Amaran OTT: ಕೇವಲ ಹದಿನೈದು ದಿನಕ್ಕೆ ಒಟಿಟಿಗೆ ಬಂದ ತಮಿಳಿನ ಬ್ಲಾಕ್‌ಬಸ್ಟರ್ ಅಮರನ್ ಸಿನಿಮಾ! ಆದರೆ, ಇಲ್ಲೊಂದು ಟ್ವಿಸ್ಟ್ ಇದೆ
Nov 17, 2024 08:49 PM IST
ಅಮರನ್ ಒಟಿಟಿ ಬಿಡುಗಡೆ ಯಾವಾಗ
Amaran OTT: ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಅಮರನ್ ಒಟಿಟಿಗೆ ಪದಾರ್ಪಣೆ ಮಾಡಿದೆ. ಚಿತ್ರಮಂದಿರದಲ್ಲಿ ಸದ್ದು ಮಾಡಿ, ಕಲೆಕ್ಷನ್ ವಿಚಾರವಾಗಿಯೂ ಮುಂದಡಿ ಇರಿಸಿರುವ ಈ ಸಿನಿಮಾ ಇದೀಗ ಸಾಗರೋತ್ತರ ಐಂತೂಸನ್ ಒಟಿಟಿಯಲ್ಲಿ (Einthusan OTT) ಸ್ಟ್ರೀಮಿಂಗ್ ಆರಂಭಿಸಿದೆ.
Amaran OTT: ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ಅಮರನ್ ಒಟಿಟಿಗೆ ಪದಾರ್ಪಣೆ ಮಾಡಿದೆ. ಬಯೋಪಿಕ್ ವಾರ್ ಡ್ರಾಮಾ ಶೈಲಿಯ ಈ ಸಿನಿಮಾ ಶುಕ್ರವಾರದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಭಾರತೀಯ ಒಟಿಟಿ ಪ್ರೇಕ್ಷಕರು ಅಮರನ್ ಸಿನಿಮಾವನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ, ಅಮರನ್ ಸಿನಿಮಾ ಸಾಗರೋತ್ತರ ಒಟಿಟಿಯಾದ ಐಂತುಸನ್‌ನಲ್ಲಿ (Einthusan OTT) ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ವಾರಗಳಲ್ಲಿ, ಚಿತ್ರವು ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಚ್ಚರಿ ವಿಚಾರ ಏನೆಂದರೆ, ಈ ಸಿನಿಮಾ ಕೇವಲ ತಮಿಳು ಆವೃತ್ತಿ ಮಾತ್ರ ಬಿಡುಗಡೆಯಾಗಿದೆ.
ನೆಟ್ ಫ್ಲಿಕ್ಸ್ ನಲ್ಲಿ...
ಅಮರನ್ ಚಿತ್ರದ ಭಾರತೀಯ ಆವೃತ್ತಿಯ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಅಮರನ್ ಡಿಸೆಂಬರ್ 5 ಅಥವಾ 10 ರಿಂದ ಸ್ಟ್ರೀಮ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ.
ಸೇನಾ ಮೇಜರ್ ಜೀವನದೊಂದಿಗೆ...
ಅಮರನ್ ಸೇನಾ ಮೇಜರ್ ಮುಕುಂದ್ ವರದರಾಜನ್ ಅವರ ಜೀವನವನ್ನು ಆಧರಿಸಿದ ಸಿನಿಮಾ. ಶಿವಕಾರ್ತಿಕೇಯನ್ ಈ ಚಿತ್ರದಲ್ಲಿ ಮುಕುಂದ್ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಯಿ ಪಲ್ಲವಿ ಅವರ ಪತ್ನಿ ರೆಬೆಕಾ ಪಾತ್ರದಲ್ಲಿದ್ದಾರೆ. ರಾಜ್ ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸಿದ್ದಾರೆ.
