logo
ಕನ್ನಡ ಸುದ್ದಿ  /  ಮನರಂಜನೆ  /  ಒಟಿಟಿಯಲ್ಲಿ 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ದೃಶ್ಯಂ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾ ನುನಕ್ಕುಳಿ

ಒಟಿಟಿಯಲ್ಲಿ 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ದೃಶ್ಯಂ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾ ನುನಕ್ಕುಳಿ

Rakshitha Sowmya HT Kannada

Sep 19, 2024 02:55 PM IST

google News

ಒಟಿಟಿಯಲ್ಲಿ 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ದೃಶ್ಯಂ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾ ನುನಕ್ಕುಳಿ

  • ಸೆಪ್ಟೆಂಬರ್‌ 13 ರಿಂದ ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಕಂಡ 'ನುನಕ್ಕುಳಿ' ಚಿತ್ರ 100 ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ರೆಕಾರ್ಡ್ ಬರೆದಿದೆ. ಚಿತ್ರವನ್ನು ದೃಶ್ಯಂ ಖ್ಯಾತಿಯ ಜೀತು ಜೋಸೆಫ್‌ ನಿರ್ದೇಶನ ಮಾಡಿದ್ದಾರೆ. 

ಒಟಿಟಿಯಲ್ಲಿ 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ದೃಶ್ಯಂ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾ ನುನಕ್ಕುಳಿ
ಒಟಿಟಿಯಲ್ಲಿ 100 ಮಿಲಿಯನ್ಸ್ ಸ್ಕ್ರೀಮಿಂಗ್ ಮಿನಿಟ್ ಕಂಡ ದೃಶ್ಯಂ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾ ನುನಕ್ಕುಳಿ

ಒಟಿಟಿ ವೇದಿಕೆ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಹೊಸ ಸಿನಿಮಾಗಳನ್ನು ಖರೀದಿಸಿ ಪ್ರಸಾರ ಮಾಡುವಲ್ಲಿ ಅನೇಕ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಕೂಡಾ ಶುರುವಾಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಜೀ5 ಮೊದಲಿನಿಂದಲೂ ಸದಭಿರುಚಿಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

100 ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್ ಕಂಡ ನುನಕ್ಕುಳಿ

ಸೆಪ್ಟೆಂಬರ್‌ 13 ರಿಂದ ಜೀ5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಕಂಡ 'ನುನಕ್ಕುಳಿ' ಚಿತ್ರ ದಾಖಲೆ ಬರೆದಿದೆ. 100 ಮಿಲಿಯನ್ಸ್ ಸ್ಟ್ರೀಮಿಂಗ್ ಮಿನಿಟ್ ಕಾಣುವ ಮೂಲಕ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಇತ್ತೀಚೆಗಷ್ಟೇ ಕೇರಳದ ನಡೆದ ಕ್ರೀಡಾ ಸಮಾರಂಭವೊಂದರಲ್ಲಿ ಅಲ್ಲಿ ಶಿಕ್ಷಣ ಮತ್ತು ಕಾರ್ಮಿಕ ಸಚಿವ ವಿ ಶಿವನ್‌ಕುಟ್ಟಿ ಅವರ ಸಮ್ಮುಖದಲ್ಲಿ ' ನುನಕ್ಕುಳಿ' ಚಿತ್ರದ 10,000 ಸ್ಕ್ವೇರ್ ಫೀಟ್ ಪೋಸ್ಟರನ್ನು ಜೀ5 ಅನಾವರಣ ಮಾಡಿದೆ. ಕ್ರೈಮ್ ಕಾಮಿಡಿ ಥ್ರಿಲ್ಲರ್ ಚಿತ್ರ 'ನುನಕುಳಿ' ಮಲಯಾಳಂ ಮಾತ್ರವಲ್ಲ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿಯೂ ಸ್ಟ್ರೀಮ್‌ ಆಗುತ್ತಿದೆ. ನುನಕ್ಕುಳಿಯಲ್ಲಿ ಬೇಸಿಲ್ ಜೋಸೆಫ್, ಗ್ರೇಸ್ ಆಂಟೋನಿ, ಸಿದ್ದಿಕಿ, ಬೈಜು ಸಂತೋಷ್, ನಿಖಿಲಾ ವಿಮಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ದೃಶ್ಯಂ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಜಿತು ಜೋಸೆಫ್ ನುನಕುಳಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಆಗಸ್ಟ್‌ 15 ರಂದು ಥಿಯೇಟರ್‌ನಲ್ಲಿ ತೆರೆ ಕಂಡಿದ್ದ ಸಿನಿಮಾ

