Oscar: ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲಿದೆ ಮಲಯಾಳಂ ಬ್ಲಾಕ್‌ಬಸ್ಟರ್‌ 2018 ಎವರಿವನ್‌ ಈಸ್‌ ಎ ಹೀರೋ ಚಿತ್ರ; ಗಿರೀಶ್‌ ಕಾಸರವಳ್ಳಿ ಘೋಷಣೆ
ಕನ್ನಡ ಸುದ್ದಿ  /  ಮನರಂಜನೆ  /  Oscar: ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲಿದೆ ಮಲಯಾಳಂ ಬ್ಲಾಕ್‌ಬಸ್ಟರ್‌ 2018 ಎವರಿವನ್‌ ಈಸ್‌ ಎ ಹೀರೋ ಚಿತ್ರ; ಗಿರೀಶ್‌ ಕಾಸರವಳ್ಳಿ ಘೋಷಣೆ

Oscar: ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲಿದೆ ಮಲಯಾಳಂ ಬ್ಲಾಕ್‌ಬಸ್ಟರ್‌ 2018 ಎವರಿವನ್‌ ಈಸ್‌ ಎ ಹೀರೋ ಚಿತ್ರ; ಗಿರೀಶ್‌ ಕಾಸರವಳ್ಳಿ ಘೋಷಣೆ

2018 Everyone is a Hero: 2024ರ ಆಸ್ಕರ್‌ ಪ್ರಶಸ್ತಿ ಸುತ್ತಿಗೆ ಭಾರತದಿಂದ ಮಲಯಾಳಂನ 2018 ಎವರಿವನ್‌ ಈಸ್‌ ಎ ಹೀರೋ ಎಂಬ ಕೇರಳ ಪ್ರವಾಹದ ಸಂದರ್ಭದ ಕಥೆಯುಳ್ಳ ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ.

Oscar: ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲಿದೆ ಮಲಯಾಳಂ ಬ್ಲಾಕ್‌ಬಸ್ಟರ್‌ 2018 ಎವರಿವನ್‌ ಈಸ್‌ ಎ ಹೀರೋ ಚಿತ್ರ
Oscar: ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಿಸಲಿದೆ ಮಲಯಾಳಂ ಬ್ಲಾಕ್‌ಬಸ್ಟರ್‌ 2018 ಎವರಿವನ್‌ ಈಸ್‌ ಎ ಹೀರೋ ಚಿತ್ರ

ಬೆಂಗಳೂರು: 2024ರ ಆಸ್ಕರ್‌ ಪ್ರಶಸ್ತಿಗೆ ದಕ್ಷಿಣ ಭಾರತದ ಸಿನಿಮಾವೊಂದು ಅಧಿಕೃತ ಪ್ರವೇಶ ಪಡೆದಿದೆ. 2018: ಎವರಿವನ್‌ ಈಸ್‌ ಎ ಹೀರೋ ಎಂಬ ಮಲಯಾಳಂನ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಭಾರತದಿಂದ ಆಸ್ಕರ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದು ಸರ್ವೈವಲ್‌ ಡ್ರಾಮಾ ಸಿನಿಮಾವಾಗಿದೆ. ಫಿಲ್ಮ್‌ ಫಿಲ್ಮ್‌ ಫೆಡರೇಶನ್‌ ಆಫ್‌ ಇಂಡಿಯಾವು ಈ ಸಿನಿಮಾವನ್ನು ಆಸ್ಕರ್‌ಗೆ ಭಾರತದ ಅಧಿಕೃತ ಸಿನಿಮಾವಾಗಿ ಆಯ್ಕೆ ಮಾಡಿದೆ. 2018ರಲ್ಲಿ ಕೇರಳದಲ್ಲಿ ಸಂಭವಿಸಿದ ಮಹಾ ಪ್ರವಾಹವನ್ನು ಆಧರಿಸಿ ಈ ಸಿನಿಮಾ ನಿರ್ಮಿಸಲಾಗಿದೆ.

ಟೊವಿನೋ ಥಾಮಸ್ ಅಭಿನಯದ 2018: ಎವರಿವನ್‌ ಈಸ್‌ ಹೀರೋ ಎಂಬ ಚಿತ್ರವನ್ನು ಜೂಡ್ ಆಂಥನಿ ಜೋಸೆಫ್ ನಿರ್ದೇಶಿಸಿದ್ದಾರೆ. ಮಾಲಿವುಡ್‌ನ ಪ್ರಮುಖ ಚಿತ್ರವೂ ಹೌದು. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಮುದಾಯದ ಪಾತ್ರದ ಮೇಲೂ ಚಿತ್ರ ಬೆಳಕು ಚೆಲ್ಲುತ್ತದೆ. ಮೊದಲು ಈ ಚಿತ್ರ ಮಲಯಾಳಂನಲ್ಲಿ ಬಿಡುಗಡೆಯಾಯಿತು. ಬಳಿಕ, ಕನ್ನಡ, ಹಿಂದಿ, ತಮಿಳು, ತೆಲುಗು ಮುಂತಾದ ಭಾಷೆಗಳಲ್ಲಿ ಬಿಡುಗಡೆಯಾಯಿತು.

