಭಾಗವಹಿಸಿ ಬಹುಮಾನ ಗಳಿಸುವ, ಕ್ರೀಡೆ ಎಂದರೆ ಬಹಳ ಇಷ್ಟ ಪಡುವ ಗುಂಡಣ್ಣ ಈ ಬಾರಿ ಭಾಗವಹಿಸದೆ ಇರುವುದು ಭಾಗ್ಯಾಗೆ ಬೇಸರವಾಗುತ್ತದೆ. ಗುಂಡಣ್ಣನ ಬಳಿ ವಿಚಾರಿಸಿದಾಗ ನಾನು ಯಾವುದರಲ್ಲೂ ಭಾಗವಹಿಸುವುದಿಲ್ಲ ಎಂದು ಹೇಳಿ ಬೇಸರದಿಂದ ರೂಮ್‌ ಒಳಗೆ ಹೋಗುತ್ತಾನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