ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಚಲನಚಿತ್ರಗಳು; ನಿಮಗೆ ಯಾವುದು ಇಷ್ಟ-ott news top 10 movies on netflix ott this week fir aayi haseen dilruba indian 2 the union cinema jra ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಚಲನಚಿತ್ರಗಳು; ನಿಮಗೆ ಯಾವುದು ಇಷ್ಟ

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಚಲನಚಿತ್ರಗಳು; ನಿಮಗೆ ಯಾವುದು ಇಷ್ಟ

Trending Movies This Week In Netflix OTT: ಪ್ರಸಿದ್ಧ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ‌ ಈ ವಾರ ಟಾಪ್ 10 ಟ್ರೆಂಡಿಂಗ್ ಚಲನಚಿತ್ರಗಳು ಯಾವುವು ಎಂಬುದನ್ನು ತಿಳಿಯೋಣ. ಹಲವು ಆಸಕ್ತಿದಾಯಕ ಚಿತ್ರಗಳು ನಿಮಗೆ ಇಷ್ಟವಾಗಬಹುದು.

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಚಲನಚಿತ್ರಗಳು
ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಚಲನಚಿತ್ರಗಳು

ನೆಟ್‌ಫ್ಲಿಕ್ಸ್ ಒಟಿಟಿ ತಾಣವು ಜಗತ್ತಿನಲ್ಲೆಡೆ ಖ್ಯಾತಿ ಪಡೆದಿರುವ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್. ಇದರಲ್ಲಿ ಹೊಸ ಹೊಸ ಸಿನಿಮಾಗಳು, ವೆಬ್ ಸೀರೀಸ್‌ಗಳಿವೆ. ಹೊಸ ಹೊಸ ಚಲನಚಿತ್ರಗಳು ಈ ಪಟ್ಟಿಗೆ ಸೇರ್ಪಡೆಯಾಗುತ್ತಲೇ ಇರುತ್ತವೆ. ಈ ವಾರ ನೆಟ್‌ಫ್ಲಿಕ್ಸ್‌ನಲ್ಲಿ ಹೆಚ್ಚು ಜನ ವೀಕ್ಷಿಸಿ ಟ್ರೆಂಡಿಂಗ್‌ನಲ್ಲಿರುವ ಟಾಪ್ 10 ಚಲನಚಿತ್ರಗಳು ಯಾವುವು ಎಂಬುದನ್ನು ನೋಡೋಣ. ಇದೇ ವೇಳೆ ಆ ಚಿತ್ರಗಳು ನಿಮ್ಮ ಅಭಿರುಚಿಗೆ ಹೊಂದುತ್ತಾ ಎಂಬುದನ್ನು ತಿಳಿಯಿರಿ.

ಫಿರ್ ಆಯಿ ಹಸೀನ್ ದಿಲ್ರುಬಾ

ತಾಪ್ಸಿ ನಟಿಸಿರುವ ಬೋಲ್ಡ್ ಮತ್ತು ರೋಮ್ಯಾಂಟಿಕ್ ಕ್ರೈಮ್ ಥ್ರಿಲ್ಲರ್ ಚಲನಚಿತ್ರ ‘ಫಿರ್ ಆಯಿ ಹಸೀನ್ ದಿಲ್ರುಬಾ’. ತಾಪ್ಸಿ, ವಿಕ್ರಾಂತ್ ಮಾಸ್ಸೆ ಮತ್ತು ವಿಕ್ಕಿ ಕೌಶಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಆಗಸ್ಟ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಯಿತು. ಅಂದಿನಿಂದಲೂ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಸಿನಿಮಾ ಈ ವಾರ ಟಾಪ್ 1 ಸ್ಥಾನ ಪಡೆದುಕೊಂಡಿದೆ.

ಇಂಡಿಯನ್‌ 2

ಕಮಲ್ ಹಾಸನ್-ನಿರ್ದೇಶಕ ಶಂಕರ್ ಕಾಂಬಿನೇಷನ್‌ನಲ್ಲಿ ಬಂದ ಚಿತ್ರ ಇಂಡಿಯನ್‌ 2. ಗಲ್ಲಾಪೆಟ್ಟಿಗೆಯಲ್ಲಿ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯಲಿಲ್ಲ. ಆದರೆ ಆಗಸ್ಟ್ 9ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಒಟಿಟಿ ವೇದಿಕೆಯಲ್ಲಿಯೂ ಆರಂಭದಲ್ಲಿ ನೆಗೆಟಿವ್ ಪ್ರತಿಕ್ರಿಯೆ ಪಡೆದಿದ್ದ ಇಂಡಿಯನ್ 2 ಸಿನಿಮಾ ಈಗ ಟಾಪ್ 2 ಟ್ರೆಂಡಿಂಗ್‌ನಲ್ಲಿದೆ.

ದಿ ಯೂನಿಯನ್

ದಿ ಯೂನಿಯನ್ ಚಲನಚಿತ್ರವು ಹಾಲಿವುಡ್‌ನ ಕಾಮಿಡಿ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಚಿತ್ರದ ಮುಖ್ಯ ಪಾತ್ರಗಳಲ್ಲಿ ಹಾಲೆ ಬೆರ್ರಿ ಮತ್ತು ಮಾರ್ಕ್ ವಾಲ್‌ಬರ್ಗ್ ನಟಿಸಿದ್ದಾರೆ. ಆಗಸ್ಟ್ 16ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಮೊದಲ ಪ್ರದರ್ಶನ ಕಂಡಿತು. ಸದ್ಯ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಈ ಸಿನಿಮಾ ಮೂರೇ ದಿನಗಳಲ್ಲಿ ಟಾಪ್ 3 ಸ್ಥಾನಕ್ಕೆ ತಲುಪಿದೆ.

ಶಾಜಮ್: ಫ್ಯೂರಿ ಆಫ್ ದಿ ಗಾಡ್ಸ್

ಶಾಜಮ್: ಫ್ಯೂರಿ ಆಫ್ ದಿ ಗಾಡ್ಸ್ ಹಾಲಿವುಡ್‌ನ ಬ್ಲಾಕ್‌ಬಸ್ಟರ್ ಹಿಟ್ ಸೂಪರ್‌ಹೀರೋ ಚಿತ್ರಗಳಲ್ಲಿ ಒಂದು. ಆಗಸ್ಟ್ 17ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಶಾಜಮ್ ಚಿತ್ರದ ಮುಂದಿನ ಭಾಗವಾದ ಶಾಜಮ್ 2 ಎರಡೇ ದಿನಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಮಹಾರಾಜ

ವಿಜಯ್ ಸೇತುಪತಿ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಮಹಾರಾಜ, ಇನ್ನೂ ಟ್ರೆಂಡಿಂಗ್‌ನಲ್ಲಿದೆ. ಈ ವಾರವೂ ಮಹಾರಾಜ ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರ 5 ಸ್ಥಾನವನ್ನು ಪಡೆದುಕೊಂಡಿದೆ. IMDb, ಈ ಸಸ್ಪೆನ್ಸ್ ಇನ್ವೆಸ್ಟಿಗೇಟಿವ್ ಕ್ರೈಮ್ ಥ್ರಿಲ್ಲರ್ ಚಿತ್ರಕ್ಕೆ 8.7 ರೇಟಿಂಗ್ ನೀಡಿದೆ.

ಡಂಜಿಯನ್ಸ್ ಆಂಡ್‌ ಡ್ರ್ಯಾಗನ್ಸ್: ಹಾನರ್ ಅಮಾಂಗ್ ಥೀವ್ಸ್

ಈ ಫ್ಯಾಂಟಸಿ ಸಾಹಸ ಚಲನಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಅಗ್ರ 6 ಸ್ಥಾನಗಳಲ್ಲಿ ಟ್ರೆಂಡಿಂಗ್ ಆಗಿದೆ.

ಕಿಂಗ್ಸ್‌ಮನ್: ದಿ ಸೀಕ್ರೆಟ್‌ ಸರ್ವಿಸ್

ಕಿಂಗ್ಸ್‌ಮನ್: ದಿ ಸೀಕ್ರೆಟ್ ಸರ್ವಿಸ್, ಸ್ಪೈ ಆಕ್ಷನ್ ಕಾಮಿಡಿ ಥ್ರಿಲ್ಲರ್ ಚಲನಚಿತ್ರವು ಇತ್ತೀಚೆಗೆ ನೆಟ್‌ಫ್ಲಿಕ್ಸ್ ವೇದಿಕೆಗೆ ಅಪ್ಪಳಿಸಿತು. ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಯಲ್ಲಿ ಈಗಾಗಲೇ ಸ್ಟ್ರೀಮ್ ಆಗುತ್ತಿರುವ ಈ ಚಲನಚಿತ್ರವು ಈಗ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್ 7ರಲ್ಲಿ ಟ್ರೆಂಡಿಂಗ್ ಆಗಿದೆ.‌