ಈ ಸಿನಿಮಾವನ್ನು ಆಸ್ಕರ್‌ಗೆ ಭಾರತದಿಂದ ಆಯ್ಕೆ ಮಾಡಿರುವ ಕುರಿತು ಬುಧವಾರ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ವಿವಿಧ ಚಲನಚಿತ್ರಗಳನ್ನು ಆಸ್ಕರ್‌ ಪ್ರವೇಶಕ್ಕಾಗಿ ಎಫ್‌ಎಫ್‌ಐಯು ಆಗಸ್ಟ್‌ 15ರಿಂದ ಸೆಪ್ಟೆಂಬರ್‌ 10ರವರೆಗೆ ಅರ್ಜಿ ಆಹ್ವಾನಿಸಿತ್ತು. ನೂರಾರು ಸಿನಿಮಾಗಳಲ್ಲಿ ಅಂತಿಮವಾಗಿ 2018: ಎವರಿವನ್‌ ಈಸ್‌ ಹೀರೋ ಎಂಬ ಚಿತ್ರವನ್ನು ಆಸ್ಕರ್‌ ಪ್ರವೇಶಕ್ಕಾಗಿ ಆಯ್ಕೆ ಮಾಡಲಾಗಿದೆ. "ಈ ಸಿನಿಮಾವು ನೈಜ ಭಾರತವನ್ನು ಪ್ರತಿನಿಧಿಸುತ್ತದೆ" ಎಂದು ಎಫ್‌ಎಫ್‌ಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಗಿರೀಶ್‌ ಕಾಸರವಳ್ಳಿ ಮಾಹಿತಿ

2024ರ ಆಸ್ಕರ್‌ ಪ್ರಶಸ್ತಿಗೆ 2018: ಎವರಿವನ್‌ ಈಸ್‌ ಎ ಹೀರೋ ಚಿತ್ರವನ್ನು ಆಯ್ಕೆ ಮಾಡಿರುವ ಕುರಿತು 2024ರ ಅಕಾಡೆಮಿ ಅವಾರ್ಡ್‌ ಆಯ್ಕೆಯ ಜ್ಯೂರಿಗಳ ನೇತೃತ್ವ ವಹಿಸಿದ ಕನ್ನಡ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಮಾಹಿತಿ ನೀಡಿದ್ದಾರೆ. ಆಸ್ಕರ್‌ ನಾಮಿನೇಷನ್‌ ಪಟ್ಟಿಗೆ ಇದು ಆಯ್ಕೆಯಾದರೆ ಮಾತ್ರ ಇದು ಮುಂದಿನ ಆಸ್ಕರ್‌ ಸುತ್ತಿಗೆ ಪ್ರವೇಶಿಸಲಿದೆ. 2018ರಲ್ಲಿ ಕೇರಳದಲ್ಲಿ ಪ್ರವಾಹ ಸಂಭವಿಸಿದ ಸಮಯದ ಕತೆಯನ್ನು ಈ ಚಿತ್ರ ಹೊಂದಿದೆ. ನಾಯಕ ಟೊವಿನೊ ಥಾಮಸ್‌ ಅವರು ಭಾರತೀಯ ಸೇನೆಯಲ್ಲಿ ಫೇಕ್‌ ಮೆಡಿಕಲ್‌ ಸರ್ಟಿಫಿಕೇಟ್‌ನೊಂದಿಗೆ ಕೆಲಸ ಮಾಡುತ್ತ ಇರುತ್ತಾರೆ. ಆತನು ಪ್ರವಾಹ ಸಂದರ್ಭದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸುತ್ತಾನೆ. ಆಸೀಫ್‌ ಆಲಿ, ಲಾಲ್‌, ನಾರಾಯಣ್‌, ಅಪರ್ಣ ಬಾಲಮೂರ್ತಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಹಿಂದೆ ಭಾರತದ ಗುಲ್ಲಿ ಬಾಯ್‌, ಲಾಸ್ಟ್‌ ಫಿಲ್ಮ್‌ ಶೋ, ಪೆಬ್ಲಸ್‌, ಜಲ್ಲಿಕಟ್ಟು ಮುಂತಾದ ಸಿನಿಮಾಗಳು ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಪ್ರವೇಶ ಪಡೆದಿದ್ದವು. ಕಳೆದ ವರ್ಷ ತೆಲುಗಿನ ಆರ್‌ಆರ್‌ಆರ್‌ ಸಿನಿಮಾವು ಆಸ್ಕರ್‌ ಸುತ್ತಿನಲ್ಲಿ ಅಕಾಡೆಮಿ ಅವಾರ್ಡ್‌ ಫಾರ್‌ ಬೆಸ್ಟ್‌ ಒರಿಜಿನಲ್‌ ಸಾಂಗ್‌ ತನ್ನದಾಗಿಸಿಕೊಂಡಿತ್ತು. ಮದರ್‌ ಇಂಡಿಯಾ, ಸಲಾಮ್‌ ಮುಂಬೈ ಮತ್ತು ಲಗಾನ್‌ ಚಿತ್ರಗಳು ಭಾರತೀಯ ಚಿತ್ರೋದ್ಯಮದಿಂದ ಆಆಸ್ಕರ್‌ಗೆ ನಾಮಿನೇಷನ್‌ ಆಗಿದ್ದವು. ಕಳೆದ ಎರಡು ವರ್ಷಗಳಲ್ಲಿ ರೈಟಿಂಗ್‌ ವಿದ್‌ ಫೈರ್‌, ಆಲ್‌ ದಿ ಬ್ರೀಚಸ್‌ ಎಂಬ ಡಾಕ್ಯುಮೆಂಟರಿ ಫೀಚರ್‌ ಫಿಲ್ಮ್‌ಗಳು ಭಾರತದಿಂದ ನಾಮಿನೇಷನ್‌ ಆಗಿದ್ದವು. ಕಳೆದ ವರ್ಷ ಎಲಿಫೆಂಟ್‌ ವಿಸ್ಪರ್ಸ್‌ಗೆ ಬೆಸ್ಟ್‌ ಡಾಕ್ಯುಮೆಂಟರಿ ಶಾರ್ಟ್‌ ವಿಭಾಗದಲ್ಲಿ ಪ್ರಶಸ್ತಿ ದೊರಕಿತ್ತು.

Whats_app_banner