Bhagyalakshmi Serial: ಹಾಲು ಜೇನಿನಂತಾಯ್ತು ಭಾಗ್ಯಾ-ತಾಂಡವ್‌ ಜೀವನ; ಅಪ್ಪ ಅಮ್ಮನ ಬಗ್ಗೆ ಗುಂಡಣ್ಣ ಕಂಡ ಕನಸು ನನಸಾಗ್ಲಿ ಎಂದ ವೀಕ್ಷಕರು
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಹಾಲು ಜೇನಿನಂತಾಯ್ತು ಭಾಗ್ಯಾ-ತಾಂಡವ್‌ ಜೀವನ; ಅಪ್ಪ ಅಮ್ಮನ ಬಗ್ಗೆ ಗುಂಡಣ್ಣ ಕಂಡ ಕನಸು ನನಸಾಗ್ಲಿ ಎಂದ ವೀಕ್ಷಕರು

Bhagyalakshmi Serial: ಹಾಲು ಜೇನಿನಂತಾಯ್ತು ಭಾಗ್ಯಾ-ತಾಂಡವ್‌ ಜೀವನ; ಅಪ್ಪ ಅಮ್ಮನ ಬಗ್ಗೆ ಗುಂಡಣ್ಣ ಕಂಡ ಕನಸು ನನಸಾಗ್ಲಿ ಎಂದ ವೀಕ್ಷಕರು

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ನವೆಂಬರ್‌ 16, ಗುರುವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ನವೆಂಬರ್‌ 16ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ನವೆಂಬರ್‌ 16ರ ಎಪಿಸೋಡ್‌ (PC: Colors Kannada FB)

Bhagyalakshmi Kannada Serial: ನಿನಗೆ ಏನೂ ಬರುವುದಿಲ್ಲ, ಪಾರ್ಟಿ ಮಾಡುವುದು ಗೊತ್ತಿಲ್ಲ, ಇಂಗ್ಲೀಷ್‌ ಬರುವುದಿಲ್ಲ, ನಿನ್ನನ್ನು ಕಂಡರೆ ಯಾರಿಗೂ ಇಷ್ಟವಿಲ್ಲ, ಅಪ್ಪ ಕೂಡಾ ನಿನ್ನನ್ನು ಲವ್‌ ಮಾಡುವುದಿಲ್ಲ ಎಂದು ತನ್ವಿ ಅಮ್ಮನನ್ನು ಹೀಯಾಳಿಸುತ್ತಾಳೆ. ಭಾಗ್ಯಾ ಇದೇ ನೋವಿನಿಂದ ಮನೆಗೆ ಬರುತ್ತಾಳೆ.

ಅಪ್ಪ ಅಮ್ಮ ಖುಷಿಯಾಗಿರುವಂತೆ ಕನಸು ಕಾಣುವ ಗುಂಡಣ್ಣ

ಮನೆಯಲ್ಲಿ ಗುಂಡಣ್ಣ, ಅಪ್ಪ ಇಂದು ನಮ್ಮನ್ನು ಹೊರಗೆ ಕರೆದೊಯ್ಯುತ್ತಾರೆ ಎಂದು ಡ್ರೆಸ್‌ ಆಗಲು ಬಟ್ಟೆಗಳನ್ನು ಹರಡಿ ಕೂರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಪೂಜಾ ಬರುತ್ತಾಳೆ. ಗುಂಡಣ್ಣ ಖುಷಿಯಿಂದ ಫ್ರೆಂಡ್‌ಗೆ ಫೋನ್‌ ಮಾಡಿ ತಾನು ಅಪ್ಪ ಅಪ್ಪ ಅಕ್ಕನೊಂದಿಗೆ ಹೊರಗೆ ಹೋಗುತ್ತಿದ್ದೇನೆ ಎಂದು ಹೇಳುತ್ತಾನೆ. ಹಾಗೇ ಅಪ್ಪ ಅಪ್ಪ ಹೊರಗೆ ಹೋದಾಗ ಅವರು ಯಾವ ರೀತಿ ಅನ್ಯೋನ್ಯವಾಗಿರುತ್ತಾರೆ ಎಂದು ಕನಸು ಕಾಣುತ್ತಾನೆ. ಗುಂಡಣ್ಣನ ಕನಸಿನಲ್ಲಿ ಎಲ್ಲರೂ ಟಿಪ್‌ ಟಾಪ್‌ ಆಗಿ ಡ್ರೆಸ್‌ ಆಗಿರುತ್ತಾರೆ. ಭಾಗ್ಯಾ ಅಂತೂ ಹಸಿರು ಸೀರೆ ಉಟ್ಟು ಸುಂದರವಾಗಿ ಕಾಣುತ್ತಿರುತ್ತಾಳೆ.

