Bhagyalakshmi Serial: ಪುಸ್ತಕ, ಪೆನ್ನು ಹಿಡಿದು ಮಗನಿಗೆ ಬುದ್ಧಿ ಕಲಿಸಲು ಹೊರಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್ 27ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.
Bhagyalakshmi Kannada Serial: ಅತ್ತೆ ಕುಸುಮಾಗೆ ಮಗ, ಮನೆ ಕಂತು ಕಟ್ಟುವುದಿಲ್ಲ ಎಂದು ತಿಳಿದರೆ ಅಮ್ಮ ಮಗನ ನಡುವೆ ಇನ್ನಷ್ಟು ಅಂತರ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಭಾಗ್ಯಾ, ಅತ್ತೆ ಬಳಿ ಏನೂ ಹೇಳದೆ ಎಲ್ಲವನ್ನೂ ಮುಚ್ಚಿಡುತ್ತಾಳೆ. ಅತ್ತೆ ಎಲ್ಲಾ ವಿಚಾರ ತಿಳಿದು ಅವರಿಗೆ ಹೃದಯಾಘಾತವಾದಂತೆ ಭಾಗ್ಯಾ ಕನಸು ಕಾಣುತ್ತಾಳೆ. ಅದೇ ಭಯದಲ್ಲಿ ಜೋರಾಗಿ ಅರಚುತ್ತಾಳೆ.
ಕೊನೆಗೂ ಅತ್ತೆ ಬಳಿ ನಿಜ ಹೇಳಿದ ಭಾಗ್ಯಾ
ಭಾಗ್ಯಾ ಅರಚಿದ್ದನ್ನು ಕೇಳಿ ಎಲ್ಲರೂ ಗಾಬರಿಯಿಂದ ರೂಮ್‌ಗೆ ಬರುತ್ತಾರೆ. ಏಕೆ ಅರಚಿದ್ದು ಎಂದು ಕೇಳಿದಾಗ ಭಾಗ್ಯಾ ಉತ್ತರ ಹೇಳಲು ತಡಬಡಾಯಿಸುತ್ತಾಳೆ. ಅಮ್ಮಾ , ಬಿದ್ಯಾ ಏಕೆ ಅರಚಿದೆ ನೋವಾಯ್ತಾ ಎಂದು ಗುಂಡಣ್ಣನೂ ಗಾಬರಿಯಿಂದ ಕೇಳುತ್ತಾನೆ. ಹೌದು ಜಾರಿ ಬಿದ್ದೆ ಅದಕ್ಕೆ ಕಿರುಚಿದೆ ಎಂದು ಭಾಗ್ಯಾ ಗಾಬರಿಯಿಂದ ಮಾತನಾಡುವುದನ್ನು ನೋಡಿ ಕುಸುಮಾಗೆ ಅನುಮಾನ ಉಂಟಾಗುತ್ತದೆ. ಇದರ ಹಿಂದೆಯೇ ಭಾಗ್ಯಾ ಆತುರಾತುರವಾಗಿ, ಅತ್ತೆ ಬ್ಯಾಂಕ್ ಲಾಕರ್‌ನಲ್ಲಿ ಒಡವೆ ಇಟ್ಟಿದ್ದೇನೆ, ಅದನ್ನು ತೆಗೆದುಕೊಂಡು ಬರುತ್ತೇನೆ ಎನ್ನುತ್ತಾಳೆ. ಇದನ್ನೂ ಕೇಳಿ ಕುಸುಮಾಗೆ ಗಾಬರಿ ಆಗುತ್ತದೆ. ಒಡವೆಗಳನ್ನು ಲಾಕರ್‌ನಲ್ಲಿಟ್ಟಿದ್ದೀಯ? ಏಕೆ? ಎಂದು ಕೇಳುತ್ತಾಳೆ. ಹೌದು, ನಾವು ದಿನಾ ಬಳಸುವ ಒಡವೆಗಳು ಮನೆಯಲ್ಲೇ ಇವೆ, ಬೇರೆಯದ್ದೆಲ್ಲಾ ಬ್ಯಾಂಕಿನಲ್ಲಿ ಇಟ್ಟಿದ್ದೇನೆ ಎನ್ನುತ್ತಾಳೆ.
ಭಾಗ್ಯಾ ಮಾತುಗಳನ್ನು ಕೇಳಿ ಇವಳು ಹೀಗೇಕೆ ವರ್ತಿಸುತ್ತಿದ್ಧಾಳೆ ಅಂತ ಕುಸುಮಾ, ಸುನಂದಾ, ಪೂಜಾ ಎಲ್ಲರೂ ಕನ್ಫ್ಯೂಸ್ ಆಗುತ್ತಾರೆ. ಸರಿ ನೀನು ಬ್ಯಾಂಕಿಗೆ ಹೋಗಿ ಬಾ, ಅದಕ್ಕೂ ಮುನ್ನ ನನಗೆ ಒಂದು ಕಪ್ ಕಾಫಿ ಮಾಡಿಕೊಟ್ಟು ಹೋಗು ಎಂದು ಕುಸುಮಾ ಹೇಳುತ್ತಾಳೆ. ಭಾಗ್ಯಾ ಸರಿ ಎಂದು ತಲೆ ಆಡಿಸಿ ಅತ್ತೆಗೆ ಕಾಫಿ ಮಾಡಿಟ್ಟು, ಬ್ಯಾಗ್ ಹಿಡಿದು ಒಡವೆ ತರಲು ಹೋಗುತ್ತಾಳೆ. ಅವಳನ್ನು ತಡೆಯುವ ಕುಸುಮಾ , ಈಗ ಸಮಯ ಎಷ್ಟು ಎಂದು ಕೇಳುತ್ತಾಳೆ. ಈಗ 7 ಗಂಟೆ ಎನ್ನುತ್ತಾಳೆ ಭಾಗ್ಯಾ. ಹೌದು 7 ಗಂಟೆ, ಈ ಸಮಯದಲ್ಲಿ ಯಾವ ಬ್ಯಾಂಕ್ ತೆರೆದಿರುತ್ತದೆ, ಯಾವಾಗಿಂದ ನಿನ್ನ ಅತ್ತೆಗೆ ಸುಳ್ಳು ಹೇಳೋದು ಕಲಿತೆ? ನೀನು ನನ್ನಿಂದ ಏನೋ ಮುಚ್ಚಿಡುತ್ತಿದ್ದೀಯ, ಈಗ ನಿಜ ಹೇಳದಿದ್ದರೆ ನನ್ನ ಮೇಲೆ ಆಣೆ ಎಂದು ಕುಸುಮಾ, ಭಾಗ್ಯಾ ಕೈಯ್ಯನ್ನು ತಲೆ ಮೇಲೆ ಇರಿಸಿಕೊಳ್ಳುತ್ತಾಳೆ.
ಮಗನಿಗೆ ಕರೆ ಮಾಡಿದ ಕುಸುಮಾ
ಭಾಗ್ಯಾಗೆ ಬೇರೆ ವಿಧಿಯಿಲ್ಲ, ಎಲ್ಲಾ ವಿಚಾರವನ್ನೂ ಅತ್ತೆಗೆ ಹೇಳುತ್ತಾಳೆ. ಮಗನ ಬಗ್ಗೆ ಕೇಳಿ ಕುಸುಮಾಗೆ ಬೇಸರವಾಗುತ್ತದೆ. ನಿಜ ಹೇಳಿದರೆ ನಿಮ್ಮಿಬ್ಬರ ನಡುವಿನ ಅಂತರ ಮತ್ತೆ ಹೆಚ್ಚಾಗುತ್ತದೆ ಅಂತ ಹೇಳಲಿಲ್ಲ ಕ್ಷಮಿಸಿ ಎಂದು ಭಾಗ್ಯಾ ವಿಷಯ ಮುಚ್ಚಿಟ್ಟಿದ್ದಕ್ಕೆ ಅತ್ತೆ ಬಳಿ ಕ್ಷಮೆ ಕೇಳುತ್ತಾಳೆ. ಎಲ್ಲಾ ವಿಚಾರ ತಿಳಿದ ನಂತರ ಕುಸುಮಾ, ಗಂಡನಿಗೆ ಫೋನ್ ಮಾಡಿ ಕೊಡುವಂತೆ ಭಾಗ್ಯಾಗೆ ಹೇಳುತ್ತಾಳೆ. ಇತ್ತ ಶ್ರೇಷ್ಠಾ ಮನೆಯಲ್ಲಿ ಸುಂದರಿಗೆ ಫುಡ್ ಆರ್ಡರ್ ಮಾಡಿಕೊಂಡು ಆಕೆಯ ಕಾಟ ತಾಳಲಾರದೆ ಒದ್ದಾಡುವ ತಾಂಡವ್ ಅಮ್ಮನ ಕಾಲ್ ನೋಡುತ್ತಿದ್ದಂತೆ ಗೊಂದಲದಿಂದಲೇ ಫೋನ್ ರಿಸೀವ್ ಮಾಡುತ್ತಾನೆ.
ಫೋನ್ ರಿಸೀವ್ ಮಾಡುವ ಮಗನನ್ನು ಕುಸುಮಾ ಹೇಗಿದ್ಯಾ, ಊಟ ತಿಂಡಿ ಎಲ್ಲಾ ಸರಿಯಾದ ಸಮಯಕ್ಕೆ ಮಾಡ್ತಿದ್ಯಾ ಎಂದು ವಿಚಾರಿಸಿಕೊಳ್ಳುತ್ತಾಳೆ. ನಾಳೆ ನಿನ್ನನ್ನು ಭೇಟಿ ಆಗಬೇಕು, ನಿನ್ನ ಆಫೀಸ್ ಬಳಿ ಇರುವ ಹೋಟೆಲ್ ಬಳಿ ಬಾ ಎಂದು ಫೋನ್ ಇಡುತ್ತಾಳೆ. ಭಾಗ್ಯಾ ಹಾಗೂ ಮಕ್ಕಳು ಹೋಂ ವರ್ಕ್ ಮಾಡುವಾಗ ಕುಸುಮಾ, ಗುಂಡಣ್ಣನ ಬಳಿ ಬಂದು ಒಂದು ಖಾಲಿ ಪುಸ್ತಕ ಹಾಗೂ ಪೆನ್ನು ಕೊಡುವಂತೆ ಕೇಳುತ್ತಾಳೆ. ಕುಸುಮಾ ನಡೆ ಯಾರಿಗೂ ಅರ್ಥವಾಗುವುದಿಲ್ಲ, ಆಕೆ ಯಾರಿಗೂ ಏನೂ ಹೇಳಲು ಸಿದ್ಧವಿಲ್ಲ, ಎಲ್ಲಾ ನಾಳೆ ಗೊತ್ತಾಗುತ್ತೆ ಎನ್ನುತ್ತಾಳೆ.
ಅಮ್ಮ ಕ್ಷಮೆ ಕೇಳುವುದನ್ನು ಎದುರು ನೋಡುತ್ತಿರುವ ತಾಂಡವ್
ಮರುದಿನ ತಿಂಡಿ ತಿನ್ನುವಾಗ ಗುಂಡಣ್ಣ ಹಾಗೂ ತನ್ವಿಯನ್ನು ಶಾಲೆಗೆ ಬಿಡುವಂತೆ ಸುನಂದಾಗೆ ಹೇಳುತ್ತಾಳೆ. ಹಾಗೇ ಭಾಗ್ಯಾಗೆ ಸ್ಕೂಲ್‌ಗೆ ರಜೆ ಹಾಕಿ ತನ್ನೊಂದಿಗೆ ಬರುವಂತೆ ಹೇಳುತ್ತಾಳೆ. ಆದರೆ ಏಕೆ ಅಂತ ಮಾತ್ರ ಹೇಳುವುದಿಲ್ಲ. ಇತ್ತ ಅಮ್ಮನಿಗಾಗಿ ಕಾಯುತ್ತಿರುವ ತಾಂಡವ್‌ಗೆ ಶ್ರೇಷ್ಠಾ ಕರೆ ಮಾಡುತ್ತಾಳೆ. ಕೊನೆಗೂ ನಿನ್ನ ಅಮ್ಮನಿಗೆ ನಿನ್ನ ಬೆಲೆ ಏನೆಂದು ತಿಳಿಯಿತು. ಎಲ್ಲಾ ನೀನು ಅಂದುಕೊಂಡಂತೆ ಆಗುತ್ತಿದೆ ಅಲ್ವಾ ಎನ್ನುತ್ತಾಳೆ. ಆದರೆ ಕುಸುಮಾ ಮಗನನ್ನು ಭೇಟಿ ಮಾಡಲು ಬರ್ತಿರೋ ನಿಜವಾದ ಕಾರಣ ಇಬ್ಬರಿಗೂ ಗೊತ್ತಿಲ್ಲ.
ಪೆನ್ ಪುಸ್ತಕ ಹಿಡಿದು ಬರುವ ಕುಸುಮಾ ತಾಂಡವ್‌ಗೆ ಹೇಗೆ ಬುದ್ಧಿ ಕಲಿಸುತ್ತಾಳೆ ಕಾದು ನೋಡಬೇಕು.́