ಈ ಸಿನಿಮಾ ಆಗಸ್ಟ್‌ 15 ರಂದು ಚಿತ್ರಮಂದಿರದಲ್ಲಿ ರಿಲೀಸ್‌ ಆಗಿತ್ತು. ಕೇವಲ 10 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಇದುವರೆಗೂ 20 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಸ್ಟಾರ್‌ ನಿರ್ದೇಶಕ ಜೀತು ಜೋಸೆಫ್‌ ಸಿನಿಮಾಗಳಿಗೆ ಒಟಿಟಿಯಲ್ಲಿ ಇರುವ ಕ್ರೇಜ್‌ ದೃಷ್ಟಿಯಲ್ಲಿಟ್ಟುಕೊಂಡು ಥಿಯೇಟರ್‌ಗೆ ಬರುತ್ತಿದ್ದಂತೆ ಜಿ 5, ಈ ನುನಕ್ಕುಳಿ ಚಿತ್ರವನ್ನು ಖರೀದಿಸಿದೆ.

ಇಬಿ ಜಕಾರಿಯಾ ಒಬ್ಬ ಬಿಸ್ನೆಸ್‌ ಮ್ಯಾನ್‌, ತಂದೆ ನಿಧನದ ನಂತರ ಈತನೇ ಮನೆಯ ಎಲ್ಲಾ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ. ಒಮ್ಮೆ ಐಟಿ ಅಧಿಕಾರಿಗಳು ಇಬಿ ಮನೆಯನ್ನು ದಾಳಿ ಮಾಡುತ್ತಾರೆ. ಬ್ಲಾಕ್‌ ಮನಿ ಜೊತೆಗೆ ಆತನ ಪರ್ಸನಲ್‌ ಲ್ಯಾಪ್‌ ಟಾಪ್‌ ಕೂಡಾ ವಶ ಪಡಿಸಿಕೊಳ್ಳುತ್ತಾರೆ. ಆದರೆ ಆ ಲ್ಯಾಪ್‌ಟಾಪ್‌ನಲ್ಲಿ ಪತ್ನಿ ರಿಮಿ ಜೊತೆ ಇಬಿ ರೊಮಾನ್ಸ್‌ ವಿಡಿಯೋ ಇರುತ್ತದೆ. ಈ ವಿಡಿಯೋ ಯಾರಿಗೂ ಕಾಣದಂತೆ, ಹೇಗಾದರೂ ಮಾಡಿ ಆ ಲ್ಯಾಪ್‌ಟಾಪನ್ನು ಐಟಿ ಅಧಿಕಾರಿಗಳಿಂದ ವಾಪಸ್‌ ಪಡೆಯಬೇಕು ಎಂದು ಇಬಿ ಪ್ಲ್ಯಾನ್‌ ಮಾಡುತ್ತಾನೆ. ಆ ಲ್ಯಾಪ್‌ಟಾಪ್‌ ಪಡೆಯಲು ಸಲುವಾಗಿ ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡುತ್ತಾನೆ. ಮುಂದೆ ಏನಾಗುತ್ತದೆ? ಲ್ಯಾಪ್‌ಟಾಪ್‌ ಇಬಿಗೆ ವಾಪಸ್‌ ದೊರೆಯುವುದಾ ಅನ್ನೋದು ನುನಕ್ಕುಳಿ ಸಿನಿಮಾ ಕಥೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