logo
ಕನ್ನಡ ಸುದ್ದಿ  /  ಮನರಂಜನೆ  /  ರವೀಂದರ್‌ ಚಂದ್ರಶೇಖರನ್‌ ಜಾಮೀನು ಅರ್ಜಿ ವಜಾ; ಇತ್ತ ಪತ್ನಿ ಮಹಾಲಕ್ಷ್ಮಿ ಫೋಟೋಶೂಟ್‌ನಲ್ಲಿ ಬ್ಯುಸಿ

ರವೀಂದರ್‌ ಚಂದ್ರಶೇಖರನ್‌ ಜಾಮೀನು ಅರ್ಜಿ ವಜಾ; ಇತ್ತ ಪತ್ನಿ ಮಹಾಲಕ್ಷ್ಮಿ ಫೋಟೋಶೂಟ್‌ನಲ್ಲಿ ಬ್ಯುಸಿ

Rakshitha Sowmya HT Kannada

Sep 26, 2023 09:55 AM IST

google News

ರವೀಂದರ್‌ ಚಂದ್ರಶೇಖರನ್‌ ಜಾಮೀನು ಅರ್ಜಿ ವಜಾ

  • ಜಾಮೀನಿನಾಗಿ ರವೀಂದರ್‌, ಎಗ್ಮೋರ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿತ್ತು. ನಂತರ ಚೆನ್ನೈ ಪ್ರಧಾನ ಸೆಷನ್ಸ್‌ ನ್ಯಾಯಾಲದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.

ರವೀಂದರ್‌ ಚಂದ್ರಶೇಖರನ್‌ ಜಾಮೀನು ಅರ್ಜಿ ವಜಾ
ರವೀಂದರ್‌ ಚಂದ್ರಶೇಖರನ್‌ ಜಾಮೀನು ಅರ್ಜಿ ವಜಾ

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ತಮಿಳು ನಿರ್ಮಾಪಕ ರವೀಂದರ್‌ ಚಂದ್ರಶೇಖರನ್‌ ಜಾಮೀನು ಅರ್ಜಿ ವಜಾಗೊಂಡಿದೆ. ರವೀಂದರ್‌ ಹಾಗೂ ಮಹಾಲಕ್ಷ್ಮೀ ಇತ್ತೀಚೆಗೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಸಂಭ್ರಮದಲ್ಲಿದ್ದ ಜೋಡಿಗೆ ಪೊಲೀಸರು ಶಾಕ್‌ ನೀಡಿದ್ದರು.

ಸೆಪ್ಟೆಂಬರ್‌ 1 ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದ ಜೋಡಿ

ರವೀಂದರ್‌ ಚಂದ್ರಶೇಖರನ್‌ ತಮಿಳಿನಲ್ಲಿ ಒಂದೆರಡು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕಳೆದ ವರ್ಷ ನಟಿ, ನಿರೂಪಕಿ ಮಹಾಲಕ್ಷ್ಮಿಯನ್ನು ಮದುವೆ ಆದ ನಂತರ ರವೀಂದರ್‌ ಫೇಮಸ್‌ ಆಗಿದ್ದರು. ಇವರಿಬ್ಬರ ಜೋಡಿ ನೋಡಿ ಕೆಲವರು ಕಾಲೆಳೆದಿದ್ದರು, ಕೆಲವರು ಹಾರೈಸಿದ್ದರು. ಮಹಾಲಕ್ಷ್ಮೀ ಹಣದ ಆಸೆಯಿಂದ ರವೀಂದರ್‌ ಅವರನ್ನು ಮದುವೆ ಆಗಿದ್ದಾರೆ ಎಂದು ಕೂಡಾ ಕೆಲವರು ಟ್ರೋಲ್‌ ಮಾಡಿದ್ದರು. ಇದೆಲ್ಲದರ ನಡುವೆ ಸೆಪ್ಟೆಂಬರ್‌ 1 ರಂದು ಈ ಜೋಡಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇದರ ಬೆನ್ನಲ್ಲೇ ರವೀಂದರ್‌ ಚಂದ್ರಶೇಖರನ್‌ ವಂಚನೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ.

