Ramachari Serial: ಅಣ್ಣಾಜಿ ಮನೆಯ ಸಂಪೂರ್ಣ ವಿವರ ರಾಮಾಚಾರಿ ಅಜ್ಜಿ ಬಾಯಲ್ಲಿ; ರುಕ್ಕು ಹಾಗೂ ಕಿಟ್ಟಿ ಮನೆಗೆ ಮೊದಲಿಂದಲೇ ಇತ್ತಾ ಸಂಬಂಧ?
ರಾಮಾಚಾರಿ ಧಾರಾವಾಹಿಯಲ್ಲಿ ರುಕ್ಕುವನ್ನು ಅಣ್ಣಾಜಿ ಮನೆಯಿಂದ ಪಾರು ಮಾಡಿಕೊಂಡು ಬರಲು ಚಾರು ನಿರ್ಧರಿಸಿದ್ದಾಳೆ. ಆದರೆ ಅವಳ ನಿರ್ಧಾರಕ್ಕೆ ಸಹಕಾರ ನೀಡುವವರ ಸಂಖ್ಯೆ ಹೆಚ್ಚಾಗಿ ಅವಾಂತರ ಆಗಿದೆ.
ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ಇಡೀ ಕುಟುಂಬವೇ ಈಗ ಅಣ್ಣಾಜಿ ಮನೆಯಲ್ಲಿದೆ. ಅವರೆಲ್ಲರೂ ಸೇರಿಕೊಂಡು ಹೇಗಾದರೂ ಮಾಡಿ ರುಕ್ಕುವನ್ನು ಒಂದು ಒಳ್ಳೆ ರೀತಿಯಿಂದ ಈ ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಲು ಬಯಸುತ್ತಿದ್ದಾರೆ. ಆದರೆ ಅದು ಸಾಧ್ಯ ಆಗುವ ರೀತಿ ಕಾಣದೇ ಇದ್ದಾಗ ತಮ್ಮ ಸಹಾಯಕ್ಕಾಗಿ ತಂಗಿ ಶೃತಿಯನ್ನು ಕರೆಯುತ್ತಾರೆ. ಆದರೆ ಶೃತಿ ಬರೋದಲ್ಲದೆ ಜೊತೆಯಲ್ಲಿ ಅಜ್ಜಿಯನ್ನು ಕೂಡ ಕರೆದುಕೊಂಡು ಬಂದಿದ್ದಾಳೆ. ಅಜ್ಜಿ ಬಂದಿರುವುದನ್ನು ನೋಡಿ ಜಾನಕಿ ಹಾಗೂ ಚಾರು ಶಾಕ್‌ನಲ್ಲಿದ್ದಾರೆ. ಇನ್ನು ಮುರಾರಿ ಮತ್ತು ರಾಮಾಚಾರಿಗೆ ಇನ್ನಷ್ಟು ತಲೆಬಿಸಿಯಾಗಿದೆ.
ಇಲ್ಲಿಂದ ಒಬ್ಬೊಬ್ಬರು ಮಾಯ ಆಗೋದು ಕೂಡ ಕಷ್ಟ ಇರುವ ಸಂದರ್ಭದಲ್ಲಿ ಈ ಅಜ್ಜಿ ಬೇರೆ ಬಂದುಬಿಟ್ಟಿದ್ದಾರೆ ಎಂದು ಅವರೆಲ್ಲ ಅಂದುಕೊಳ್ಳುತ್ತಾ ಇದ್ದಾರೆ. ಆದರೆ ಅಜ್ಜಿ ಮಾತ್ರ ನಾನು ಎಲ್ಲವನ್ನೂ ನಿಭಾಯಿಸುತ್ತೇನೆ ಎನ್ನುವ ಧೈರ್ಯದಲ್ಲಿ ಮಾತನಾಡುತ್ತಿದ್ದಾರೆ. ಅವರ ಮಾತಿನಲ್ಲಿ ನಿಖರತೆ ಇದೆ. ಅದನ್ನು ನೋಡಿ ರಾಮಾಚಾರಿ ಹಾಗೂ ಮುರಾರಿ ಇವರೇನು ನಮ್ಮ ಅಜ್ಜಿನಾ ಅಥವಾ ಅಣ್ಣಾಜಿ ಅಜ್ಜಿನಾ ಎಂದು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಅಜ್ಜಿ ಸುಲಭವಾಗಿ ಎಲ್ಲವನ್ನೂ ಹೇಳುತ್ತಿದ್ದಾಳೆ.
ಅಣ್ಣಾಜಿ ಯಾರು? ಅವರ ತಂದೆ ಯಾರು? ಅವರ ತಾತ ಯಾರು? ಅವರ ಮುತ್ತಾತ ಯಾರು? ಹೀಗೆಲ್ಲ ಪ್ರಶ್ನೆ ಕೇಳಿ ತನಗೆ ತಾನೇ ಉತ್ತರ ಹೇಳುತ್ತಿದ್ದಾಳೆ. ಅದನ್ನು ಕೇಳಿ ಅಣ್ಣಾಜಿ ಶಾಕ್ ಆಗಿದ್ದಾರೆ. ಅಜ್ಜಿ ಆಡುವ ಮಾತನ್ನು ಕೇಳಿದರೆ ಅಜ್ಜಿಗೆ ಈ ಹಿಂದೆಯೇ ಇಲ್ಲಿನ ಎಲ್ಲಾ ವಿಷಯಗಳೂ ಗೊತ್ತಿತ್ತು ಎಂದು ಕಾಣುತ್ತದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ
ವಿಭಾಗ