ಮಗ ಅದ್ವೈನನ್ನು ಬೆಳ್ಳಿತೆರೆಗೆ ಪರಿಚಯಿಸಿದ ರವಿಶಂಕರ್‌; ದುರ್ಗಿ ನಂತರ ಮತ್ತೆ ನಿರ್ದೇಶನಕ್ಕೆ ಇಳಿದ ಆರ್ಮುಗಂ
ಕನ್ನಡ ಸುದ್ದಿ  /  ಮನರಂಜನೆ  /  ಮಗ ಅದ್ವೈನನ್ನು ಬೆಳ್ಳಿತೆರೆಗೆ ಪರಿಚಯಿಸಿದ ರವಿಶಂಕರ್‌; ದುರ್ಗಿ ನಂತರ ಮತ್ತೆ ನಿರ್ದೇಶನಕ್ಕೆ ಇಳಿದ ಆರ್ಮುಗಂ

ಮಗ ಅದ್ವೈನನ್ನು ಬೆಳ್ಳಿತೆರೆಗೆ ಪರಿಚಯಿಸಿದ ರವಿಶಂಕರ್‌; ದುರ್ಗಿ ನಂತರ ಮತ್ತೆ ನಿರ್ದೇಶನಕ್ಕೆ ಇಳಿದ ಆರ್ಮುಗಂ

Ravishankar son Adhvay Shankar: ನಟ ರವಿಶಂಕರ್‌, ತಮ್ಮ ಮಗ ಅದ್ವೈನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಸುಬ್ರಹ್ಮಣ್ಯ ಪ್ಯಾನ್‌ ಇಂಡಿಯಾ ಸಿನಿಮಾದ ಮೋಷನ್ ಪೋಸ್ಟರನ್ನು ಚಿತ್ರತಂಡ ಸೋಮವಾರ ಬಿಡುಗಡೆ ಮಾಡಿದೆ.

ಸುಬ್ರಹ್ಮಣ್ಯ ಪ್ಯಾನ್‌ ಇಂಡಿಯಾ ಸಿನಿಮಾ ಮೂಲಕ ಮಗ ಅದ್ವೈನನ್ನು ಬೆಳ್ಳಿತೆರೆಗೆ ಪರಿಚಯಿಸಿದ ರವಿಶಂಕರ್‌
ಸುಬ್ರಹ್ಮಣ್ಯ ಪ್ಯಾನ್‌ ಇಂಡಿಯಾ ಸಿನಿಮಾ ಮೂಲಕ ಮಗ ಅದ್ವೈನನ್ನು ಬೆಳ್ಳಿತೆರೆಗೆ ಪರಿಚಯಿಸಿದ ರವಿಶಂಕರ್‌

Ravishankar son Adhvay Shankar: ಇದು ಆರ್ಮುಗಂ ಕೋಟೆ ಕಣೋ... ಕೆಂಪೇಗೌಡ ಚಿತ್ರದ ಈ ಡೈಲಾಗ್‌ ಸಿನಿಪ್ರಿಯರಿಗಂತೂ ಮೋಸ್ಟ್‌ ಫೇವರೆಟ್.‌ ಈ ಡೈಲಾಗ್‌ ಕೇಳುತ್ತಿದ್ದಂತೆ ನಮಗೆ ನೆನಪಾಗುವುದು ನಟ ರವಿಶಂಕರ್‌. ಅವರ ಎತ್ತರದ ನಿಲುವು, ಅವರ ಕಂಠ, ಮ್ಯಾನರಿಸಂ, ಡೈಲಾಗ್‌ ಡೆಲಿವರಿಗೆ ಸಿನಿಮಾಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ರವಿಶಂಕರ್‌ ತಮ್ಮ ಮಗನನ್ನು ಚಿತ್ರರಂಗಕ್ಕೆ ಕರೆತರುತ್ತಿದ್ದಾರೆ. ಮಗನ ಎಂಟ್ರಿಗೆ ವೇದಿಕೆ ಸಜ್ಜಾಗಿದೆ.

