Bhagyalakshmi Serial: ಪ್ರಜ್ಞೆ ಬಂದರೂ ಅಪ್ಪ ತಾಂಡವ್ನನ್ನು ನೆನೆದು ಮತ್ತೆ ಜ್ಞಾನ ತಪ್ಪಿದ ತನ್ವಿ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಒಳ್ಳೆ ಕಥೆಯಿಂದ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಜನವರಿ 12ರ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು ಎಂಬ ವಿವರ ಇಲ್ಲಿದೆ.
Bhagyalakshmi Kannada Serial: ಕೊನೆಗೂ ತಾಂಡವ್-ಶ್ರೇಷ್ಠಾ ಎಂಗೇಜ್ಮೆಂಟ್ ನಡೆದೇಹೋಯ್ತು. ಕಾವ್ಯಾ ಎಷ್ಟೇ ಪ್ರಯತ್ನ ಪಟ್ಟರೂ ಗೆಳತಿ ನಿಶ್ಚಿತಾರ್ಥ ನಿಲ್ಲಿಸಲು ಸಾಧ್ಯವಾಗಲಿಲ್ಲ. ಶ್ರೀವರ ಆರೋಗ್ಯದ ದೃಷ್ಟಿಯಿಂದ ಏನೂ ಹೇಳದೆ ಸುಮ್ಮನಾಗುವ ಕಾವ್ಯಾ, ತಾಂಡವ್ ರೂಮ್ನಲ್ಲಿ ಬಿಟ್ಟು ಬಂದಿದ್ದ ಫೋನನ್ನು ಅವನಿಗೆ ಕೊಡುತ್ತಾಳೆ.
ತಾಂಡವ್ಗೆ ಆತನ ಮೊಬೈಲ್ ತಲುಪಿಸುವ ಕಾವ್ಯಾ
ಕಾವ್ಯಾ, ತಾಂಡವ್ ಬಳಿ ಏನೂ ಹೇಳಬಾರದು ಎಂಬ ಕಾರಣಕ್ಕೆ ಮಹೇಶ ಹಾಗೂ ಸುಂದರಿ ಪ್ರತಿ ಬಾರಿಯೂ ಅಡ್ಡಿಯಾಗುತ್ತಿರುತ್ತಾರೆ. ಹುಡುಗಿ ಮನೆ ಕಡೆಯಿಂದ ಹುಡುಗನ ಮನೆಯವರಿಗೆ ಗಿಫ್ಟ್ ನೀಡುವ ಸಂಪ್ರದಾಯ ಇದೆ ಎಂದು ತಿಳಿದ ನಂತರ ಮಹೇಶ ಹಾಗೂ ಸುಂದರಿ ಬಹಳ ಎಕ್ಸೈಟ್ ಆಗುತ್ತಾರೆ. ತಾಂಡವ್, ಮಹೇಶ್, ಸುಂದರಿ ಮೂವರನ್ನೂ ಕೂರಿಸಿ ಶ್ರೀವರ ಹಾಗೂ ಯಶೋಧಾ ಗಿಫ್ಟ್ ನೀಡುತ್ತಾರೆ. ಅದು ಕೈಗೆ ಸಿಗುತ್ತಿದ್ದಂತೆ ಎಂದೂ ಯಾವ ಗಿಫ್ಟ್ ಕಂಡಿಲ್ಲದವರಂತೆ ಇಬ್ಬರೂ ಬಾಕ್ಸ್ ಓಪನ್ ಮಾಡಿ ನೋಡುತ್ತಾರೆ. ಅಲ್ಲಿರುವ ಗಿಫ್ಟ್ಗಳನ್ನು ನೋಡಿ ಎಕ್ಸೈಟ್ ಆಗುತ್ತಾರೆ. ಇವರಿಬ್ಬರ ವರ್ತನೆ ನೋಡಿ ಶ್ರೇಷ್ಠಾ ಮನೆಯವರು ಮುಜುಗರಕ್ಕೆ ಒಳಗಾಗುತ್ತಾರೆ. ಇನ್ನು ಇಲ್ಲೇ ಇದ್ದರೆ ಇವರು ನನ್ನ ಮರ್ಯಾದೆ ಕಳೆಯುತ್ತಾರೆ ಎಂದುಕೊಳ್ಳುವ ತಾಂಡವ್, ನನಗೆ ನಾಳೆ ಆಫೀಸಿನಲ್ಲಿ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ.
