logo
ಕನ್ನಡ ಸುದ್ದಿ  /  ಮನರಂಜನೆ  /  ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ನಿತ್ಯಾ ಮೆನನ್, ಮಾನಸಿ ಪರೇಖ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ನಿತ್ಯಾ ಮೆನನ್, ಮಾನಸಿ ಪರೇಖ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ

Jayaraj HT Kannada

Aug 16, 2024 05:36 PM IST

google News

ನಿತ್ಯಾ ಮೆನನ್, ಮಾನಸಿ ಪರೇಖ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ

    • 70th National Film Awards: ತಮಿಳು ಚಿತ್ರ ತಿರುಚಿತ್ರಂಬಲಂ ಚಿತ್ರದಲ್ಲಿನ ನಟನೆಗಾಗಿ ನಿತ್ಯಾ ಮೆನನ್, ಗುಜರಾತಿ ಚಲನಚಿತ್ರ ಕಚ್ ಎಕ್ಸ್‌ಪ್ರೆಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಮಾನಸಿ ಅವಾರ್ಡ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
ನಿತ್ಯಾ ಮೆನನ್, ಮಾನಸಿ ಪರೇಖ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ
ನಿತ್ಯಾ ಮೆನನ್, ಮಾನಸಿ ಪರೇಖ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ

ಬಹು ನಿರೀಕ್ಷಿತ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (70th National Film Awards) ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಇಬ್ಬರು ನಟಿಯರು ಹಂಚಿಕೊಂಡಿದ್ದಾರೆ. ಬಹುಭಾಷಾ ನಟಿ ನಿತ್ಯಾ ಮೆನನ್ (Nithya Menen) ಮತ್ತು ಮಾನಸಿ ಪರೇಖ್ (Manasi Parekh) ಜಂಟಿಯಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ತಮಿಳು ಚಿತ್ರ ತಿರುಚಿತ್ರಂಬಲಂ ಚಿತ್ರದಲ್ಲಿನ ನಟನೆಗಾಗಿ ನಿತ್ಯಾ ಪ್ರಶಸ್ತಿ ಪಡೆದಿದ್ದು, ಗುಜರಾತಿ ಚಲನಚಿತ್ರ ಕಚ್ ಎಕ್ಸ್‌ಪ್ರೆಸ್‌ (Kutch Express) ಚಿತ್ರದಲ್ಲಿನ ಅಭಿನಯಕ್ಕಾಗಿ ಮಾನಸಿ ಅವಾರ್ಡ್‌ ವಿನ್‌ ಆಗಿದ್ದಾರೆ.

ಮಿತ್ರನ್ ಜವಾಹರ್ ನಿರ್ದೇಶನದ ತಿರುಚಿತ್ರಂಬಲಂ ಚಿತ್ರ 2022ರಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಧನುಷ್ ಮತ್ತು ನಿತ್ಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರಿಬ್ಬರೂ ಉತ್ತಮ ಸ್ನೇಹಿತರು (ತಿರು ಮತ್ತು ಶೋಬನಾ). ಶೋಬನಾ ಪಾತ್ರದಲ್ಲಿ ನಿತ್ಯಾ ನಟನೆ ಅಭಿಮಾನಿಗಳ ಹೃದಯ ಗೆದ್ದಿತ್ತು.

ಮಾನಸಿ ಪರೇಖ್ ಅವರ ಕಚ್ ಎಕ್ಸ್‌ಪ್ರೆಸ್ ಚಿತ್ರವು 2023ರ ಜನವರಿ 6 ರಂದು ಬಿಡುಗಡೆಯಾಯಿತು. ಭಾವನೆಗಳ ಗುಚ್ಛದಿಂದ ಅಲಂಕೃತವಾಗಿರುವ ಕಚ್ ಎಕ್ಸ್‌ಪ್ರೆಸ್ ಚಿತ್ರವು ಸುಂದರ ಕಥಾಹಂದರ, ಸಂಭಾಷಣೆ ಹಾಗೂ ದೃಶ್ಯಗಳ ಮಿಶ್ರಣವಾಗಿದೆ. ಸಾವಿರ ಮೈಲುಗಳ ಪ್ರಯಾಣವು ಒಂದು ಹೆಜ್ಜೆಯಿಂದ ಹೇಗೆ ಆರಂಭವಾಗುತ್ತದೆ ಎಂಬುದೇ ಚಿತ್ರದ ಸಾರಾಂಶ. ಕೌಟುಂಬಿಕ ಚಿತ್ರದಲ್ಲಿ ಮೋಂಘಿ ಎಂಬ ಸರಳ ಗೃಹಿಣಿಯಾಗಿ ಮಾನಸಿ ಪರೇಖ್ ಅಭಿನಯಿಸಿ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಾನಸಿ ಪಾಲಿಗೆ ಇದು ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಾಗಿದೆ.

ಒಟಿಟಿ ಮೂಲಕ ತಿರುಚಿತ್ರಂಬಲಂ ಮತ್ತು ಕಚ್ ಎಕ್ಸ್‌ಪ್ರೆಸ್ ಚಿತ್ರ ನೋಡುವುದು ಹೇಗೆ?

2022ರಲ್ಲಿ ಬಿಡುಗಡೆಯಾದ ತಮಿಳು ಬ್ಲಾಕ್‌ಬಸ್ಟರ್‌ ಚಿತ್ರ ತಿರುಚಿತ್ರಂಬಲಂ ಪ್ರಸ್ತುತ ಸನ್ NXT ಮತ್ತು OTTplay ಪ್ರೀಮಿಯಂನಲ್ಲಿ ಲಭ್ಯವಿದೆ. ಇದೇ ವೇಳೆ ಕಚ್ ಎಕ್ಸ್‌ಪ್ರೆಸ್ ಚಿತ್ರವು ಶೆಮರೂಮಿ (ShemarooMe) ಮತ್ತು OTTplay ಪ್ರೀಮಿಯಂನಲ್ಲಿ ನೋಡಬಹುದು.

ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿಯಲ್ಲಿ ಸ್ಯಾಂಡಲ್‌ವುಡ್‌ ಬಂಪರ್‌ ಬಾರಿಸಿದೆ. ಕನ್ನಡದ ಕಾಂತಾರ ಎಲ್ಲ ಭಾಷೆಗಳನ್ನು ಮೀರಿಸಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದೇ ಚಿತ್ರದ ನಟನೆಗೆ ನಟ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಇತರ ಪ್ರಶಸ್ತಿ ವಿಜೇತರ ವಿವರ

  • ಅತ್ಯುತ್ತಮ ಚಲನಚಿತ್ರ - ಆಟಂ (ಮಲಯಾಳಂ)
  • ಅತ್ಯುತ್ತಮ ಮನರಂಜನಾ ಚಲನಚಿತ್ರ ((Wholesome Entertainment) ಕಾಂತಾರ
  • ಅತ್ಯುತ್ತಮ ನಟ - ರಿಷಬ್ ಶೆಟ್ಟಿ (ಕಾಂತಾರ)
  • ಅತ್ಯುತ್ತಮ ನಿರ್ದೇಶಕ - ಸೂರಜ್ ಬರ್ಜಾತ್ಯಾ (ಊಂಚಾಯ್‌)
  • ಅತ್ಯುತ್ತಮ ಪೋಷಕ ನಟಿ - ನೀನಾ ಗುಪ್ತಾ (ಊಂಚಾಯ್‌)
  • ಅತ್ಯುತ್ತಮ ಪೋಷಕ ನಟ - ಪವನ್ ಮಲ್ಹೋತ್ರಾ (ಫೌಜಾ-ಹರಿಯಾಣ್ವಿ)
  • ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಬಾಂಬೆ ಜಯಶ್ರೀ, ಸೌದಿ ವೆಲಕ್ಕಾ CC.225/2009
  • ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ)
  • ಅತ್ಯುತ್ತಮ ಕನ್ನಡ ಚಿತ್ರ - ಕೆಜಿಎಫ್: ಚಾಪ್ಟರ್‌ 2
  • ಅತ್ಯುತ್ತಮ ತೆಲುಗು ಚಿತ್ರ - ಕಾರ್ತಿಕೇಯ 2
  • ಅತ್ಯುತ್ತಮ ತಮಿಳು ಚಿತ್ರ - ಪೊನ್ನಿಯಿನ್ ಸೆಲ್ವನ್ - ಭಾಗ 1
  • ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೆಲಕ್ಕಾ CC.225/2009
  • ಅತ್ಯುತ್ತಮ ಹಿಂದಿ ಚಿತ್ರ - ಗುಲ್ಮೊಹರ್

ಇದನ್ನೂ ಓದಿ | ಬರೀ ಕೆಜಿಎಫ್‌, ಕಾಂತಾರ ಮಾತ್ರವಲ್ಲ.. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಕನ್ನಡಕ್ಕೆ ಸಿಕ್ಕಿವೆ ಇನ್ನೂ ಮೂರು ಪ್ರಶಸ್ತಿ

 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