logo
ಕನ್ನಡ ಸುದ್ದಿ  /  ಮನರಂಜನೆ  /  Puttakkana Makkalu Serial: ಬಂಗಾರಮ್ಮನ ಮಾತು ಧಿಕ್ಕರಿಸಿ ಕುಸ್ತಿ ಅಖಾಡಕ್ಕಿಳಿದ ಕಂಠಿ! ಉಸ್ತಾದ್‌ ಪಾದಕ್ಕೆ ಪದಕ ಇಟ್ಟು, ಉದ್ದೇಶ ಮರೀತಾನಾ?

Puttakkana Makkalu Serial: ಬಂಗಾರಮ್ಮನ ಮಾತು ಧಿಕ್ಕರಿಸಿ ಕುಸ್ತಿ ಅಖಾಡಕ್ಕಿಳಿದ ಕಂಠಿ! ಉಸ್ತಾದ್‌ ಪಾದಕ್ಕೆ ಪದಕ ಇಟ್ಟು, ಉದ್ದೇಶ ಮರೀತಾನಾ?

Nov 17, 2023 01:57 PM IST

google News

Puttakkana Makkalu Serial: ಬಂಗಾರಮ್ಮನ ಮಾತು ಧಿಕ್ಕರಿಸಿ ಕುಸ್ತಿ ಅಖಾಡಕ್ಕಿಳಿದ ಕಂಠಿ! ಉಸ್ತಾದ್‌ ಪಾದಕ್ಕೆ ಪದಕ ಇಟ್ಟು, ಉದ್ದೇಶ ಮರೀತಾನಾ?

    • Puttakkana Makkalu Serial Episode highlights: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ನವೆಂಬರ್‌ 16ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಕುಸ್ತಿ ಗರಡಿಗಿಳಿದ ಕಂಠಿ ನಡೆ ಅಮ್ಮನನ್ನು ಕೆರಳಿಸಿದೆ.
Puttakkana Makkalu Serial: ಬಂಗಾರಮ್ಮನ ಮಾತು ಧಿಕ್ಕರಿಸಿ ಕುಸ್ತಿ ಅಖಾಡಕ್ಕಿಳಿದ ಕಂಠಿ! ಉಸ್ತಾದ್‌ ಪಾದಕ್ಕೆ ಪದಕ ಇಟ್ಟು, ಉದ್ದೇಶ ಮರೀತಾನಾ?
Puttakkana Makkalu Serial: ಬಂಗಾರಮ್ಮನ ಮಾತು ಧಿಕ್ಕರಿಸಿ ಕುಸ್ತಿ ಅಖಾಡಕ್ಕಿಳಿದ ಕಂಠಿ! ಉಸ್ತಾದ್‌ ಪಾದಕ್ಕೆ ಪದಕ ಇಟ್ಟು, ಉದ್ದೇಶ ಮರೀತಾನಾ?

Puttakkana Makkalu Serial: ಕುಸ್ತಿ ಅಖಾಡಕ್ಕಿಳಿಯಲು ಕಂಠಿ ತಯಾರಿ ನಡೆಸಿದ್ದಾನೆ. ಆದರೆ, ತಾನು ಕುಸ್ತಿ ಆಡ್ತಿರೋದಾಗಿ ಅಮ್ಮ ಬಂಗಾರಮ್ಮನ ಮುಂದೆ ಮಾತ್ರ ತುಟಿ ಬಿಚ್ಚಿಲ್ಲ. ಈ ನಡುವೆ ಪತ್ನಿ ಸ್ನೇಹಾಗೆ ಹಣಕ್ಕಾಗಿ ಕಂಠಿ ಕುಸ್ತಿ ಆಡುವ ವಿಚಾರ ಗೊತ್ತಾಗಿದೆ. ದುಡ್ಡಿಗಾಗಿ ಕೂಲಿ ಕೆಲಸ ಮಾಡಿದ್ರೂ ತಾನು ಖುಷಿ ಪಡೋದಾಗಿ ಹೇಳಿದ್ದಾಳೆ. ಆದರೆ, ಕುಸ್ತಿ ಅನ್ನೋ ಜೂಜಿನಲ್ಲಿ ಅವರಿಗೆ ಏನಾದ್ರೂ ಹೆಚ್ಚು ಕಡಿಮೆ ಆದ್ರೆ ಏನು ಕಥೆ ಅಂತ ಪತಿ ಕಂಠಿ ಮೇಲೆ ಕೊಂಚ ಗರಂ ಆಗಿದ್ದಾಳೆ ಸ್ನೇಹಾ.

ಬಳಿಕ ಅತ್ತೆಯ ಮನೆಗೆ ಬಂದ ಸ್ನೇಹಾಗೆ, ಗರಡಿಗೆ ಸೇರಿದ್ದು ತಪ್ಪೇ. ನಿಮಗೆ ಹೇಳದೇ ಇರುವುದೂ ತಪ್ಪೆ. ನನ್ನನ್ನು ಕ್ಷಮಿಸು ಎಂದು ಬೇಡಿಕೊಂಡಿದ್ದಾನೆ ಕಂಠಿ. ನಿಮಗೇನು ಬೇಕೋ ಅದನ್ನು ಮಾಡಿಕೊಳ್ಳಿ ಎಂದಿದ್ದಾಳೆ. ಮೈ ಬಗ್ಗಿಸಿ ದುಡಿಬೇಕೇ ಹೊರತು, ಇನ್ನೊಬ್ಬರ ಮೈಮುರಿದಲ್ಲ ಎಂದು ಕಂಠಿಗೆ ಕ್ಲಾಸ್‌ ತೆಗೆದುಕೊಂಡಿದ್ದಾಳೆ ಸ್ನೇಹಾ. ಅದೇ ವೇಳೆಗೆ ಬಂಗಾರಮ್ಮನ ಆಗಮನವೂ ಆಗಿದೆ. ನಿಜ ಸತ್ಯವನ್ನು ಸ್ವತಃ ಸ್ನೇಹಾಳೇ ಅತ್ತೆ ಮುಂದೆ ಹೇಳಿದ್ದಾಳೆ.

