ಭಾಗ್ಯಾ ತಾಂಡವ್ ಇಬ್ಬರನ್ನೂ ಒಂದು ಮಾಡಲು ಕುಸುಮಾ ಮಾಸ್ಟರ್ ಪ್ಲ್ಯಾನ್, ಮೊದಲ ಹೆಜ್ಜೆ ಸಕ್ಸಸ್ ಆಯ್ತಾ?; ಭಾಗ್ಯಲಕ್ಷ್ಮೀ ಧಾರಾವಾಹಿ
Oct 08, 2024 10:06 AM IST
ಭಾಗ್ಯಾ ತಾಂಡವ್ ಇಬ್ಬರನ್ನೂ ಒಂದು ಮಾಡಲು ಕುಸುಮಾ ಮಾಸ್ಟರ್ ಪ್ಲ್ಯಾನ್, ಮೊದಲ ಹೆಜ್ಜೆ ಸಕ್ಸಸ್ ಆಯ್ತಾ?; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 7ರ ಎಪಿಸೋಡ್. ಶ್ರೇಷ್ಠಾ ಮನೆಗೆ ಬಂದಾ ತಾಂಡವ್‌ನನ್ನು ಭಾಗ್ಯಾ ಪ್ರಶ್ನಿಸುತ್ತಾಳೆ. ಆದರೆ ತಾಂಡವ್ ಏನೂ ಉತ್ತರ ಹೇಳದೆ ಅಲ್ಲಿಂದ ಹೊರಡುತ್ತಾನೆ. ಶ್ರೇಷ್ಠಾ ಜೊತೆ ಓಡಾಡುತ್ತಿದ್ದ ಹುಡುಗ ಇವನೇ ಅಂತ ಓನರ್ ಹೇಳಿದಾಗ ಭಾಗ್ಯಾ ಅನುಮಾನ ಇನ್ನಷ್ಟು ಹೆಚ್ಚಾಗುತ್ತದೆ.
Bhagyalakshmi Kannada Serial: ಭಾಗ್ಯಾಗೆ ನಿಜ ಹೇಳುವೆ ಎಂದು ಬಂದ ಶ್ರೇಷ್ಠಾಳನ್ನು ಪೂಜಾ, ಸುಂದ್ರಿ ಜೊತೆ ಸೇರಿ ಸ್ಟೋರ್ ರೂಮ್‌ನಲ್ಲಿ ಕಟ್ಟಿ ಹಾಕಿದ್ದಾರೆ. ಇವಳು ಇಲ್ಲೇ ಇದ್ದರೆ ಬಹಳ ಕಷ್ಟ , ಆದಷ್ಟು ಬೇಗ ಬೇರೆ ಕಡೆ ಶಿಫ್ಟ್ ಮಾಡಿ ಎಂದು ಕುಸುಮಾ ಪೂಜಾ, ಸುಂದ್ರಿಗೆ ಹೇಳುತ್ತಾಳೆ.
ಮನೆ ಭಾಗ ಮಾಡಲು ಹಾಕಿದ್ದ ಗೆರೆ ತೆಗೆಸಿದ ಕುಸುಮಾ
ಭಾಗ್ಯಾಳನ್ನು ನೀನು ಮೆಚ್ಚುವಂತೆ ಮಾಡುತ್ತೇನೆ ಒಂದು ತಿಂಗಳು ಸಮಯ ಕೊಡು ಎಂದು ಕುಸುಮಾ ಕೇಳಿದ ಸಮಯ ಅರಂಭವಾಗಿದೆ. ಆದರೆ ಇಬ್ಬರನ್ನೂ ಒಂದು ಮಾಡಲು ಏನು ಮಾಡಬೇಕು ಅನ್ನೋದು ಕುಸುಮಾಗೆ ತಿಳಿಯುತ್ತಿಲ್ಲ. ಕೊನೆಗೆ ಒಂದು ಮಾಸ್ಟರ್ ಪ್ಲ್ಯಾನ್ ಮಾಡುತ್ತಾಳೆ. ಎಲ್ಲರನ್ನೂ ಹಾಲ್‌ಗೆ ಕರೆಯುವ ಕುಸುಮಾ, ಮನೆ ಮಧ್ಯೆ ಹಾಕಿರುವ ಕೆಂಪು ಟೇಪನ್ನು ತೆಗೆಯಲು ಹೇಳುತ್ತಾಳೆ. ಇನ್ಮುಂದೆ ನಾವೆಲ್ಲಾ ಜೊತೆಯಾಗಿ ಇರುತ್ತೇವೆ ಎಂದು ತನ್ಮಯ್ ಖುಷಿಯಾಗುತ್ತಾನೆ. ಅಮ್ಮನ ನಡೆ ಆಶ್ಚರ್ಯ ಎನಿಸಿದರೂ ತಾಂಡವ್ ಏನನ್ನೂ ಪ್ರಶ್ನಿಸದೆ ಕೆಂಪು ಟೇಪ್ ತೆಗೆಯುತ್ತಾನೆ. ಇನ್ಮುಂದೆ ನೀನು ಹೊರಗೆ ಆರ್ಡರ್ ಮಾಡುವ ಅವಶ್ಯಕತೆಯಿಲ್ಲ, ಇನ್ಮುಂದೆ ಭಾಗ್ಯಾ ಮಾಡುವ ಅಡುಗೆಯನ್ನೇ ನೀನು ತಿನ್ನಬಹುದು ಎಂದು ಕುಸುಮಾ ಹೇಳಿದಾಗ ತಾಂಡವ್‌ಗೆ ಆಶ್ಚರ್ಯವಾಗುತ್ತದೆ.
