logo
ಕನ್ನಡ ಸುದ್ದಿ  /  ಮನರಂಜನೆ  /  17 ವರ್ಷಗಳ ಹಿಂದಿನ ಉಪೇಂದ್ರ ಅಭಿನಯದ ಚಿತ್ರ ಬಿಡುಗಡೆಗೆ ಸಿದ್ಧ; ಜನವರಿಯಲ್ಲಿ ತೆರೆ ಕಾಣಲಿದೆ 'ರಕ್ತ ಕಾಶ್ಮೀರ' ಸಿನಿಮಾ

17 ವರ್ಷಗಳ ಹಿಂದಿನ ಉಪೇಂದ್ರ ಅಭಿನಯದ ಚಿತ್ರ ಬಿಡುಗಡೆಗೆ ಸಿದ್ಧ; ಜನವರಿಯಲ್ಲಿ ತೆರೆ ಕಾಣಲಿದೆ 'ರಕ್ತ ಕಾಶ್ಮೀರ' ಸಿನಿಮಾ

Suma Gaonkar HT Kannada

Dec 04, 2024 01:42 PM IST

google News

17 ವರ್ಷಗಳ ಹಿಂದಿನ ಉಪೇಂದ್ರ ಅಭಿನಯದ ಚಿತ್ರ ಈಗ ತೆರೆಗೆ ಬರಲು ಸಿದ್ಧ

    • ಉಪೇಂದ್ರ ಅಭಿನಯದ ‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಉಪೇಂದ್ರ ಅಭಿನಯದ ಹಳೆಯ ಚಿತ್ರ ‘ರಕ್ತ ಕಾಶ್ಮೀರ’ ಜನವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.
17 ವರ್ಷಗಳ ಹಿಂದಿನ ಉಪೇಂದ್ರ ಅಭಿನಯದ ಚಿತ್ರ ಈಗ ತೆರೆಗೆ ಬರಲು ಸಿದ್ಧ
17 ವರ್ಷಗಳ ಹಿಂದಿನ ಉಪೇಂದ್ರ ಅಭಿನಯದ ಚಿತ್ರ ಈಗ ತೆರೆಗೆ ಬರಲು ಸಿದ್ಧ

2007ರಲ್ಲಿ ಎಸ್‍.ವಿ. ರಾಜೇಂದ್ರ ಸಿಂಗ್‍ ಬಾಬು ನಿರ್ದೇಶದನದಲ್ಲಿ ಉಪೇಂದ್ರ ಮತ್ತು ರಮ್ಯಾ ಅಭಿನಯದಲ್ಲಿ ‘ಭೀಮೂಸ್‍ ಬ್ಯಾಂಗ್‍ ಬ್ಯಾಂಗ್‍ ಕಿಡ್ಸ್’ ಎಂಬ ಚಿತ್ರ ಪ್ರಾರಂಭವಾಗಿತ್ತು. ಆ ಕಾಲಕ್ಕೆ ಅತ್ಯಂತ ದುಬಾರಿ ಬಜೆಟ್‍ನ ಚಿತ್ರವಾಗಿತ್ತು ಅದು. ಫ್ಯಾಂಟಸಿ ಅಂಶಗಳಿರುವ ಈ ಚಿತ್ರವನ್ನು ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಸುದ್ದಿಯಾಗಿತ್ತು. ಗ್ರಾಫಿಕ್ಸ್ ಬಳಕೆ ಕಡಿಮೆ ಇದ್ದ ಕಾಲದಲ್ಲಿ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಗ್ರಾಫಿಕ್ಸ್ ಬಳಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ವಿಷ್ಣುವರ್ಧನ್‍ ಮತ್ತು ಅಂಬರೀಶ್‍ ಅವರ ಸಮ್ಮುಖದಲ್ಲಿ ಈ ಚಿತ್ರವು ಅಶೋಕ ಹೋಟೆಲ್‍ನಲ್ಲಿ ದೊಡ್ಡ ಪ್ರಮಾಣದಲ್ಲಿ ಸೆಟ್ಟೇರಿತ್ತು. ಈ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ಮುಗಿದರೂ, ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ. ಈಗ ಇದೇ ಚಿತ್ರವು 17 ವರ್ಷಗಳ ನಂತರ ‘ರಕ್ತ ಕಾಶ್ಮೀರ’ ಎಂಬ ಹೆಸರಿನಲ್ಲಿ ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಮಾ ಯಾವ ರೀತಿ ಕಥೆ ಹೊಂದಿದೆ?

ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.‌ ಇದೇ ಚಿತ್ರದ ಪ್ರಮುಖ ಕಥಾಹಂದರವಾಗಿದೆ. ಗಡಿ ಪ್ರದೇಶ ಅಷ್ಟೇ ಅಲ್ಲ. ಬೆಂಗಳೂರಿನಲ್ಲೂ ಉಗ್ರಗಾಮಿಗಳ ಕಾಟವಿದೆ. ಅದರ ನಿರ್ಮೂಲನೆಗೆ‌ ಸಂಬಂಧಿಸಿದ ಕಥಾವಸ್ತುವನ್ನೂ ಈ ಚಿತ್ರ ಹೊಂದಿದೆ. ‌ ಭಯೋತ್ಪಾದನೆ ವಿರುದ್ಧ ಮಕ್ಕಳು ಹೇಗೆ ಹೋರಾಡುತ್ತಾರೆ ಎಂಬ ಕಥೆ ಈ ಚಿತ್ರದಲ್ಲಿದೆ.

ರಕ್ತ ಕಾಶ್ಮೀರ ಸಿನಿಮಾ ಪಾತ್ರವರ್ಗ

ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರೆ ‘ರಕ್ತ ಕಾಶ್ಮೀರ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಂ.ಎಸ್ ರಮೇಶ್ ಸಂಭಾಷಣೆ ಮತ್ತು ಗುರುಕಿರಣ್ ಸಂಗೀತ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಉಪೇಂದ್ರ, ರಮ್ಯ, ಪಾರ್ವತಿ ಮಿಲ್ಟನ್, ದೊಡ್ಡಣ್ಣ, ಓಂಪ್ರಕಾಶ್ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರಕ್ಕಾಗಿ ಮಲ್ಟಿಸ್ಟಾರರ್ ಹಾಡೊಂದನ್ನು ಚಿತ್ರೀಕರಿಸಲಾಗಿದ್ದು, ಇದರಲ್ಲಿ ಡಾ. ವಿಷ್ಣುವರ್ಧನ್‍, ಅಂಬರೀಶ್‍, ಜಗ್ಗೇಶ್‍, ಶಿವರಾಜಕುಮಾರ್‍, ಪುನೀತ್‍ ರಾಜಕುಮಾರ್, ದರ್ಶನ್‍, ಆದಿತ್ಯ, ರಮೇಶ್‍ ಅರವಿಂದ್‍ ಮುಂತಾದವರು ಹೆಜ್ಜೆ ಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಂದೇ ಹಾಡಿನಲ್ಲಿ ಇಷ್ಟೊಂದು ಸಂಖ್ಯೆಯ ಸ್ಟಾರ್‍ ನಟರು ಬೇರ್ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಅಷ್ಟೊಂದು ಸ್ಟಾರ್‍ ನಟರು ಕಾಣಿಸಿಕೊಂಡಿದ್ದರೂ, ಚಿತ್ರ ಬಿಡುಗಡೆಯಾಗಿರಲಿಲ್ಲ. ಈಗ ಈ ನಟರೆಲ್ಲರನ್ನೂ ಒಂದೇ ಹಾಡಿನಲ್ಲಿ ನೋಡುವ ಅವಕಾಶ ಕೊನೆಗೂ ಕನ್ನಡಿಗರಿಗೆ ಸಿಕ್ಕಂತಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