logo
ಕನ್ನಡ ಸುದ್ದಿ  /  ಮನರಂಜನೆ  /  Monika Shergill: ಸರಕಾರದ ಸಮನ್ಸ್‌ಗೆ ಉತ್ತರಿಸಿದ ನೆಟ್‌ಫ್ಲಿಕ್ಸ್‌ ಮುಖ್ಯಸ್ಥೆ ಮೋನಿಕಾ ಶೇರ್ಗಿಲ್‌ ಯಾರು? ಐಸಿ 814 ದಿ ಕಂದಹಾರ್‌ ವಿವಾದ

Monika Shergill: ಸರಕಾರದ ಸಮನ್ಸ್‌ಗೆ ಉತ್ತರಿಸಿದ ನೆಟ್‌ಫ್ಲಿಕ್ಸ್‌ ಮುಖ್ಯಸ್ಥೆ ಮೋನಿಕಾ ಶೇರ್ಗಿಲ್‌ ಯಾರು? ಐಸಿ 814 ದಿ ಕಂದಹಾರ್‌ ವಿವಾದ

Praveen Chandra B HT Kannada

Sep 04, 2024 06:40 AM IST

google News

ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ವಿಭಾಗದ ಮುಖ್ಯಸ್ಥೆ ಮೋನಿಕಾ ಶೇರ್ಗಿಲ್‌

    • Who is Monika Shergill?: ಐಸಿ-814 ದಿ ಕಂದಹಾರ್‌ ಹೈಜಾಕ್‌ ವೆಬ್‌ಸರಣಿ ಪ್ರಸಾರಕ್ಕೆ ಸಂಬಂಧಪಟ್ಟಂತೆ ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ಮುಖಸ್ಥೆ ಮೋನಿಕಾ ಶೇರ್ಗಿಲ್‌ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಮನ್ಸ್‌ಗೆ ಉತ್ತರ ನೀಡಿದ್ದಾರೆ. ಕಥೆಹೇಳುವುದನ್ನು ಇಷ್ಟಪಡುವ ಈ ಮೋನಿಕಾ ಶೇರ್ಗಿಲ್‌ ಎಂಬ ಪ್ರತಿಭಾನ್ವಿತೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.
ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ವಿಭಾಗದ ಮುಖ್ಯಸ್ಥೆ ಮೋನಿಕಾ ಶೇರ್ಗಿಲ್‌
ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ವಿಭಾಗದ ಮುಖ್ಯಸ್ಥೆ ಮೋನಿಕಾ ಶೇರ್ಗಿಲ್‌ (linkedin Profile Photo)

Who is Monika Shergill?: ಐಸಿ-814 ದಿ ಕಂದಹಾರ್‌ ಹೈಜಾಕ್‌ ವೆಬ್‌ಸರಣಿ ಪ್ರಸಾರಕ್ಕೆ ಸಂಬಂಧಪಟ್ಟಂತೆ ನೆಟ್‌ಫ್ಲಿಕ್ಸ್‌ ಇಂಡಿಯಾದ ಕಂಟೆಂಟ್‌ ಮುಖಸ್ಥೆ ಮೋನಿಕಾ ಶೇರ್ಗಿಲ್‌ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಮನ್ಸ್‌ಗೆ ಉತ್ತರ ನೀಡಿದ್ದಾರೆ. ದೇಶದ ಭಾವನೆಗಳಿಗೆ ಧಕ್ಕೆಯಾಗಂತಹ ವಿಷಯಗಳನ್ನು ಪ್ರಸಾರ ಮಾಡ್ತಿವಿ ಎಂದು ಸಚಿವಾಲಯದ ಮುಂದೆ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕಂಟೆಂಟ್‌ಗಳನ್ನು ಪ್ರಸಾರ ಮಾಡುವ ವೇಳೆ ದೇಶದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಖಾತ್ರಿಪಡಿಸಿಕೊಳ್ಳುವುದಾಗಿ ಅವರು ಸರಕಾರಕ್ಕೆ ಭರವಸೆ ನೀಡಿದ್ದಾರೆ. ಐಸಿ-814 ದಿ ಕಂದಹಾರ್‌ ಹೈಜಾಕ್‌ ವೆಬ್‌ಸರಣಿಯಲ್ಲಿ ಅಪಹರಣಕಾರರ ಹೆಸರು ಭೋಲಾ ಮತ್ತು ಶಿವ ಎಂದಿತ್ತು. ಇದು 1999ರಲ್ಲಿ ಭಾರತದ ವಿಮಾನದ ಹೈಜಾಕ್‌ಗೆ ಸಂಬಂಧಪಟ್ಟ ಕಥೆ ಹೊಂದಿದೆ. ಈ ವಿವಾದದ ಸಮಯದಲ್ಲಿಯೇ ಸಾಕಷ್ಟು ಜನರು ಮೋನಿಕಾ ಶೇರ್ಗಿಲ್‌ ಕಡೆಗೆ ನೋಡಿದ್ದಾರೆ. ನೆಟ್‌ಫ್ಲಿಕ್ಸ್‌ ಕಂಟೆಂಟ್‌ ವಿಭಾಗದ ಮುಖ್ಯಸ್ಥೆ ಸ್ಥಾನದಲ್ಲಿ ಕುಳಿತಿರುವ ಈ ಸುಂದರಿ ಯಾರು? ಇವರ ಹಿನ್ನಲೆಯೇನು? ಇತ್ಯಾದಿ ಹುಡುಕಾಟ ಹೆಚ್ಚಾಗಿದೆ. ಬನ್ನಿ ಮೋನಿಕಾ ಶೇರ್ಗಿಲ್‌ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

