ಬಿಸ್ನೆಸ್‌ ಪ್ರಮೋಶನ್‌ ನೆಪದಲ್ಲಿ ಯೂಟ್ಯೂಬರ್‌ ಮೇಘಾಳನ್ನು ಭೇಟಿಯಾದ ಪೂಜಾ, ಹಿತಾ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 14th august episode pooja hita met you tuber megha rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಬಿಸ್ನೆಸ್‌ ಪ್ರಮೋಶನ್‌ ನೆಪದಲ್ಲಿ ಯೂಟ್ಯೂಬರ್‌ ಮೇಘಾಳನ್ನು ಭೇಟಿಯಾದ ಪೂಜಾ, ಹಿತಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಬಿಸ್ನೆಸ್‌ ಪ್ರಮೋಶನ್‌ ನೆಪದಲ್ಲಿ ಯೂಟ್ಯೂಬರ್‌ ಮೇಘಾಳನ್ನು ಭೇಟಿಯಾದ ಪೂಜಾ, ಹಿತಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 14ರ ಎಪಿಸೋಡ್‌. ವಿಡಿಯೋ ಮಾಡಿ ತನ್ನ ಮನೆ ವಿಚಾರವನ್ನು ಎಲ್ಲರಿಗೂ ತಿಳಿಸಿ ಅವಮಾನ ಮಾಡಿದ ಮೇಘಾಳನ್ನು ಭೇಟಿ ಆಗಿ, ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಭಾಗ್ಯಾ, ಪೂಜಾ, ಹಿತಾ ಮೂವರೂ ಪ್ಲ್ಯಾನ್‌ ಮಾಡುತ್ತಾರೆ.

ಬಿಸ್ನೆಸ್‌ ಪ್ರಮೋಶನ್‌ ನೆಪದಲ್ಲಿ ಯೂಟ್ಯೂಬರ್‌ ಮೇಘಾಳನ್ನು ಭೇಟಿಯಾದ ಪೂಜಾ, ಹಿತಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಬಿಸ್ನೆಸ್‌ ಪ್ರಮೋಶನ್‌ ನೆಪದಲ್ಲಿ ಯೂಟ್ಯೂಬರ್‌ ಮೇಘಾಳನ್ನು ಭೇಟಿಯಾದ ಪೂಜಾ, ಹಿತಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ದುಡ್ಡಿನ ಆಸೆಗೆ ಭಾಗ್ಯಾ ಡಿವೋರ್ಸ್‌ ವಿಚಾರವನ್ನು ವಿಡಿಯೋ ಮಾಡಿ ವೈರಲ್‌ ಮಾಡಿದ ಯ್ಯೂಟ್ಯೂಬರ್‌ ಮೇಘಾಳನ್ನು ಭೇಟಿ ಮಾಡಲು ಪೂಜಾ, ಭಾಗ್ಯಾ ಸೇರಿ ಪ್ಲ್ಯಾನ್‌ ಮಾಡುತ್ತಾರೆ. ಆಕೆಯನ್ನು ಹಿಡಿದರೆ ಆ ವಿಡಿಯೋ ಮಾಡುವಂತೆ ಹೇಳಿದ್ದು ಯಾರು ಎಂದು ಸುಲಭವಾಗಿ ತಿಳಿಯಬಹುದು ಎಂಬ ಕಾರಣಕ್ಕೆ ಮೇಘಾಳನ್ನು ಭೇಟಿ ಮಾಡಲು ಮುಂದಾಗುತ್ತಾರೆ.

