Rajinikanth: ರಜನಿಕಾಂತ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಾಲಿವುಡ್ ನಿರ್ದೇಶಕ; ಹೋಗು ಆಸ್ಕರ್ ತೆಗೆದುಕೊಂಡು ಬಾ ಎಂದು ಹಾರೈಸಿದ ತಲೈವಾ
Dec 22, 2023 05:26 PM IST
Rajinikanth: ರಜನಿಕಾಂತ್ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಮಾಲಿವುಡ್ ನಿರ್ದೇಶಕ
- 2018 director touches Rajinikanth's feet: ಮಲಯಾಳ ಸಿನಿಮಾ ನಿರ್ದೇಶಕ ಜೂಡ್ ಆಂಥೋನಿ ಜೋಸೆಫ್ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಜೂಡ್ ಅವರ ಕೇರಳದ ಪ್ರವಾಹ ಆಧರಿತ 2018 ಸಿನಿಮಾವು ಭಾರತದಿಂದ ಆಸ್ಕರ್ ಸುತ್ತಿಗೆ ಅಧಿಕೃತವಾಗಿ ಪ್ರವೇಶ ಪಡೆದಿದೆ.
ಬೆಂಗಳೂರು: ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಪ್ರವೇಶವಾಗಿ 2018 ಹೆಸರಿನ ಸಿನಿಮಾವನ್ನು ಆಯ್ಕೆ ಮಾಡಲಾಗಿದೆ. 2014ರ ಅಕಾಡೆಮಿ ಪ್ರಶಸ್ತಿಗೆ ಎಂಟ್ರಿ ಪಡೆದಿರುವ ಈ ಸಿನಿಮಾದ ನಿರ್ದೇಶಕರಾದ ಜೂಡ್ ಆಂಥೋನಿ ಜೋಸೆಫ್ ಅವರು ಭಾನುವಾರ ರಜನಿಕಾಂತ್‌ರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ತಲೈವಾನ ಕಾಲಿಗೆ ನಮಿಸಿದ ಈ ಯುವ ನಿರ್ದೇಶಕರು ಈ ಕುರಿತಾದ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಮೊದಲ ಫೋಟೋದಲ್ಲಿ ರಜನಿಕಾಂತ್ ಮತ್ತು ಜೂಡ್ ಪರಸ್ಪರ ಮುಖ ನೋಡುತ್ತ ನಗುವ ದೃಶ್ಯವಿದೆ. ಈ ಫೋಟೋದಲ್ಲಿ ರಜನಿಕಾಂತ್ ಅವರು ಕಪ್ಪು ಬಣ್ಣದ ಕುರ್ತಾ ಮತ್ತು ವೇಸ್ಟಿ (ಪಂಚೆ) ಧರಿಸಿದ್ದಾರೆ. ಈ ಚಿತ್ರದಲ್ಲಿ ಜೂಡ್ ಅವರು ಪ್ರಿಂಟೆಡ್ ಬಿಳಿ ಅಂಗಿ ಧರಿಸಿದ್ದಾರೆ. "ಇಂದು ಎಂತಹ ಅದ್ಭುತ ದಿನ. ಈ ಖುಷಿಯನ್ನು ಹಂಚದೆ ಇರಲು ಸಾಧ್ಯವೇ ಇಲ್ಲ. ಇನ್ನಷ್ಟು ಚಿತ್ರಗಳನ್ನು ಹಂಚಿಕೊಂಡಿದ್ದೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ತನ್ನ 2018 ಸಿನಿಮಾದ ಕುರಿತು ಜೂಡ್ ಆಂಥೋನಿ ಜೋಸೆಫ್ ಅವರು ರಜನಿಕಾಂತ್ ಜತೆಗೆ ಮಾತನಾಡಿದ್ದಾರೆ. ತನ್ನ ಸಿನಿಮಾದ ಕುರಿತು ರಜನಿಕಾಂತ್ ಹೊಗಳಿದ್ದಾರೆ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ರಜನಿಕಾಂತ್ ಮತ್ತು ಜೂಡ್ ಸಂವಹನ
ಜೂಡ್ ಆಂಥೋನಿ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಇನ್ನೊಂದು ಪೋಸ್ಟ್‌ನಲ್ಲಿ ರಜನಿಕಾಂತ್ ಮತ್ತು ಇತರರ ಜತೆ ಕೊಠಡಿಯೊಂದರಲ್ಲಿ ಕುಳಿತು ಮಾತನಾಡುವ ದೃಶ್ಯವಿದೆ. ಇಲ್ಲಿ ರಜನಿಕಾಂತ್ ಚೇರ್‌ನಲ್ಲಿ ಕುಳಿತಿದ್ದಾರೆ. ಜೂಡ್ ಮತ್ತು ಇತರರು ಎದುರಿನ ಸೋಫಾದಲ್ಲಿ ಕುಳಿತಿದ್ದಾರೆ.