15 ದಿನಗಳಲ್ಲಿ... 270 ಕೋಟಿ ರೂ
ಅಮರನ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎರಡು ವಾರಗಳು ಕಳೆದರೂ ಕಲೆಕ್ಷನ್‌ನಲ್ಲಿ ದಾಪುಗಾಲಿರಿಸಿದೆ. 15 ದಿನಗಳಲ್ಲಿ, ಈ ಚಿತ್ರವು ವಿಶ್ವಾದ್ಯಂತ 270 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಈ ವರ್ಷ ಇದು ತಮಿಳಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದಾಗಿದೆ. ತೆಲುಗು ಆವೃತ್ತಿ ಇಲ್ಲಿಯವರೆಗೆ 35 ಕೋಟಿ ರೂ. ಗಳಿಸಿದೆ. ತೆಲುಗಿನಲ್ಲಿ ಕೇವಲ 5 ಕೋಟಿ ರೂ.ಗಳ ಬ್ರೇಕ್ ಈವನ್ ಗುರಿಯೊಂದಿಗೆ ಬಿಡುಗಡೆಯಾದ ಈ ಚಿತ್ರವು ನಿರ್ಮಾಪಕರಿಗೆ 15 ಕೋಟಿ ರೂ.ಗಳ ಲಾಭವನ್ನು ತಂದಿದೆ ಎಂದು ವರದಿಯಾಗಿದೆ.
ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ...
ಹಿಂದಿನ ಸೇನಾ ಹಿನ್ನೆಲೆ ಸಿನಿಮಾಗಳಿಗಿಂತ ಭಿನ್ನವಾಗಿ, ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜ್ ಕುಮಾರ್ ಪೆರಿಯಸಾಮಿ. ಅಮರನ್ ಸಿನಿಮಾದಲ್ಲಿ ಭಾವನೆಗಳು ಮತ್ತು ಆಕ್ಷನ್ ಅಂಶಗಳೇ ಹೈಲೈಟ್. ಈ ಚಿತ್ರವು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವ ಸೈನಿಕರ ಕುರಿತಾದ ಚಿತ್ರವಾಗಿದೆ. ವೃತ್ತಿಪರ ಜವಾಬ್ದಾರಿಗಳಿಂದಾಗಿ ತಮ್ಮ ಕುಟುಂಬಗಳಿಂದ ದೂರವಿರುವ ಸೈನಿಕರು ಕಾಶ್ಮೀರದಲ್ಲಿ ಕರ್ತವ್ಯದಲ್ಲಿರುವಾಗ, ಎದುರಿಸುತ್ತಿರುವ ಸವಾಲುಗಳನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ ನಿರ್ದೇಶಿಸಿದ್ದಾರೆ.
ಇದು ಅಮರನ್ ಅವರ ಕಥೆ...
ಮುಕುಂದ್ ವರದರಾಜನ್ ಬಾಲ್ಯದಿಂದಲೂ ಸೈನಿಕನಾಗಬೇಕೆಂದು ಕನಸು ಕಾಣುವಾತ. ಆ ಕನಸಂತೆ ಲೆಫ್ಟಿನೆಂಟ್ ಕರ್ನಲ್ ಆಗಿ ಆಯ್ಕೆಯಾಗುತ್ತಾನೆ. ಕಾಲೇಜಿನಲ್ಲಿ ಓದುತ್ತಿರುವಾಗ, ಅವನು ರೆಬೆಕಾ ವರ್ಗೀಸ್ ಅವರ ಜತೆಗೆ ಪ್ರೀತಿಯಲ್ಲಿ ಬೀಳುತ್ತಾನೆ. ಸೈನ್ಯದಲ್ಲಿ ಕೆಲಸ ಮಾಡುವುದರಿಂದ ರೆಬೆಕಾ ಮನೆಯಲ್ಲಿ ಮದುವೆ ಸಹಮತಿ ಸಿಗುವುದಿಲ್ಲ. ಆಕ್ಷೇಪವ್ಯಕ್ತವಾಗುತ್ತದೆ. ಹಿರಿಯರನ್ನು ಮನವೊಲಿಸಿದ ನಂತರ ಇಬ್ಬರೂ ಹೇಗೆ ಒಂದಾದರು? ಇಷ್ಟಪಟ್ಟವಳನ್ನು ಪಡೆಯಲು ಮುಕುಂದನ್ ಏನೆಲ್ಲ ಮಾಡಿದ? ಇದೆಲ್ಲದರ ಜತೆಗೆ ಸ್ಪೂರ್ತಿಯ ಕಥೆಯನ್ನು ಅಮರನ್ ಸಿನಿಮಾ ಮೂಲಕ ಹೇಳಿದ್ದಾರೆ ನಿರ್ದೇಶಕರು.