ಭಾಗ್ಯಾ ಕೈ ರುಚಿಗೆ ಮಾರು ಹೋದ ತಾಂಡವ್
ಎಲ್ಲರೂ ಒಟ್ಟಿಗೆ ಊಟಕ್ಕೆ ಕೂರುತ್ತಾರೆ. ಭಾಗ್ಯಾ ಮಾಡಿದ ಅಡುಗೆಯನ್ನು ತಿಂದು ತಾಂಡವ್ ಕಳೆದುಹೋಗುತ್ತಾನೆ. ಭಾಗ್ಯಾ ಎಷ್ಟು ಚೆನ್ನಾಗಿ ಅಡುಗೆ ಮಾಡುತ್ತಾಳೆ. ಈ ರುಚಿ ತಿಂದು ಎಷ್ಟು ದಿನ ಆಗಿತ್ತು ಎಂದು ತಾಂಡವ್ ಮನಸ್ಸಿನಲ್ಲೇ ಖುಷಿ ಪಡುತ್ತಾನೆ. ಅದನ್ನು ಕುಸುಮಾ ಗಮನಿಸುತ್ತಾಳೆ. ಹೆಂಡತಿ ಕೈ ರುಚಿಗೆ ತಾಂಡವ್ ಮಾರುಹೋಗಿದ್ದಾನೆ ಎನ್ನುತ್ತಾಳೆ. ಆದರೂ ಭಾಗ್ಯಾ ಹೊಗಳುವುದನ್ನು ಇಷ್ಟಪಡದ ತಾಂಡವ್, ಗೃಹಿಣಿಯಾಗಿ ಇಷ್ಟೂ ಮಾಡದಿದ್ದರೆ ಹೇಗೆ? ಅಡುಗೆ ಮಾಡುವುದು ಬಿಟ್ಟರೆ ಭಾಗ್ಯಾಗೆ ಬೇರೆ ಏನು ಕೆಲಸ ಬರುತ್ತೆ ಎಂದು ಕೊಂಕು ಮಾತನಾಡುತ್ತಾನೆ. ತಾಂಡವ್ ಗಮನವನ್ನು ಹೆಂಡತಿ ಕಡೆ ತಿರುಗಿಸಲು ಪ್ರಯತ್ನಿಸಿದರೂ ಇವನು ಹೀಗೆ ಮಾಡುತ್ತಿದ್ದಾನಲ್ಲ, ಬೇರೆ ಏನು ಮಾಡುವುದು ಎಂದು ನೋಡಿ ಕುಸುಮಾ ಬೇಸರಗೊಳ್ಳುತ್ತಾಳೆ.
ಮೊಮ್ಮಕ್ಕಳ ಜೊತೆ ಸೇರಿ ಹೊಸ ಪ್ಲ್ಯಾನ್ ಮಾಡಿದ ಕುಸುಮಾ
ತನ್ಮಯ್ ಜೊತೆ ಸೇರಿ ಕುಸುಮಾ ಮತ್ತೊಂದು ಪ್ಲ್ಯಾನ್ ಮಾಡುತ್ತಾಳೆ. ನಿಮ್ಮ ಅಮ್ಮ ಅಮ್ಮ ಯಾವಾಗಲೂ ಖುಷಿಯಿಂದ ಇರಬೇಕು ಅಂದ್ರೆ ನಾನು ಹೇಳಿದಂತೆ ಮಾಡಿ ಎಂದು ಕುಸುಮಾ ಐಡಿಯಾ ಹಂಚಿಕೊಳ್ಳುತ್ತಾಳೆ. ಅಪ್ಪನ ಬಳಿ ಬರುವ ಗುಂಡಣ್ಣ ಹೋಂವರ್ಕ್ ಮಾಡಲು ಸಹಾಯ ಕೇಳುತ್ತಾನೆ. ಇಷ್ಟು ದಿನ ನಾನು ನಿನಗೆ ನೆನಪಿಗೆ ಬರಲಿಲ್ವಾ ಎಂದು ಕೇಳುತ್ತಾನೆ. ಅದನ್ನೆಲ್ಲಾ ಮನಸ್ಸಿಗೆ ತೆಗೆದುಕೊಳ್ಳದ ತನ್ಮಯ್, ಪ್ಲೀಸ್ ಅಪ್ಪ ಹೆಲ್ಪ್ ಮಾಡಿ ಎನ್ನುತ್ತಾನೆ. ಗಂಡ ಹೆಂಡತಿ ಇಬ್ಬರೂ ಸೇರಿ ಹೋಂವರ್ಕ್ ಮಾಡಿಸುವಂತೆ ಕುಸುಮಾ ಹೇಳುತ್ತಾಳೆ. ಕುಸುಮಾ ಪ್ಲಾನ್ ಪ್ರಕಾರ ಭಾಗ್ಯಾ-ತಾಂಡವ್ ಇಬ್ಬರೂ ಜೊತೆಯಾಗಿ ಕೂತು ಖುಷಿ ಖುಷಿಯಾಗಿ ತನ್ಮಯ್‌ಗೆ ಹೋಂವರ್ಕ್ ಮಾಡಿಸುತ್ತಾರೆ.
ಶ್ರೇಷ್ಠಾ ಬಗ್ಗೆ ತಾಂಡವ್ ಬಳಿ ವಿಚಾರಿಸುವ ಭಾಗ್ಯಾ
ಮರುದಿನ ಭಾಗ್ಯಾ ಕೆಲಸಕ್ಕೆ ಹೋಗಲು ತಯಾರಾಗುತ್ತಾಳೆ. ಶ್ರೇಷ್ಠಾ ಬಗ್ಗೆ ವಿಚಾರಿಸಲು ಮನೆ ಓನರ್‌ಗೆ ಕಾಲ್ ಮಾಡುತ್ತಾಳೆ. ಇನ್ನೂ ಅವಳು ಮನೆಗೆ ಬಂದಿಲ್ಲ ಎಂದು ತಿಳಿದು ಭಾಗ್ಯಾ ಕನ್ಫ್ಯೂಸ್ ಆಗುತ್ತಾಳೆ. ತಾಂಡವ್ ಬಳಿ ಬಂದು ಶ್ರೇಷ್ಠಾ ಎಲ್ಲಿ ಹೋಗಿದ್ದಾಳೆ ಎಂದು ಕೇಳುತ್ತಾಳೆ. ಆಗ ತಾಂಡವ್ ವ್ಯಂಗ್ಯ ಮಾಡುತ್ತಾನೆ. ಶ್ರೇಷ್ಠಾ ನಿಮಗೆ ಬಹಳ ಬೇಕಾದವಳು ಅದಕ್ಕೆ ಅವಳ ಬಗ್ಗೆ ನಿಮ್ಮ ಬಳಿ ವಿಚಾರಿಸುತ್ತಿದ್ದೇನೆ ಎನ್ನುತ್ತಾಳೆ. ನಿನಗೆ ಅವಳ ಅವಶ್ಯಕತೆ ಏನಿದೆ ಎಂದು ತಾಂಡವ್ ಕೇಳುತ್ತಾನೆ. ನನಗೆ ಕೆಲವು ಪ್ರಶ್ನೆಗಳಿವೆ, ಆ ಎಲ್ಲಾ ಪ್ರಶ್ನೆಗಳಿಗೂ ಶ್ರೇಷ್ಠಾ ಬಳಿ ಉತ್ತರವಿದೆ. ಅದಕ್ಕೆ ಅವಳನ್ನು ಹುಡುಕುತ್ತಿದ್ದೇನೆ ಎಂದು ಭಾಗ್ಯಾ ಹೇಳುತ್ತಾಳೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್