logo
ಕನ್ನಡ ಸುದ್ದಿ  /  Entertainment  /  Rishabh Shetty Will Represent The Kannada Film Industry At The Ottplay Changemaker Award Program

OTTplay Changemaker Award 2023: ಒಟಿಟಿ ಪ್ಲೇ ಚೇಂಜ್‌ ಮೇಕರ್‌ ಅವಾರ್ಡ್‌ ಕಾರ್ಯಕ್ರಮ; ಸ್ಯಾಂಡಲ್‌ವುಡ್‌ನಿಂದ ರಿಷಬ್‌ ಶೆಟ್ಟಿ ಭಾಗಿ

Mar 26, 2023 01:55 PM IST

ನಾಳೆ ಒಟಿಟಿಪ್ಲೇ ಚೇಂಜ್‌ಮೇಕರ್‌ ಅವಾರ್ಡ್‌ ಕಾರ್ಯಕ್ರಮ; ಸ್ಯಾಂಡಲ್‌ವುಡ್‌ನಿಂದ ರಿಷಬ್‌ ಶೆಟ್ಟಿ ಭಾಗಿ

  • ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ, ತಮ್ಮ ಕೆಲಸಗಳ ಮೂಲಕವೇ ಜನಜನಿತರಾದ, ದೇಶವೇ ಹೆಮ್ಮೆ ಪಡುವಂತೆ ಮಾಡಿದ ವ್ಯಕ್ತಿಗಳನ್ನು ಒಟಿಟಿ ಪ್ಲೇ ತನ್ನ ಮೊದಲ ಆವೃತ್ತಿಯಲ್ಲಿ OTTplay Changemaker ಅವಾರ್ಡ್‌ ನೀಡಿ ಗೌರವಿಸುತ್ತಿದೆ.

ನಾಳೆ ಒಟಿಟಿಪ್ಲೇ ಚೇಂಜ್‌ಮೇಕರ್‌ ಅವಾರ್ಡ್‌ ಕಾರ್ಯಕ್ರಮ; ಸ್ಯಾಂಡಲ್‌ವುಡ್‌ನಿಂದ ರಿಷಬ್‌ ಶೆಟ್ಟಿ ಭಾಗಿ
ನಾಳೆ ಒಟಿಟಿಪ್ಲೇ ಚೇಂಜ್‌ಮೇಕರ್‌ ಅವಾರ್ಡ್‌ ಕಾರ್ಯಕ್ರಮ; ಸ್ಯಾಂಡಲ್‌ವುಡ್‌ನಿಂದ ರಿಷಬ್‌ ಶೆಟ್ಟಿ ಭಾಗಿ

OTTplay Changemaker Award 2023: ಹಿಂದೂಸ್ತಾನ್‌ ಟೈಮ್ಸ್‌ ಗ್ರೂಪ್‌ನ ಸೋದರ ಸಂಸ್ಥೆಯಾಗಿರುವ OTTPlay ಆಯೋಜಿಸಲಿರುವ ಒಟಿಟಿ ಪ್ಲೇ ಚೇಂಜ್‌ಮೇಕರ್ ಅವಾರ್ಡ್‌ಗೆ ಕ್ಷಣಗಣನೆ ಶುರುವಾಗಿದೆ. OTTplay Changemaker ಪ್ರಶಸ್ತಿಗಳ ಮೊದಲ ಆವೃತ್ತಿ, ಕಲರ್‌ಫುಲ್‌ ದೀಪಾಲಂಕಾರಗಳ ನಡುವೆ, ಕೆಂಪು ಹಾಸಿನ ಸೊಬಗಿನಲ್ಲಿ ಇಂದು (ಮಾರ್ಚ್ 26) ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ರಮೇಶ್‌ ಅರವಿಂದ್‌ ನಿರ್ಮಾಣದ ನೀನಾದೆ ನಾ ಸೀರಿಯಲ್‌ಗೆ ಗುಡ್‌ಬೈ ಹೇಳಿದ ಭವ್ಯ ಪೂಜಾರಿ; ಮತ್ತೊಮ್ಮೆ ಭೇಟಿಯಾಗೋಣ ಎಂದ ಶೈಲೂ

ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ? ಫಿಟ್‌ ಆಗಿರಲು ಬಯಸೋರಿಗೆ ಟಿಪ್ಸ್‌

ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಇವ್ರಿಗೆ ರಾಮಾಯಣದ ಸೀತೆಯಾಗುವ ಅರ್ಹತೆ ಇಲ್ವಂತೆ; ಸಹಜ ಸುಂದರಿ ಮೇಲೆ ಏಕೆ ಕೋಪ, ಇಲ್ಲಿದೆ ವಿವರ

ಆದಿತ್ಯ- ರಂಜನಿ ರಾಘವನ್‌ ಅಭಿನಯದ ಕಾಂಗರೂ ಸಿನಿಮಾ ಮೇ 3ರಂದು ಬಿಡುಗಡೆ; ಪೀಣ್ಯ ಇಂಡಸ್ಟ್ರಿ ಸ್ನೇಹಿತರ ಸಾಹಸವಿದು

ಇತ್ತೀಚಿನ ದಿನಗಳಲ್ಲಿ ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ಟ್ರೆಂಡ್‌ ಸೆಟ್‌ ಮಾಡಿದ, ತಮ್ಮ ಕೆಲಸಗಳ ಮೂಲಕವೇ ಜನಜನಿತರಾದ, ದೇಶವೇ ಹೆಮ್ಮೆ ಪಡುವಂತೆ ಮಾಡಿದ ವ್ಯಕ್ತಿಗಳನ್ನು ಒಟಿಟಿ ಪ್ಲೇ ತನ್ನ ಮೊದಲ ಆವೃತ್ತಿಯಲ್ಲಿ Changemaker ಅವಾರ್ಡ್‌ ನೀಡಿ ಗೌರವಿಸುತ್ತಿದೆ. ಈ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾರತೀಯ ಸಿನಿಮಾ ಕ್ಷೇತ್ರದ ಗಣ್ಯರ ಜತೆಗೆ ತಂತ್ರಜ್ಞರು, ಕಂಟೆಂಟ್‌ ಕ್ರಿಯೇಟರ್‌ಗಳೂ ಭಾಗವಹಿಸಲಿದ್ದಾರೆ.

40 ಜನರಿಗೆ ಗೌರವ ಸಮರ್ಪಣೆ..

ಮೊದಲ ಆವೃತ್ತಿಯ ಈ ಅವಾರ್ಡ್‌ ಕಾರ್ಯಕ್ರಮದಲ್ಲಿ ಒಟ್ಟು 40 ಜನರನ್ನು ಗೌರವಿಸಲಾಗುತ್ತದೆ. ಇದರಲ್ಲಿ ನಿರ್ದೇಶಕರು, ನಟ, ನಟಿಯರು, ಕಂಟೆಂಟ್‌ ಕ್ರಿಯೇಟರ್ಸ್‌, ತಂತ್ರಜ್ಞರು ಭಾಗವಹಿಸಲಿದ್ದಾರೆ. ಫಿಲಂ ಮೇಕರ್‌ ಇನ್‌ ದಿ ಸ್ಪಾಟ್‌ಲೈಟ್‌, ಪಾತ್‌ ಬ್ರೇಕಿಂಗ್‌ ಫರ್ಫಾಮರ್‌, ಎಂಟರ್‌ಟೈನರ್‌ ಆಫ್‌ ದಿ ಡಿಕೇಡ್‌, ಬೆಸ್ಟ್‌ ವಿಎಫ್‌ಎಕ್ಸ್‌, ರೈಸಿಂಗ್‌ ಸ್ಟಾರ್‌ ಆಫ್‌ ದಿ ಇಯರ್‌ ಸೇರಿ ಇನ್ನು ಹತ್ತು ಹಲವು ವಿಭಾಗಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಕಾಂತಾರ ಯಶಸ್ಸು; ರಿಷಬ್‌ ಶೆಟ್ಟಿ ಭಾಗಿ..

ಈ ವಾರ್ಡ್‌ ಕಾರ್ಯಕ್ರಮದಲ್ಲಿ ದಿ ಎಲಿಫೆಂಟ್‌ ವಿಸ್ಪರ್ಸ್‌ ಮೂಲಕ ಆಸ್ಕರ್‌ ಪ್ರಶಸ್ತಿ ವಿಜೇತ ಗುನೀತ್‌ ಮೊಂಗಾ ಭಾಗವಹಿಸುತ್ತಿದ್ದಾರೆ. ಇವರ ಜತೆಗೆ ಕಾಂತಾರ ಸಿನಿಮಾ ಮೂಲಕವೇ ಇಡೀ ದೇಶವೇ ಕನ್ನಡ ಸಿನಿಮಾರಂಗದತ್ತ ತಿರುಗಿ ನೋಡುವಂತೆ ಮಾಡಿದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಸಹ ಪಾಲ್ಗೊಳ್ಳಲಿದ್ದಾರೆ. ಇನ್ನುಳಿದಂತೆ, ಸೌತ್‌ ಮತ್ತು ಬಾಲಿವುಡ್‌ನ ನಟ, ನಟಿಯರೂ ರೆಡ್‌ ಕಾರ್ಪೆಟ್‌ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಾಜ್‌ಕುಮಾರ್ ರಾವ್, ಪ್ರೊಸೆನ್‌ಜಿತ್ ಚಟರ್ಜಿ, ಅಯಾನ್ ಮುಖರ್ಜಿ, ಐಶ್ವರ್ಯ ರಾಜೇಶ್, ಜೋಜು ಜಾರ್ಜ್, ಪ್ರಿಯಾಮಣಿ, ಸಯಾನಿ ಗುಪ್ತಾ ಕಲರ್‌ಫುಲ್‌ ಸಂಜೆಯಲ್ಲಿ ಕೆಂಪು ಹಾಸಿನ ಮೇಲೆ ವಾಕ್‌ ಮಾಡಲಿದ್ದಾರೆ.

ಒಟಿಟಿಪ್ಲೇ ಸಹ ಸಂಸ್ಥಾಪಕ ಮತ್ತು ಸಿಇಒ ಅವಿನಾಶ್ ಮುದಲಿಯಾರ್ ಈ ಪ್ರಶಸ್ತಿ ಪ್ರದಾನದ ಬಗ್ಗೆ ಮಾತನಾಡಿದ್ದಾರೆ. “ಒಟಿಟಿಪ್ಲೇ ಚೇಂಜ್‌ಮೇಕರ್‌ ಅವಾರ್ಡ್‌ 2023 ಮೊದಲ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ, ಟ್ರೆಂಡ್‌ ಸೆಟ್‌ ಮಾಡಿದ ಸಾಕಷ್ಟು ಮಂದಿಗೆ ನಮ್ಮ ಕಡೆಯಿಂದ ಸಿಗುವ ಗೌರವವಿದು. ಇದರ ಜತೆಗೆ ಸಿನಿಮಾ ಕ್ಷೇತ್ರದ ಬೆಳವಣಿಗೆಯಲ್ಲಿ ಪಾಲುದಾರರಾಗಿರುವ ಇನ್ಫ್ಲೂಯೆನ್ಸರ್‌ಗಳಿಗೂ ಇಲ್ಲಿ ಗುರುತಿಸಿ ಗೌರವಿಸಲಾಗುತ್ತದೆ" ಎಂದಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು