logo
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಅವಮಾನಿಸಿದ ಭಾರ್ಗವಿಯಿಂದಲೇ ಸೀತಾಗೆ ಸನ್ಮಾನ; ಅವಳೇ ನಮ್ಮನೆ ಸೊಸೆಯೆಂದು ಘೋಷಿಸಿದ ತಾತ ಸೂರ್ಯ ಪ್ರಕಾಶ್‌

Seetha Rama Serial: ಅವಮಾನಿಸಿದ ಭಾರ್ಗವಿಯಿಂದಲೇ ಸೀತಾಗೆ ಸನ್ಮಾನ; ಅವಳೇ ನಮ್ಮನೆ ಸೊಸೆಯೆಂದು ಘೋಷಿಸಿದ ತಾತ ಸೂರ್ಯ ಪ್ರಕಾಶ್‌

Nov 28, 2023 10:31 AM IST

google News

Seetha Rama Serial: ಅವಮಾನಿಸಿದ ಭಾರ್ಗವಿಯಿಂದಲೇ ಸೀತಾಗೆ ಸನ್ಮಾನ; ಅವಳೇ ನಮ್ಮನೆ ಸೊಸೆಯೆಂದು ಘೋಷಿಸಿದ ತಾತ ಸೂರ್ಯಪ್ರಕಾಶ್‌

    • Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ನವೆಂಬರ್‌ 27ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಬಾಸ್‌ ಮನೆಯಲ್ಲಿ ಭಾರ್ಗವಿಯಿಂದಲೇ ಸೀತಾಗೆ ಸನ್ಮಾನ ಸಿಕ್ಕಿದೆ. ತಾತನಲ್ಲಿ ಅವಳೇ ನಮ್ಮ ಮನೆ ಸೊಸೆಯೆಂಬ ಭಾವವೂ ಮೂಡಿದೆ.
Seetha Rama Serial: ಅವಮಾನಿಸಿದ ಭಾರ್ಗವಿಯಿಂದಲೇ ಸೀತಾಗೆ ಸನ್ಮಾನ; ಅವಳೇ ನಮ್ಮನೆ ಸೊಸೆಯೆಂದು ಘೋಷಿಸಿದ ತಾತ ಸೂರ್ಯಪ್ರಕಾಶ್‌
Seetha Rama Serial: ಅವಮಾನಿಸಿದ ಭಾರ್ಗವಿಯಿಂದಲೇ ಸೀತಾಗೆ ಸನ್ಮಾನ; ಅವಳೇ ನಮ್ಮನೆ ಸೊಸೆಯೆಂದು ಘೋಷಿಸಿದ ತಾತ ಸೂರ್ಯಪ್ರಕಾಶ್‌

Seetha Rama: ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ಮತ್ತು ಭಾರ್ಗವಿಯ ಮುಖಾಮುಖಿಯಾಗಿದೆ. ಮೊದಲೇ ಸೀತಾಳನ್ನು ಕಂಡು ನಿಗಿ ನಿಗಿ ಕೆಂಡವಾಗುವ ಭಾರ್ಗವಿ, ಮನದಲ್ಲಿಯೇ ಸೀತಾಳ ಮೇಲೆ ಹಗೆ ಸಾಧಿಸುತ್ತಿದ್ದಾಳೆ. ತನ್ನ ಕೆಟ್ಟ ಬುದ್ಧಿಯಿಂದಲೇ ಸೀತಾಳನ್ನು ಟ್ರಾನ್ಸ್‌ಫರ್‌ ಮಾಡಲು ಮುಂದಾಗಿದ್ದ ಪ್ಲಾನ್‌ ಉಲ್ಟಾ ಆಗಿದ್ದಕ್ಕೂ ಆ ಕೋಪ ಇನ್ನೂ ಹಾಗೇ ಇದೆ. ಹೀಗಿರುವಾಗಲೇ ಹಬ್ಬದ ನಿಮಿತ್ತ ಎಲ್ಲ ಎಂಪ್ಲಾಯಿಗಳಿಗೆ ವಿಶೇಷ ಔತಣಕೂಟ ಆಯೋಜಿಸಲಾಗಿದೆ.

ಸೀತಾ ರಾಮ ಸೀರಿಯಲ್‌ ದಿನೇದಿನೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಥೆಯ ಮೂಲಕ ಮತ್ತು ಮೇಕಿಂಗ್‌ ವಿಚಾರದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ. ಹಲವು ರೋಚಕ ಘಟ್ಟ ಕುತೂಹಲದತ್ತ ಕರೆದೊಯ್ಯುತ್ತಿದೆ. ಇದೀಗ ಇದೇ ಸೀರಿಯಲ್‌ ಮತ್ತೊಂದು ಹಂತಕ್ಕೆ ಬಂದಿದೆ. ಈ ವರೆಗೂ ಸೀತಾ ಮತ್ತು ರಾಮನ ನಡುವೆ ಹೆಚ್ಚು ಕಥೆ ಸಾಗುತ್ತಿತ್ತು. ಇದೀಗ ಸೀತಾ ರಾಮನ ಮನೆ ಪ್ರವೇಶಿಸಿದ್ದಾಳೆ. ಸೂರ್ಯ ಪ್ರಕಾಶ್‌ ದೇಸಾಯಿಗೂ ಇಷ್ಟವಾಗಿದ್ದಾಳೆ.

