logo
ಕನ್ನಡ ಸುದ್ದಿ  /  ಮನರಂಜನೆ  /  Meena Ganesh: ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ ನಿಧನ; ಕರುಮಡಿಕುಟ್ಟನ್ ತಾರೆ ಇನ್ನು ನೆನಪು

Meena Ganesh: ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ ನಿಧನ; ಕರುಮಡಿಕುಟ್ಟನ್ ತಾರೆ ಇನ್ನು ನೆನಪು

Praveen Chandra B HT Kannada

Dec 19, 2024 11:52 AM IST

google News

Meena Ganesh: ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ ನಿಧನ

    • Meena Ganesh passes away: ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದ ಹಿರಿಯ ನಟಿ ಮೀನಾ ಗಣೇಶ್‌ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ತಮ್ಮ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ ಖ್ಯಾತಿ ಇವರದ್ದು.
Meena Ganesh: ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ ನಿಧನ
Meena Ganesh: ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ ನಿಧನ

Meena Ganesh passes away: ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಹಲವು ಸಿನಿಮಾ, ನಾಟಕ, ಸೀರಿಯಲ್‌ಗಳಲ್ಲಿ ನಟಿಸಿರುವ ಹಿರಿಯ ನಟಿ ಮೀನಾ ಗಣೇಶ್‌ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಇವರು ಇಂದು (ಡಿಸೆಂಬರ್ 19) ಕೇರಳದ ಪಾಲಕ್ಕಾಡ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ವರದಿಗಳು ತಿಳಿಸಿವೆ. ತಮ್ಮ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ ಖ್ಯಾತಿ ಇವರದ್ದು.

ಮೀನಾ ಗಣೇಶ್‌ ಅವರು ಕರುಮಡಿಕುಟ್ಟನ್ ಮತ್ತು ನಂದನಂ ಚಿತ್ರಗಳಲ್ಲಿನ ತಮ್ಮ ನಟನೆಗೆ ಹೆಸರುವಾಸಿಯಾಗಿದ್ದಾರೆ. ಹಿರಿಯ ನಟ ಕೇರಳದ ಪಾಲಕ್ಕಾಡ್‌ನ ಶೋರನೂರ್‌ನಲ್ಲಿರುವ ಆಸ್ಪತ್ರೆಯಲ್ಲಿ ರಕ್ತದೊತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲವು ವರದಿಗಳ ಪ್ರಕಾರ ಇವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದಿವೆ. ವಯೋಸಹಜ ಸಮಸ್ಯೆಗಳಿಂದ ಮೀನಾ ಗಣೇಶ್ ನಿಧನರಾದರು ಎಂದು ಕೆಲವು ವರದಿಗು ತಿಳಿಸಿವೆ. ಗುರುವಾರ ನಸುಕಿನ 1.20ರ ಸುಮಾರಿಗೆ ಆಕೆ ಕೊನೆಯುಸಿರೆಳೆದಿದ್ದಾರೆ. ಗುರುವಾರ ಸಂಜೆ 4 ಗಂಟೆಗೆ ಶೋರನೂರಿನಲ್ಲಿ ಇವರ ಅಂತ್ಯಕ್ರಿಯೆ ನಡೆಯಲಿದೆ.

ಮೀನಾ ಗಣೇಶ್ ಅವರು ಮಲಯಾಳಂ ಸಿನಿಮಾ ಮತ್ತು ಕಿರುತೆರೆಯಲ್ಲಿ ಪರಿಚಿತ ಮುಖ. 1976ರ ಮಣಿಮುಝಕ್ಕಂ ಸಿನಿಮಾದ ಮೂಲಕ ಸಿನಿಜಗತ್ತಿಗೆ ಕಾಲಿಟ್ಟರು. ಪಿಎ ಬ್ಯಾಕರ್ ನಿರ್ದೇಶನದ ಈ ಸಿನಿಮಾದಲ್ಲಿ ಹರಿಕೇಶನ್ ತಂಪಿ, ವೀರನ್ ಜಾನ್ಸನ್, ಸಂಕರಾದಿ, ಸರಿತಾ, ಊರ್ಮಿಳಾ, ವಾಣಿ, ಸಿರಿಲ್ ಪಿ ಜೇಕಬ್, ಚಾರುಲತಾ, ಶಾಂತಕುಮಾರಿ, ಶ್ರೀನಿವಾಸನ್ ಮತ್ತು ಇತರರು ನಟಿಸಿದ್ದಾರೆ.