ಪೂಜಾ ಹಾಗೂ ಭಾಗ್ಯಾ ಕುಸುಮಾಗೆ ವಿಚಾರ ತಿಳಿಸಿ ಮನೆಯಿಂದ ಹೊರಡುತ್ತಾರೆ. ಆ ವಿಡಿಯೋ ಮಾಡಿಸಿದ್ದು ಯಾರೆಂದು ತಿಳಿದ ಕೂಡಲೇ ನನಗೆ ತಿಳಿಸುವಂತೆ ಕುಸುಮಾ ಸೂಚಿಸುತ್ತಾಳೆ. ದಾರಿ ಮಧ್ಯದಲ್ಲಿ ಹಿತಾ ಕರೆ ಮಾಡಿ, ನಾನೂ ಕೂಡಾ ನಿಮ್ಮೊಂದಿಗೆ ಬರುವೆ ಎನ್ನುತ್ತಾಳೆ. ಮೇಘಾ ಕಳಿಸಿದ ಲೊಕೇಶನ್‌ನಲ್ಲಿ ಮೂವರೂ ಭೇಟಿ ಆಗುತ್ತಾರೆ. ಮೇಘಾ ಒಂದು ರೆಸ್ಟೋರೆಂಟ್‌ ಲೊಕೇಶನ್‌ ಕಳಿಸಿ ಅಲ್ಲಿಗೆ ಬರುವಂತೆ ಹೇಳುತ್ತಾಳೆ. ಭಾಗ್ಯಾ ಬಂದರೆ ಅವಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪಕ್ಕದ ಪಾರ್ಕಿನಲ್ಲಿ ಭಾಗ್ಯಾಗೆ ಇರುವಂತೆ ಹೇಳಿ ಪೂಜಾ, ಹಿತಾ ಒಳಗೆ ಹೋಗುತ್ತಾರೆ.

ರೆಸ್ಟೋರೆಂಟ್‌ನಲ್ಲಿ ಮೇಘಾಳನ್ನು ಭೇಟಿಯಾಗುವ ಹಿತಾ, ಪೂಜಾ

ಆಗಲೇ ರೆಸ್ಟೋರೆಂಟ್‌ಗೆ ಬಂದು ತಮಗಾಗಿ ಕಾಯುತ್ತಿದ್ದ ಮೇಘಾಳನ್ನು ಪೂಜಾ, ಹಿತಾ ಮಾತನಾಡಿಸಿ ತಮ್ಮ ಪರಿಚಯ ಮಾಡಿಕೊಳ್ಳುತ್ತಾರೆ. ಅವರಿಬ್ಬರೂ ತನಗೆ ಪ್ರಮೋಷನ್‌ ವಿಡಿಯೋ ಮಾಡಿಕೊಡಲು ಕೇಳಲು ಬಂದಿರುವುದಾಗಿ ಮೇಘಾ ನಂಬುತ್ತಾಳೆ. ನಮ್ಮ ಬಿಸ್ನೆಸ್‌ ಪ್ರಮೋಟ್‌ ಮಾಡಬೇಕು. ದುಡ್ಡು ಎಷ್ಟು ಖರ್ಚಾದರೂ ಪರವಾಗಿಲ್ಲ. ಪ್ರಮೋಷನ್‌ ವಿಡಿಯೋ ಮಾತ್ರ ಬಹಳ ಚೆನ್ನಾಗಿ ಬರಬೇಕು ಎಂದು ಪೂಜಾ, ಹಿತಾ ಸುಳ್ಳು ಹೇಳುತ್ತಾರೆ. ಖಂಡಿತ ಪ್ರಮೋಷನ್‌ ಚೆನ್ನಾಗಿ ಆಗುತ್ತದೆ, ಅದರ ಬಗ್ಗೆ ನೀವು ಯೋಚನೆ ಮಾಡುವ ಅಗತ್ಯ ಇಲ್ಲ ಎಂದು ಮೇಘಾ ಹೇಳುತ್ತಾಳೆ.

