logo
ಕನ್ನಡ ಸುದ್ದಿ  /  ಮನರಂಜನೆ  /  Lakshmi Baramma: ಕಾವೇರಿ ಕಣ್ಣಲ್ಲಿ ನೀರು, ಕೀರ್ತಿ ಮೊಗದಲ್ಲಿ ನಗು; ವೈಷ್ಣವ್ ಆತಂಕಕ್ಕೆ ಕಾರಣವಾದ ಪೊಲೀಸ್‌

Lakshmi Baramma: ಕಾವೇರಿ ಕಣ್ಣಲ್ಲಿ ನೀರು, ಕೀರ್ತಿ ಮೊಗದಲ್ಲಿ ನಗು; ವೈಷ್ಣವ್ ಆತಂಕಕ್ಕೆ ಕಾರಣವಾದ ಪೊಲೀಸ್‌

Suma Gaonkar HT Kannada

Nov 24, 2024 11:00 AM IST

google News

ಕಾವೇರಿ ಕಣ್ಣಲ್ಲಿ ನೀರು, ಕೀರ್ತಿ ಮೊಗದಲ್ಲಿ ನಗು

    • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಈಗ ತನ್ನ ಸಂಪೂರ್ಣ ಬಲವನ್ನು ಕಳೆದುಕೊಂಡಿದ್ದಾಳೆ. ಯಾರೂ ಸಹ ಈಗ ಅವಳ ಪರವಾಗಿ ನಿಲ್ಲುವವರಿಲ್ಲ. ಕೀರ್ತಿ ಈಗ ಕಾವೇರಿ ಮನೆಗೆ ಪೊಲೀಸರನ್ನು ಕರೆಸಿದ್ದಾಳೆ. 
ಕಾವೇರಿ ಕಣ್ಣಲ್ಲಿ ನೀರು, ಕೀರ್ತಿ ಮೊಗದಲ್ಲಿ ನಗು
ಕಾವೇರಿ ಕಣ್ಣಲ್ಲಿ ನೀರು, ಕೀರ್ತಿ ಮೊಗದಲ್ಲಿ ನಗು (ಕಲರ್ಸ್ ಕನ್ನಡ)

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ತುಂಬಾ ಜಾಣೆಯಾಗಿ ಬಂದಿದ್ದಾಳೆ. ಈ ಬಾರಿ ಹೇಗಾದರೂ ಮಾಡಿ ಕಾವೇರಿ ಮಾಡಿದ ಎಲ್ಲ ತಪ್ಪನ್ನು ಎಲ್ಲರ ಎದುರೇ ಒಪ್ಪಿಸಬೇಕು ಎಂದು ಪಣ ತೊಟ್ಟಿದ್ದಾಳೆ. ಕಾವೇರಿ ಹತ್ತಿರ ಎಷ್ಟೇ ಕೇಳಿದರೂ ಕಾಡಿ ಬೇಡಿ ಮಾಡಿದರೂ ಅವಳು ಸತ್ಯವನ್ನು ಒಪ್ಪುತ್ತಿಲ್ಲ. ಆಗ ಕೀರ್ತಿ ಹೇಳುತ್ತಾಳೆ “ವೈಷ್ಣವ್, ಯಾರಾದ್ರೂ ನಾನೇ ಕೊಲೆ ಮಾಡಿದ್ದು ಅಂತ ಒಪ್ಪಿಕೊಳ್ತಾರಾ?” ಎಂದು. ಆಗ ಎಲ್ಲರಿಗೂ ಹೌದು ಕೀರ್ತಿ ಹೇಳಿದ ಮಾತು ನಿಜ ಎಂದು ಅನಿಸಲು ಆರಂಭವಾಗುತ್ತದೆ. ಆದರೆ ಕೀರ್ತಿ ಮಾತನ್ನು ಹೇಗೆ ನಂಬೋದು ಎಂದು ಅನುಮಾನವೂ ಆಗುತ್ತದೆ. ಆಗ ಕೀರ್ತಿ ತನ್ನ ಬಳಿ ಇನ್ನೂ ಅಸ್ತ್ರಗಳಿವೆ ಎಂದು ಹೇಳುತ್ತಾಳೆ.

ಅರ್ಧ ರಾತ್ರಿ ಕಳೆದರೂ ಕಾವೇರಿ ಮಾತ್ರ ಸತ್ಯ ಒಪ್ಪಿಕೊಂಡಿರುವುದಿಲ್ಲ. ಕಾವೇರಿ ಹೀಗೆ ಬಿಟ್ರೆ ನಿಜ ಹೇಳೋದಿಲ್ಲ ಎಂದು ಅರ್ಥ ಆಗಿ ಅವಳು ಪೊಲೀಸರನ್ನು ಕರೆಸುತ್ತಾಳೆ. ಪೊಲೀಸರು ಈಗ ಕಾವೇರಿ ಮನೆಗೆ ಬಂದಿದ್ದಾರೆ. ಬಂದು ಇಲ್ಲಿ ಕಾವೇರಿ ಯಾರು ಎಂದು ಕೇಳುತ್ತಾರೆ. ಆಗ ಕೀರ್ತಿ “ಇವರೇ ನೋಡಿ ಕಾವೇರಿ ಆಂಟಿ, ಇವರೇ ನನ್ನ ಕೊಲ್ಲೋಕೆ ಪ್ರಯತ್ನ ಮಾಡಿದ್ದು” ಎಂದು ಹೇಳುತ್ತಾಳೆ. ಆಗ ಅವರು ಮನೆಯೊಳಗಡೆ ಬರುತ್ತಾರೆ.

ವೈಷ್ಣವ್ ಹಾಗೂ ಮನೆಯ ಇತರ ಎಲ್ಲರಿಗೂ ಪೊಲೀಸರನ್ನು ನೋಡಿ ತುಂಬಾ ಗಾಬರಿಯಾಗಿರುತ್ತದೆ. ಮನೆ ಕೆಲಸದ ಗಂಗಾ ಹೋಗಿ ಬಾಗಿಲು ತೆಗೆದಿರುತ್ತಾಳೆ. ಅವಳ ಧ್ವನಿ ಕೇಳಿ ಮನೆಯವರೆಲ್ಲ ಓಡಿ ಬರುತ್ತಾರೆ. ಈಗ ಪೊಲೀಸರು ಕಾವೇರಿಯನ್ನು ಕರೆದುಕೊಂಡು ಹೋಗ್ತಾರಾ? ಅಥವಾ ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಲಕ್ಷ್ಮೀ ಬಾರಮ್ಮ ಧಾರಾವಾಹಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.

ಲಕ್ಷ್ಮೀ ಬಾರಮ್ಮ ಪಾತ್ರವರ್ಗ

ವೈಷ್ಣವ್ ಪಾತ್ರದಲ್ಲಿ ಶಮಂತ್‌ ಗೌಡ (ಬ್ರೋ ಗೌಡ)

ಕೀರ್ತಿ ಪಾತ್ರದಲ್ಲಿ ತನ್ವಿ ರಾವ್‌

ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್‌

ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ

ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