ಮೋನಿಕಾ ಶೆರ್ಗಿಲ್‌ ಯಾರು?

ಇವರು ಮೂಲತಃ ಉತ್ತರ ಪ್ರದೇಶದ ಮೀರತ್‌ನವರು. ಮಾಧ್ಯಮ ಮತ್ತು ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಪ್ಪು ಬಿಳುಪು ದೂರದರ್ಶನದಲ್ಲಿ ಕೆಲಸ ಮಾಡಿದ ಅನುಭವ ಇರುವವರು. ಬಾಲ್ಯದಿಂದಲೇ ಕಥೆ ಹೇಳುವುದು (ಸ್ಟೋರಿ ಟೆಲ್ಲಿಂಗ್‌) ಇವರಿಗೆ ಅಚ್ಚುಮೆಚ್ಚು. ಮೀರತ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದ ಬಳಿಕ ದೆಹಲಿಯ ಮಿರಾಂಡ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿ ಪಡೆದಿದ್ದಾರೆ. ಅಲ್ಲಿ ಅವರು ಪತ್ರಿಕೋದ್ಯಮ ಪದವಿ ಪಡೆದಿದ್ದಾರೆ. 1990ರ ನಡುವೆ ಇವರು ಪತ್ರಕರ್ತೆಯಾದರು. ವಿಶೇಷವಾಗಿ ಸಾಕ್ಷ್ಯಚಿತ್ರಗಳತ್ತ ಆಸಕ್ತಿ ವಹಿಸಿದರು. ಇವರು ಧೈರ್ಯವಂತೆ. ಧನ್‌ಬಾದ್‌ನ ಅಕ್ರಮ ಗಣಿಗಾರಿಕೆಯಂತಹ ಅಪಾಯಕಾರಿ ವಿಷಯಗಳನ್ನು ವರದಿ ಮಾಡುತ್ತಿದ್ದರು. ಕಥೆ ಹೇಳುವುದು ಆಕೆಯ ಆಸಕ್ತಿ. ಇದು ಹೊರಗಿನ ಜಗತ್ತಿನ ಜತೆ ಕನೆಕ್ಟ್‌ ಆಗುವ ಅವಕಾಶ ಎಂದು ಅವರು ಹೇಳುತ್ತಿದ್ದರು.

ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಕಂಪನಿಯಲ್ಲಿ ಪ್ರಮುಖ ಹುದ್ದೆ ಪಡೆಯುವ ಮುನ್ನ ಇವರು ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಐದು ವರ್ಷಗಳ ಕಾಲ ವಿಯಾಕಾಮ್‌18 ಡಿಜಿಟಲ್‌ ವೆಂಚರ್ಸ್‌ನಲ್ಲಿ ಕಂಟೆಂಟ್‌ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದರು. ಸುಮಾರು ಎಂಟು ವರ್ಷಗಳ ಕಾಲ ಸ್ಟಾರ್‌ ಇಂಡಿಯಾದಲ್ಲಿ ಸೃಜನಶೀಲ ಸಲಹೆಗಾರ್ತಿಯಾಗಿ ಕೆಲಸ ಮಾಡಿದರು. ಸೋನಿ ಎಂಟರ್‌ಟೇನ್‌ಮೆಂಟ್‌ ಟೆಲಿವಿಷನ್‌ಲ್ಲಿ ಕ್ರಿಯೆಟಿವ್‌ ಡೈರೆಕ್ಟರ್‌ ಆಗಿಯೂ ಕಾರ್ಯನಿರ್ವಹಿಸಿದರು.