ನೀವು ಯಾವುದೇ ಪ್ರಮೋಷನ್‌ ಮಾಡಿದರೂ ಅದು ವೈರಲ್‌ ಆಗುತ್ತೆ ಆದ್ದರಿಂದ ನಿಮ್ಮ ಬಳಿ ಬಂದ್ದಿದ್ದೇವೆ. ನೀವು ಭಾಗ್ಯಾ ವಿಡಿಯೋ ಮಾಡಿದ್ದೀರಲ್ಲ, ಅದಕ್ಕೆ ಎಷ್ಟು ಚಾರ್ಜ್‌ ಮಾಡಿದಿರಿ ಎಂದು ಹಿತಾ ಕೇಳುತ್ತಾಳೆ. ಹಿತಾ ಪ್ರಶ್ನೆಗೆ ಮೇಘಾಗೆ ಅನುಮಾನ ಉಂಟಾಗುತ್ತದೆ. ನಿಮಗೆ ಅದನ್ನೆಲ್ಲಾ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ನೀವು ಬಂದ ಕೆಲಸ ಮುಗಿಸಿಕೊಂಡು ಹೋಗಿ ಅಷ್ಟೇ ಎನ್ನುತ್ತಾಳೆ. ಕೋಪ ಮಾಡಿಕೊಳ್ಳಬೇಡಿ ಕುತೂಹಲಕ್ಕಾಗಿ ಕೇಳಿದೆ ಅಷ್ಟೇ ಎಂದು ಹಿತಾ ಹೇಳುತ್ತಾಳೆ. ಅದನ್ನು ನಿಜ ಎಂದು ನಂಬುವ ಮೇಘಾ, ಹೌದಾ ಹಾಗಾದರೆ ಸರಿ, ನಾನು ಕಂಟೆಂಟ್‌ ಆಧಾರದ ಮೇಲೆ ದುಡ್ಡು ತೆಗೆದುಕೊಳ್ಳುತ್ತೇನೆ. ಭಾಗ್ಯಾಗೂ ನನಗೂ ಪರಸ್ಪರ ಪರಿಚಯ ಇಲ್ಲ, ಆದರೆ ಒಬ್ಬರು ಕ್ಲೈಂಟ್ ನನಗೆ ದುಡ್ಡು ಕೊಟ್ಟು ಆ ವಿಡಿಯೋ ಮಾಡಿ ಎಂದು ಹೇಳಿದರು ಅದಕ್ಕೆ ಮಾಡಿದೆ ಎನ್ನುತ್ತಾಳೆ, ಆ ಮಾತನ್ನು ಕೇಳಿ ಪೂಜಾ ಕೋಪಗೊಳ್ಳುತ್ತಾಳೆ.

ಜಾತಕ ಪರಿಹಾರಕ್ಕೆ ಮದು ಮಗಳಂತೆ ಸಿದ್ಧಳಾದ ಶ್ರೇಷ್ಠಾ

ಇತ್ತ ಊರಿನಿಂದ ಶ್ರೇಷ್ಠಾ ತಂದೆ ತಾಯಿ, ಅವಳ ಮನೆಗೆ ಬರುತ್ತಾರೆ. ಜಾತಕದಲ್ಲಿ ದೋಷ ಇದೆ, ಆದ್ದರಿಂದ ನೀನು ಮೊದಲು ಬಾಳೆ ಕಂಬದ ಜೊತೆ ಮದುವೆ ಆಗಬೇಕು ಎಂದು ಹೇಳಿದರೂ ನೀನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ದೇವಸ್ಥಾನದಲ್ಲಿ ಪೂಜೆಗೆ ಎಲ್ಲಾ ಸಿದ್ಧವಿದೆ, ನೀನು ಬರಲೇಬೇಕು, ಇಲ್ಲಾಂದ್ರೆ ಹೊಡೆದು ಕರೆದುಕೊಂಡು ಹೋಗುತ್ತೇನೆ ಎಂದು ಶ್ರೇಷ್ಠಾ ತಾಯಿ ಮಗಳಿಗೆ ಕಂಡಿಷನ್‌ ಮಾಡುತ್ತಾರೆ. ಇಷ್ಟವಿಲ್ಲದಿದ್ದರೂ ಶ್ರೇಷ್ಠಾ ಮದು ಮಗಳಂತೆ ರೆಡಿ ಆಗಿ ಪೂಜೆಗೆ ಹೊರಡುತ್ತಾಳೆ, ಅವರೊಂದಿಗೆ ಸುಂದ್ರಿ ಕೂಡಾ ಹೋಗುತ್ತಾಳೆ.

ತನಗೆ ದುಡ್ಡು ಕೊಟ್ಟು ವಿಡಿಯೋ ಮಾಡುವಂತೆ ಹೇಳಿದ್ದು ಶ್ರೇಷ್ಠಾ ಎಂದು ಮೇಘಾ ನಿಜ ಹೇಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