15 ಕೋಟಿ ವಂಚನೆ ಆರೋಪ

ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆಗೆ ಹಣ ಹೂಡಿದರೆ ಅದರ ಎರಡರಷ್ಟು ಲಾಭ ದೊರೆಯುವುದಾಗಿ ನಂಬಿಸಿ ರವೀಂದರ್‌ ಚಂದ್ರಶೇಖರನ್‌ ನಮಗೆ 15 ಕೋಟಿ ರೂಪಾಯಿ ವಂಚಿಸಿದ್ದಾರೆ ಎಂದು ಚೆನ್ನೈ ಮೂಲದ ಬಾಲಾಜಿ ಎಂಬುವವರು ದೂರು ನೀಡಿದ್ದರು. ಆತನನ್ನು ನಂಬಿಸಲು ರವೀಂದರ್ ಚಂದ್ರಶೇಖರ್ ಲಿಬ್ರಾ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ನ ಅಡಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಸೆಪ್ಟೆಂಬರ್‌ 7 ರಂದು ಕೇಂದ್ರ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಮೇನಕಾ ನೇತೃತ್ವದಲ್ಲಿ ರವೀಂದರ್‌ನನ್ನು ಬಂಧಿಸಲಾಗಿತ್ತು.

ಜಾಮೀನು ಅರ್ಜಿ ವಜಾ

ಜಾಮೀನಿನಾಗಿ ರವೀಂದರ್‌, ಎಗ್ಮೋರ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿತ್ತು. ನಂತರ ಚೆನ್ನೈ ಪ್ರಧಾನ ಸೆಷನ್ಸ್‌ ನ್ಯಾಯಾಲದಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಸೆಪ್ಟೆಂಬರ್‌ 25 ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಮತ್ತೆ ರವೀಂದರ್‌ಗೆ ಹಿನ್ನಡೆ ಉಂಟಾಗಿದೆ.

ಪತ್ನಿ ಮಹಾಲಕ್ಷ್ಮಿ ಫೋಟೋಶೂಟ್‌ನಲ್ಲಿ ಬ್ಯುಸಿ

ಪತಿ ಜೈಲಿನಲ್ಲಿದ್ದರೆ ಇತ್ತ ಮಹಾಲಕ್ಷ್ಮೀ ಪೋಟೋಶೂಟ್‌ ಮಾಡಿಸುತ್ತಾ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಾ ಬ್ಯುಸಿಯಾಗಿದ್ದಾರೆ. 2 ದಿನಗಳ ಹಿಂದೆ ಕೂಡಾ ಮಹಾಲಕ್ಷ್ಮೀ ಹೊಸ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ''ಎಂದಿಗೂ ಹಿಮ್ಮೆಟ್ಟಬೇಡ'' ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಜೊತೆಗೆ ತಾವು ಧರಿಸುವ ಡ್ರೆಸ್‌ಗೆ ಕರ್ಟಸಿ ನೀಡಿದ್ದಾರೆ. ಮಹಾಲಕ್ಷ್ಮೀ ಫೋಟೋಗಳಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅತ್ತ ಗಂಡ ಜೈಲಿನಲ್ಲಿದ್ದರೆ ನೀವು ಇಲ್ಲಿ ಫೋಟೋಶೂಟ್‌ ಮಾಡಿಸಿಕೊಂಡು ಕಾಲ ಕಳೆಯುತ್ತಿದ್ದೀರಿ. ಪತಿಯನ್ನು ಜೈಲಿನಿಂದ ಹೊರ ತರುವ ಪ್ರಯತ್ನ ಮಾಡಿದ್ದೀರಾ ಇಲ್ಲವಾ ಎಂದು ಕೇಳುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