1970ರ ದಶಕದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಮೀನಾ ಗಣೇಶ್‌ ಪ್ರಧಾನವಾಗಿ 1990ರ ದಶಕ ಮತ್ತು 2000ರ ದಶಕದಲ್ಲಿ ಚಿತ್ರರಂಗದಲ್ಲ ಹೆಚ್ಚಿನ ಖ್ಯಾತಿ ಪಡೆದರು. ಕೊನೆಯದಾಗಿ 2016ರ ಪತಿರಕ್ಕಟ್ಟು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಮಾಯಣಂ, ಕಲ್ಕತ್ತಾ ಹಾಸ್ಪಿಟಲ್, ಕಾರುಣ್ಯಂ, ಮಿನ್ನುಕೆಟ್ಟು ಮುಂತಾದ ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

ಮೀನಾ ಗಣೇಶ್‌ ನಟಿಸಿರುವ ಕೆಲವು ಸಿನಿಮಾಗಳು

  • ಮಣಿಮುಝಕ್ಕಂ
  • ಮಂದನ್ಮಾರ್ ಲೋಂಡನಿಲ್
  • ಪ್ರಶ್ನಮ್ ಗುರುತರಮ್
  • ಭಗವಾನ್
  • ನಖಕ್ಷತಂಗಳ್
  • ಮುಖ ಚಿತ್ರಂ
  • ತಾಲಾಯನಮಂತ್ರಂ
  • ಉತ್ಸವಮೇಳಂ
  • ವಲಯಮ್
  • ಪೊನ್ನರಾಮತೂಟ್ಟತೆ ರಾಜಾವು
  • ಸ್ನೇಹಸಾಗರಮ್
  • ಗೋಲಾಂತರಾವರ್ತ
  • ಭೂಮಿಗೀತಂ
  • ಸಾಕ್ಷಲ್ ಶ್ರೀಮಾನ್ ಚಾತುನ್ನಿ
  • ವೆಂಕಲಂ
  • ಮಣಿಚಿತ್ರತಜ್ಜು
  • ಪಿಂಗಾಮಿ
  • ಪಿಡಕ್ಕೋಜಿ ಕೂವುನ್ನ ನೂಟ್ಟಂದು
  • ಸಂತಾನಗೋಪಾಲಂ
  • ಅಚ್ಚನ್ ಕೊಂಪತ್ತು ಅಮ್ಮ ವರಂಪತ್ತು
  • ಅವಿಟ್ಟಂ ತಿರುನಾಳ್ ಆರೋಗ್ಯ ಶ್ರೀಮಾನ್
  • ಕಕ್ಕಕುಂ ಪೂಚಕ್ಕುಂ ಕಲ್ಯಾಣಂ
  • ಸಿಂಧೂರ ರೇಖಾ
  • ಕಜಕಂ
  • ಈ ಪೂಜಯುಂ ಕಡನ್ನು
  • ಉದ್ಯಾನಪಾಲಕ
  • ಕಣಕ್ಕಿನಾವು
  • ಕಲ್ಯಾಣ ಸೌಗಂಧಿಕಂ
  • ಕಲಿಯುಂಜಲ್
  • ಅಸುರವಂಶ
  • ಮಾನಸಂ
  • ಸಯಾಮಿ ಇರಟ್ಟಕಲ್
  • ಇಕ್ಕರೆಯನೆಂತೆ ಮಾನಸಂ
  • ಋಷ್ಯಶೃಂಗನ್
  • ಕುಡಮ್ಟ್ಟಂ
  • ಶೋಭನಂ
  • ಪಂಚಲೋಹಮ್
  • ಶ್ರೀಕೃಷ್ಣಪುರತೇ ನಕ್ಷತ್ರತಿಲಕ್ಕಮ್
  • ಮೀನತಿಲ್ ತಾಳಿಕೆಟ್ಟು
  • ರಕ್ತಸಾಕ್ಷಿಕಲ್ ಜಿಂದಾಬಾದ್
  • ತಿರಕಲ್ಕಪ್ಪುರಂ
  • ಮಂಜುಕಳವುಂ ಕಝಿಂಜು
  • ವಸಂತಿಯುಂ ಲಕ್ಷ್ಮಿಯುಂ ಪಿನ್ನೆ ಂಜಾನುಂ
  • ನನ್ನ ಪ್ರೀತಿಯ ಕರಡಿ
  • ಸ್ಪರ್ಶಮ್
  • ವ್ಯಾಲಿಯೆಟ್ಟಾ
  • ಶಯನಮ್
  • ಅಪ್ಪ ಸಾಹಿಬ್
  • ಆನಮುತ್ತತೆ ಅಂಗಲಮಾರ್
  • ಕನ್ನಡಕಡವತು
  • ಪುನರಾಧಿವಾಸಂ
  • ಭದ್ರ
  • ಮಜಮೇಘ ಪ್ರವುಗಳು
  • ಚಿತ್ರತೂನುಕಲ್
  • ಆರಂ ಜಾಲಕಂ
  • ವೆಝಂಬಲ್
  • ಮನೆ ಮಾಲೀಕ
  • ಈ ನಾಡು ಇನ್ನಳೆ ವರೇ
  • ಕರುಮಾಡಿಕುಟ್ಟನ್
  • ಮೀಸ ಮಾಧವನ್
  • ನಂದನಂ
  • ಉತ್ತರಾ
  • ವಲ್ಕನ್ನಡಿ
  • ಮಿಝಿ ರಾಂಡಿಲುಮ್
  • ಯುದ್ಧ ಮತ್ತು ಪ್ರೀತಿ
  • ಸದಾನಂದನ್ತೇ ಸಮಯಮ್
  • ಕಲಿಯೋದಂ
  • ಸಿಐ ಮಹದೇವನ್ 5 ಆದಿ 4 ಇಂಚು
  • ಅಮ್ಮಕ್ಕಿಳಿಕೂಡು
  • ಸರಿ ಚಾಕೊ ಕೊಚ್ಚಿನ್ ಮುಂಬೈ
  • ಸರಳ
  • ನೋಂಪರಂ
  • ಮಾಣಿಕ್ಯನ್
  • ಚಂದ್ರೋತ್ಸವಂ
  • ಜಯಮ್
  • ತಾವಲಂ
  • ಮೋಹಿತಮ್
  • ಸಮಸ್ತ ಕೇರಳಂ ಪಿಒ
  • ಕಪ್ಪು ಡೇಲಿಯಾ
  • ಸ್ವಂತಂ ಭಾರ್ಯಾ ಜಿಂದಾಬಾದ್
  • ಇವೆದಂ ಸ್ವರ್ಗಮನು
  • ಸನ್ಮಾನಸುಳ್ಳವನ್ ಅಪ್ಪುಕುಟ್ಟನ್
  • ನಂಧುನಿ
  • ಮನುಷ್ಯಮೃಗಂ
  • ಆರೇಂಜ್‌
  • ಡಾಕ್ಟರ್ ಇನ್ನೋಸೆಂಟ್ ಆನು
  • ಎಝಂ ಸೂರ್ಯನ್
  • ನುಜ್ರತ್
  • ಸೆಲ್ಯುಲಾಯ್ಡ್
  • ಒನ್ನುಂ ಮಿಂಡತೆ
  • ಇತಿನುಮಪ್ಪುರಂ
  • ಮರಿಯಮ್ ಮುಕ್ಕು
  • ದಿ ರಿಪೋರ್ಟರ್‌
  • ನೀ-ನಾ
  • ಕೊತರನ್ ಒರು ಮಲಯಾಳಂ ಸಿನಿಮಾ
  • ಪತಿರಕ್ಕಟ್ಟು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