logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಇದು ದೈವ ಲೀಲೆಯಲ್ಲದೆ ಮತ್ತೇನು? ಸೀತಾ- ರುದ್ರಪ್ರತಾಪ್ ಮದುವೆ ಮಂಟಪಕ್ಕೆ ಬಂದ ಶ್ರೀರಾಮ, ಮುಂದೇನಾಯ್ತು?

Seetha Rama Serial: ಇದು ದೈವ ಲೀಲೆಯಲ್ಲದೆ ಮತ್ತೇನು? ಸೀತಾ- ರುದ್ರಪ್ರತಾಪ್ ಮದುವೆ ಮಂಟಪಕ್ಕೆ ಬಂದ ಶ್ರೀರಾಮ, ಮುಂದೇನಾಯ್ತು?

Dec 28, 2023 11:22 AM IST

google News

Seetha Rama Serial: ಇದು ದೈವ ಲೀಲೆಯಲ್ಲದೆ ಮತ್ತೇನು? ಸೀತಾ- ರುದ್ರಪ್ರತಾಪ್ ಮದುವೆ ಮಂಟಪಕ್ಕೆ ಬಂದ ಶ್ರೀರಾಮ

    • Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಹಿಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯಿತು, ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಗಲಿದೆ ಎಂಬ ವಿವರ ಇಲ್ಲಿದೆ. ಸೀತಾಳ ಮದುವೆ ನಡೆಯುವ ಮಂಟಪಕ್ಕೆ ಬಂದಿದ್ದಾನೆ ರಾಮ. ಅದೇ ಮಂಟಪದಲ್ಲಿ ನಡೆಯಿತೊಂದು ದೈವ ಲೀಲೆ.
Seetha Rama Serial: ಇದು ದೈವ ಲೀಲೆಯಲ್ಲದೆ ಮತ್ತೇನು? ಸೀತಾ- ರುದ್ರಪ್ರತಾಪ್ ಮದುವೆ ಮಂಟಪಕ್ಕೆ ಬಂದ ಶ್ರೀರಾಮ
Seetha Rama Serial: ಇದು ದೈವ ಲೀಲೆಯಲ್ಲದೆ ಮತ್ತೇನು? ಸೀತಾ- ರುದ್ರಪ್ರತಾಪ್ ಮದುವೆ ಮಂಟಪಕ್ಕೆ ಬಂದ ಶ್ರೀರಾಮ

Seetha Rama Serial: ಬುಧವಾರದ ಏಪಿಸೋಡ್‌ನಲ್ಲಿ ಸೀತಾಳ ಮನೆಗೆ ಇಬ್ಬರು ವ್ಯಕ್ತಿಗಳ ಆಗಮನವಾಗಿತ್ತು. ಇಲ್ಲಿ 204ನೇ ಮನೆ ಮಾರುವುದು ಇದೆಯಂತಲ್ಲ. ಆ ಮನೆ ಎಲ್ಲಿದೆ ಎಂದು ತಾತನ ಬಳಿ ಪ್ರಶ್ನಿಸಿದ್ದರು. ಆ ಥರ ಸೇಲ್‌ಗೆ ಯಾವ ಮನೆಯೂ ಇಲ್ಲವಲ್ಲ ಎಂದಿದ್ದ ತಾತ. ಮಧ್ಯ ಪ್ರವೇಶಿಸಿದ ಸುಲೋಚನಾ, ಇಲ್ಲಿ ಮನೆ ನೋಡಲು ಬಂದಿರೋ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ರುದ್ರಪ್ರತಾಪ್‌ ಗಮನಕ್ಕೂ ತಂದಿದ್ದಳು.

