logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತಾ- ರಾಮನ ನಡುವಿನ ಸಂಬಂಧ ಹಳಿ ತಪ್ಪಿದರೆ, ಅಶೋಕ- ಪ್ರಿಯಾ ನಂಟು ಮತ್ತಷ್ಟು ಬಿಗಿಯಾಗ್ತಿದೆ

Seetha Rama Serial: ಸೀತಾ- ರಾಮನ ನಡುವಿನ ಸಂಬಂಧ ಹಳಿ ತಪ್ಪಿದರೆ, ಅಶೋಕ- ಪ್ರಿಯಾ ನಂಟು ಮತ್ತಷ್ಟು ಬಿಗಿಯಾಗ್ತಿದೆ

Jan 13, 2024 10:15 AM IST

google News

Seetha Rama Serial: ಸೀತಾ- ರಾಮನ ನಡುವಿನ ಸಂಬಂಧ ಹಳಿ ತಪ್ಪಿದರೆ, ಅಶೋಕ- ಪ್ರಿಯಾ ನಂಟು ಮತ್ತಷ್ಟು ಬಿಗಿಯಾಗ್ತಿದೆ

    • Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌ ದಿನದಿಂದ ದಿನಕ್ಕೆ ಮಗ್ಗುಲು ಬದಲಿಸುತ್ತಿದೆ. ಕೌತುಕ ಸೃಷ್ಟಿಸುತ್ತ ಮುನ್ನಡೆಯುತ್ತಿದೆ. ರಾಮನ ಅಸಲಿಯತ್ತು ಗೊತ್ತಾದ ಬಳಿಕ ಆತನಿಂದ ಸೀತಾ ಡಿಸ್ಟಂನ್ಸ್‌ ಮೆಂಟೇನ್‌ ಮಾಡುತ್ತಿದ್ದಾಳೆ. ಈ ನಡುವೆ ಅಶೋಕ ಮತ್ತು ಪ್ರಿಯಾ ನಡುವೆ ಬೇರೆಯದೇ ನಂಟು ಮೊಳಕೆಯೊಡೆಯುತ್ತಿದೆ.
Seetha Rama Serial: ಸೀತಾ- ರಾಮನ ನಡುವಿನ ಸಂಬಂಧ ಹಳಿ ತಪ್ಪಿದರೆ, ಅಶೋಕ- ಪ್ರಿಯಾ ನಂಟು ಮತ್ತಷ್ಟು ಬಿಗಿಯಾಗ್ತಿದೆ
Seetha Rama Serial: ಸೀತಾ- ರಾಮನ ನಡುವಿನ ಸಂಬಂಧ ಹಳಿ ತಪ್ಪಿದರೆ, ಅಶೋಕ- ಪ್ರಿಯಾ ನಂಟು ಮತ್ತಷ್ಟು ಬಿಗಿಯಾಗ್ತಿದೆ

Seetha Rama Serial: ಸೀತಾ ರಾಮ ಧಾರಾವಾಹಿ ರೋಚಕತೆಯ ಓಟಕ್ಕೆ ಇಳಿದಿದೆ. ದಿನದಿಂದ ದಿನಕ್ಕೆ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತ ಸಾಗುತ್ತಿದೆ. ಅದರಂತೆ ಗುರುವಾರದ ಸಂಚಿಕೆಯಲ್ಲಿ ಮ್ಯಾನೇಜರ್‌ ಚರಣ್‌ಗೆ ರಾಮ ಮತ್ತು ಅಶೋಕ ಕ್ಲಾಸ್‌ ತೆಗೆದುಕೊಂಡಿದ್ದರು. ಈ ವಿಚಾರವನ್ನು ಭಾರ್ಗವಿಗೂ ವಿವರಿಸಿದ್ದ ಚರಣ್‌. ಅದಾದ ಬಳಿಕ ನೀನು ನನ್ನ ದಾರಿಗೆ ಅಡ್ಡ ಬಂದಷ್ಟು, ನಿನ್ನ ತಾತನಿಗೆ ಅಪಾಯ ತಪ್ಪಿದ್ದಲ್ಲ ಎಂದೂ ಮನದಲ್ಲಿಯೇ ಕಡುಕೋಪ ಹೊರಹಾಕಿದ್ದಳು ಭಾರ್ಗವಿ. ಮುದಿ ಜೀವ ನನ್ನ ಕೈಯಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡ್ತಿದೆ ಎಂದಿದ್ದಳು.

ಇತ್ತ ರಾಮನ ಸಹವಾಸವೇ ಸಾಕು ಎಂದು ಆತನನ್ನು ದೂರವಿಟ್ಟಿದ್ದ ಸೀತಾಗೆ ಆಫೀಸ್‌ನಲ್ಲಿ ಚುಚ್ಚು ಮಾತುಗಳೇ ಹೆಚ್ಚಾಗಿವೆ. ನಿನ್ನ ಸ್ನೇಹಿತ ರಾಮ್‌ನನ್ನು ಮಿಸ್‌ ಮಾಡಿಕೊಳ್ತಿದ್ದೀಯಾ ಎಂದು ಕೆಲವರು ಕೇಳಿದರೆ, ನಮ್ಮೆಲ್ಲರಿಗಿಂತ ನಿನಗೆ ಅವರು ಹೆಚ್ಚು ಕ್ಲೋಸ್‌ ಆಗಿದ್ದು, ಅವರು ಬಾಸ್‌ ಅಂತ ನಿನಗೆ ಮೊದಲೇ ಗೊತ್ತಿತ್ತು ಅಲ್ವಾ? ನಿಮ್ಮ ಮನೆಗೆಲ್ಲ ಬಂದೂ ಹೋಗಿ ಮಾಡ್ತಿದ್ರಂತೆ ಎಂದೂ ಸೀತಾಳ ಮನಸ್ಸನ್ನು ಘಾಸಿಗೊಳಿಸಿತ್ತು.