ಕಾರಿನಲ್ಲಿ ನಾನು ಮುಂದೆ ಕೂರಬೇಕೆಂದು ತನ್ವಿ ಹಾಗೂ ತನ್ಮಯ್‌ ಇಬ್ಬರೂ ಜಗಳವಾಡುತ್ತಾರೆ. ಇಂದು ನೀವಿಬ್ಬರೂ ಜಗಳ ಮಾಡುವಂತಿಲ್ಲ. ಇಂದು ನನ್ನ ಪಕ್ಕ ಅಮ್ಮ ಕೂರುತ್ತಾರೆ ಎಂದು ತಾಂಡವ್‌ ಸ್ವತ: ಡೋರ್‌ ತೆರೆದು ಭಾಗ್ಯಾಳನ್ನು ಕೂರಿಸುತ್ತಾನೆ. ಲೇಕ್‌ವೊಂದರ ಬಳಿ ಹೋಗುವ ಭಾಗ್ಯಾ ಹಾಗೂ ತಾಂಡವ್‌ ಪೆಡ್ಲಿಂಗ್‌ ಬೋಟಿಂಗ್‌ ಎಂಜಾಯ್‌ ಮಾಡುತ್ತಾರೆ. ದೂರದಲ್ಲಿ ನಿಂತು ತನ್ವಿ ಹಾಗೂ ಗುಂಡಣ್ಣ ಈ ದೃಶ್ಯವನ್ನು ಸೆರೆಹಿಡಿಯುತ್ತಾ ಎಂಜಾಯ್‌ ಮಾಡುತ್ತಾರೆ. ನಂತರ ಎಲ್ಲರೂ ಒಂದು ಸೆಲ್ಫಿ ಕ್ಲಿಕ್‌ ಮಾಡಿಕೊಳ್ಳುತ್ತಾರೆ. ಸೆಲ್ಫಿ ಚೆನ್ನಾಗಿತ್ತು ಎಂದು ಗುಂಡಣ್ಣ ಕನಸು ಕಾಣುತ್ತಾ ಅರಚುವಾಗ ಅಲ್ಲಿಗೆ ಕುಸುಮಾ ಹಾಗೂ ಸುನಂದಾ ಬರುತ್ತಾರೆ. ಆಗ ತನ್ಮಯ್‌ ಎಚ್ಚರಗೊಳ್ಳುತ್ತಾನೆ. ಇಷ್ಟು ಹೊತ್ತು ನಾನು ಕಂಡಿದ್ದು ಕನಸಾ ಎಂದು ತನ್ಮಯ್‌ ಬೇಸರ ವ್ಯಕ್ತಪಡಿಸುತ್ತಾನೆ.