ಇತ್ತ ಆಸ್ಪತ್ರೆಯಲ್ಲಿ ಭಾಗ್ಯಾ, ಕುಸುಮಾ ಹಾಗೂ ಮನೆಯವರು ತನ್ವಿಗೆ ಪ್ರಜ್ಞೆ ಬರುವುದನ್ನು ಕಾಯುತ್ತಿದ್ದಾರೆ. ತನ್ವಿ ಎಚ್ಚರ ಆಗುತ್ತಿದ್ದಂತೆ ನಾನು ಎಲ್ಲಿದ್ದೇನೆ? ನನಗೆ ಏನಾಗಿದೆ? ಎಂದು ನೂರಾರು ಪ್ರಶ್ನೆ ಕೇಳುತ್ತಾಳೆ. ತನಗೆ ಆಕ್ಸಿಡೆಂಟ್ ಆಗಿರುವುದು ಗೊತ್ತಾದ ನಂತರ ತನ್ವಿ ಗಾಬರಿ ಆಗುತ್ತಾಳೆ. ಆ ದಿನ ಅಪ್ಪನ ಬಳಿ ಹೋದಾಗ ಏನೆಲ್ಲಾ ಆಯ್ತು ಹೇಳು ಎಂದು ಕುಸುಮಾ, ಮೊಮ್ಮಗಳನ್ನು ಕೇಳುತ್ತಾಳೆ. ಆಗ ತನ್ವಿ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾಳೆ. ತಾಂಡವ್ ಬಳಿ ಹೋಗಿ ದುಡ್ಡು ಕೇಳಿದ್ದು, ಶ್ರೇಷ್ಠಾ ಜೊತೆಯಲ್ಲಿ ಇದ್ದದ್ದು, ತಾನು ಅಳುತ್ತಾ ರಸ್ತೆಯಲ್ಲಿ ಬರುತ್ತಿದ್ದ ದೃಶ್ಯ ತನ್ವಿ ಕಣ್ಣ ಮುಂದೆ ಬರುತ್ತದೆ.
ಅಪ್ಪನನ್ನು ನೆನಪಿಸಿಕೊಂಡು ಮತ್ತೆ ಪ್ರಜ್ಞೆ ತಪ್ಪುವ ತನ್ವಿ
ಆ ದಿನ ನಡೆದ ಘಟನೆಯನ್ನು ನೆನಪಿಸಿಕೊಂಡು ತನ್ವಿ ಅಪ್ಪನನ್ನು ಕನವರಿಸುತ್ತಲೇ ಮತ್ತೆ ಪ್ರಜ್ಞೆ ತಪ್ಪುತ್ತಾಳೆ. ತನ್ವಿ ಪರಿಸ್ಥಿತಿ ನೋಡಿ ಭಾಗ್ಯಾ ಗಾಬರಿ ಆಗುತ್ತಾಳೆ. ತನ್ವಿಯನ್ನು ಪರೀಕ್ಷಿಸುವ ಡಾಕ್ಟರ್, ಆಕೆಗೆ ದೇಹದ ಮೇಲೆ ಆಗಿರುವ ಗಾಯಕ್ಕಿಂತ ಮನಸ್ಸಿಗೆ ಆಗಿರುವ ಆಘಾತದಿಂದ ಹೀಗೆ ವರ್ತಿಸುತ್ತಿದ್ಧಾಳೆ. ಅವಳನ್ನು ಅವಳ ಪಾಡಿಗೆ ಬಿಡಿ ಎನ್ನುತ್ತಾರೆ. ಮೊಮ್ಮಗಳ ಪರಿಸ್ಥಿತಿ ನೋಡುವ ಸುನಂದಾ, ಮತ್ತೆ ಅಳಿಯನ ಮೇಲೆ ಕೋಪಗೊಳ್ಳುತ್ತಾಳೆ. ಅಳಿಯ ಹಾದಿ ತಪ್ಪಿದ್ದಾನೆ ಎಂದು ಕೋಪಗೊಳ್ಳುತ್ತಾಳೆ. ಇಷ್ಟಾದರೂ ಕುಸುಮಾಗೆ ಮಾತ್ರ ಮಗನ ಬಗ್ಗೆ ಇನ್ನೂ ನಂಬಿಕೆ. ಆದರೆ ಸ್ಕೂಲ್ನಲ್ಲಿ ಗಲಾಟೆ ಆದಾಗ ತಾಂಡವ್, ಗುಂಡಣ್ಣನ್ನು ಕೂಡಾ ನೋಡಲು ಬಾರದ ವಿಚಾರ ತಿಳಿದ ಕುಸುಮಾ ಕೋಪಗೊಳ್ಳುತ್ತಾಳೆ. ಇಷ್ಟೆಲ್ಲಾ ನಡೆದಿದೆ ಎಂದರೆ ಇನ್ಮುಂದೆ ನಾನು ಆತನನ್ನು ನಂಬುವುದಿಲ್ಲ ಎನ್ನುತ್ತಾಳೆ.
ಮಗಳಿಗೆ ಅಪಘಾತ ಆಗಿರುವ ವಿಚಾರ ತಾಂಡವ್ಗೆ ತಿಳಿಯುವುದಾ? ನಿಶ್ಚಿತಾರ್ಥ ಆಯ್ತು ಶೀಘ್ರದಲ್ಲೇ ತಾಂಡವ್-ಶ್ರೇಷ್ಠಾ ಮದುವೆ ಕೂಡಾ ಫಿಕ್ಸ್ ಆಗಲಿದೆಯಾ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.