ಬಿಗ್‌ಬಾಸ್‌ ಕನ್ನಡ 11: ಗಂಜಿ ಬದಲಿಗೆ ಮೃಷ್ಟಾನ್ನ ಭೋಜನ; ನಾಮಿನೇಷನ್‌ ಟಾಸ್ಕ್‌ ಸೋತು ನರಕವಾಸಿಗಳಿಗೆ ಅಡುಗೆ ಮಾಡಿಕೊಟ್ಟ ಸ್ವರ್ಗದ ಸ್ಪರ್ಧಿಗಳು
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ 11: ಗಂಜಿ ಬದಲಿಗೆ ಮೃಷ್ಟಾನ್ನ ಭೋಜನ; ನಾಮಿನೇಷನ್‌ ಟಾಸ್ಕ್‌ ಸೋತು ನರಕವಾಸಿಗಳಿಗೆ ಅಡುಗೆ ಮಾಡಿಕೊಟ್ಟ ಸ್ವರ್ಗದ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ 11: ಗಂಜಿ ಬದಲಿಗೆ ಮೃಷ್ಟಾನ್ನ ಭೋಜನ; ನಾಮಿನೇಷನ್‌ ಟಾಸ್ಕ್‌ ಸೋತು ನರಕವಾಸಿಗಳಿಗೆ ಅಡುಗೆ ಮಾಡಿಕೊಟ್ಟ ಸ್ವರ್ಗದ ಸ್ಪರ್ಧಿಗಳು

ಎರಡನೇ ವಾರದ ನಾಮಿನೇಷನ್‌ ಟಾಸ್ಕ್‌ನಲ್ಲಿ ನರಕವಾಸಿಗಳು ಜಯ ಗಳಿಸಿದ್ದಾರೆ. ಒಂದು ವಾರದಿಂದ ಗಂಜಿ ಸೇವಿಸುತ್ತಿದ್ದ ನರಕದವರು ಟಾಸ್ಕ್‌ ಗೆದ್ದು ಚಪಾತಿ, ಅನ್ನ ಸವಿದಿದ್ದಾರೆ. ಮೊದಲ ಸುತ್ತಿನ ಟಾಸ್ಕ್‌ನಲ್ಲಿ ನಾಲ್ವರು ನಾಮಿನೇಷನ್‌ ಆಗಿದ್ದು ಮಂಗಳವಾರ ಮತ್ತೊಂದು ಟಾಸ್ಕ್‌ ನಡೆಯಲಿದೆ. ಸ್ಪರ್ಧಿ ಜಗದೀಶ್‌, ಕ್ಯಾಪ್ಟನ್‌ ಹಂಸ ಜೊತೆ ಕಿರಿಕ್‌ ಮಾಡಿಕೊಂಡಿದ್ದಾರೆ.

ಬಿಗ್‌ಬಾಸ್‌ ಕನ್ನಡ 11: ಗಂಜಿ ಬದಲಿಗೆ ಮೃಷ್ಟಾನ್ನ ಭೋಜನ; ನಾಮಿನೇಷನ್‌ ಟಾಸ್ಕ್‌ ಸೋತು ನರಕವಾಸಿಗಳಿಗೆ ಅಡುಗೆ ಮಾಡಿಕೊಟ್ಟ ಸ್ವರ್ಗದ ಸ್ಪರ್ಧಿಗಳು
ಬಿಗ್‌ಬಾಸ್‌ ಕನ್ನಡ 11: ಗಂಜಿ ಬದಲಿಗೆ ಮೃಷ್ಟಾನ್ನ ಭೋಜನ; ನಾಮಿನೇಷನ್‌ ಟಾಸ್ಕ್‌ ಸೋತು ನರಕವಾಸಿಗಳಿಗೆ ಅಡುಗೆ ಮಾಡಿಕೊಟ್ಟ ಸ್ವರ್ಗದ ಸ್ಪರ್ಧಿಗಳು (PC: Jio Cinema)