ಮಗನಿಗಾಗಿ ಮತ್ತೆ ನಿರ್ದೇಶನಕ್ಕೆ ಇಳಿದ ನಟ ರವಿಶಂಕರ್

80-90 ದಶಕದ ನಾಯಕರ ಅನೇಕ ನಟರ ಮಕ್ಕಳು ಇಂದು ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ರವಿಶಂಕರ್‌ 1979ರಲ್ಲಿ ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು. ಈಗ ಅವರು ನಟನಾಗಿ, ಕಂಠದಾನ ಕಲಾವಿದನಾಗಿ ಮಾತ್ರವಲ್ಲದೆ ನಿರ್ದೇಶಕ, ಸ್ಕ್ರಿಪ್ಟ್‌ ರೈಟರ್‌, ಸಿಂಗರ್‌ ಆಗಿಯೂ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. 2004ರಲ್ಲಿ ರವಿಶಂಕರ್‌ ಮಾಲಾಶ್ರೀ ಅಭಿನಯದ ದುರ್ಗಿ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಇದೀಗ ತಮ್ಮ ಮಗನಿಗಾಗಿ ಅವರು ಮತ್ತೆ ಡೈರೆಕ್ಷನ್‌ ಕ್ಯಾಪ್‌ ತೊಡುತ್ತಿದ್ದಾರೆ. ಅದ್ವೈ ರವಿಶಂಕರ್‌, 'ಸುಬ್ರಹ್ಮಣ್ಯ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.‌

ಸುಬ್ರಹ್ಮಣ್ಯ ಚಿತ್ರದ ಪೋಸ್ಟರ್‌ ಲಾಂಚ್‌

ಅಕ್ಟೋಬರ್‌ 23 ಆಯುಧಪೂಜೆಯಂದು ರವಿಶಂಕರ್‌, ಬೆಂಗಳೂರಿನಲ್ಲಿ ತಮ್ಮ ಮಗನ ಸಿನಿಮಾ ಪೋಸ್ಟರ್‌ ಲಾಂಚ್‌ ಮಾಡಿದ್ದಾರೆ. ಪೋಸ್ಟರ್‌ ಸಿನಿಪ್ರಿಯರ ಗಮನಸೆಳೆದಿದೆ. ಈ ಸಿನಿಮಾ ಪೋಸ್ಟರ್‌ ನೋಡಿದರೆ ಬಹುಶ; ಇದೊಂದು ಸೂಪರ್‌ ನ್ಯಾಚುರಲ್‌ ಸಿನಿಮಾ ಇರಬಹುದು ಎನ್ನಲಾಗುತ್ತಿದೆ. ಪೋಸ್ಟರ್‌ನಲ್ಲಿ ನವಿಲು, ಅದರ ಕೆಳಭಾಗ ದೇವಸ್ಥಾನ, ಅದರ ಮುಂಭಾಗ ನಾಯಕ ಬೆಂಕಿಯ ಪಂಜು ಹಿಡಿದು ನಿಂತಿದ್ದಾನೆ. ಪೋಸ್ಟರ್‌ನಲ್ಲಿ ಸೂಚಿಸಿರುವ ಪ್ರಕಾರ ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ. ಚಿತ್ರತಂಡ ಸಿನಿಮಾ ಮೋಷನ್‌ ಪೋಸ್ಟರ್‌ ಕೂಡಾ ರಿಲೀಸ್‌ ಮಾಡಿದೆ. ಚಿತ್ರವನ್ನು ತಿರುಮಲ ರೆಡ್ಡಿ ಹಾಗೂ ಅನಿಲ್‌ ಕದಿಯಲ್‌ ನಿರ್ಮಿಸಿದ್ದು ರವಿಶಂಕರ್‌ ಕಥೆ, ಚಿತ್ರಕಥೆ ಬರೆದು ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಸಂಗೀತವಿದೆ. ಅದ್ವೈ ಚೊಚ್ಚಲ ಚಿತ್ರಕ್ಕೆ ಸಿನಿಪ್ರಿಯರು ಶುಭ ಹಾರೈಸುತ್ತಿದ್ದಾರೆ.

ಬಾಲನಟನಾಗಿ ಚಿತ್ರರಂಗಕ್ಕೆ ಬಂದ ರವಿಶಂಕರ್

1979ರಲ್ಲಿ ತೆರೆ ಕಂಡ 'ಗೋರಿಂಟಾಕು' ಚಿತ್ರದ ಮೂಲಕ ರವಿಶಂಕರ್‌ ಬಾಲನಟನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. 1986ರಲ್ಲಿ 'ಆಲೋಚಿಂಚಡಿ' ಚಿತ್ರದ ಮೂಲಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದ ರವಿಶಂಕರ್‌ 'ಹಳ್ಳಿ ಕೃಷ್ಣ ಡೆಲ್ಲಿ ರಾಧಾ' ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಸದ್ಯಕ್ಕೆ ರವಿಶಂಕರ್‌ ಕನ್ನಡ, ತೆಲುಗು, ತಮಿಳು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ತೆರೆ ಕಂಡ ಭೋಲಾ ಶಂಕರ್‌ ಚಿತ್ರದಲ್ಲಿ ರವಿಶಂಕರ್‌ ನಟಿಸಿದ್ದರು. ಸದ್ಯಕ್ಕೆ ಅವರು ಮಗನ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ.‌

Whats_app_banner