BBK 11: ಬಿಗ್ ಬಾಸ್ ಮನೆಯಲ್ಲಿ ಜೋರಾಯ್ತು ವಾಕ್ಸಮರ, ಮಹಿಳಾ ಸ್ವರ್ಧಿಗಳ ನಡುವೆ ಜಗಳ; ಗೌತಮಿ ಮಾತಿಗೆ ಭೇಷ್ ಎಂದ ನೆಟ್ಟಿಗರು
Oct 08, 2024 09:57 PM IST
ಬಿಗ್ ಬಾಸ್ ಮನೆಯಲ್ಲಿ ಮಾತಿನ ಚಕಮಕಿ
- ಬಿಗ್ ಬಾಸ್ ಮನೆಯಲ್ಲಿ ವಾರಾಂತ್ಯ ಬಂತು ಎಂದರೆ ಸಾಕು ಜಗಳ ಹೆಚ್ಚಾಗುತ್ತದೆ. ಯಾಕೆಂದರೆ ಮನೆಯಿಂದ ಯಾರು ಹೊರ ಹೋಗುತ್ತಾರೆ ಎಂಬುದನ್ನು ಬಿಟ್ಟು ಇನ್ನೇನೂ ಅಲ್ಲಿ ಮುಖ್ಯವಾಗಿರುವುದಿಲ್ಲ. ಹೀಗಿರುವಾಗ ಈ ದಿನ ಏನಾಗಿದೆ ನೋಡಿ.
ಬಿಗ್ ಬಾಸ್ ಮನೆಯಲ್ಲಿ ದಿನೇ ದಿನೇ ಆಟದ ಕಾವು ಹೆಚ್ಚುತ್ತಿದೆ. ಇದೀಗ ಗೌತಮಿ ತಮ್ಮ ಆಟ ಶುರು ಮಾಡಿದ್ದಾರೆ. ಏನೇ ಮಾತನಾಡುವುದಾದರೂ ಒಮ್ಮೆ ಯೋಚಿಸಿ ನಂತರ ಮಾತನಾಡುವ ಅಭ್ಯಾಸ ಅವರಿಗೆ ಎಂದು ಅನಿಸುತ್ತದೆ. ಅವರ ಆಟ ನೋಡಿದ ನೆಟ್ಟಿಗರು ತುಂಬಾ ಖುಷಿಯಾಗಿದ್ದಾರೆ. “ನೀವು ಏನೇ ಮಾಡಿದ್ರೂ ಯೋಚಿಸಿ ಮಾಡ್ತೀರಾ ಬಿಡಿ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಭವ್ಯಾ ಗೌಡ ಅವರನ್ನು ಹಿಂದಿನ ಸೀಸನ್‌ನಲ್ಲಿ ನಮ್ರತಾ ಇದ್ದ ಹಾಗೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ. “ಭವ್ಯಾ ಅವರು ಮನಸಿಗೆ ಬಂದಂತೆ ಮಾತನಾಡುತ್ತಾರೆ. ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಾರೆ” ಎಂದು ಹೇಳುತ್ತಿದ್ದಾರೆ.
ಆರೋಪಗಳ ಸುರಿಮಳೆ
ಇನ್ನು ಒಬ್ಬರ ಬಗ್ಗೆ ಇನ್ನೊಬ್ಬರು ಮಾತನಾಡುವ ಒಂದು ಸಂದರ್ಭ ಇರುತ್ತದೆ. ಆಗ ಪ್ರತಿಯೊಬ್ಬರೂ ಹೆಚ್ಚಿನ ಆರೋಪಗಳನ್ನೇ ಮಾಡುತ್ತಾರೆ. ಗೌತಮಿ ಅವರಿಗೆ ಭ್ಯವ್ಯಾ ಗೌಡ ಅವರು ಡಾಮಿನೇಟಿಂಗ್ ಎಂದು ಅನಿಸಿದ್ದಾರಂತೆ, ಆ ಬಗ್ಗೆ ಅವರು ಹೇಳಿದಾಗ ಭವ್ಯಾ ಗೌಡ ಅವರ ಮಾತನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ನಂತರ ಅವರಲ್ಲಿ ಮತ್ತುಷ್ಟು ಮಾತಿನ ಚಕಮಕಿ ನಡೆಯುತ್ತದೆ.
