ಮದ್ಯಪಾನ ಮಾಡಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪ; ಜೈಲರ್ ಸಿನಿಮಾ ನಟ ವಿನಾಯಕನ್ ಅರೆಸ್ಟ್
Oct 25, 2023 06:46 AM IST
ಜೈಲರ್ ನಟ ವಿನಾಯಕನ್ ಅರೆಸ್ಟ್
Jailer Movie Actor Vinayakan Arrested: ತಾವು ವಾಸಿಸುತ್ತಿರುವ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ವಿನಾಯಕನ್ ಕುಡಿದು ಗಲಾಟೆ ಮಾಡುತ್ತಿದ್ದರಿಂದ ನೆರೆಹೊರೆಯವರು ವಿನಾಯಕನ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಕಾರಣ ಪೊಲೀಸರು ವಿನಾಯಕನ್‌ನನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
Jailer Movie Actor Vinayakan Arrested:ಮದ್ಯಪಾನ ಮಾಡಿ ಪೊಲೀಸ್ ಠಾಣೆಗೆ ಬಂದು ಗಲಾಟೆ ಮಾಡಿದ ಆರೋಪದ ಮೇರೆಗೆ ಜೈಲರ್ ಸಿನಿಮಾ ನಟ ವಿನಾಯಕನ್ ಅವರನ್ನು ಬಂಧಿಸಲಾಗಿದೆ.
ಸಿನಿಪ್ರಿಯರಿಗೆ ಶಾಕ್ ನೀಡಿದ ಸುದ್ದಿ
ಜೈಲರ್ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಸಿನಿಮಾ 650 ಕೋಟಿಗೂ ಹೆಚ್ಚು ಲಾಭ ಮಾಡಿ ಬೀಗುತ್ತಿದೆ. ಇದೇ ಖುಷಿಯಲ್ಲಿ ರಜಿನಿಕಾಂತ್ ಹೊಸ ಚಿತ್ರಕ್ಕೆ ಸಿದ್ದತೆ ನಡೆಸುತ್ತಿದ್ದಾರೆ. ಇದರ ನಡುವೆ ವಿನಾಯಕನ್ ಅರೆಸ್ಟ್ ಆಗಿರುವ ಸುದ್ದಿ ಸಿನಿಪ್ರಿಯರಿಗೆ ಶಾಕ್ ನೀಡಿದೆ.
ಡ್ರಿಂಕ್ಸ್ ಮಾಡಿ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪ
ಕೊಚ್ಚಿ ಪೊಲೀಸರು ವಿನಾಯಕ್‌ನನ್ನು ಅರೆಸ್ಟ್ ಮಾಡಿದ್ದಾರೆ. ಕೊಚ್ಚಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ವಿನಾಯಕನ್ ವಾಸಿಸುತ್ತಿದ್ದು ಅಲ್ಲಿ ಡ್ರಿಂಕ್ಸ್ ಮಾಡಿ ಏರುದನಿಯಲ್ಲಿ ಮಾತನಾಡಿ ನೆರೆಹೊರೆಯವರಿಗೆ ತೊಂದರೆ ಮಾಡುತ್ತಿದ್ದ ಕಾರಣ ಎಲ್ಲರೂ ಆತನ ವಿರುದ್ಧ ಎರ್ನಾಕುಲಂ ಟೌನ್ ನಾರ್ತ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆತನಿಗೆ ಕರೆ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಪೊಲೀಸ್ ಸ್ಟೇಷನ್‌ಗೆ ಬಂದ ವಿನಾಯಕನ್ ಕುಡಿದ ಮತ್ತಿನಲ್ಲಿ ಇದ್ದಿದ್ದರಿಂದ ಅಲ್ಲಿಯೂ ಕೂಡಾ ಗಲಾಟೆ ಮಾಡಿ ಪೊಲೀಸರ ಮೇಲೆ ಅರಚಾಡಿದ ಕಾರಣ ಆತನನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ಪರೀಕ್ಷೆಗೆ ರವಾನೆ
ಅರೆಸ್ಟ್ ಆಗುತ್ತಿದ್ದಂತೆ ವಿನಾಯಕ್‌ನನ್ನು ಸ್ಥಳೀಯ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಸದ್ಯಕ್ಕೆ ಆತ ನಮ್ಮ ಸುಪರ್ದಿಯಲ್ಲಿದ್ದು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣ ವಿನಾಯಕ್ ಅವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿನಾಯಕನ್ ಮೂಲತ: ಕೇರಳದವರು. ಅನೇಕ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆದರೆ ಆತನಿಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಜೈಲರ್ ಸಿನಿಮಾ. ಈ ಚಿತ್ರದಲ್ಲಿ ವಿನಾಯಕನ್ ವರ್ಮನ್ ಪಾತ್ರದಲ್ಲಿ ನಟಿಸಿದ್ದರು.
ನೆಲ್ಸನ್ ದಿಲೀಪ್ ನಿರ್ದೇಶನದ ಜೈಲರ್
ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ಕಲಾನಿಧಿ ಮಾರನ್ ನಿರ್ಮಿಸಿದ್ದು ನೆಲ್ಸನ್ ದಿಲೀಪ್ ಕುಮಾರ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದು ಕಾವಾಲಯ್ಯ ಹಾಡು ಬಹಳ ಫೇಮಸ್ ಆಗಿದೆ. ಚಿತ್ರದಲ್ಲಿ ರಜಿನಿಕಾಂತ್, ರಮ್ಯಕೃಷ್ಣನ್, ವಿನಾಯಕನ್, ತಮನ್ನಾ, ಸುನಿಲ್, ಯೋಗಿಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ. 200 ಕೋಟಿ ರೂಪಾಯಿ ಬಜೆಟ್‌ನಿಂದ ತಯಾರಾದ ಸಿನಿಮಾ 650 ಕೋಟಿ ರೂಪಾಯಿ ಲಾಭ ಮಾಡಿದೆ.