National Film Awards 2024: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ, ನಟಿ, ನಿರ್ದೇಶಕ ಯಾರು? ಇಲ್ಲಿದೆ ವಿಜೇತರ ಪೂರ್ಣ ಪಟ್ಟಿ
ಕನ್ನಡ ಸುದ್ದಿ  /  ಮನರಂಜನೆ  /  National Film Awards 2024: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ, ನಟಿ, ನಿರ್ದೇಶಕ ಯಾರು? ಇಲ್ಲಿದೆ ವಿಜೇತರ ಪೂರ್ಣ ಪಟ್ಟಿ

National Film Awards 2024: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ, ನಟಿ, ನಿರ್ದೇಶಕ ಯಾರು? ಇಲ್ಲಿದೆ ವಿಜೇತರ ಪೂರ್ಣ ಪಟ್ಟಿ

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. ಆ ಪೈಕಿ ಈ ಸಲದ ರಾಷ್ಟ್ರ ಪ್ರಶಸ್ತಿಯಲ್ಲಿ ಭಾರತದ ಯಾವೆಲ್ಲ ಸಿನಿಮಾಗಳಿಗೆ ಅವಾರ್ಡ್‌ ಸಿಕ್ಕಿದೆ? ಅತ್ಯುತ್ತಮ ಸಿನಿಮಾದಿಂದ ಹಿಡಿದು, ಅತ್ಯುತ್ತಮ ನಿರ್ದೇಶಕ ಮತ್ತು ಪ್ರಾದೇಶಿಕ ಸಿನಿಮಾಗಳ ವಿಜೇತರ ವಿವರ ಸಹಿತ ಪಟ್ಟಿ ಇಲ್ಲಿದೆ.

National Film Awards 2024: ಕಾಂತಾರ, ಕೆಜಿಎಫ್‌ ಜತೆಗೆ ಬೇರೆ ಯಾವೆಲ್ಲ ಚಿತ್ರಗಳಿಗೆ, ಯಾರಿಗೆಲ್ಲ ಸಿಕ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ?
National Film Awards 2024: ಕಾಂತಾರ, ಕೆಜಿಎಫ್‌ ಜತೆಗೆ ಬೇರೆ ಯಾವೆಲ್ಲ ಚಿತ್ರಗಳಿಗೆ, ಯಾರಿಗೆಲ್ಲ ಸಿಕ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ?

National Film Awards 2024: 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟವಾಗಿದೆ. ಈ ಸಲದ ಪ್ರಶಸ್ತಿಯಲ್ಲಿ ಕನ್ನಡದ ಕಾಂತಾರ ಎಲ್ಲ ಭಾಷೆಗಳನ್ನು ಮೀರಿ, ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಅದೇ ರೀತಿ ಇದೇ ಚಿತ್ರದ ನಟನೆಗೆ ನಟ ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅತ್ಯುತ್ತಮ ಕನ್ನಡ ಸಿನಿಮಾ ರಾಷ್ಟ್ರ ಪ್ರಶಸ್ತಿ ವಿಭಾಗದಲ್ಲಿ ನಟ ಯಶ್‌ ಅವರ ಕೆಜಿಎಫ್‌ ಚಾಪ್ಟರ್‌ 2 ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಹಾಗಾದರೆ, ಪರ ಭಾಷೆಯ ಜತೆಗೆ ಕನ್ನಡಕ್ಕೆ ಈ ಸಲ ಸಿಕ್ಕ ಪ್ರಶಸ್ತಿಗಳೆಷ್ಟು? ಇಲ್ಲಿದೆ ನೋಡಿ ಲಿಸ್ಟ್‌.

70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಅತ್ಯುತ್ತಮ ಚಲನಚಿತ್ರ - ಆಟಂ (ಮಲಯಾಳಂ)

ಅತ್ಯುತ್ತಮ ಮನರಂಜನಾ ಚಲನಚಿತ್ರ ((Wholesome Entertainment) ಕಾಂತಾರ

ಅತ್ಯುತ್ತಮ ನಟ - ರಿಷಬ್ ಶೆಟ್ಟಿ (ಕಾಂತಾರ) 

ಅತ್ಯುತ್ತಮ ನಟಿ - ನಿತ್ಯಾ ಮೆನೆನ್ (ತಿರುಚಿತ್ರಬಲಂ-ತಮಿಳು) ಮತ್ತು ಮಾನಸಿ ಪರೇಖ್ (ಕಚ್ ಎಕ್ಸ್​ಪ್ರೆಸ್ -ಗುಜರಾತಿ) 

ಅತ್ಯುತ್ತಮ ನಿರ್ದೇಶಕ - ಸೂರಜ್ ಬರ್ಜಾತ್ಯಾ (ಊಂಚಾಯ್‌)

ಅತ್ಯುತ್ತಮ ಪೋಷಕ ನಟಿ - ನೀನಾ ಗುಪ್ತಾ (ಊಂಚಾಯ್‌)

ಅತ್ಯುತ್ತಮ ಪೋಷಕ ನಟ - ಪವನ್ ಮಲ್ಹೋತ್ರಾ (ಫೌಜಾ-ಹರಿಯಾಣ್ವಿ)

 

ಅತ್ಯುತ್ತಮ ಪ್ರಾದೇಶಿಕ ಸಿನಿಮಾ ವಿಭಾಗ

ಅತ್ಯುತ್ತಮ ಕನ್ನಡ ಚಿತ್ರ - ಕೆಜಿಎಫ್: ಚಾಪ್ಟರ್‌ 2

ಅತ್ಯುತ್ತಮ ತೆಲುಗು ಚಿತ್ರ - ಕಾರ್ತಿಕೇಯ 2

ಅತ್ಯುತ್ತಮ ತಮಿಳು ಚಿತ್ರ - ಪೊನ್ನಿಯಿನ್ ಸೆಲ್ವನ್ - ಭಾಗ 1

ಅತ್ಯುತ್ತಮ ಪಂಜಾಬಿ ಚಿತ್ರ - ಬಾಘಿ ದಿ ಧೀ

ಅತ್ಯುತ್ತಮ ಒಡಿಯಾ ಚಿತ್ರ - ದಮನ್

ಅತ್ಯುತ್ತಮ ಮಲಯಾಳಂ ಚಿತ್ರ – ಸೌದಿ ವೆಲಕ್ಕಾ CC.225/2009

ಅತ್ಯುತ್ತಮ ಮರಾಠಿ ಚಿತ್ರ - ವಾಲ್ವಿ

ಅತ್ಯುತ್ತಮ ಹಿಂದಿ ಚಿತ್ರ - ಗುಲ್ಮೊಹರ್

ಅತ್ಯುತ್ತಮ ಬೆಂಗಾಲಿ ಚಿತ್ರ: ಕಬೇರಿ ಅಂತರ್ಧನ (ಕೌಶಿಕ್ ಗಂಗೂಲಿ)

ಅತ್ಯುತ್ತಮ ಅಸ್ಸಾಮಿ ಚಿತ್ರ: ಎಮುತಿ ಮುತಿ (ಕುಲನಂದಿ)

 

ಅತ್ಯುತ್ತಮ ಸಾಹಸ ನಿರ್ದೇಶನ - ಕೆಜಿಎಫ್: ಚಾಪ್ಟರ್‌ 2

ಅತ್ಯುತ್ತಮ ನೃತ್ಯ ಸಂಯೋಜನೆ - ಜಾನಿ ಮಾಸ್ಟರ್-ಸತೀಶ್ (ತಿರುಚಿತ್ರಬಲಂ ತಮಿಳು)

ಅತ್ಯುತ್ತಮ ಸಾಹಿತ್ಯ - ನೌಶದ್ ಸಾದರ್ ಖಾನ್ (ಫೌಜಾ-ಹರಿಯಾಣ್ವಿ)