ದುಡ್ಡಿಗಾಗಿ ಕುಸ್ತಿ ಆಡೋಕೆ ಹೋಗ್ತಿದ್ದಾರೆ. ಬಂಗಾರಮ್ಮನ ಕೋಪ ನೆತ್ತಿಗೇರಿದೆ. ಇದು ನಿಜವೇನ್ಲಾ ಎಂದು ಕಂಠಿಯನ್ನು ಪ್ರಶ್ನೆ ಮಾಡಿದ್ದಾಳೆ ಅಮ್ಮ. ಜಮೀನು ಖರೀದಿಸಿ, ಕೃಷಿ ಮಾಡುವ ಪ್ಲಾನ್‌ ಹಾಕಿರುವುದಾಗಿ ಹೇಳಿದ್ದಾನೆ. ಕಂಠಿಯ ಈ ಮಾತು ಬಂಗಾರಮ್ಮನಿಗೆ ಸಿಟ್ಟು ತರಿಸಿದೆ. ಇನ್ನೊಬ್ಬರ ಜತೆ ಕುಸ್ತಿ ಗೆದ್ದು ಸಂಪಾದಿಸುವುದು ಬೇಡ ಎಂದು ಆವಾಜ್‌ ಹಾಕಿದ ಬಂಗಾರಮ್ಮ, ಕುಸ್ತಿ ಆಡುವುದು ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. ಇತ್ತ ಅಡಕತ್ತರಿಯಲ್ಲಿ ಸಿಲುಕಿದ್ದಾನೆ ಕಂಠಿ!

ಇದೇ ವಿಚಾರವನ್ನು ಉಸ್ತಾದ್‌ ಮುಂದೆಯೂ ಬಂದು ಹೇಳಿಕೊಂಡಿದ್ದಾನೆ. ದುಡ್ಡಿಗಾಗಿ ಪಂದ್ಯ ಆಡಬೇಡ, ಗರಡಿಗಾಗಿ, ಪದಕಕ್ಕಾಗಿ ಕುಸ್ತಿ ಆಡ್ತಿದ್ದೇನೆ ಅಂತ ಹೇಳಿಕೋ. ಆಗ ಎಲ್ಲರೂ ನಿನ್ನ ಪರವಾಗಿ ನಿಲ್ತಾರೆ. ದುಡ್ಡಿನ ಹಿಂದೆ ಹೋಗಬೇಡ ಎಂದು ಕಂಠಿಗೆ ಹೇಳಿದ್ದಾನೆ ಉಸ್ತಾದ್.‌ ಆದರೆ, ನಮ್ಮವರಿಗೆ ನನ್ನಿಂದ ನೋವಾಗುತ್ತೆ ಎಂದಾದರೆ, ನಾನು ಆ ಕೆಲಸವನ್ನೇ ಮಾಡಲ್ಲ ಎಂದಿದ್ದಾನೆ ಕಂಠಿ. ಕೊಟ್ಟ ಮಾತನ್ನು ಉಳಿಸಿಕೊಳ್ಳು ಎಂದಿದ್ದಾನೆ ಉಸ್ತಾದ್‌.

ಮತ್ತೊಂದು ಕಡೆಯಲ್ಲಿ ಕುಸ್ತಿ ಅಖಾಡ ಸಜ್ಜಾಗಿದೆ. ಎಲ್ಲ ಕುಸ್ತಿ ಪಟುಗಳೂ ಅಖಾಡದ ಕಡೆ ಆಗಮಿಸಿದ್ದಾರೆ. ಆದರೆ, ಕಂಠಿ ಮಾತ್ರ ಅಖಾಡಕ್ಕೆ ಆಗಮಿಸಿಲ್ಲ. ಹೀಗಿರುವಾಗಲೇ ಅಚ್ಚರಿಯ ರೀತಿಯಲ್ಲಿ ಬಂಗಾರಮ್ಮ ಮತ್ತು ಸ್ನೇಹಾಳ ಮಾತನ್ನೂ ಧಿಕ್ಕರಿಸಿ ಕುಸ್ತಿ ಅಖಾಡಕ್ಕೆ ಧುಮುಕಿದ್ದಾನೆ ಕಂಠಿ! ಪೈಲ್ವಾನ್‌ ಮಾರನ ಜತೆ ಕೈ ಕೈ ಮಿಲಾಯಿಸಿದ್ದಾನೆ ಶ್ರೀಕಂಠೇಶ್ವರ. ಈ ಕುಸ್ತಿಯಲ್ಲಿ ಗೆಲ್ತಾನಾ? ಹಣದ ಬದಲು ಪದಕ ಗೆದ್ದು ಉಸ್ತಾದ್‌ ಹೃದಯ ಗೆಲ್ತಾನಾ ಕಾದು ನೋಡಬೇಕು. ಪುಟ್ಟಕ್ಕನಿಗೆ ಸಹಾಯ ಮಾಡಬೇಕೆನ್ನುವ ಉದ್ದೇಶವನ್ನು ಕಂಠಿ ಹೇಗೆ ನೇರವೇರಿಸ್ತಾನೆ?

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