ಅವಳೇ ನಮ್ಮನೆ ಸೊಸೆ

ರಾಮ ಇಷ್ಟಪಡುತ್ತಿರುವ ಹುಡುಗಿ ಇವಳೇ ಎಂಬ ವಿಚಾರ ಅಶೋಕ ಮೂಲಕ ಸೂರ್ಯ ಪ್ರಕಾಶ್‌ಗೆ ತಿಳಿದಿದೆ. ಆ ಹುಡುಗಿ ನಮ್ಮ ಮನೆ ಸೊಸೆಯಾಗಬೇಕಷ್ಟೇ ಎಂದು ರಾಮಗಿಗೆ ಕಟ್ಟಪ್ಪಣೆ ಹೊರಡಿಸಿದ್ದಾನೆ ತಾತ ಸೂರ್ಯ ಪ್ರಕಾಶ್‌. ಈ ನಡುವೆ ಎಲ್ಲರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಭೋಜನಕೂಟಕ್ಕೂ ಆಹ್ವಾನಿಸಿದ್ದಾನೆ ಸೂರ್ಯಪ್ರಕಾಶ್‌. ಹೀಗಿರುವಾಗಲೇ ವರ್ಷದ ಬೆಸ್ಟ್‌ ಎಂಪ್ಲಾಯಿ ಅವಾರ್ಡ್‌ ಸಹ ಘೋಷಣೆ ಆಗಿದೆ.

ಭಾರ್ಗವಿಂದಲೇ ಸೀತಾಗೆ ಸನ್ಮಾನ

ಅಚ್ಚರಿಯ ವಿಚಾರ ಏನೆಂದರೆ ಆ ಅವಾರ್ಡ್ ಸೀತಾಳಿಗೆ ಸಿಕ್ಕಿದೆ. ಇದಕ್ಕಿಂತ ಇನ್ನೊಂದು ಅಚ್ಚರಿ ಏನೆಂದರೆ ಅಂದು ಅವಮಾನ ಮಾಡಿದ ಭಾರ್ಗವಿಯೇ.‌. ಇಂದು ಸೀತಾಗೆ ಸನ್ಮಾನ ಮಾಡೋ ಹಾಗಾಗಿದೆ. ಅಂದರೆ, ಭಾರ್ಗವಿಯೇ ತನ್ನ ಕೈಯಾರೆ ಸೀತಾಳಿಗೆ ವರ್ಷದ ಬೆಸ್ಟ್‌ ಎಂಪ್ಲಾಯಿ ಅವಾರ್ಡ್‌ ನೀಡಿದ್ದಾಳೆ. ಯಾರನ್ನು ಇಲ್ಲಿಂದ ಓಡಿಸಬೇಕು ಎಂದುಕೊಂಡಿದ್ದಳೋ ಅವಳಿಗೆಯೇ ತಾನೇ ಸನ್ಮಾನ ಮಾಡಿದ್ದಾಳೆ.

ಅಶೋಕ- ಸೀತಾ ನಡುವೆ ಅಣ್ಣ ತಂಗಿ ಬಂಧ

ಹೀಗೆ ಅವಾರ್ಡ್‌ ಪಡೆದ ಸೀತಾ ಗಡಿಬಿಡಿಯಲ್ಲಿ ಮನೆಗೆ ಹೊರಟು ನಿಂತಿದ್ದಾಳೆ. ಏನಾಯ್ತು ಸೀತಾ, ಊಟ ಮಾಡಿಕೊಂಡು ಹೋಗುವಂತೆ ಅಶೋಕ ತಡೆದಿದ್ದಾನೆ. ಇಲ್ಲ ಅಣ್ಣನಿಗೆ ಸಮಸ್ಯೆಯಾಗಿದೆ. ನಾನು ಹೋಗಬೇಕು ಎಂದಿದ್ದಾಳೆ. ನಾನೂ ನಿಮ್ಮ ಅಣ್ಣನಾಗಿಯೇ ಹೇಳ್ತಿದ್ದೇನೆ ಊಟ ಮಾಡಿಕೊಂಡು ಹೋಗಿ ಎಂದಿದ್ದಾನೆ ಅಶೋಕ. ಇಬ್ಬರ ನಡುವೆ ಹೊಸದೊಂದು ಬಂಧ ಮೊಳಕೆಯೊಡೆದಿದೆ. ಸೀತಾಳ ಮನ ಮೊಗದಲ್ಲಿ ನಗು ಉಕ್ಕಿದೆ.

ಮನೆ ಮಂದಿಗೆ ವಾಣಿ ಅತ್ತಿಗೆ ನೆನಪು

ಇದಷ್ಟೇ ಅಲ್ಲ ನೇರವಾಗಿ ಪ್ರಿಯಾಳನ್ನು ಹುಡುತ್ತ ಸೂರ್ಯ ಪ್ರಕಾಶ್‌ ಮನೆ ಪ್ರವೇಶಿಸಿದ್ದಾಳೆ ಸೀತಾ. ಇದೇ ವೇಳೆ ಭಾರ್ಗವಿಯ ಮಗ ಅನಿಕೇತ ಕೆಳಗೆ ಬಿದ್ದಿದ್ದಾನೆ. ಆತನನ್ನು ಮೇಲಕ್ಕೆತ್ತಿ, ನೋಡಿಕೊಂಡು ಹೋಗಬೇಕು ಎಂದು ತಿಳಿಸಿ ಹೇಳಿದ್ದಾಳೆ. ಸೀತಾಳ ಈ ಮಾತನ್ನು ಮನೆ ಮಂದಿಯೆಲ್ಲ ನೋಡಿದ್ದಾರೆ. ಆಕೆಯ ತಾಯಿಗುಣವನ್ನು ಮೆಚ್ಚಿದ್ದಾರೆ. ಒಂದು ಹೆಜ್ಜೆ ಮುಂದೆ ಹೋದ ಸತ್ಯಜಿತ್‌, ಥೇಟ್‌ ನಮ್ಮ ವಾಣಿ ಅತ್ತಿಗೆಯನ್ನೇ ನೋಡಿದಂತೆ ಆಯಿತು ಎಂದಿದ್ದಾನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