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಎರಡನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರ ಯಮುನಾ ಶ್ರೀನಿಧಿ ಮನೆಯಿಂದ ಹೊರ ಹೋಗಿದ್ದಾರೆ. ನಾನು ಬಿಗ್‌ಬಾಸ್‌ ಕಾರ್ಯಕ್ರಮವನ್ನೇ ನಿಲ್ಲಿಸುತ್ತೇನೆ ಎಂದು ಆವಾಜ್‌ ಹಾಕಿದ್ದ ಜಗದೀಶ್‌ಗೆ ಸುದೀಪ್‌, ಚಳಿ ಬಿಡಿಸಿದ್ದಾರೆ. ಇಷ್ಟಾದರೂ ಜಗದೀಶ್‌ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾರೆ. ಈ ನಡುವೆ ಎರಡನೇ ವಾರದ ನಾಮಿನೇಷನ್‌ ಪ್ರಕ್ರಿಯೆ ಆರಂಭವಾಗಿದೆ.

ನಾಮಿನೇಷನ್‌ ಟಾಸ್ಕ್‌ನಲ್ಲಿ ಗೆದ್ದ ನರಕವಾಸಿಗಳು

ಮೊದಲ ವಾರದ ನಾಮಿನೇಷನ್‌ನಲ್ಲಿ ಬಿಗ್‌ಬಾಸ್‌, ಸ್ಪರ್ಧಿಗಳಿಗೆ ಒಂದು ಟಾಸ್ಕ್‌ ನೀಡಿದ್ದರು. ಅದರಲ್ಲಿ ಒಬ್ಬರು ನೇರವಾಗಿ ನಾಮಿನೇಟ್‌ ಆಗಿದ್ದರು. ಉಳಿದ 9 ಮಂದಿಯಲ್ಲಿ ಒಬ್ಬ ಸ್ಪರ್ಧಿ ಟಾಸ್ಕ್‌ ಗೆದ್ದು ನಾಮಿನೇಷ್‌ನಿಂದ ಹೊರ ಬಂದಿದ್ದರು. ಈ ಬಾರಿ ಕೂಡಾ ಬಿಗ್‌ಬಾಸ್‌ ಹುಷಾರ್ ಹುಷಾರ್ ಹುಷಾರ್ ಸಾರ್‌ ಟಾಸ್ಕ್‌ ನೀಡಿದ್ದರು. ಇದರ ಪ್ರಕಾರ ಬಾಲನ್ನು ಪುಟ್ಟ ಬ್ಯಾಟ್‌ನಲ್ಲಿ ಹಿಡಿದು, ಝಿಗ್‌ ಝಾಗ್‌ನಲ್ಲಿ ಬ್ಯಾಲೆನ್ಸ್‌ ಮಾಡಿ ನಂತರ ಬಾಕ್ಸ್‌ ಒಳಗೆ ಹಾಕಬೇಕಿತ್ತು. ನಿಯಮದ ಪ್ರಕಾರ ಎರಡೂ ತಂಡದಿಂದ ಒಟ್ಟು 6 ಸ್ಪರ್ಧಿಗಳು ಈ ಆಟ ಆಡಬೇಕಿತ್ತು. ನರಕ ತಂಡದಿಂದ ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್‌ ಸುರೇಶ್‌ ಈ ಆಟ ಆಡಿದರೆ, ಸ್ವರ್ದದ ಮೂವರು ಸ್ಪರ್ಧಿಗಳು ಈ ಟಾಸ್ಕ್‌ನಲ್ಲಿ ಭಾಗವಹಿಸಿದ್ದರು.