ಗೌತಮಿ ಮಾತು
ಇನ್ನು ಗೌತಮಿ ಅವರಿಗೆ "ನೀವು ಆಗಾಗ ಜಾಹಿರಾತು ಬಂದ ಹಾಗೆ ಬಂದು ಹೋಗ್ತೀರಾ. ಯಾವಾಗಲೂ ಕಾಣಿಸೋದಿಲ್ಲ. ಆಗಾಗ ಮಾತ್ರ ಕಾಣಿಸಿಕೊಳ್ತೀರಾ" ಎಂದು ಧರ್ಮಾ ಹೇಳಿದ್ದಾರೆ. ಆದರೆ ಗೌತಮಿ ಈ ಮಾತನ್ನು ಒಪ್ಪಿಕೊಂಡಿಲ್ಲ. ನಾನು ನೀವು ಹೇಳಿದ ಈ ಮಾತನ್ನು ಖಂಡಿತ ಒಪ್ಪಿಕೊಳ್ಳುವುದಿಲ್ಲ ಎಂದು ಎದುರಲ್ಲೇ ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ
ಇನ್ನು ಉಳಿದವರು ಎಲ್ಲವನ್ನು ಗಮನಿಸುತ್ತಾ ಸುಮ್ಮನೆ ಕೂತಿದ್ದಾರೆ. ಬಿಗ್ ಬಾಸ್ ಕನ್ನಡ 11ರ ಇತ್ತೀಚಿನ ಸಂಚಿಕೆಯ ನಾಮಿನೇಷನ್ ಪ್ರಕ್ರಿಯೆ ನಡೆಯುವಾಗ ಈ ಎಲ್ಲ ಮಾತುಗಳು ಬಂದಿದೆ. ಇನ್ನು ಭವ್ಯಾ ಗೌಡ ತನ್ನನ್ನೇ ತಾನು ತುಂಬಾ ಸ್ಟ್ರಾಂಗ್ ಕಂಟೆಸ್ಟೆಂಟ್ ಎಂದು ಹೇಳಿಕೊಂಡಿದ್ದಾರೆ. ಆಗ ಗೌತಮಿ ಹೇಳಿದ್ದಾರೆ “ನೀವು ಸ್ಟ್ರಾಂಗ್ ಅಂತ ನಾನು ಹೇಳಿಲ್ಲ. ಆದರೆ ನಿಮ್ಮ ಮಾತನಾಡುವ ಟೋನ್ ತುಂಬಾ ಡಾಮಿನೇಟಿಂಗ್ ಆಗಿದೆ” ಎಂದು.
ಹೀಗೆ ಒಬ್ಬರ ಬಗ್ಗೆ ಒಬ್ಬರು ಮಾತನಾಡುವಾಗ ಅಕ್ಷತಾ ಅವರು ಭವ್ಯಾ ಗೌಡ ಅವರ ವಿರುದ್ಧ ಮಾತನಾಡಿದ್ದಾರೆ. ಅವರ ಮಾತಿನಂತೆ ಭವ್ಯಾ ಅವರು ಇನ್ನೊಬ್ಬರನ್ನು ತುಳಿದುಕೊಂಡು ಮುಂದೆ ಹೋಗುತ್ತಾರೆ. ಆಗ ಭವ್ಯಾ ಅವರು ಹೌದು ಇಲ್ಲಿ ಒಬ್ಬರನ್ನು ಇನ್ನೊಬ್ಬರು ತುಳಿದುಕೊಂಡೇ ಹೋಗಬೇಕು ಎಂದು ಹೇಳಿದ್ದಾರೆ.