ಶುಕ್ರವಾರದ ಸಂಚಿಕೆಯಲ್ಲಿ ಫ್ರೆಂಡ್‌ ರಾಮ್‌ ಬರ್ತಾನಾ ಎಂದು ಕಾದು ಕುಳಿತಿದ್ದ ಸಿಹಿಗೆ ಅಚ್ಚರಿಯ ರೀತಿಯಲ್ಲಿ ರಾಮನ ಎಂಟ್ರಿಯಾಗಿದೆ. ಸಿಹಿಯನ್ನು ಬಿಗಿದಪ್ಪಿ. ಸಿಹಿ ಮುತ್ತಿಕ್ಕಿದ್ದಾಳೆ. ರಾಮ್‌ ಬಂದ ವಿಚಾರವನ್ನು ಸೀತಾ ಸಹ ನೋಡಿದ್ದಾಳೆ. ಸೀತಾ ಮೊಗದಲ್ಲಿ ಮತ್ತದೇ ಮೌನ. ಲಂಚ್‌ ಬಾಕ್ಸ್‌ ಕೊಡುವ ನೆಪದಲ್ಲಿ ಆಗಮಿಸಿದ್ದಾಗಿ ಹೇಳಿದ್ದಾನೆ. ಅದಕ್ಕೆ ಕಂಪನಿ ಬಾಸ್‌ ಆಗಿ ಇಲ್ಲಿಯವರೆಗೂ ಬರುವುದು ಎಷ್ಟು ಸರಿ ಎಂದು ಕೇಳಿದ್ದಾಳೆ ಸೀತಾ. ನೀವು ಇಲ್ಲಿ ಬರೋದ್ರಿಂದ ನಿಮಗೆ ಏನಾಗುತ್ತೋ ಗೊತ್ತಿಲ್ಲ. ನನಗಂತೂ ತೊಂದರೆ ಆಗುತ್ತೆ, ಅರ್ಥ ಮಾಡಿಕೊಳ್ಳಿ ಎಂದಿದ್ದಾಳೆ. ಡಬ್ಬ ಕೊಟ್ಟು ಅಲ್ಲೀಂದ ಹೊರಟೇ ಬಿಟ್ಟಿದ್ದಾನೆ ರಾಮ.

ಮನೆಗೆ ಬಂದು ಡಬ್ಬ ತೆರೆದು ನೋಡಿದಾಗ ಡಬ್ಬದಲ್ಲಿನ ಪತ್ರ ಸೀತಾಳ ಕೈಗೆ ಸಿಕ್ಕಿದೆ. ನಾವು ಮೊದಲಿನಂತೆ ಫ್ರೆಂಡ್ಸ್‌ ಆಗಿರೋಣ, ಏನಾಯ್ತು ಅಂತ ಹೇಳೋಕಾದ್ರೂ ಒಂದು ಅವಕಾಶ ಕೊಡಿ ಎಂದು ಪತ್ರದಲ್ಲಿ ಬರೆದಿದ್ದಾನೆ ರಾಮ. ಮತ್ತೊಂದು ಕಡೆ ಅಶೋಕ ಮತ್ತು ಪ್ರಿಯಾ ಮುಖಾಮುಖಿಯಾಗಿದ್ದಾರೆ. ಇಬ್ಬರ ನಡುವೆ ಪ್ರೀತಿಯ ಮೊಳಕೆಯೊಡೆದ ಭಾವ ಚಿಗುರೊಡೆದಿದೆ. ಪ್ರಿಯಾಗಾಗಿ ಕಾಳು ಮೆಣಸಿನ ಸಾರು ಮಾಡಿಕೊಡುವುದಾಗಿ ಹೇಳಿದ್ದಾನೆ ಅಶೋಕ.

ಪ್ರಿಯಾಗೆ ಚೂರು ಹೊಟ್ಟೆ ನೋವು ಎಂದಿದ್ದೇ ತಡ, ಆಕೆಯ ಬಗ್ಗೆ ಅತಿಯಾದ ಕಾಳಜಿ ತೋರಿಸಿದ್ದಾನೆ. ಆ ಕಾಳಜಿ ಕಂಡು ನೀವು ನಮ್ಮಮ್ಮನ ರೀತಿನೇ ಎಂದಿದ್ದಾಳೆ. ಹೀಗೆ ಇಬ್ಬರ ನಡುವೆ ಈ ಮೊದಲಿನಗಿಂತ ಅಸಹಜ ಮಾತುಗಳು ಹೆಚ್ಚಾಗಿವೆ. ಪ್ರಿಯಾಗಾಗಿಯೇ ಮೆಣಸಿನಕಾಳು ಸಾರೂ ಮಾಡಿಕೊಟ್ಟಿದ್ದಾನೆ. ಪ್ರಿಯಾ ಮನಸೂ ಮತ್ತಷ್ಟು ಕರಗಿದೆ. ಮಾತಿನ ನಡುವೆ ಪ್ರಿಯಾ, ಪದೇ ಪದೆ ಸರ್‌ ಪದ ಬಳಸುತ್ತಿರುವುದಕ್ಕೆ, ನಾನೇನು ನಿಮ್ಮ ಬಾಸ್‌ ಅಲ್ಲ, ಅಶೋಕ್‌ ಅಂತ ಕರೀರಿ ಸಾಕು ಎಂದಿದ್ದಾನೆ. ಇತ್ತ ಶಾಂತಮ್ಮನ ವಠಾರದಲ್ಲಿ ಸಂಕ್ರಾಂತಿ ಸಂಭ್ರಮ ಕಳೆಗಟ್ಟಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