ಇತ್ತ ಆ ಇಬ್ಬರು ವ್ಯಕ್ತಿಗಳನ್ನು ರುದ್ರಪ್ರತಾಪ್‌ ಭೇಟಿ ಮಾಡಿ ಗದರಿಸಿದ್ದಾನೆ. ಇಲ್ಲಿ ಮದುವೆ ನಡೆಯುತ್ತಿದೆ. ನೀವಿಲ್ಲಿ ಬಂದು ಮನೆ ವಿಚಾರಿಸ್ತಿದ್ದೀರಲ್ಲ ಎಂದಿದ್ದಾನೆ. ಮದುವೆ ಆದ ಬಳಿಕ ಈ ಪ್ರಾಪರ್ಟಿಯನ್ನು ನಿಮ್ಮ ಹೆಸರಿಗೆ ಮಾಡಿಕೊಡುವ ಬಗ್ಗೆ ಹೇಳಿದ್ದಾನೆ. ಮದುವೆ ಮುಗೀತಿದ್ದಂತೆ, ಸಿಹಿ ಅನಾಥಾಶ್ರಮ ಸೇರ್ಕೋಬೇಕು. ಅವಳು ಯಾವುದೇ ಕಾರಣಕ್ಕೂ ನನ್ನ ಕಣ್ಣಮುಂದಿರಬಾರದು ಎಂದು ಸುಲೋಚನಾಗೆ ಆಗ್ರಹಿಸಿದ್ದಾನೆ.

ವಠಾರದ ಸ್ನೇಹಿತರ ಜತೆ ಕಣ್ಣಾಮುಚ್ಚಾಲೆ ಆಟ ಆಡುತ್ತ, ಮನೆಯಲ್ಲಿಯೇ ಅಡಗಿ ಕೂತಿದ್ದ ಸಿಹಿ, ಅತ್ತಿಗೆ ಮತ್ತು ರುದ್ರಪ್ರತಾಪನ ಮಾತುಗಳನ್ನು ಕೇಳಿಸಿಕೊಂಡು ಕಣ್ಣೀರಿಟ್ಟಿದ್ದಾಳೆ. ಹಾಗಾದರೆ, ಸಿಹಿ ಈ ವಿಚಾರವನ್ನು ಸೀತಾಳ ಗಮನಕ್ಕೆ ತರ್ತಾಳಾ? ಅಥವಾ ತನ್ನ ಫ್ರೆಂಡ್‌ ರಾಮನಿಗೆ ಹೇಳಿ ಮದುವೆ ನಿಲ್ಲಿಸುತ್ತಾಳಾ? ಮಲೇಷ್ಯಾಕ್ಕೆ ಹೊರಟು ನಿಂತ ರಾಮ ಮದುವೆ ನಿಲ್ಲಿಸಲು ಓಡೋಡಿ ಬರ್ತಾನಾ? ಎಂಬ ಕೌತುಕ ಕಳೆದ ಸಂಚಿಕೆಯಲ್ಲಿ ಮೂಡಿತ್ತು. ಅದರಂತೆ ದೈವಲೀಲೆಯೊಂದು ನಡೆದೇ ಬಿಟ್ಟಿದೆ.

ಇತ್ತ ಕಾರ್‌ನಲ್ಲಿ ಅಶೋಕ ಮತ್ತು ರಾಮನ ನಡುವೆ ಮಾತುಕತೆ ಮುಂದುವರಿದಿದೆ. ಸೀತಾಗಿನ್ನು ಮದುವೆ ಆಗಿಲ್ಲ. ನಿನಗಿನ್ನು ಟೈಮಿದೆ ಎಂದು ಅಶೋಕ ಶತಪ್ರಯತ್ನ ಮಾಡಿ ರಾಮನ ಮನವೊಲಿಸಿದ್ದಾನೆ. ಅದರಂತೆ, ಅಚ್ಚರಿಯ ರೀತಿಯಲ್ಲಿ ಶಾಂತಮ್ಮನ ವಠಾರಕ್ಕೆ ಶ್ರೀರಾಮನ ಆಗಮನವಾಗಿದೆ. ದೂರದಿಂದಲೇ ಸೀತಾಳನ್ನು ಮತ್ತು ಸಿಹಿಯನ್ನು ಕಣ್ತುಂಬಿಕೊಂಡು ಬರುತ್ತೇನೆ ಎಂದು ಹೋಗಿದ್ದಾನೆ.

ಮದುವೆ ಮಂಟಪದಲ್ಲಿ ಸೀತಾ ಥೇಟ್‌ ಸೀತೆಯಂತೆಯೇ ಸಿಂಗಾರಗೊಂಡಿದ್ದಾಳೆ. ಅಲ್ಲೇ ಇದ್ದ ಶ್ರೀರಾಮ ಸೀತಾಳನ್ನೇ ನೋಡುತ್ತ ನಿಂತಿದ್ದಾನೆ. ಹಸೆಮಣೆ ಮೇಲೆ ಕೂತ ಸೀತಾ, ರಾಮನನ್ನು ನೋಡಿ ಓಡೋಡಿ ಬಂದಿದ್ದಾಳೆ. ರಾಮನ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿದ್ದಾಳೆ. ಇಬ್ಬರ ನಡುವೆ ಪ್ರೀತಿಯ ಮಂದಹಾಸ ವಿನಮಯವಾಗಿವೆ. ಕಣ್ಣುಗಳು ಮಾತನಾಡಿವೆ. ತುಟಿಗಳು ಕಿರುನಗೆ ಬೀರಿವೆ. ರಾಮನ ಎದೆಗೆ ಅಪ್ಪುಗೆ ನೀಡಿದ್ದಾಳೆ ಸೀತಾ. ಹಿನ್ನೆಲೆಯಲ್ಲಿ ವಾದ್ಯ ಮೇಳ ಮೊಳಗಿದೆ. ಸೀತಾ ರಾಮ ಕಲ್ಯಾಣ ಹಾಡೂ ಗುನುಗಿದೆ. ಅಷ್ಟರಲ್ಲಿ ರಾಮ್‌ ಕನಸಿನಿಂದ ಆಚೆ ಬಂದಿದ್ದಾನೆ.

ಮತ್ತೊಂದು ಕಡೆಯಲ್ಲಿ ರುದ್ರಪ್ರತಾಪನ ಒಳಸಂಚು ಸಿಹಿಗೆ ಗೊತ್ತಾದ ಹಿನ್ನೆಲೆಯಲ್ಲಿ ಆಕೆಯ ಬಾಯಿ ಮುಚ್ಚಿಸಲು ಲಾಯರ್‌ ತನ್ನ ಹುಡುಗರನ್ನು ಕರೆಸಿದ್ದಾನೆ. ರುದ್ರಪ್ರತಾಪನ ಅಸಲಿ ವಿಚಾರ ಹೇಳಲು ಸಿಹಿ ಹೆಣಗಾಡುತ್ತಿದ್ದಾಳೆ. ಆತನ ಕಣ್ತಪ್ಪಿಸಿ ಮರೆಯಲ್ಲಿಯೇ ಓಡಾಡುತ್ತಿದ್ದಾಳೆ. ಫೋನ್‌ನಲ್ಲಿ ಫ್ರೆಂಡ್‌ ರಾಮ್‌ಗೂ ಕರೆ ಮಾಡಿದ್ದಾಳೆ. ಆದರೆ ಆತನ ಫೋನ್‌ ಸ್ವಿಚ್‌ ಆಫ್‌ ಆಗಿದೆ. ಹಾಗಾಗಿ ಅದೂ ಪ್ರಯೋಜನಕ್ಕೆ ಬಂದಿಲ್ಲ. ಸಿಹಿಯ ಕಣ್ಣಿಗೆ ಬೀಳ್ತಾನಾ ರಾಮ? ರುದ್ರಪ್ರತಾಪ್‌ನ ಕೆಟ್ಟ ಮುಖವನ್ನು ಎಲ್ಲರೆದುರು ಬಹಿರಂಗ ಪಡಿಸ್ತಾಳಾ ಸಿಹಿ? ರಾಮನ ಮುಂದಿನ ನಡೆ ಏನು? ಈ ಕುತೂಹಲಕ್ಕೆ ಉತ್ತರ ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