ಗುಂಡಣ್ಣನ ಕನಸು ಕಂಡು ಆಶ್ಚರ್ಯ ವ್ಯಕ್ತಪಡಿಸುವ ಕುಸುಮಾ

ಎರಡೂ ಬದಿ ಕುಸುಮಾ ಹಾಗೂ ಸುನಂದಾ ಕುಳಿತ ನಂತರ ತನ್ಮಯ್‌ ಮತ್ತೆ ಕನಸು ಕಾಣುತ್ತಾನೆ. ಭಾಗ್ಯಾ ಹಾಗೂ ತಾಂಡವ್‌ ಕೈ ಕೈ ಹಿಡಿದು ಸುತ್ತುವುದು, ಇಬ್ಬರೂ ಒಂದೇ ಎಳನೀರಿನಲ್ಲಿ 2 ಸ್ಟ್ರಾ ಹಾಕಿ ಕುಡಿಯುವುದು, ಭಾಗ್ಯಾಗೆ ತಾಂಡವ್‌ ಮಲ್ಲಿಗೆ ಹೂ ಮುಡಿಸುವುದು ಹೀಗೆ ತನ್ಮಯ್‌ ತನ್ನ ಕನಸನ್ನು ಎಲ್ಲರ ಎದುರು ವಿವರಿಸುವಾಗ ಎಲ್ಲರ ಕಣ್ಣು ಒದ್ದೆಯಾಗುತ್ತದೆ. ಇಷ್ಟು ಪುಟ್ಟ ತಲೆಯಲ್ಲಿ ಎಷ್ಟೆಲ್ಲಾ ಆಸೆ ಇದೆ ಎಂದು ಕುಸುಮಾ ಕೂಡಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ನನಗೆ ಅಪ್ಪ ಅಮ್ಮ ಚೆನ್ನಾಗಿರಬೇಕೆಂದು ಆಸೆ, ಆದರೆ ಅಪ್ಪ ಯಾವಾಗಲೂ ನಮ್ಮನ್ನು ಮಾತ್ರ ಹೊರಗೆ ಕರೆದೊಯ್ಯುತ್ತಾರೆ, ಅಮ್ಮನನ್ನು ಕರೆದೊಯ್ಯುವುದಿಲ್ಲ ಎಂದು ಗುಂಡಣ್ಣ ಬೇಸರ ವ್ಯಕ್ತಪಡಿಸುತ್ತಾನೆ. ಇದನ್ನು ಭಾಗ್ಯಾ ಕೇಳಿಸಿಕೊಳ್ಳುತ್ತಾಳೆ. ಬೇಜಾರು ಮಾಡಿಕೊಳ್ಳಬೇಡ ಎಂದು ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವಲ್ಲ ಎಂದು ಗುಂಡಣ್ಣನನ್ನು ಸಮಾಧಾನ ಮಾಡುತ್ತಾಳೆ.

ಇತ್ತ ತಾಂಡವ್‌, ಶ್ರೇಷ್ಠಾ ಜೊತೆ ಶಾಪಿಂಗ್‌ ಮಾಡಲು ಬರುತ್ತಾನೆ. ನಾಳೆ ಮನೆಯಲ್ಲಿ ಹಾಲು ಉಕ್ಕಿಸಿ ಒಂದು ಪುಟ್ಟ ಫಂಕ್ಷನ್‌ ಮಾಡಿ ನಿಮ್ಮ ಅಮ್ಮನನ್ನು ಕರೆಯುತ್ತೇನೆ ಎಂದು ಹೇಳುತ್ತಾಳೆ. ತಾಂಡವ್‌ ಗಾಬರಿ ಆಗುವುದನ್ನು ನೋಡಿ ನಾನು ತಮಾಷೆಯಾಗಿ ಹೇಳಿದೆ ಎನ್ನುತ್ತಾಳೆ. ಆದರೆ ಮನಸ್ಸಿನಲ್ಲಿ ಮಾತ್ರ, ಇನ್ನು 15 ದಿನಗಳಲ್ಲಿ ನಿನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಮದುವೆ ಆಗದಿದ್ದರೆ ನನ್ನ ಹೆಸರು ಶ್ರೇಷ್ಠಾ ಅಲ್ಲವೇ ಅಲ್ಲ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ಶ್ರೇಷ್ಠಾ ಜೊತೆ ಶಾಪಿಂಗ್‌ ಮಾಡುತ್ತಲೇ ತಾಂಡವ್‌ ಅವಳೊಂದಿಗೆ ಉಳಿಯುತ್ತಾನಾ? ಹೊರಗೆ ಹೋಗಬೇಕೆಂದು ಕನಸು ಕಾಣುವ ಗುಂಡಣ್ಣನ ಕನಸು ಕನಸಾಗೇ ಉಳಿಯುವುದಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner