logo
ಕನ್ನಡ ಸುದ್ದಿ  /  Entertainment  /  Resul Pookutty Questioned About National Award To Dollu Movie

National Award: 'ಡೊಳ್ಳು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ...ಇಲ್ಲೂ ಚಕಾರವೆತ್ತಿದ ರೆಸುಲ್ ಪೂಕುಟ್ಟಿ

HT Kannada Desk HT Kannada

Jul 24, 2022 07:25 AM IST

'ಡೊಳ್ಳು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡಿದ್ದನ್ನು ಪ್ರಶ್ನಿಸಿದ ರೆಸುಲ್ ಪೂಕುಟ್ಟಿ

    • ರೆಸುಲ್ ಪೂಕುಟ್ಟಿ ಅವರ ಈ ವರ್ತನೆಗೆ ಕನ್ನಡಿಗರು ಕಿಡಿ ಕಾರಿದ್ದಾರೆ. ಈಗಂತೂ ಕನ್ನಡದ ಸಿನಿಮಾಗಳು ಹಾಗೂ ನಟರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ರೆಸುಲ್ ಪೂಕುಟ್ಟಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಅವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.
'ಡೊಳ್ಳು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡಿದ್ದನ್ನು ಪ್ರಶ್ನಿಸಿದ ರೆಸುಲ್ ಪೂಕುಟ್ಟಿ
'ಡೊಳ್ಳು' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ನೀಡಿದ್ದನ್ನು ಪ್ರಶ್ನಿಸಿದ ರೆಸುಲ್ ಪೂಕುಟ್ಟಿ

'ಆರ್​ಆರ್​​ಆರ್' ಚಿತ್ರದ ಬಗ್ಗೆ ಮಾತನಾಡಿದ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದ ಆಸ್ಕರ್ ಪ್ರಶಸ್ತಿ ವಿಜೇತ ರೆಸುಲ್ ಪೂಕುಟ್ಟಿ ಇದೀಗ ಕನ್ನಡದ ಡೊಳ್ಳು ಸಿನಿಮಾಗೆ ರಾಷ್ಟ್ರಪ್ರಶಸ್ತಿ ಬಂದಿರುವ ಬಗ್ಗೆ ಚಕಾರವೆತ್ತಿದ್ದಾರೆ. ಈ ವಿಚಾರ ಮತ್ತೆ ಕನ್ನಡಿಗರನ್ನು ಕೆರಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ? ಫಿಟ್‌ ಆಗಿರಲು ಬಯಸೋರಿಗೆ ಟಿಪ್ಸ್‌

ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಇವ್ರಿಗೆ ರಾಮಾಯಣದ ಸೀತೆಯಾಗುವ ಅರ್ಹತೆ ಇಲ್ವಂತೆ; ಸಹಜ ಸುಂದರಿ ಮೇಲೆ ಏಕೆ ಕೋಪ, ಇಲ್ಲಿದೆ ವಿವರ

ಆದಿತ್ಯ- ರಂಜನಿ ರಾಘವನ್‌ ಅಭಿನಯದ ಕಾಂಗರೂ ಸಿನಿಮಾ ಮೇ 3ರಂದು ಬಿಡುಗಡೆ; ಪೀಣ್ಯ ಇಂಡಸ್ಟ್ರಿ ಸ್ನೇಹಿತರ ಸಾಹಸವಿದು

Thandel Movie: ನಾಗ ಚೈತನ್ಯ, ಸಾಯಿ ಪಲ್ಲವಿ ನಟನೆಯ ತಾಂಡೇಲ್ ಡಿಜಿಟಲ್‌ ಹಕ್ಕು ಬಿಡುಗಡೆಗೆ ಮುನ್ನವೇ ದಾಖಲೆ ಮೊತ್ತಕ್ಕೆ ಮಾರಾಟ

ಇತ್ತೀಚೆಗಷ್ಟೇ 68 ರಾಷ್ಟ್ರೀಯ ಪ್ರಶಸ್ತಿ ಪ್ರಕಟವಾಗಿತ್ತು. ಕನ್ನಡದ ಮೂರು ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿತ್ತು. ಅದರಲ್ಲಿ ಪವನ್ ಒಡೆಯರ್ ನಿರ್ಮಿಸಿ, ಸಾಗರ್ ಪುರಾಣಿಕ್ ನಿರ್ದೇಶಿಸಿರುವ ಡೊಳ್ಳು ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಕನ್ನಡ ಸಿನಿಮಾ ಹಾಗೂ ಅತ್ಯುತ್ತಮ ಆಡಿಯೋಗ್ರಫಿ ವಿಭಾಗದಲ್ಲಿ ಪ್ರಶಸ್ತಿ ದೊರೆತಿತ್ತು. ಆದರೆ ರೆಸುಲ್ ಪೂಕುಟ್ಟಿ ತಮ್ಮ ಟ್ವಿಟ್ಟರ್​​​​​​ನಲ್ಲಿ ಇದರ ಬಗ್ಗೆ ಪ್ರಶ್ನಿಸಿದ್ದಾರೆ. ಡೊಳ್ಳು ಚಿತ್ರಕ್ಕೆ ಆಡಿಯೋಗ್ರಫಿ ವಿಭಾಗದಲ್ಲಿ ಪ್ರಶಸ್ತಿ ದೊರೆತಿರುವುದನ್ನು ಪ್ರಶ್ನಿಸಿರುವ ಅವರು, ಇದೊಂದು ಡಬ್ ಸಿನಿಮಾ ಎಂದು ಚಿತ್ರದ ಸೌಂಡ್ ಡಿಸೈನರ್ ನಿತಿನ್ ಲುಕೊಸೆ ಅವರೇ ಹೇಳಿದ್ದಾರೆ. ಅಂತದ್ದರಲ್ಲಿ ಅತ್ಯುತ್ತಮ ಆಡಿಯೋಗ್ರಫಿ ವಿಭಾಗದಲ್ಲಿ ಈ ಚಿತ್ರಕ್ಕೆ ಏಕೆ ಪ್ರಶಸ್ತಿ ನೀಡಬೇಕಾಯ್ತು ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಾಗರ್ ಪುರಾಣಿಕ್ ಹಾಗೂ ನಿರ್ಮಾಪಕ ಪವನ್ ಒಡೆಯರ್ ನಮ್ಮದು ಸೌಂಡ್ ಸಿಂಕ್ ಸಿನಿಮಾ ಅಲ್ಲ, ಹೌದು. ಆದರೆ ನಾವು ಆ ವಿಭಾಗದಲ್ಲಿ ಅರ್ಜಿ ಕೂಡಾ ಸಲ್ಲಿಸಿರಲಿಲ್ಲ. ಅದೇ ರೀತಿ ಹೊರಾಂಗಣದಲ್ಲಿ ಡೊಳ್ಳು ಬಡಿತದ ಚಿತ್ರೀಕರಣ ಮಾಡಿ ಡಬ್ಬಿಂಗ್ ಮಾಡಿ ಅದಕ್ಕೆ ತಕ್ಕಂತೆ ಸೌಂಡ್ ಸಿಂಕ್ ಮಾಡುವುದು ಅಷ್ಟು ಸುಲಭದ ಮಾತು ಕೂಡಾ ಅಲ್ಲ. ಸೌಂಡ್ ಬಹಳ ನೈಜವಾಗಿ ಬರಬೇಕು ಎಂಬ ಕಾರಣಕ್ಕೆ ಸಾಗರ್ ಪುರಾಣಿಕ್ ಹಾಗೂ ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್ ಜೋಬಿನ್ ಜಯನ್ ಬಹಳ ಶ್ರಮ ವಹಿಸಿದ್ದಾರೆ. ಅವರಿಬ್ಬರ ಶ್ರಮ ಏನು ಎಂಬುದು ರಾಷ್ಟ್ರಪ್ರಶಸ್ತಿ ಸಮಿತಿ ಸದಸ್ಯರಿಗೆ ಅರ್ಥವಾಗಿದೆ. ಯಾವ ಚಿತ್ರಕ್ಕೆ ಯಾವ ವಿಭಾಗಕ್ಕೆ ಪ್ರಶಸ್ತಿ ನೀಡಬೇಕು ಎಂಬುದು ತೀರ್ಪುಗಾರರ ಸಮಿತಿಯ ಸದಸ್ಯರಿಗೆ ತಿಳಿದಿದೆ ಎಂದಿದ್ದಾರೆ.

ರೆಸುಲ್ ಪೂಕುಟ್ಟಿ ಅವರ ಈ ವರ್ತನೆಗೆ ಕನ್ನಡಿಗರು ಕಿಡಿ ಕಾರಿದ್ದಾರೆ. ಈಗಂತೂ ಕನ್ನಡದ ಸಿನಿಮಾಗಳು ಹಾಗೂ ನಟರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇದು ರೆಸುಲ್ ಪೂಕುಟ್ಟಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಅವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

'ಆರ್​​ಆರ್​​ಆರ್' ಚಿತ್ರವನ್ನು ಗೇ ಲವ್ ಸ್ಟೋರಿ ಎಂದಿದ್ದ ರೆಸುಲ್ ಪೂಕುಟ್ಟಿ

ಕೆಲವು ದಿನಗಳ ಹಿಂದೆ ಕೂಡಾ ರೆಸುಲ್ ಪೂಕುಟ್ಟಿ ರಾಜಮೌಳಿ ನಿರ್ದೇಶನದ 'ಆರ್​​ಆರ್​​ಆರ್' ಚಿತ್ರದ ಬಗ್ಗೆ ಮಾಡಬಾರದ ಕಮೆಂಟ್ ಮಾಡಿ ತೆಲುಗು ಸಿನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೊಂದು ಗೇ ಲವ್ ಸ್ಟೋರಿ ಎಂದು ರೆಸುಲ್, ಕಮೆಂಟ್ ಮಾಡಿದ್ದರು. ಇದರಿಂದ ರಾಮ್ ಚರಣ್, ಜ್ಯೂನಿಯರ್ ಎನ್​ಟಿಆರ್​​​​, ರಾಜಮೌಳಿ ಅಭಿಮಾನಿಗಳು ರೆಸುಲ್ ಪೂಕುಟ್ಟಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆರ್​ಆರ್​ಆರ್ ತಂಡ ಕೂಡಾ ಆತನಿಗೆ ಸರಿಯಾಗಿ ಉತ್ತರ ನೀಡಿತ್ತು. ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಕೂಡಾ ರೆಸುಲ್ ಪೂಕುಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು