Ramachari Serial: ಸ್ತ್ರೀ ವೇಷದಲ್ಲಿದ್ದ ರಾಮಾಚಾರಿಯನ್ನು ಅಪ್ಪಿಕೊಂಡ ಚಾರು; ಇವರಿಬ್ಬರ ನಡುವಳಿಕೆ ನೋಡಿ ಅನುಮಾನಪಟ್ಟ ಮನೆಯೊಡತಿ
Nov 22, 2024 08:22 PM IST
ಸ್ತ್ರೀ ವೇಷದಲ್ಲಿದ್ದ ರಾಮಾಚಾರಿಯನ್ನು ಅಪ್ಪಿಕೊಂಡ ಚಾರು
- ರಾಮಾಚಾರಿ ಧಾರಾವಾಹಿಯಲ್ಲಿ ಸ್ತ್ರೀ ವೇಷದಲ್ಲಿದ್ದ ರಾಮಾಚಾರಿಯನ್ನು ಅಪ್ಪಿಕೊಂಡ ಚಾರುವನ್ನು ನೋಡಿ ಅಣ್ಣಾಜಿ ಮನೆಯ ಹೆಂಗಸರು ಕಂಗಾಲಾಗಿದ್ದಾರೆ. ಇದೇನಿದು ಈ ಡಾಕ್ಟರ್ ಅವಸ್ಥೆ ಎಂದು ಅನುಮಾನಪಡುತ್ತಿದ್ದಾರೆ.
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ಮನೆಯ ಬಹುತೇಕ ಎಲ್ಲಾ ಸದಸ್ಯರು ಅಣ್ಣಾಜಿ ಮನೆಗೆ ಬಂದಿದ್ದಾರೆ. ರುಕ್ಕು ಮದುವೆ ಹತ್ತಿರ ಬಂದಿರುವುದರಿಂದ ಅಣ್ಣಾಜಿ ಮನೆಗೆ ಅಡುಗೆ ಮಾಡಲು ಜನ ಬೇಕಾಗುತ್ತಾರೆ ಎಂದು ಅಡುಗೆ ಮಾಡುವವರ ವೇಷ ಧರಿಸಿಕೊಂಡು ಜಾನಕಿ, ಮುರಾರಿ ಹಾಗೂ ರಾಮಾಚಾರಿ ಬಂದಿದ್ದಾರೆ. ಆದರೆ ಸೀದಾ-ಸಾದಾ ಬಂದರೆ ಯಾರು ಎಂದು ಗುರುತು ಹಿಡಿಯಬಹುದು ಎಂದು ಸ್ತ್ರೀವೇಷ ಧರಿಸಿಕೊಂಡು ಬಂದಿರುತ್ತಾರೆ.
ಆದರೆ ರಾಮಾಚಾರಿಯನ್ನು ತುಂಬಾ ದಿನಗಳಿಂದ ಮಿಸ್ ಮಾಡಿಕೊಳ್ಳುತ್ತಿದ್ದ ಚಾರು ಈಗ ಅವನ ಪ್ರೀತಿಯನ್ನು ಬಯಸುತ್ತಿದ್ದಾಳೆ. ಆದರೆ ಇಬ್ಬರೂ ಈಗ ದೂರ ದೂರ ಇರಲೇಬೇಕಾಗಿದೆ. ಆದರೆ ಅವಳಿಂದ ದೂರ ಇರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೇಗಾದರೂ ಮಾಡಿ ರಾಮಾಚಾರಿ ಸನಿಹಕ್ಕೆ ಹೋಗಬೇಕು ಎಂದು ಅವಳು ಪ್ರಯತ್ನ ಮಾಡುತ್ತಿದ್ದಾಳೆ. ಅವನು ಸಿಕ್ಕಿದ ತಕ್ಷಣ ತಬ್ಬಿಕೊಂಡಿದ್ದಾಳೆ. ತಬ್ಬಿಕೊಂಡವಳೇ ಅವನ ಕೆನ್ನೆಗೆ ಮುತ್ತು ಕೊಡುತ್ತಾ ಇದ್ದಾಳೆ.
ಅಣ್ಣಾಜಿ ಮನೆ ಹೆಂಗಸರಿಗೆ ಅನುಮಾನ
ಆಗ ಅಣ್ಣಾಜಿ ಮನೆಯ ಹೆಂಗಸರು ಅದೇ ದಾರಿಯಲ್ಲಿ ನಡೆದುಕೊಂಡು ಬರುತ್ತಾ ಇರುತ್ತಾರೆ. ಅವರಿಗೆ ಚಾರು ಮುತ್ತು ಕೊಟ್ಟಿರುವು ಕಾಣಿಸಿತು. ಯಾಕೆ ಈ ಇಬ್ಬರು ಹೆಂಗಸರು ಒಬ್ಬರನ್ನೊಬ್ಬರು ತಬ್ಬಿಕೊಂಡಿದ್ದಾರೆ ಎಂದು ಅಂದುಕೊಳ್ಳುತ್ತಾರೆ. ಮತ್ತು ಪ್ರಶ್ನೆ ಮಾಡುತ್ತಾರೆ. “ಡಾಕ್ಟ್ರೇ..ಇದೇನಿದು?” ಎಂದು ಪ್ರಶ್ನೆ ಮಾಡುತ್ತಾರೆ.
ರಾಮಾಚಾರಿ ಅಜ್ಜಿಯೂ ಇದೇ ಮನೆಯಲ್ಲಿದ್ದಾರೆ
ಅಜ್ಜಿ ಬಂದವರೇ ಬಡ ಬಡ ಎಂದು ಮಾತನಾಡಲು ಆರಂಭಿಸುತ್ತಾರೆ. ಯಾಕಪ್ಪ ಇವರು ಈ ಸಮಯದಲ್ಲಿ ಇಲ್ಲಿಗೆ ಬಂದ್ರು ಎಂದು ಎಲ್ಲರೂ ಆಲೋಚಿಸುತ್ತಾ ಎಲ್ಲರೂ ನಿಂತಿರುತ್ತಾರೆ. ಶೃತಿ ಹೇಗೋ ಎಲ್ಲವನ್ನೂ ನಿಭಾಯಿಸಲು ಪ್ರಯತ್ನ ಮಾಡುತ್ತಿದ್ದರೆ ಅಜ್ಜಿ ಮಾತ್ರ ಮಾತಾಡುವುದನ್ನು ನಿಲ್ಲಿಸುತ್ತಲೇ ಇಲ್ಲ. ರಾಮಾಚಾರಿ, ಚಾರು ಇಬ್ಬರೂ ಮನಸಿನಲ್ಲೇ ಬೈದುಕೊಳ್ಳುತ್ತಾರೆ. ಇನ್ನು ಮುರಾರಿಗೂ ಆಶ್ಚರ್ಯ ಆಗಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