ಅತ್ಯುತ್ತಮ ಸಂಗೀತ ನಿರ್ದೇಶಕ - ಪ್ರೀತಮ್ (ಹಾಡುಗಳು), ಎಆರ್ ರೆಹಮಾನ್ (ಹಿನ್ನೆಲೆ ಸಂಗೀತ)

ಅತ್ಯುತ್ತಮ ಮೇಕಪ್ - ಸೋಮನಾಥ್ ಕುಂಡು (ಅಪರಾಜಿತೋ- ಬೆಂಗಾಲಿ) 

ಅತ್ಯುತ್ತಮ ಕಾಸ್ಟ್ಯೂಮ್ಸ್‌ - ನಿಕ್ಕಿ ಜೋಶಿ (ಕಚ್ ಎಕ್ಸ್​ಪ್ರೆಸ್-ಗುಜರಾತಿ)

ಅತ್ಯುತ್ತಮ ನಿರ್ಮಾಣ ವಿನ್ಯಾಸ - ಆನಂದ್ ಅಧ್ಯಾಯ (ಅಪರಾಜಿತೊ-ಬೆಂಗಾಲಿ)

ಅತ್ಯುತ್ತಮ ಸಂಕಲನ - ಮಹೇಶ್ ಭುವನೇಂದ್ (ಆಟಂ-ಮಲಯಾಳಂ)

ಅತ್ಯುತ್ತಮ ಧ್ವನಿ ವಿನ್ಯಾಸ - ಆನಂದ್ ಕೃಷ್ಣಮೂರ್ತಿ (ಪೊನ್ನಿಯಿನ್ ಸೆಲ್ವನ್ 1-ತಮಿಳು)

ಅತ್ಯುತ್ತಮ ಚಿತ್ರಕಥೆ - ಆನಂದ್ ಎಕರ್ಶಿ (ಆಟಂ-ಮಲಯಾಳಂ)

ಅತ್ಯುತ್ತಮ ಸಂಭಾಷಣೆ - ಅರ್ಪಿತಾ-ರಾಹುಲ್ (ಗುಲ್​ಮೊಹರ್-ಹಿಂದಿ)

ಅತ್ಯುತ್ತಮ ಛಾಯಾಗ್ರಹಣ - ರವಿ ವರ್ಮ (ಪೊನ್ನಿಯಿನ್ ಸೆಲ್ವನ್ 1-ತಮಿಳು)

ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ – ಬಾಂಬೆ ಜಯಶ್ರೀ, ಸೌದಿ ವೆಲಕ್ಕಾ CC.225/2009

ಅತ್ಯುತ್ತಮ ಪುರುಷ ಹಿನ್ನೆಲೆ ಗಾಯಕ: ಅರಿಜಿತ್ ಸಿಂಗ್ (ಬ್ರಹ್ಮಾಸ್ತ್ರ) 

ಅತ್ಯುತ್ತಮ ಬಾಲನಟ: ಶ್ರೀಪತ್ (ಮಲ್ಲಿಕಾಪುರಂ-ಮಲಯಾಳಂ)

ಅತ್ಯುತ್ತಮ ಹೊಸ ನಿರ್ದೇಶಕ: ಪ್ರಮೋದ್ (ಫೌಜ-ಹರಿಯಾಣ್ವಿ)

 

Special Mention ಅವಾರ್ಡ್ಸ್‌

ಗುಲ್ಮೊಹರ್ (ಹಿಂದಿ)

ನಟ: ಮನೋಜ್ ಬಾಜಪೇಯಿ

ಕಧಿಕನ್ (ಮಲಯಾಳಂ)

ಸಂಗೀತ ನಿರ್ದೇಶಕ: ಸಂಜಯ್ ಸೈಲ್ ಚೌಧರಿ

Whats_app_banner