ಟಾಸ್ಕ್‌ನಲ್ಲಿ ಸೋತು ನರಕದವರಿಗೆ ಅಡುಗೆ ಮಾಡಿಕೊಟ್ಟ ಸ್ವರ್ಗದ ಸ್ಪರ್ಧಿಗಳು

ಎರಡೂ ತಂಡದವರು ಬಾಕ್ಸ್‌ಗೆ ಬಾಲ್‌ ಹಾಕಿದರು. ಆದರೆ ಇಲ್ಲಿ ಸ್ಪರ್ಧಿಗಳು ಬಾಲನ್ನು ಬಾಕ್ಸ್‌ಗೆ ಹಾಕಿದ್ದ ಸಮಯ ಪರಿಗಣನೆಗೆ ತೆಗೆದುಕೊಂಡ ಬಿಗ್‌ಬಾಸ್‌ ನರಕವಾಸಿಗಳನ್ನು ವಿನ್ನರ್‌ ಆಗಿ ಅನೌನ್ಸ್‌ ಮಾಡಿದರು. ಬಾಲನ್ನು ಬಾಕ್ಸ್‌ಗೆ ಹಾಕಲು ಸ್ವರ್ಗದವರು 24:48 ಸೆಕೆಂಡ್‌ ತೆಗೆದುಕೊಂಡರೆ, ನರಕದವರು 21:40 ಸೆಕೆಂಡ್‌ ಸಮಯ ತೆಗೆದುಕೊಂಡರು. ಈ ಮೂಲಕ ಸ್ವರ್ಗ ನಿವಾಸಿಗಳು , ನರಕವಾಸಿಗಳಿಗೆ ಅವರು ಕೇಳಿದ ಅಡುಗೆ ಮಾಡಿಕೊಡಬೇಕಿತ್ತು. ಟಾಸ್ಕ್‌ನಲ್ಲಿ ಗೆದ್ದ ನರಕವಾಸಿಗಳು ಗಂಜಿ ಬಿಟ್ಟು ಮೃಷ್ಟಾನ್ನ ಭೋಜನ ಸವಿದು ಖುಷಿ ಪಟ್ಟರು.

ಮತ್ತೆ ಹಳೆ ವರಸೆ ಮುಂದುವರೆಸಿದ ಸ್ಪರ್ಧಿ ಜಗದೀಶ್

ಇನ್ನು ಮೊದಲ ವಾರ ಬಿಗ್‌ಬಾಸ್‌ಗೆ ಆವಾಜ್‌ ಹಾಕಿ, ಧನರಾಜ್‌ ಮಾನಸಾ ಜೊತೆ ಜಗಳವಾಡಿದ್ದ ಜಗದೀಶ್‌ಗೆ ಸುದೀಪ್‌ ಚಳಿ ಬಿಡಿಸಿದ್ದರು. ಆ ಸಮಯದಲ್ಲಿ ಸುಮ್ಮನಿದ್ದ ಜಗದೀಶ್‌ ಈಗ ಮತ್ತೆ ಅದೇ ವರಸೆ ತೆಗೆದಿದ್ದಾರೆ. ಕ್ಯಾಪ್ಟನ್‌ ಹಂಸ ಅವರನ್ನು ಜಗದೀಶ್‌ ಕೆಣಕಿದ್ದಾರೆ. ನನಗೆ ತಲೆ ನೋವುತ್ತಿದೆ ಮಾತ್ರ ಬೇಕು ಎಂದು ಜಗದೀಶ್‌ ಹಂಸ ಬಳಿ ಕೇಳುತ್ತಾರೆ. ಬಿಗ್‌ಬಾಸ್‌ ಬಳಿ ಮೆಡಿಸನ್‌ ಕೇಳಿ ಎಂದು ಹಂಸ ಸಲಹೆ ನೀಡುತ್ತಾರೆ. ಇದಕ್ಕೆ ಒಪ್ಪದ ಜಗದೀಶ್‌, ಹಾಗಾದ್ರೆ ನೀನು ಕ್ಯಾಪ್ಟನ್‌ ಅಂತ ಏಕೆ ಇರೋದು? ಆಗಲಿಲ್ಲ ಅಂದ್ರೆ ಬಿಗ್‌ಬಾಸ್‌ಗೆ ಹೇಳಿ ಮನೆಗೆ ಹೋಗು ಎನ್ನುತ್ತಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ.

Whats_app_banner