ನೆಟ್‌ಫ್ಲಿಕ್ಸ್‌ಗೆ ಸೇರಿದ ಬಳಿಕ ಸಾಕಷ್ಟು ಸಾಧನೆ ಮಾಡಿದರು. ಇವರು ನೆಟ್‌ಫ್ಲಿಕ್ಸ್‌ ಇಂಡಿಯಾದ ಪ್ರಗತಿಗೆ ಪ್ರಮುಖ ಕಾರಣರಾದರು. ನೆಟ್‌ಫ್ಲಿಕ್ಸ್‌ ಇಂಡಿಯಾದಲ್ಲಿ ಸೇಕ್ರೇಡ್‌ ಗೇಮ್ಸ್‌ ಮತ್ತು ಡೆಲ್ಲಿ ಕ್ರೈಮ್‌ ಎಂಬ ಎರಡು ಸರಣಿಗಳು ಬರುತ್ತಿದ್ದವು. ಅದೇ ಸಮಯದಲ್ಲಿ ಇವರು ನೆಟ್‌ಫ್ಲಿಕ್ಸ್‌ ಇಂಡಿಯಾದೊಳಗೆ ಕಾಲಿಟ್ಟರು. ಭಾರತದ ನಿಜವಾದ ಪ್ರೇಕ್ಷಕರು ಯಾರು, ಅವರ ಆದ್ಯತೆಗಳೇನು ಎಂದು ಅರ್ಥ ಮಾಡಿಕೊಂಡು ಸೂಕ್ತ ಕಥೆದಾರರನ್ನು ಸೆಳೆಯಲು ಪ್ರಯತ್ನಿಸಿದರು. ಇವರ ತಂತ್ರದಿಂದಾಗಿ 2022ರಲ್ಲಿ ನೆಟ್‌ಫ್ಲಿಕ್ಸ್‌ ಇಂಡಿಯಾದ ಆದಯ ಶೇಕಡ 25ರಷ್ಟು ಪ್ರಗತಿಯಾಯಿತು. ಕಂಪನಿಯ ದೀರ್ಘಾವಧಿಯ ಕಾರ್ಯತಂತ್ರ ರೂಪಿಸುವಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ "ಹೀರ್ಮಂಡಿ: ದಿ ಡೈಮಂಡ್ ಬಜಾರ್," "ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ," "ದಿ ರೈಲ್ವೇ ಮೆನ್," "ಅಮರ್ ಸಿಂಗ್ ಚಮ್ಕಿಲಾ," "ಕೊಹ್ರಾ," "ಜಾನೆ ಜಾನ್" ಸೇರಿದಂತೆ ," "ಕರಿ ಮತ್ತು ಸೈನೈಡ್: ದಿ ಜಾಲಿ ಜೋಸೆಫ್ ಕೇಸ್," ಮತ್ತು ಅಕಾಡೆಮಿ ಪ್ರಶಸ್ತಿ ವಿಜೇತ "ದಿ ಎಲಿಫೆಂಟ್ ವಿಸ್ಪರರ್ಸ್" ನಂತಹ ಹಲವು ಸಿನಿಮಾಗಳು ವೆಬ್‌ಸರಣಿಗಳು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಿದೆ.

ತನ್ನ ಸಾಧನೆ, ಪ್ರತಿಭೆಯಿಂದಾಗಿ ಮೋನಿಕಾ ಸೆರ್ಗಿಲ್‌ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ. ದಿ ಹಾಲಿವುಡ್‌ ರಿಪೋರ್ಟರ್‌ನ "ಜಾಗತಿಕ ದೂರದರ್ಶನದಲ್ಲಿ 35 ಅಗ್ರ ಶಕ್ತಿಶಾಲಿ ಮಹಿಳೆಯರು" ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವೈರೈಟಿಯ ಅಗ್ರ 500 ಪ್ರಭಾವಶಾಲಿ ಬಿಸ್ನೆಸ್‌ ನಾಯಕರು ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಫಾರ್ಚ್ಯೂನ್‌ ಇಂಡಿಯಾದಿಂದ "ಮೋಸ್ಟ್‌ ಪವರ್‌ಫುಲ್‌ ವುಮೆನ್‌" ಹಿರಿಮೆಗೂ ಪಾತ್ರರಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