2018 ಸಿನಿಮಾವನ್ನು ಹೊಗಳಿದ ರಜನಿಕಾಂತ್
"ತಲೈವಾ ಹೇಳಿದ್ರು, ಏನು ಅದ್ಭುತವಾದ ಸಿನಿಮಾ ಜೂಡ್, ಇದನ್ನು ಹೇಗೆ ಶೂಟ್ ಮಾಡಿದೆ. ಅದ್ಭುತ ಕೆಲಸ" ಎಂದು ಜೂಡ್ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಬಳಿಕ ನಾನು ಆಸ್ಕರ್ ಪ್ರಶಸ್ತಿ ಪ್ರಯಾಣದ ಕುರಿತು ಅವರಿಗೆ ತಿಳಿಸಿದೆ ಎಂದು ಅವರು ಬರೆದಿದ್ದಾರೆ. ಅದಕ್ಕೆ "ಪೋಯಿ ಆಸ್ಕರ್ ಕೊಂಡು ವಾ, ನನ್ನ ಆಶೀರ್ವಾದ ಮತ್ತು ಪ್ರಾರ್ಥನೆ ಇರುತ್ತದೆ" ಎಂದು ರಜನಿಕಾಂತ್ ಹೇಳಿದ್ದಾರೆ. "ದೇವರೇ, ಇದು ನನಗೆ ದೊರಕಿದ ಮರೆಯಲಾಗದ ಅವಕಾಶ. ಈ ಅವಕಾಶ ನೀಡಿದ್ದಕ್ಕಾಗಿ ನನ್ನ ಫ್ರೆಂಡ್ ಐಶ್ವರ್ಯಾಗೆ ಧನ್ಯವಾದ" ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ಈ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಜೂಡ್ ಅವರು ರಜನಿಕಾಂತ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವ ಚಿತ್ರಣವಿದೆ. ಈ ಚಿತ್ರಕ್ಕೆ "ಆಶೀರ್ವಾದ ದೊರಕಿತು" ಎಂದು ಜೂಡ್ ಬರೆದಿದ್ದಾರೆ.
2018: ಎವರಿವನ್ ಈಸ್ ಎ ಹೀರೋ ಎಂಬ ಮಲಯಾಳಂನ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದು ಸರ್ವೈವಲ್ ಡ್ರಾಮಾ ಸಿನಿಮಾವಾಗಿದೆ. ಫಿಲ್ಮ್ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾವು ಈ ಸಿನಿಮಾವನ್ನು ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾವಾಗಿ ಆಯ್ಕೆ ಮಾಡಿದೆ. 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಮಹಾ ಪ್ರವಾಹವನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ. ಟೊವಿನೋ ಥಾಮಸ್ ಅಭಿನಯದ 2018: ಎವರಿವನ್ ಈಸ್ ಹೀರೋ ಎಂಬ ಚಿತ್ರವನ್ನು ಜೂಡ್ ಆಂಥನಿ ಜೋಸೆಫ್ ನಿರ್ದೇಶಿಸಿದ್ದಾರೆ. ಮಾಲಿವುಡ್‌ನ ಪ್ರಮುಖ ಚಿತ್ರವೂ ಹೌದು. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಮುದಾಯದ ಪಾತ್ರದ ಮೇಲೂ ಚಿತ್ರ ಬೆಳಕು ಚೆಲ್ಲುತ್ತದೆ. ಮೊದಲು ಈ ಚಿತ್ರ ಮಲಯಾಳಂನಲ್ಲಿ ಬಿಡುಗಡೆಯಾಯಿತು. ಬಳಿಕ, ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಯಿತು. ಈ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.