logo
ಕನ್ನಡ ಸುದ್ದಿ  /  Entertainment  /  Rocking Star Yash Will Be Seen As Raavan In Nitesh Tiwari S Ramayan Film

Yash as Raavana: ಯಶ್‌ ಈಗ ರಾವಣಾಸುರ!?; ಬಾಲಿವುಡ್‌ ಅಂಗಳದಿಂದ ಬಂತು ‘ರಾಮಾಯಣ’ ಅಪ್‌ಡೇಟ್‌...

HT Kannada Desk HT Kannada

Jan 30, 2023 09:43 AM IST

ಯಶ್‌ ಈಗ ರಾವಣಾಸುರ!?; ಬಾಲಿವುಡ್‌ ಅಂಗಳದಿಂದ ಬಂತು ‘ರಾಮಾಯಣ’ ಅಪ್‌ಡೇಟ್‌...

    • ರಾಕಿಂಗ್‌ ಸ್ಟಾರ್‌ ಯಶ್‌ ಈಗ ರಾವಣ ಆಗಲಿದ್ದಾರೆ ಎಂಬ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅದೂ ಬಾಲಿವುಡ್‌ ಸಿನಿಮಾ ವಿಚಾರವಾಗಿ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 
ಯಶ್‌ ಈಗ ರಾವಣಾಸುರ!?; ಬಾಲಿವುಡ್‌ ಅಂಗಳದಿಂದ ಬಂತು ‘ರಾಮಾಯಣ’ ಅಪ್‌ಡೇಟ್‌...
ಯಶ್‌ ಈಗ ರಾವಣಾಸುರ!?; ಬಾಲಿವುಡ್‌ ಅಂಗಳದಿಂದ ಬಂತು ‘ರಾಮಾಯಣ’ ಅಪ್‌ಡೇಟ್‌...

Yash as Raavana: ‘ರಾಮಾಯಣ’‌ ಹಿಂದೂ ಮಹಾಕಾವ್ಯಗಳಲ್ಲಿ ಒಂದು. ಆ ರಾಮಾಯಣ ಸಿನಿಮಾ ರೂಪದಲ್ಲಿ ಸೀರಿಯಲ್‌ ರೂಪದಲ್ಲಿ ಈಗಾಗಲೇ ಪ್ರಸಾರವಾಗಿವೆ. ಆದರೆ, ಇತ್ತೀಚಿನ ಕೆಲ ದಶಕಗಳಿಂದ ಅಂಥ ಪ್ರಯತ್ನಗಳು ಭಾರತೀಯ ಸಿನಿಮಾರಂಗದಲ್ಲಿ ನಡೆದಿಲ್ಲ. ಪ್ರಭಾಸ್‌ ಅವರ ಆದಿಪುರುಷ್‌ ಸಿನಿಮಾ ಹೊರತುಪಡಿಸಿ ಆಗಾಗ ಅಂಥ ಕೆಲ ಚರ್ಚೆಗಳು ಮುನ್ನೆಲೆಗೆ ಬಂದರೂ ಸದ್ದು ಮಾಡಿ ಹಿಂದೆ ಸರಿಯುತ್ತವೆಯೇ ಹೊರತು ಅಧಿಕೃತ ಘೋಷಣೆ ಮಾತ್ರ ಯಾವುದೂ ಆಗಿಲ್ಲ. ಈಗ ಕಳೆದ ವರ್ಷದಿಂದ ಸುದ್ದಿಯಲ್ಲಿದ್ದ ‘ರಾಮಾಯಣ’ ಸಿನಿಮಾ ವಿಚಾರ ಮತ್ತೆ ಸುದ್ದಿಯಲ್ಲಿದೆ. ಅದೂ ಸಹ ಚಿತ್ರದ ಸ್ಟಾರ್‌ ಕಾಸ್ಟ್‌ ವಿಚಾರವಾಗಿ.

ಟ್ರೆಂಡಿಂಗ್​ ಸುದ್ದಿ

ರಮೇಶ್‌ ಅರವಿಂದ್‌ ನಿರ್ಮಾಣದ ನೀನಾದೆ ನಾ ಸೀರಿಯಲ್‌ಗೆ ಗುಡ್‌ಬೈ ಹೇಳಿದ ಭವ್ಯ ಪೂಜಾರಿ; ಮತ್ತೊಮ್ಮೆ ಭೇಟಿಯಾಗೋಣ ಎಂದ ಶೈಲೂ

ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ? ಫಿಟ್‌ ಆಗಿರಲು ಬಯಸೋರಿಗೆ ಟಿಪ್ಸ್‌

ಬೈಕಾಟ್‌ ಸಾಯಿ ಪಲ್ಲವಿ ಅಭಿಯಾನ, ಇವ್ರಿಗೆ ರಾಮಾಯಣದ ಸೀತೆಯಾಗುವ ಅರ್ಹತೆ ಇಲ್ವಂತೆ; ಸಹಜ ಸುಂದರಿ ಮೇಲೆ ಏಕೆ ಕೋಪ, ಇಲ್ಲಿದೆ ವಿವರ

ಆದಿತ್ಯ- ರಂಜನಿ ರಾಘವನ್‌ ಅಭಿನಯದ ಕಾಂಗರೂ ಸಿನಿಮಾ ಮೇ 3ರಂದು ಬಿಡುಗಡೆ; ಪೀಣ್ಯ ಇಂಡಸ್ಟ್ರಿ ಸ್ನೇಹಿತರ ಸಾಹಸವಿದು

ದಂಗಲ್‌ ನಿರ್ದೇಶಕನ ಸಾಹಸ..

ಆಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾ ನಿರ್ದೇಶನ ಮಾಡಿದ್ದ ನಿತೀಶ್‌ ತಿವಾರಿ ‘ರಾಮಾಯಣ’ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಹೀಗೊಂದು ಸುದ್ದಿ ಬಾಲಿವುಡ್‌ನಲ್ಲಿ ಈ ಹಿಂದೆಯೇ ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೆ ಚರ್ಚೆಯಲ್ಲಿದೆ. ಈ ಸಿನಿಮಾದಲ್ಲಿ ಯಾರೆಲ್ಲ ಪಾತ್ರಧಾರಿಗಳು ಕಾಣಿಸಿಕೊಳ್ಳಲಿದ್ದಾರೆ ಎಂಬ ಅಂತೆಕಂತೆಗಳೂ ಚರ್ಚೆಗೆ ಆಸ್ಪದ ನೀಡಿದ್ದವು. ಬಿಟೌನಿನ ಸ್ಟಾರ್‌ ಕಲಾವಿದರೇ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಎಂಬ ಸುದ್ದಿ ಹರಿದಾಡಿತ್ತು.

ನಿತೀಶ್‌ ತಿವಾರಿ ‘ರಾಮಾಯಣ’ ಸಿನಿಮಾ ರೂಪ ಪಡೆದರೆ, ಅದರಲ್ಲಿ ಹೃತಿಕ್‌ ರೋಷನ್, ರಣಬೀರ್‌ ಕಪೂರ್‌, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ರಾಮನಾಗಿ ರಣಬೀರ್‌ ಕಪೂರ್‌, ರಾವಣನಾಗಿ ಹೃತಿಕ್‌ ರೋಷನ್ ಮತ್ತು ಸೀತೆಯಾಗಿ ದೀಪಿಕಾ ಪಡುಕೋಣೆ ಹೆಸರು ಕೇಳಿಬಂದಿತ್ತು. ಈಗ ಇದೇ ಪ್ರಾಜೆಕ್ಟ್‌ ಬಗ್ಗೆ ಇದೀಗ ಹೊಸ ಸುದ್ದಿ ಕೇಳಿಬಂದಿದೆ.

ರಾವಣನಾಗಿ ಯಶ್!?‌

ರಾಕಿಂಗ್‌ ಸ್ಟಾರ್ ಯಶ್‌ ಮುಂದಿನ ಸಿನಿಮಾ ಬಗ್ಗೆ ಸಣ್ಣ ಸುಳಿವೂ ಹೊರಬಿದ್ದಿಲ್ಲ. ಅಭಿಮಾನಿ ವಲಯದಲ್ಲಿ ಮನೆ ಮಾಡಿರುವ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ‘ಕೆಜಿಎಫ್‌ 2’ ಸಿನಿಮಾ ತೆರೆಕಂಡ ಮೇಲಿಂದ ನಟ ಯಶ್‌ ಅವರ ಮುಂದಿನ ಸಿನಿಮಾ ಘೋಷಣೆ ಆಗಿಲ್ಲ. ಈಗ ಇದೇ ಯಶ್‌ ಹೆಸರು ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿದೆ. ರಿತೇಶ್‌ ಕುಮಾರ್‌ ನಿರ್ದೇಶನ ಮಾಡಲಿರುವ ‘ರಾಮಾಯಣ’ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಹಾಗಾದರೆ ಅವರ ಪಾತ್ರವಾದರೂ ಏನು? ಅದೇ ರಾವಣನ ಅವತಾರ!

ಈ ಮೊದಲು ರಾವಣನ ಪಾತ್ರದಲ್ಲಿ ಹೃತಿಕ್‌ ರೋಷನ್‌ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ವಿಕ್ರಂ ವೇದ ಚಿತ್ರದಲ್ಲಿ ನೆಗೆಟಿವ್‌ ಅವತಾರ ಎತ್ತಿದ್ದ ಅವರ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿರಲಿಲ್ಲ. ಹಾಗಾಗಿ ನೆಗೆಟಿವ್‌ ಪಾತ್ರಗಳ ಸಹವಾಸದಿಂದ ಅವರು ದೂರವೇ ಉಳಿದಿದ್ದಾರಂತೆ. ಆ ಪೈಕಿ ‘ರಾಮಾಯಣ’ದ ರಾವಣನ ಪಾತ್ರವನ್ನೂ ಕೈ ಬಿಟ್ಟಿದ್ದಾರಂತೆ. ಹೃತಿಕ್‌ ರಾವಣನ ಪಾತ್ರದಿಂದ ಹಿಂದೆ ಸರಿಯುತ್ತಿದ್ದಂತೆ, ಅವರ ಜಾಗಕ್ಕೆ ಯಶ್‌ ಹೆಸರು ಸೇರಿಕೊಂಡಿದೆ ಎಂದು ಹಿಂದಿಯ ಕೆಲ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಯಶ್‌ ಹೊಸ ಲುಕ್‌ ಹಿಂದಿನ ಮರ್ಮವೇನು?

ನಟ ಯಶ್‌ ಸದ್ಯ ಕೇವಲ ಸ್ಯಾಂಡಲ್‌ವುಡ್‌ಗೆ ಮಾತ್ರವಲ್ಲದೆ, ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಬೆಳೆದು ನಿಂತಿದ್ದಾರೆ. ಅವರ ಸಿನಿಮಾಕ್ಕೆ ಎಲ್ಲರೂ ಕಾದು ಕುಳಿತಿದ್ದಾರೆ. ಆದರೆ, ಅವರ ಮುಂದಿನ ಸಿನಿಮಾ ಯಾವುದೆಂಬ ವಿಚಾರ ಮಾತ್ರ ಇನ್ನೂ ಲಭ್ಯವಾಗಿಲ್ಲ. ಹೀಗಿರುವಾಗಲೇ ಯಶ್‌ ಅವರ ಮಾಸ್‌ ಲುಕ್‌ವೊಂದು ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್‌ ನೋಡಿ ಇದು ಯಶ್‌ ಹೊಸ ಸಿನಿಮಾದ ಶೂಟಿಂಗ್‌ ಇರಬಹುದಾ ಎಂದೇ ಹೇಳಲಾಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು