Lakshmi Baramma: ತಾಯಿ ಕಾಲಿಗೆ ಬಿದ್ದು ಸತ್ಯ ಒಪ್ಪಿಕೊಳ್ಳಲು ಹೇಳಿದ ವೈಷ್ಣವ್; ಇಷ್ಟಾದ್ರೂ ಬುದ್ದಿ ಕಲಿಯೋದಿಲ್ವಾ ಕಾವೇರಿ
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ನಾಟಕ ಈಗ ಬಯಲಾಗಿದೆ ಎಂದೇ ಹೇಳಬಹುದು. ಯಾಕೆಂದರೆ ವೈಷ್ಣವ್ ಈಗ ಕಾವೇರಿ ಬಳಿ ಬಂದು ಅವಳ ಮೋಸದ ಬಗ್ಗೆ ಪ್ರಶ್ನೆ ಮಾಡಿದ್ದಾನೆ. ಮುಂದೇನಾಗಿದೆ ನೋಡಿ.
ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಈಗ ತುಂಬಾ ತಲೆಕಡೆಸಿಕೊಂಡಿದ್ದಾನೆ. ಯಾರನ್ನು ನಂಬಬೇಕು? ಯಾರನ್ನು ಬಿಡಬೇಕು ಎಂಬುದೇ ಅವನಿಗೆ ಅರ್ಥ ಆಗುತ್ತಿಲ್ಲ. ಇನ್ನು ಕೀರ್ತಿ ಆಡಿದ ಮಾತು, ತೋರಿಸಿದ ಸಾಕ್ಷಿಯನ್ನು ನೋಡಿದರೆ ಎಂಥವರಿಗೂ ಅವಳು ಹೇಳುತ್ತಿರುವುದು ನಿಜ ಎಂದು ಅನಿಸಿಯೇ ಅನಿಸುತ್ತದೆ. ಈಗ ವೈಷ್ಣವ್‌ಗೂ ಕೂಡ ಅದೇ ರೀತಿ ಅನಿಸಿದೆ. ಹಾಗಾಗಿ ಅವನು ಕಾವೇರಿಯನ್ನು ಪ್ರಶ್ನೆ ಮಾಡುತ್ತಾ ಇದ್ದಾನೆ. “ ಅಮ್ಮ ಕೀರ್ತಿ ಹೇಳಿದ್ರಲ್ಲಿ ಒಂದಾದ್ರೂ ನಿಜ ಇದ್ಯಾ?” ಎಂದು ಹೇಳಿದ್ದಾನೆ. ಅವನು ಎಷ್ಟು ನೊಂದಿದ್ದಾನೆ ಎಂದರೆ ಅವನ ಮುಖ ನೋಡಿದರೆ ಅರ್ಥವಾಗುತ್ತದೆ ಅಷ್ಟು ನೊಂದಿದ್ದಾನೆ.
ಕೀರ್ತಿ ಬೆಟ್ಟದ ಮಾದಯ್ಯನನ್ನು ಕರೆಸಿ ಎಲ್ಲಾ ಸತ್ಯ ಹೇಳಿಸಿದ್ದಾಳೆ. ಏನೂ ಅರಿಯದವರ ಬಳಿ ಸುಳ್ಳು ಹೇಳಿಸಲು ಸಾಧ್ಯವಿಲ್ಲ ಎಂದು ವೈಷ್ಣವ್ ನಂಬಿದ್ದಾನೆ. ಕೀರ್ತಿ ಆಡಿದ ಮಾತುಗಳನ್ನು ಕೇಳಿ ಆಯ್ತು, ನನ್ನ ಕಥೆ ಇನ್ನು ಮುಂದೆ ಮುಗಿದೇ ಹೋಯ್ತು ಎಂದು ಕಾವೇರಿ ಮನಸಿನಲ್ಲೇ ಅಂದುಕೊಂಡಿದ್ದಾಳೆ. ಆದರೆ ಇನ್ನೂ ಬಚಾವ್ ಆಗಲು ಬೇರೆ ಏನಾದರೂ ಧಾರಿ ಇದೆಯೇ ಎಂದು ಹುಡುಕಲು ಆರಂಭಿಸಿದ್ದಾಳೆ. ಆದರೆ ಸುಪ್ರಿತಾ ಈ ಬಾರಿ ತುಂಬಾ ಆಲೋಚನೆ ಮಾಡಿದ್ದಾಳೆ. ಅವಳಿಗೆ ಮೊದಲಿನಿಂದಲೂ ಕಾವೇರಿ ಮೇಲೆ ಕೋಪ ಇರುವ ಕಾರಣ ಅವಳದ್ದೇ ತಪ್ಪು ಎಂದು ಅನಿಸುತ್ತಿದೆ.
ಕೀರ್ತಿ ಆಡಿದ ಮಾತು ಸತ್ಯ ಎಂದಾದರೆ ನೀನು ಅದನ್ನು ಒಪ್ಪಿಕೊಂಡು ಬಿಡು ಅಮ್ಮ ಎಂದು ವೈಷ್ಣವ್ ತುಂಬಾ ಕಠಿಣವಾಗಿ ಹೇಳಿದ್ದಾನೆ. ಅವನ ಮಾತನ್ನು ಕೇಳಿ ಕಾವೇರಿಗೆ ಇನ್ನಷ್ಟು ಶಾಕ್ ಆಗಿದೆ. ಇವನ್ಯಾ ಈ ರೀತಿ ಹೇಳುತ್ತಿದ್ದಾನೆ? ಎಂದು ಅವಳು ಮನಸಿನಲ್ಲೇ ಅಂದುಕೊಳ್ಳುತ್ತಿದ್ದಾಳೆ. ಯಾವಾಗ ನೋಡಿದರೂ ಕಾವೇರಿಯ ನಾಟಕ ಮುಗಿಯೋದೇ ಇಲ್ಲ ಎಂದು ವೀಕ್ಷಕರು ಆಡಿಕೊಳ್ಳುತ್ತಿದ್ದಾರೆ.
ಲಕ್ಷ್ಮೀ ಬಾರಮ್ಮ ಧಾರಾವಾಹಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿತ್ತು. ಪ್ರತಿದಿನ ರಾತ್ರಿ 7:30ಕ್ಕೆ ಈ ಧಾರಾವಾಹಿ ಪ್ರಸಾರವಾಗುತ್ತದೆ. ಮೊದಲು ಒಂದಾಗಿದ್ದ ಭಾಗ್ಯಲಕ್ಷ್ಮೀ ಮತ್ತು ಲಕ್ಷ್ಮೀ ಬಾರಮ್ಮ ಈಗ ಎರಡು ಬೇರೆ ಬೇರೆ ಧಾರಾವಾಹಿಗಳಾಗಿ ಯಶಸ್ವಿಯಾಗಿದೆ. ಟಿಆರ್‌ಪಿ ರೇಟಿಂಗ್ಸ್‌ನಲ್ಲೂ ಈ ಧಾರಾವಾಹಿ ಮುಂದಿದೆ.
ಲಕ್ಷ್ಮೀ ಬಾರಮ್ಮ ಪಾತ್ರವರ್ಗ
ವೈಷ್ಣವ್ ಪಾತ್ರದಲ್ಲಿ ಶಮಂತ್ ಗೌಡ (ಬ್ರೋ ಗೌಡ)
ಕೀರ್ತಿ ಪಾತ್ರದಲ್ಲಿ ತನ್ವಿ ರಾವ್
ಲಕ್ಷ್ಮೀ ಪಾತ್ರದಲ್ಲಿ ಭೂಮಿಕಾ ರಮೇಶ್
ಕಾವೇರಿ ಪಾತ್ರದಲ್ಲಿ ಸುಷ್ಮಾ ನಾಣಯ್ಯ
ಸುಪ್ರಿತಾ ಪಾತ್ರದಲ್ಲಿ ರಜನಿ ಪ್ರವೀಣ್ ಅಭಿನಯಿಸುತ್ತಿದ್ದಾರೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಎಲ್ಲಾ ಎಪಿಸೋಡ್‌ಗಳ ಕಥೆಯನ್ನು ಇಲ್ಲಿ ಓದಬಹುದು.